ಜೈ ತನ್ನನ್ನೇ ತಂದಾನೋ ತಾನೋ ತಂದಾನೋ ತಂದಾನಲೋ
ತಂದಾನೋ ತಂದಾನೋ ದೇವರ ತಂದೋ ನಾನು
ಗುರುವೇ ಗುರುವೇ ಮತ್ತೆ ಗುರುಪಾದ ಯೆಣ್ಣುವೋ
ಗುರುನ ಸಿರಪಾದಕೆ ಶರಣೆನ್ನಿರೋ || ೧ ||
ಹಾಲುಂಡ ಹ್ಯಾಲುಂಡ ಬೇಡುಂದು ದೇವಳ್ಳಿಗನೋ
ದೇವರ ವಳ್ಳೇದು ನಮ್ಮ ಸಿದುರಾಮಾ
ದೇವರ ವಳ್ಳೇದು ನಮ್ಮ ಸಿದುರಾಮಾ ವಡೆಯನ ಪೂಜೇಲೋ
ಪೂಜೇಲೇ ವಳ್ಳೀದ ನಮ್ಮ ಗಣಪಾನೋ || ೨ ||
ಅಣ್ಣಯ್ಯನ ಕುದರಿಗೆ ಹಸರವ ಹಲ್ಯಾನೋ
ಸಿದುರಾಮ ವಡಿಯರ ಬಡಿಪಾದ
ಏ ಕುಳ್ಳಾ ಅಂದರೆ ಭೂಮಿಯಲ್ಲಿ ಹಾರವ ಇಂದರೆ ಗಿಡವೂಲ್ಲ || ೩ ||
ನೀ ಕೇಳೇ ಗರುಡ ಪಕ್ಷ ನೀ ಕೇಳೆ ಗರುಡ
ಮೂರೆಂಬ ಮೊಟ್ಟೆವನು ಹಾಕಬರುರೊ
ಏ ಈಸ್ವರ ವೇನು ಮಾಡ್ಯ ಈಸ್ವರ ಲೇನು ಮಾಡ್ಯಾ? || ೪ ||
ವಂದು ಮೊಟ್ಟೆ ತೆಗದಿ ವಡೂದಾನ ಕೋಲೇ
ಭೂಮಿ ಮಂಡಲವನ್ನು ಪಡುದಾನ ಕೋಲೇ
ಏ ಈಸ್ವರ ಲೇನು ಮಾಡ್ಯ ಈಸ್ವರ ಲೇನು ಮಾಡ್ಯಾ || ೫ ||
ಸುತ್ತೇಳು ಸಮುದಿರ ಪಡುದಾನ ಈಸ್ವರ ದೇವ
ಮಾರನ ಮೇಟವನ ಪಡುದಾನ ಕೋಲೇ ಈಸ್ವರ ದೇವಾ
ಈಸೂರ ದೇವೇನು ಮಾಡ್ಯ ಈಸೂರ ದೇವೇನು ಮಾಡ್ಯ || ೬ ||
ಬಸವೇಸರಗಾದರೆ ಪಡುದಾನು ಕೋಲೆ
ನಿನಗಿನ್ನು ದೊಡ್ಡವ್ನ ಯಾರೂ ಯೆಲ್ಲಾದೆ ನೀನು
ನೀನೇ ಸಿವನಾ ದೊಡ್ಡವ ಕೋಲು || ೭ ||
*****
ಹೇಳಿದವರು: ಶ್ರೀ ಬುದ್ಯಾ ಗುಣನಾಯ್ಕ, ಅರಗಾ ತಾ: ಕಾರವಾರ
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.