ಪ್ರಥಮ ಪರಿಚ್ಛೇದ
ಬಂದವನು ರಾಮು. ನೇರವಾಗಿ ಹೋಗಿ ಮಂಚದ ಬಳಿ ಯಲ್ಲಿದ್ದ ಕುರ್ಚಿಯಲ್ಲಿ ಕುಳಿತನು. ಮಂಚದ ಕಡೆಗೆ ತಿರುಗಿ ಕೊಂಡಿದ್ದು ಕಾಲನ್ನು ನೀಡಿದ್ದರೆ ಕರಿಯ ಕಂಬಳಿಯು ಕಾಲಿಗೆ ತಗ ಉತ್ತಿತ್ತೋ ಏನೋ!
ಅವನು ಬಂದ ಕೊಂಚ ಹೊತ್ತಿನಲ್ಲಿಯೇ ಮತ್ತೊಬ್ಬ ಹೆಂಗುಸು ಬಂದಳು. ಕಾಲಿನ ಸದ್ದಾಗದಂತೆ ಬಹಳ ಸಾಹಸದಿಂದ ನಡೆಯುತ್ತಿದ್ದಾಳೆ. ಮೈಯ್ಯೆಲ್ಲಾ ಕಿರುಬೆಮರಿಟ್ಟಿದೆ. ಮುಖದಲ್ಲಿ ಗಾಬರಿಯು ತಾನೇ ತಾನಾಗಿದೆ. ಕಣ್ಣುಗಳು ಕಳವಳದಿಂದ ಕತ್ತಲೆ ಹಿಡಿದಂತೆ ಕಾಣುತ್ತವೆ, ಒಟ್ಟಿನಲ್ಲಿ ರೂಪವೇ ಬದಲಾ ಯಿಸಿ ಹೋಗಿದೆ. ಅವಳು ಬರುತ್ತಲೇ, ಬಾಗಿಲಿಗೆ ಬರುತ್ತಿದ್ದ ಹಾಗೆಯೇ ಅವಳನ್ನು ಬರಸೆಳೆದು ತಬ್ಬಿಕೊಳ್ಳುವೆನೆಂದು ಕುಣಿಯು ತ್ತಿದ್ದ ರಾಮುವು ಅವಳನ್ನು ನೋಡಿ, ಕಾತರನಾಗಿದ್ದಾನೆ. ಅವ ಳನ್ನು ತಬ್ಬಿಕೊಳ್ಳುವುದಿರಲಿ, ಮಾತನಾಡಿಸುವುದಕ್ಕೂ ತೋರದೆ ಹೋಗಿ, ನಾಲಗೆಯೇ ಒಣಗಿ ಹೋಗಿದೆ. ಹಾಗೂ ಹೀಗೂ ಕಷ್ಟಪಟ್ಟು, ” ಇದೇಕೆ? ಸುಂದರಾ! ಸ್ವಸ್ಥವಾಗಿಲ್ಲವೇ?” ಎಂದನು. ಅವಳೂ ” ಏನೆೊ? ಅದೊಂದೂ ಕೇಳಬೇಡ. ನೀನು ನನ್ನನ್ನು ಬರಹೇಳಿದುದೇಕೆ? ಅದನ್ನು ಮೊದಲು ಹೇಳು” ಎಂ ದಳು.
ರಾಮುನು ಏನೂ ಹೇಳಲಾರದೆ ಹೋದನು. ಒಂದು ಗಳಿಗೆ ಸುಮ್ಮನಿದ್ದು, ಸ್ವಲ್ಪ ಶಾಂತನಾಗಿ, ” ಮೊದಲು ಬಾ. ಇಲ್ಲಿ ಕುಳಿತುಕೋ ಎಲ್ಲವನ್ನೂ ಹೇಳುವೆನು” ಎಂದವಳ ಭುಜವನ್ನು ಹಿಡಿದು ಕೂರಿಸಬೇಕೆಂದು ಕೈ ನೀಡಿದನು. ಹುಡುಗಿಯು ಅತ್ತ ಸರಿದಳು; ಗಂಟಿಕ್ಕಿದ ಹುಬ್ಬು ನೀಡಿದ ಕಯ್ಯನ್ನು ನಿರೋಧಿಸಿತು. ಹುಡುಗಿಯು ತಾನೇ ಹೋಗಿ ಅವನು ತೋರಿಸಿದ ಕುರ್ಚಿಯಲ್ಲಿ ಕುಳಿತುಕೊಂಡಳು ರಾಮುವು ಸಂಶಯ ಗ್ರಸ್ತನಾಗಿ ಬಂದೆ ರೇನೋ,-ಬರದಿದ್ದರೇನೋ-ಎಂಬಂತೆ, ಹಾಗೂ ಹೀಗೂ, ಬಂದು ಕುರ್ಚಿಯ ಬಳಿ ಮೇಜನ್ನೊರಗಿ ನಿಂತನು. ಇಬ್ಬರೂ ಮಾತನಾಡ ಲೊಲ್ಲರು.
ಕೊನೆಗೆ ಹುಡುಗಿಯೇ ಮಾತನಾಡಿದಳು. “ರಾಮೂ! ನನ್ನನ್ನು ಬರಹೇಳಿದುದೇಕೆ?” ಎಂದಳು. ರಾಮುವು ಕೊರಗಿ ಕುಗ್ಗಿ ರುವ ಸಣ್ಣ ದ್ವನಿಯಿಂದ ” ಸುಂದರಾ! ನನ್ನ ಆಶೆ” ಎಂದನು. ಹುಡುಗಿಯ ಮೊಗವು ಗಂಭೀರವಾಯಿತು. ಹುಡುಗತನವಡಗಿ ಹೋಗಿ, ಸತಿಯ ಪವಿತ್ರ ತೇಜವು ತಟ್ಟನೆ ಮೊಗದಲ್ಲಿ ಕಾಣಿಸಿ ಕೊಂಡು-” ನನಗೆ ಮದುವೆಯಾಗಿದೆ. ನಾನೀಗ ನಿನಗೆ ಪರಸ್ತ್ರೀ” ಎಂದಳು. ರಾಮನು ಸಣ್ಣಗೆ ನಗುತ್ತಾ “” ಸುಂದರ! ಹಾಗಾ ದರೆ ಇಲ್ಲಿಗೆ ಬಂದೆ ಏಕೆ?” ಎಂದನು. ಹುಡುಗಿಯು ನಡುಗಿ ದಳು ಹೃದಯವು ಇನ್ನೂ ಕಠಿಣವಾಗಿ, ಕುರ್ಚಿಯಲ್ಲಿ ಸರಿ ಯಾಗಿ ಕುಳಿತುಕೊಂಡು ” ನಾನು ಬಂದುದು ಸ್ವೈರಿಣಿಯಂತಲ್ಲ; ಸೋದರಿಯಂತೆ. ನೀನು ಬೇರೆ ಭಾವಿಸುವುವಾದರೆ ಇದೋ ಹೊರಟೆ!” ಎಂದೆದ್ದಳು.
ರಾಮುವು ಆಪ್ರತಿಭನಾಗಿ, ” ಇಲ್ಲ ಇಲ್ಲ. ಸುಂದರ- ನೀನು ಕುಳಿತುಕೋ. ನನ್ನ ಎರಡು ಮಾತು ಕೇಳಿ ಹೊರಟು ಹೋಗುವೆಯಂತೆ. ಕುಳಿತುಕೋ? ಎಂದನು. ಹುಡುಗಿಯೂ ಮತ್ತೆ ಕುಳಿತಳು.
ಮಂಚದ ಕೆಳಗೆ ಕುಳಿತಿದ್ದ ವ್ಯಕ್ತಿಯು ಹಾಗೆಯೇ ಸದ್ದಾಗ ದಂತೆ ಒಂದು ನಿಟ್ಟಿಸರನ್ನು ಬಿಟ್ಟನು.
ರಾಮುನು ಆರ್ತನಾಗಿ ಕೇಳಿಕೊಂಡನು. ಹುಡುಗಿಯೂ ನೀರವವಾಗಿ ಕೇಳಿದರು. “ನಾನೂ ಯೋಚಿಸಿದೆ. ನಿನ್ನೆಯ ದಿನ ನೀನೆಂದಂತೆ ತಪ್ಪು ನನ್ನದೇ ಸುಂದರ! ಅಮ್ಮನ ಮಾತನ್ನು ನಾನೇಕೆ ಮೀರಬಾರದಾಗಿದಿತ್ತು? ಮೀರಿದರೆ ನಾವಿಬ್ಬರೂ ಗಂಡ ಹೆಂಡಿರಾಗಿ ಎಷ್ಟು ಸುಖವಾಗಿರಬಹುದಾಗಿದ್ದಿತು! ಎಂದನು. ಮುಂದೆ ಹೇಳುವುದರೊಳಗಾಗಿ ಹುಡುಗಿಯು ಅಡ್ಡಗಿಸಿ, “ನಾನು ನಿನ್ನೆಯೇ ಹೇಳಲಿಲವೆ? ಕಳೆದುದನ್ನು ಕೆಣಕಬೇಡೆವೆಂದು ಮತ್ತೇಕೆ? ಈಗ ಇಷ್ಟು ಹೇಳುವವನು ನೀನಿರುವೆಡೆಯನ್ನೂ ತಿಳಿ ಸದೆ ಹೊರಟು ಹೋದೆಯೇಕೆ? ನಾನು ಕೊನೆಗೆ ಅಮ್ಮನನ್ನೂ, ಅಯ್ಯನನ್ನೂ ಒಪ್ಪಿಸಿದ್ದೆ. ಅವರೂ ನನ್ನನ್ನು ನಿನಗೆ ಕೊಡುವು ದಕ್ಕೆ ಒಪ್ಪಿದ್ದರು” ಎಂದಳು. ರಾಮುವು ಪೆಚ್ಚಾಗಿ ನನಗೆ ಹುಚ್ಚು ಹಿಡಿದಂತಾಯಿ:ತು, ಸುಂದರ! ಅಮ್ಮನೂ ಆಗಕೂಡ ದೆಂದು ಹಟ ಹಿಡಿದಳು. ಅಮ್ಮನಾಡಿದ ಮಾತನ್ನು ಕೇಳಿ ಅತ್ತೆಯು ಈಗಲೇ ಬಡವರ ಮನೆಯ ಹೆಣ್ಣೆ೦ದು ಹಿಯ್ಯಾಳಿಸುತ್ತಾರೆ. ಮದುವೆಯಾದ ಮೇಲೆ ಬಾಳಿಸುವುದಿನ್ನಿಂತೋ ಕೊಡ ಕೂಡದು ಎಂದುಬಿಟ್ಟಳು. ಕಡೆಗೆ ಹೋಗಿ ಅಯ್ಯನೊಡನೆ ಹೇಳಿ ಕೊಂಡೆ. ಅಯ್ಯನು “ನೀನುಂಟು ನಿಮ್ಮ ಅಮ್ಮ ನುಂಟು’ ಎಂದು ಬಿಟ್ಟ. ಏನು ಮಾಡಬೇಕು? ಮಾವನಿಗೆ ಮೊದಲೇ ಆಗದು. ಅತ್ತೆಗೆ ಅಮ್ಮನ ಮೇಲೆ ಕೋಪ, ಇನ್ನಾಗುವುದೆಂತು? ತಡೆಯಲಾರದ ದುಃಖ ಬಂದು, ಆ ದುಃಖದಲ್ಲಿ ಪ್ರಾಣವನ್ನೆೇ ತಳೆದು ಕೊಳ್ಳ ಬೇಕೆಂದಿದ್ದೆ. ಬದುಕಿದ್ದರೆ ಒಂದು ದಿನವಾದರೂ ನಿನ್ನನ್ನು ನೋಡಬಹುದು ಎಂದು ಒಂದು ಸಣ್ಣ ಆಶೆ. ಅದರಿಂದ ಪ್ರಾಣ ಬಿಡಲಿಲ್ಲ. ಈಗ ನಿನ್ನನ್ನು ನೋಡಿದೆ. ನೀನು ಇಷ್ಟು ನಿಷ್ಠುರ ಳಾಗಿರುವೆ. ಇನ್ನು ನಾನು ಬದುಕಿ ಫಲವೇನು? ನಿನ್ನನ್ನು ನೋಡಿದೆ ನಲ್ಲ. ಅಷ್ಟೇ ಸಾಕು. ಈ ಜನ್ಮದಲ್ಲಿ ಇದೇ ಕೊನೆಯ ದರ್ಶನ. ನೀನಿನ್ನು ಹೋಗು? ಎಂದನು ಯುವಕನ ಮಾತಿನಲ್ಲಿ, ಎಲ್ಲ ವನ್ನೂ ಸಂಪೂರ್ಣವಾಗಿ ಕಳೆದುಕೊಂಡವನ ನಿರಾಶೆಯು ತಾನೇ ತಾನಾಗಿದಿತು. ಮಾತುಮಾತಿನಲ್ಲಿಯೂ ಟೊಳ್ಳು ಸದ್ದುಬಡಿದು ಎದೆಯು ಝಲ್ಲೆನ್ನುತ್ತಿದ್ದಿತು. ====
ದ್ವಿತೀಯ ಪರಿಚ್ಛೇದ
ಹುಡುಗಿಯು ಕದಲಲಿಲ್ಲ. ಕುರ್ಚಿಯ ತೋಳಿನಮೇಲೆ ಕೈಯ್ಯೂರಿಕೊಂಡು ಅಂಗೈಯಲ್ಲಿ ಕೆನ್ನೆಯನ್ನಿಟ್ಟುಕೊಂಡು, ಹಾಗೆ ಯೇ ಕೇಳುತ್ತ ಕಳಿತುಬಿಟ್ಟಳು. ವರ್ಷಾಂತರಗಳ ಹಿಂದೆ ನಡಿದಿದ್ದು ದೆಲ್ಲವೂ ನೆನಪಿಗೆ ಬಂದು ಬಿಟ್ಟಿತು ತನ್ನ ತಾಯಿಯು ಸಾಯು ವಾಗ ತನ್ನನ್ನು ಕರೆದು ಹತ್ತಿರ ಕುಳ್ಳಿರಿಸಿಕೊಂಡು, “ನಾನು. ಹೋದರೆ ನಿನು ತಬ್ಬಲಿಯಾಗ.ವೆಯಲ್ಲೇ” ಎಂದು ಅತ್ತಿದ್ದುದು ಮತ್ತೆ ನೆನಪಿಗೆ ಬಂದು ಅವಳಿಗೆ ಬಲು ದುಃಖವಾಯಿತು. ಕಣ್ಣಿ ನಲ್ಲಿ ಎರಡು ತೊಟ್ಟು ನೀರೂ ಬಂದಿತು.
ರಾಮುವು ಮತ್ತೆ ಹೇಳಿದನು “ನಾನು ದುಃಖವನ್ನು ತಡೆ ಯದೆ ದೇಶಾಂತರ ಹೊರಟು ಹೋದೆ. ಸುಂದರ! ಎರಡು ವರು ಷದ ದಿನ ಹುಚ್ಚು ಹಿಡಿದವನಂತೆ ಅಲೆದುಬಿಟ್ಟೆ ದಿನವೂ ಬೆಳಗಾಗುತ್ತಿದ್ದಿತು. ಸಂಜೆಯಣಗುತ್ತಿದ್ದಿತು. ನನಗೆ ತಿಳಿಯುತ್ತಿದುದು ಅಷ್ಟೆ, ಒಂದು ದಿನವಾದರೂ ನನಗೆ ಸುಖವಿಲ್ಲ. ಬರುತ್ತಬರುತ್ತ ಅನ್ನವು ತಪ್ಪಿಹೋಯಿತು. ನಿದ್ದೆಯೂ ಹೋಯಿತು. ಯಾವಾ ಗಲೂ ಚಿಂತೆಯೇ ಆಯಿತು. ಈ ಹುಚ್ಚಿನಲ್ಲಿ ತಿರುಗುತ್ತಿರುವಾಗ ಯಾರೋ ನಮ್ಮೂರಿನವರು ನೋಡಿ ಅಪ್ಪನಿಗೆ ಬರೆದರಂತೆ. ಆವರೂ ಬಂದರು. ಮಾಸಿದ ಬಟ್ಟೆಯನ್ನುಟ್ಟು ಗಡ್ಡ ಮೀಸೆಗಳನ್ನು ಬೆಳ ಯಿಸಿಕೊಂಡು ನಿಂತಲ್ಲಿ ನಿಲ್ಲದೆ ಅಲೆಯುತ್ತಿದ್ದ ನನ್ನನ್ನು ಒಡಿದು ಕೊಂಡು ಬಂದು ಅಮ್ಮನನ್ನು ಕೂಗಿ ” ಎಲೇ! ನಿನ್ನ ಮಗನನ್ನು ನೋಡಿ ಸಂತೋಷ ಪಡು. ಹೆತ್ತ ಹೊಟ್ಟೆಗೆ ಹಾಲು ಹುಯ್ದು ಕೋ” ಎಂದರು, ಅಮ್ಮನೂ ಈಚೆಗೆ ಬಂದು ನನ್ನನ್ನು ನೋಡಿ ಬಿಕ್ಕಳಿಸಿ ಅತ್ತಳು. ” ನನ್ನ ದುರ್ಬುದ್ದಿಯೇ !” ಎಂದು ಕಣ್ಣೀರು ಕರೆದು ಬೇಕಾದಷ್ಟು ಬಯ್ದುಕೊಂಡಳು. ಆನ್ರೊತ್ತಿಗೆ ನಿನಗೆ ಮದುವೆಯಾಗಿ ಎಂಟು ದಿನವಾಗಿತ್ತಂತೆ?’ ಎಂದನು.
ಎದುರಿನಲ್ಲಿ ಕುಳಿತವರು ಸುಖದುಃಖಗಳನ್ನು ಹೇಳಿಕೊಳ್ಳು ತ್ತಿದ್ದರೆ ತಾವು ತಮ್ಮ ಕಥೆಯನ್ನು ಹೇಳದೆ ಕುಳ್ಳಿರುವುದು ಬಲು ಕಷ್ಟ. ಹುಡುಗಿಯೂ ವಿಷಣ್ಣೆಯಾಗಿ ಹೇಳಿದಳು. ” ಹೌದು, ರಾಮು! ನೀನು ದೇಶಾಂತರ ಹೋದೆ, ನನಗೂ ಸನ್ನಿಯಾಗಿ ಆರು ತಿಂಗಳು ಹಾಸಿಗೆ ಹತ್ತಿ ಬಿದ್ದಿದ್ದೆ. ಆ ಸನ್ನಿಯಲ್ಲಿ ನಾವಿಬ್ಬರೂ ಆಡಿಕೊಂಡಿದ್ದ ಮಾತುಗಳಲ್ಲ ಹೊರಬಿದ್ದು ಅಮ್ಮನಿಗೂ ಅಪ್ಪನಿಗೂ ಹೃದಯ ಶಲ್ಯವಾಯಿತು. ಹೆಚ್ಚು ಹೇಳಲೇನು? ಅದೇ ಮೂಲ ವಾಗಿ, ಅಮ್ಮನು ಕೊರಕೊರಗಿ ಪ್ರಾಣಬಿಟ್ಟಳು ಅಪ್ಪನು ಅನೇಕ ವೇಳೆ ಅಮ್ಮನೊಡನೆ ” ಹತ್ತು ಹನ್ನೊಂದುವರುಸದ ರಂಡೆಗೆ, ಇವಳಿಗೆ ಗಂಡನೆಂದರೆ ಏನು ಗೊತ್ತು? ಬೊಂಬೆಯಿಟ್ಟು ಕೊಂಡು ಆಡುವ ವಯಸ್ಸಿನವಳಿಗೆ ಮದುವೆಯೆಂದರೇನು. ಗೊತ್ತು?” ಎಂದಿದ್ದೆ. ಮುಖ್ಯ ನಾವು ಇವರಿಬ್ಬರನ್ನು ಮೊದಲಿಂದ ಒಟ್ಟು ಸೇರಿಸಬಾರದಾಗಿತ್ತು.” ಎನ್ನುತ್ತಿದ್ದನು. ಕೊನೆಗೆ ನಮ್ಮವರೆಲ್ಲ ರಿಗೂ ಈ ಕಥೆಯು ತಿಳಿದುಹೋಗಿ ಯಾರೂ ನನ್ನನ್ನು ಮದುವೆ ಮಾಡಿಕೊಳ್ಳದೆ ಹೊದರು. ಎಲ್ಲರೂ ಯಾರನ್ನು ಕೇಳಿದರೂ “ಹೂ! ಅವಳನ್ನು ಮದುವೆ ಮಾಡಿಕೋ! ಆಚೆಯಮನೆ ರಾಮೆ ಸ್ವಾಮಿಯು ಬಂದರೆ ಅವಳು ಓಡಿಹೋಗುತ್ತಾಳೆ’ ಎನ್ನುವರು. ಅಪ್ಪನೂ ಬಹಳ ಕಾಯ್ದನು. ಅಲ್ಲದೆ ಅಮ್ಮನೂ ಸಾಯುವಾಗ, ಮಾವನನ್ನೂ ಅತ್ತೆಯನ್ನೂ ಕರೆಯಿಸಿಕೊಂಡು, ” ಅತ್ತಿಗೆ! ಸುಂದರಿ ನಿನ್ನಮಗು. ನನ್ನ ಮಗುವಲ್ಲ, ರಾಮೂ ಹಿಂತಿರುಗಿ ಬಂದರೆ ಅವನಿಗೇ ಕೊಟ್ಟು ಮದುವೆ ಮಾಡು” ಎಂದು ಹೇಳಿ ಸತ್ತುಹೋದಳು. ಅತ್ತೆಯೂ ಒಪ್ಪಿದ್ದಳು. ನೀನು ಬರಲಿಲ್ಲ. ಮದುವೆಯಿಲ್ಲದೆ ಎಷ್ಟುದಿನ ವಿರಲಾದೀತು? ನೆರೆಹೊರೆಯವರೆಲ್ಲರೂ “ಬಸವಿ ಬಿಡುತ್ತಾರೆ ಕಾಣಿರೋ. ಹುಡುಗಿ ಚನ್ನಾಗಿದೆ” ಎನ್ನು ವರು. ಅಪ್ಪನೂ ಸೈರಿಸಲಾರದೆ, ಕೊನೆಗೆ ಬೆಂಗಳೂರಿಗೆ ಹೋಗಿ ಅಲ್ಲಿ ಓದುತ್ತಿದ್ದ ಯಾವುದೋ ಊರಿನವನೊಬ್ಬನನ್ನು ನೋಡಿ ಕೊಂಡು ಬಂದನು. ಇನ್ನು ಅವನನ್ನು ಮೈಸೂರಿಗೆ ಕರೆದುಕೊಂಡು ಬಂದರೆ ಕಥೆಯನ್ನು ಕೇಳಿಯಾನು ಎಂದು, ನನ್ನನ್ನು ಅಲ್ಲಿಗೇ ಕರಿದುಕೊಂಡು ಹೋದರು. ಅವನೂ ನನ್ನನ್ನು ನೋಡಿ ಒಪ್ಪಿ ದನೋ ಇಲ್ಲವೋ? ಅಂತೂ ಅಪ್ಪನು ಕೊಟ್ಟ ಥೈಲಿ ಹಣಕ್ಕಾಗಿ ಮದುವೆಯಾದನು. ಮದುವೆಯೂ ಪಶ್ಚಿಮವಾಹಿನಿಯಲ್ಲಿ ಆಯಿತು ಹೆಸರಿಗೆ. ಆವೇಳೆಗೆ ನಾನು ಮೈನೆರೆದು ಎರಡುತಿಂಗಳಾಗಿ ದ್ದಿತು. ಇನ್ನು ಆ ಕಥೆಯಲ್ಲೂ ಏಕೆ?” ಎಂದಳು
ಮಂಚದ ಕೆಳಗಿದ್ದೆ ವ್ಯಕ್ತಿಗೆ ಒಂದು ಸಂದೇಹವಿದ್ದಿತು. ಶಾನು ಓದುವುದರಲ್ಲಿ ಅಷ್ಟೇನೂ ಮುಂದಾಗಿರಲಲ್ಲ. ಭಿಕ್ಷಾನ್ನ ವೆತ್ತಿಕೊಂಡು, ಅದೂ ಹಗಲು ಹೋದರೆ ನಾಚಿಗೆಗೇಡೆಂದು ರಾತ್ರಿ ಹೋಗಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದವನಿಗೆ ಐನೂರು ರೂಪಾಯಿ ವರದಕ್ಷಣಿಯನ್ನು ಕೊಟ್ಟರಲ್ಲಾ ಎದು ಒಂದು ದೊಡ್ಡ ಆಶ್ಚರ್ಯ ವಾಗಿತ್ತು. ಕಾರಣವು ತಿಳಿಯಿತು. ಅಲ್ಲಿಯೇ ನಿಟ್ಟುಸಿರು ಬಿಟ್ಟನು. ನಿಟ್ಟುಸಿರಿನ ಸದ್ದು ಮಾತ್ರ ಯಾರಿಗೂ ಕೇಳಲಿಲ್ಲ.
ತೃತೀಯ ಪರಿಚ್ಛೇದ
—
ರಾಮುವು ಹೇಳತೊಡಗಿದರು… ” ಸುಂದರ! ಹೋಗಲಿ. ನೀವು ಗಂಡಹೆಂಡಿಗು ಸುಖವಾಗಿದ್ದೀರಾ? ಅದಾದರೂ ಹೇಳು, ಅದನ್ನಾದರೂ ಕೇಳಿ ಸಂತೋಷಪಡುವೆನು ಎಂದನು. ಮುಂಚದ ಕೆಳಗಿದ್ದ ವ್ಯಕ್ತಿಗೆ ಎದೆಯು ಹಾರಿತು. ಹುಡುಗಿಯು ಏನು ಉತ್ತರ ಕೊಡುವಳೋ?
ಹುಡುಗಿಯು ಒಂದು ಗಳಿಗೆ ಸುಮ್ಮನಿದ್ದಳು. ಆಮೇಲೆ ” ನೀನೀ ಪ್ರಶ್ನೆಯನ್ನು ಕೇಳುವೆಯೆಂದು ನನಗೆ ಮೊದಲೇ ಗೊತ್ತು ಆದರೆ ಆ ಪ್ರಶ್ನೆಗೆ ಉತ್ತರವನ್ನು ಹೇಳುವುದು ನನಗೆ ಸಮ್ಮತವಿಲ್ಲ” ಎಂದಳು. ಹುಡುಗಿಯ ಮಾತು ಖಂಡಿತವಾಗಿದ್ದರೂ ಮನಸು ಅಲ್ಲೋಲಕಲ್ಲೋಲವಾಗಿದೆಯೆಂಬುದು ಮಾತ್ರ ಒಡೆದು ಕಾಣು ದ್ದಿತು. ರಾಮಸಾಮಿಯು ಮುಂದೆ ಉತ್ತರಕ್ಕೆ ಒತ್ತಾಯ ಮಾಡಲಿಲ್ಲ.
ಮಾತು ಹೊರಳಿಸಿ, ” ಈ ದಿನಗಳಲ್ಲಿ ಒಂದು ದಿವಸವಾದರೂ ನನ್ನನ್ನು ನೆನೆಸಿಕೊಂಡೆಯಾ ಸುಂದರ! ಈ ನಿರ್ಭಾಗ್ಯನ ನೆನಪು ನಿನಗೆ ಇದ್ದಿತೆ? ಅಥವಾ ಇರುವುದಕ್ಕೆ ಕಾರಣವಾದರೂ ಏನು?” ಎಂದನು. ಸುಂದರಿಯು ಅರಳಿದ ಕಣ್ಣಿಂದ ಬಿರಬಿರನೆ ಕೊಂಚ ಹೊತ್ತು ನೋಡಿ, ನಿಟ್ಟುಸಿರೊಂದು ಬಿಟ್ಟು, ಸುಮ್ಮನಾದಳು. ಅವನ ಪ್ರಶ್ನೆಗೆ ಉತ್ತರವೇನೋ ಬಂದಿತು. ರಾಮುವು ತಲೆಯನ್ನು ತಗ್ಗಿಸಿಕೊಂಡು ಮತ್ತೆ ಹೇಳಿದನು ನಿನ್ನನ್ನು ನೋಡಬೇಕೆಂಬ ಆಶೆ ಬಹಳವಿದ್ದರೂ, ನಿನ್ನನ್ನು ನೋಡುವುದಕ್ಕೆ ಏಕೋ ಹೆದರಿಕೆ ಯಾಗುತ್ತಿದ್ದಿತು. ನೀನು ಇಲ್ಲಿರುವುದನ್ನು ನಾನು ಬಲ್ಲೆ. ಆದರೆ ನೇರವಾಗಿ ಬರಲಾರದೆ ಹೋದೆ ಅಲ್ಲದೆ ಮಾವನಿಗೆ ಮುಖವನ್ನು ತೋರಿಸಲು ಇಷ್ಟವಿಲ್ಲ. ಯಾವಾಗಲೂ ನಿನ್ನನ್ನೇ ಕುರಿತು ಚಿಂತಿಸುತ್ತಿದ್ದರೂ, ನಿನ್ನನ್ನು ನೋಡಲು ಒಂದು ವಿಧದ ಕಳವಳವು ಹಾದಿಗೊಡಲಿಲ್ಲ. ನಿನ್ನ ರೂಪವು ಕಣ್ಣಿಗೆ ಕಟ್ಟಿರುವುದು. ಯಾವಾಗಲೂ ಯಾವ ಕೆಲಸ ಮಾಡುತ್ತಿದ್ದರೂ, ನೀನು ಜತೆ ಯಲ್ಲಿಯೇ ಇರುವಂತೆ ಇರುವುದು. ನಿನ್ನ ಸಣ್ಣಕೊರಳಿನ ಮೃದು ಮಾತುಗಳು ಕಿವಿಯಲ್ಲಿ ಜಿನುಗುತ್ತಲೇ ಇರುವುವು. ನಾವಿಬ್ಬರೂ ಸಣ್ಣ ಹುಡುಗರಾಗಿರುವಾಗ ಹಿಂದೊಂದು ದಿನ ನಾನು ತುಂಬಿದ ಬೆಳದಿಂಗಳಲ್ಲಿ ನಿನ್ನ ತೊಡೆಯಮೇಲೆ ತಲೆಯನ್ನಿಟ್ಟು, ಕೊಂಡು ಮಲಗಿದ್ದೆ. ನೀನು ಯಾವುದೋ ಹಾಡು ಹೇಳಿ ಕೈಬ ಳೆಯ ತಾಳದೊಡನೆ ತಟ್ಟುತ್ತಿದೆ ನನಗೆ ಹಾಗೆಯೇ ಸಣ್ಣಗೆ ಜೊಂಪು ಹತ್ತಿತು. ಅತ್ತೆಯು ಆಗ ಬಂದು, ” ಇದೇನೇ ಇದು? ಎಂದಳು. ನೀನು ನಾಚಿಗೆಯಿಂದ ನನ್ನ ತಲೆಯನ್ನು ತೆಗೆದು ಕೆಳಗಿರಿಸಿ ಓಡಿಹೋದೆ. ನನಗೂ ಎಚ್ಚರವಾಯಿತು. ನಾನೂ ಅತ್ತೆಯನ್ನು ಕಂಡು ಓಡಿಹೋದೆ ನಿತ್ಯವೂ ನನಗೆ ಕಣ್ಣು ಮುಚ್ಚಿದರೆ ಅದೇ ಕನಸು. ಅದೇ ಹತ್ತು ವರುಷದ ಸುಂದರ. ನಾನೂ ಆದೇ ಹುಡುಗ. ಮತ್ತೆ ನಾವು ಆಡುವುದು ಅದೇ ಆಟ ಅದೇ ನೆನಸಿನಲ್ಲಿಯೇ, ಕಣ್ಮುಚ್ಚಿಕೊಂಡು ಸುಖಪಡುತ್ತ ಹೊರಗಿನ ಪ್ರಪಂಚವನ್ನೇ ಮರೆತಿದ್ದೇನೆ. ಸುಂದರ! ನಾನು ನಿನ್ನನ್ನು ಇದ ಕ್ಕೆ ಮೊದಲೇ ನೋಡಬಹುದಾಗಿತ್ತು. ಅದೇನೂ ಕಷ್ಟವಿರಲಿಲ್ಲ. ಆದರೆ ನಿನ್ನನ್ನು ಕಂಡರೆ ನನಗೆ ಮೈಮರೆವುದೆಂದಿದ್ದೆ. ಕೆಳಗೆ ಬಿದ್ದುಹೋಗುವೆನೆಂದಿದ್ದೆ. ಅಲ್ಲದೆ ನನ್ನ ಸೌಖ್ಯದ ಅಧಿದೇವತೆಯು ಸೊದೆಗಣಿಯಾದ ನನ್ನ ಇನಿಯಳು ಪರನ ಪಾಲಾಗಿರಲು ನಾನೆಂತು ನೋಡಲೆಂದು ನೋಡಲಿಲ್ಲ. ಸುಂದರ! ನನ್ನ ಆಳುಗಳಿಂದ ನಿನ್ನ ಸ್ಥಿತಿಗತಿಗಳನ್ನೆಲ್ಲಾ ತಿಳಿದುಕೊಂಡೆ ನೀನು ಹಗಲಿರುಳೆನ್ನದೆ ಕಣ್ಣೀರಲ್ಲಿ ಕಯ್ತೊಳೆಯುತ್ತಿರುವುದೂ ತಿಳಿಯಿತು. ನಿನ್ನ ಗಂಡನು ನಿನ್ನ ವಿಚಾರದಲ್ಲಿ ಉದಾಸೀನನಾಗಿರುವುದೂ ತಿಳಿಯಿತು ಅನೇಕ ವೇಳೆ ಅದಕ್ಕೆ ಪ್ರತೀಕಾರ ಮಾಡಬೇಕೆಂದುಕೊಂಡೆನು. ನನ್ನ ಮುದ್ದಿನ ಮನದನ್ನೆಗೆ, ನನ್ನರಗಿಣಿಗೆ, ಮನೋಮೋಹನೆಗ್ಗೆ ಮನಸ್ಸಿಗೆ ವ್ಯಥೆಯನ್ನುಂಟುಮಾಡುವ ನಾ–(ತರುಣನು ನಾಲಗೆಯನ್ನು ಕಚ್ಚಿಕೊಂಡನು) ವ್ಯಥೆಯನ್ನುಂಟುಮಾಡುವವನಿಗೆ ಪ್ರತೀಕಾರ ಮಾಡಬೇಕೆಂದು ಕೃತನಿಶ್ಚಯನಾದೆನು. ಆದರೆ ನನಗದು ಸಮ್ಮ ತವೋ, ಅಸಮ್ಮತವೋ ಅದನ್ನು ತಿಳಿಯೆಲಾರದೆ ಸುಮ್ಮನಿದ್ದೆನು. ಸುಂದರ! ಕೊನೆಗೆ ಮನಸ್ಸು ತಡೆಯಲಾರದೆ ಹೋಯಿತು. ಪ್ರತೀ ಕಾರ ಮಾಡಿಯೇ ಬಿಡುವೆನೆಂದು ಬಂದಿದ್ದೇನೆ.?’ ಎಂದನು. ತರು ಣನು ತಗ್ಗಿನ ದನಿಯಲ್ಲಿ ಮಾತನಾಡುತ್ತಿದ್ದರೂ ಬಾಯಲ್ಲೆಂದು ದನ್ನು ಕಯ್ಯಲ್ಲಿ ಮಾಡುವವನ ಮನಸ್ಸಿನ ಕಠಿಣ್ಯವು ಚೆನ್ನಾಗಿ ತೋರುವಂತಿತ್ತು.
ಹುಡುಗಿಗೆ ಸಮಾಧಾನದ ಸಣ್ಣ ನಗು. ಮೊಲ್ಲೆಯ ಮೊಗ್ಗೆ ಯಂತೆ ಅಂದವಾದ ಹಬ್ಬು ಚೆಂದುಟಿಯ ನಡುವೆ ತಲೆಹಾಕುತ್ತಿರಲು, “ಪ್ರತೀಕಾರವೇನೋ?” ಎಂದಳು. ಈ ಇಬ್ಬರ ಭಾವವೂ ಹೀಗಿ ಸುವುದನ್ನು ತಿಳಿದು ಮಂಚದ ಕೆಳಗಿನ ವ್ಯಕ್ತಿಗೆ ಮೈಬೆವರಿಟ್ಟಿತು. ಅವನು ಭಯಂಕರವಾದ ನೋಟವನ್ನು ಕಂಡು ಹೆದರಿದವನಂತೆ ಎರಡು ಕೈಗಳಿಂದಲೂ ಭದ್ರವಾಗಿ ಮುಖವನ್ನು ಮುಚ್ಛಿಕೊಂಡನು
ರಾಮುವು ಹೇಳಿದನು “” ನದ್ನ ಪ್ರತೀಕಾರದ ತೆರನು ಹೊ ಸತು. ಅವನೀಗ ನಿನ್ನನ್ನು ನಿರಾಕರಿಸಿ ಕಾಲುಕಸಕ್ಕೆಂತ ಕಡೆ ಯಾಗಿ ನೋಡುತ್ತಿರುವನು ನಾನು ನಿನ್ನನ್ನು ಭವ್ಯವಾದ ಹೃದಯ ಮಂದಿರದ ಅಧಿದೇವಿಯನ್ನಾಗಿ ಪ್ರತಿಷ್ಠಾಪಿಸಿ ನಿನ್ನ ಆಜ್ಞೆಗೆ ಬದ್ಧನಾಗಿ ಅಡಿಯಾಳಾಗಿರುವೆನು, ನಿನ್ನನ್ನು ಸಹಧರ್ಮಿಣಿಯಂತೆ . ಅರ್ಧಾಂಗಿಯಂತೆ, ಕಷ್ಟ ಸುಖಗಳಲ್ಲಿ ಸಮಭಾಗಿಯಂತೆ ಕಾಣದೆ ನಿನ್ನ ಮನಸ್ಸಿಗೆ ದುಃಖವನ್ನುಂಟುಮಾಡುತ್ತಿರುವನು. ನಾನು ನಿನ್ನ ನೆರಳಾಗಿ ನಡೆದರಡಿ ಸಮೆಯುವುದೆಂದು ಆರಾಧಿಸುವೆನು. ದಾಸಿ ಯೆಂದು ದೂರನಿಟ್ಟರುವನವನು. ದೇವಿಯೆಂದು ಸರ್ವಸ್ವವನ್ನು ಒಪ್ಪಿಸಿ, ತಲೆಯಲ್ಲಿಟ್ಟು ಮೆರೆವೆನು ನಾನು. ನೀನು ಮನಸ್ಸು ಮಾಡು. ಇಂದಿನ ರಾತ್ರಿಯೇ ನಾಳೆ ಬೆಳಗಾಗುವುದರೊಳಗಾಗಿ ನೂರಾರು ಮೈಲಿದೂರ ಹೊರಟುಹೋಗೋಣ. ನಿನ್ನ ಗಂಡನಿಗೆ ನೀನು ಬೇಡ; ಅವನು ಹುಡುಕುವುದಿಲ್ಲ. ಮಾವ! ಅವನಿಗೆಂದು ಹಣವನ್ನು ತಂದಿದ್ದನೆ ಇನ್ನೇನಾಗಬೇಕು ?” ಎಂದನು,
ಮಂಚದ ಕೆಳಗೆ ಅಡಗಿದ್ದ ವ್ಯಕ್ತಿಗೆ ಸಾವಿರಚೇಳು ಒಟ್ಟಿಗೆ ಕುಟುಕಿದಂತಾಯಿತು. ನೂರಾರು ಸಬಳಗಳನ್ನು ಹೊಟ್ಟೆಗೆ ಹಾಕಿ ತಿವಿದದಂತಾಯಿತು. ಇದುವರೆಗೂ ಹೆಂಡತಿ ವಿಚಾರದಲ್ಲಿ ಅವನು ಹಾಗಿದುದು ನಿಜ, ಆದರೆ ಅವಳನ್ನು ಚೆಲುವೆಯೆಂದು, ತನ್ನಮನೆಯ ನಂಬದ ದೀವಿಗೆಯೆಂದು, ತನ್ನ ಜೀವಿತದ ಸೊದೆಯ ಹೊಳೆಯೆಂದು ಎಂದೂ ಭಾವಿಸಿರಲಿಲ್ಲ. ಅವಳೊಂದು ಭೋಗ್ಯ ವಸ್ತು. ಬೇಕಾದಾಗ ಬೇಕು; ಬೇಡದಾಗ ಬೇಡ, ಹೀಗಿದ್ದವನಿಗೆ ತನ್ನ ಹೆಂಡತಿಯ ಮೇಲೆ ಮತ್ತೊಬ್ಬನ ಕಣ್ಣಿರವುದೆಂದು ತಿಳಿದ ಕೂಡಲೆ ಮನಸ್ಸಿನಲ್ಲಿ ಅಡಗಿದ್ದ ಮಡದಿಯ ಮೇಲಿನ ಮೋಹವು ಹೆಡೆಯೆತ್ತಿ ಮೇಲಕ್ಕೆ ದು ನಿಲ್ಲುವ ನಾಗರ ಹಾವಿನಂತೆ ಪ್ರಬುದ್ಧ ವಾಯಿತು. ಮಲಗಿ ಗೊರಕೆ ಹೊಡೆಯುತ್ತಿದ್ದ ಮಮತೆಯೆಲ್ಲವೂ ತಟ್ಟನೆ ತಾನೇತಾನಾಗಿ ಹೋಯಿತು. ಹೆಂಡತಿಯ ವಿಚಾರವಾಗಿ ಒಂದು ಕ್ಷಣದ ಹಿಂದೆ ಅವನಲ್ಲಿ ಹುಡುಕಿದರೂ ಕಂಡು ಬರದಿದ್ದ ಕಾತುರವು ಇಂದು ಮನದಲ್ಲಿ ಮನೆ ಮಾಡಿಬಿಟ್ಟಿತು. ಗಂಟಿಲೊ ಣಗಿ ಹೋಯಿತು. ಅವಳು ಹೊರಟು ಹೋದರೆ…ಗತಿ… ಮುಂದೆ ಯೋಚಿಸಲಾರದೆ ಹೋದನು. ಅಯ್ಯೋ! ತಾನು ಸರಿಯಾಗಿರು ವುದಕ್ಕೆ ಏನು ರೋಗವೆನ್ನಿಸಿತು ಈ ಮಂಚದಡಿಯಿಂದ ಮುಕ್ತ ನಾದರೆ, ಅವಳ ಕೈ ಕಾಲಾದರೂ ಕಟ್ಟಿಕೊಳ್ಳಬಹುದು. ಆದರೆ ಮುಕ್ತನಾಗುವುದು ಹೇಗೆ?
ಹುಡುಗಿಯು ನೀರವವಾಗಿ ಕೇಳುತ್ತಿದ್ದವಳು ಇನ್ನೇನಾಗಬೇಕೆಂಬ ಪ್ರಶ್ನೆ ಕೈಗೆ ಉತ್ತರವಾಗಿ ‘ನಾನು ಮನಸ್ಸು ಮಾಡಬೇಕು ಅಷ್ಟೆ !” ಎಂದಳು, ರಾಮಸ್ವಾಮಿಯು ಮೇಜನ್ನೊರಗಿದ್ದಂತೆಯೇ, ಒಂದು ಕಡೆಗೆ ಬಾಗಿ, ಕುರ್ಚಿಯ ತೋಳಿನಮೇಲೆ ಕಯ್ಯನ್ನಿಟ್ಟು ಮೆತ್ತಗೆ ಒರಗಿದನ್ನು ಅವನ ಬಿಸಿಯುಸಿರು ಸುಂದರಿಯ ಭುಜದ ಮೇಲಿನ ಸೆರಗನ್ನು ಸೆಳೆಯಬೇಕೆಂದು ಯತ್ನಿಸಿತು ಅವನು “ಹೌದು ಸುಂದರ! ನೀನು ಮನಸ್ಸು ಮಾಡಬೇಕು ಅಷ್ಟೆ!’ ಎಂದನು. ಸುಂದರಿಯು ” ಹೌದು! ನೋಡುವವರು ಏನೆನ್ನುವರು!?’ ಎಂದಳು. ” ನೋಡುವವರ ಮಾತು ಎಷ್ಟುದಿನ? ಸುಂದರ! ಎರಡು ದಿನ. ಬೆಟ್ಟದ ನದಿಯಂತೆ ಎರಡು ದಿನ ಬಿರುಸಾಗಿದ್ದು ಮತ್ತೆ ತಣ್ಣಗಾ ಗುವುದು” ಎಂದನು. ಯುವಕನ ದೇಹವು ಇನ್ನೂ ವಾಲುತ್ತಾ ಬಂದು, ಬಿಸಿಯುಸಿರು ಹುಡುಗಿಯ ಕೆನ್ನೆಗೆ ಬಡಿಯಿತು. ಹುಡು ಗಿಯು ತಟ್ಟನೆ ಎದ್ದು ನಿಂತು “ಎಲ್ಲನನ್ನೂ ಚಿನ್ನಾಗಿಯೇ ಗುಣಿ ಸಿದೆ. ಆದರೆ ನಾನು ಹೆಂಗಸೆಂಬುದನ್ನು ಮಾತ್ರ ಗುಣಿಸಲಿಲ್ಲ?’ ಎಂದಳು. ತರುಣನಿಗೆ ತಿಳಿಯದೆ ಬೆಪ್ಪಾಗಿ ‘ಹಾಗೆಂದರೆ?’ ಎಂದನು ಎಂದರೆ ಗಂಡನೊಡನೆ ಮಾನವಾಗಿ ಸಂಸಾರ ಮಾಡಿ ಕೊಂಡಿರಬೇಕಲ್ಲದೆ ಮಾನಗೆಟ್ಟು ಮಿಂಡನೊಡನೆ ಮೆರೆಯಬೇ ಕೆನ್ನುವಳಲ್ಲ ಎಂದು. ನೀನಿಂತಹೆ ದುರ್ಭಾಷೆಯಾಡುವೆ ಎಂದು ತಿಳಿದಿದ್ದರೆ ನಾನಿಲ್ಲಿ ನಿಲ್ಲುತ್ತಿರಲಿಲ್ಲ ನಾನಿಲ್ಲಿಗೆ ಬರುತ್ತಿರಲಿಲ್ಲ ಇದೋ ಹೊರಟೆ’ ಎಂದಳು. ಗಂಡನುಹೆಂಡತಿಯನ್ನು ಮನಸ್ಸಿ ನಲ್ಲಿ ಸಾವಿರ. ಸಲ ವಂದಿಸಿದನು
ರಾಮಸ್ವಾಮಿಯು “ಸುಂದರ! ಈಗ ರಾತ್ರಿ ಎರಡೂವರೆ ಗಂಟೆ. ಸರಿರಾತ್ರಿಯಲ್ಲಿ ಇಲ್ಲಿ ಬಂದಿರುವೆ. ನೀನು ಒಬ್ಬಳು ನಾನು ವರ್ಷಾಂತರಗಳಿಂದ ತಡೆದುಕೊಂಡು ಬಂದಿದ್ದು ಈಗ ಕಟ್ಟು ಒಡೆದಿರುವ ಮೋಹದ ಆಡಳಿತದಲ್ಲಿ ಸಿಕ್ಕಿರುವವನು. ನನಗೆ ಮೈಮೇಲೆ ಅರಿವಿಲ್ಲ. ನಾನು ನಿನ್ನನ್ನು ಅಡ್ಡಹಾಕಿದರೆ” ಎಂದನು ಹೌದು ಹುಡುಗಿಯು ಒಬ್ಬಳು ತರುಣನು ಅಗಲವಾದ ಎದೆಯೂ, ಲಾಳಮುಂಡಿಗೆಯಂತಿರುವ ತೋಳುಗಳೂ ಉಳ್ಳವನು. —–
ಚತುರ್ಥ ಪರಿಚ್ಛೇದ
—
ಹುಡುಗಿಯು ಹೆದರಲಿಲ್ಲ ಅಧೀರಳಾಗಲಿಲ್ಲ. ಕಾತರಳಾಗ ಲಿಲ್ಲ ನೆಟ್ಟ ಗೂಟದಂತೆ ಅಲುಗದೆ ಸ್ಥಿರಳಾಗಿ ನಿಂತು “ಅದು. ನಿನ ಕೈಯಲ್ಲಾಗುವುದಿಲ್ಲ. ನಿನ್ನ ಮನಸ್ಸನ್ನು ನಿಂನರಿಯೆ ಅದರಿಂದ ಹೀಗೆ ಹೇಳುವೆ. ನೀನು ಬೇಕೆನ್ನುವುದು ನನ್ನನ್ನು ನನ್ನ ದೇಹವನ್ನಲ್ಲ. ನನ್ನನೊಲಿಸಿಕೊನ್ಸಬೇಕೆಂದು ಬಂದಿರುವೆ ಯಲ್ಲದೆ ನನ್ನನ್ನು ನನ್ನ ಇಷ್ಟಕ್ಕೆ ವಿರೋಧವಾಗಿ ಹೊತ್ತುಕೊಂಡು ಹೋಗಬೇಕೆಂದಲ್ಲ ಇದನ್ನು ನಾನು ಬಲ್ಲೆ, ನೀನರಿಯೆ” ಎಂದಳು. ರಾಮುವು ಅಪ್ರತಿಭನಾದನು ಆಡಬಾರದ ಮಾತನ್ನಾಡಿದುದಕ್ಕೆ ಬಲು ನಾಚಿಕೆಯಾಯಿತ್ತು. ತಾನಾರಾಧಿಸುತ್ತಿರುವ ದೇವಿಯನ್ನು ಇಂತು ನೀಚವಾಗಿ ನುಡಿಸಿದುದಕ್ಕೆ ಹೃದಯವು ನಿಂದಿಸಿತು, ಮನ ದಲ್ಲಿ ಕಟ್ಟದ ಕರುಮಾಡದ ರನ್ನದೀವಿಗೆಯೆಂದು ನಂಬಿದ್ದ, ದಿವ್ಯಧಾಮದ ಸ್ವರ್ಗೀಯ ಮೂರ್ತಿಗೆ ಅಸಮಾನ ಮಾಡಿದೆಯೆಂದು ಮನವು ತಿರಸ್ಕರಿಸಿತು. ರಾಮುವು ಬಹಳ ಕಾತರನಾದನು. ಕರ ಣಗಳು ಕಳವಳಿಸಿದವು ಕಣ್ಣು ಕತ್ತಲೆಯಿಟ್ಟತು. ತನ್ನ ತಿರಸ್ಕಾರ ವನ್ನು ತಾನೇ ಸಹಿಸಲಾರದೆ ‘ಅಯ್ಯೊ!’ ಎಂದಳಲಿಹೋದನು; ವೇದನೆಯು ತೀವ್ರವಾಗಿ ಮೆಯ್ಯರಿವು ಮರತು ಭೊಪ್ಪನೆ ಬಿದ್ದು ಹೋದನು. ಶರೀರವು ಸುಂದರಿಯ ಪಾದಮೂಲದಲ್ಲಿ ಉರುಳಿತು.
ಹುಡುಗಿಯು ಕಣ್ಣೀರಿನ ಮಳೆಗರೆದು ಇಷ್ಟಕ್ಕೂ ತಾನೇ ಕಾರಣನೆಂದು ತಿರಸ್ಕರಿಸಿಕೊಂಡಳು. ಆದರೂ ತಾನು ಮಾಡಿದುದೇ ಸರಿಯೆಂದು ಸಣ್ಣ ದನಿಯೊಂದು ಧೈರ್ಯಹೇಳುತ್ತಿದ್ದಿತು.
ಹುಡುಗಿಯು ಕಣ್ಣೀರು ಸುರಿಸುತ್ತಲೇ, ಅವನನ್ನು ಮೆಲ್ಲಗೆ ಹಿಡಿದೆತ್ತಿ ಮಂಚದ ಮೇಲೆ ಮಲಗಿಸಿದಳು, ಮೂಲೆಯಲ್ಲಿ ಒಂದು ಹೂಜಿಯಲ್ಲಿದ್ದ ನೀರನ್ನು ತಲೆಗೂ ಹಣೆಗೂ ತಳೆದು ಸ್ನೇಹಸ್ನಿಗ್ಧವಾದ ಮೃದು ಮಧುರ ಧ್ವನಿಯಿಂದ ಮೆಲ್ಲಗೆ ‘ರಾಮೂ!’ ಎಂದಳು. ತರುಣನು ಮೆಲ್ಲಗೆ ಕಣ್ತೆರೆದು ಆಯಾಸದಿಂದ ಮೆಲ್ಲಗೆ ‘ಸುಂದರಾ!’ ಎಂದನು. ಕಣ್ಣು ನೀರಿನಿಂದ ತುಂಬಿದ್ದಿತು. ಕತ್ತು ಸೆರೆಬಿಗಿದು ಮುಂದಕ್ಕೆ ಮಾತು ಹೊರಡಲಿಲ್ಲ. ಹುಡುಗಿಯೂ ಅವನ ತಲೆಯ ಮೇಲೆ ಕಯ್ಯಿಟ್ಟು ಸ್ಥಿರದೃಷ್ಟಿಯಿಂದ ಚಾಂಚಲ್ಯದ ಸೊಂಕಿಲ್ಲದೆ ನೋಡುತ್ತ ಶುಳಿಶಿಟೆಳು.
ತರುಣನು ಚೇತರಿಸಿಕೊಂಡು ಎದ್ದು ಕುಳಿತನು. ಮುಖವು ಬಹಳವಾಗಿ ಕಂದಿ ಹೋಗಿದ್ದಿತು. ಸರ್ವನಾಶವಾಯಿತೆಂದು ದೃಢ ವಾದ ಮೇಲೆ ತೋರುವ ಒಂದು ತೆರದ ಸ್ಥೈರ್ಯದಿಂದ, ಹೇಳ ತೊಡಗಿದನು; ‘ಸುಂದರ! ದೇವರು ನನಗೆ ಎಲ್ಲವನ್ನೂ ಕೊಟ್ಟು ಒಂದನ್ನು ಕಿತ್ತುಕೊಂಡಿದಾನೆ. ದೇವರು ಕೊಡದಿರುವುದನ್ನು ನೀನು ಕೊಡಬಲ್ಲೆ. ಮತ್ತೊಮ್ಮೆ ಯೋಚಿಸು ಸುಂದರ! ನನ್ನ ಜೀವನವನ್ನು ರಮಣೀಯವಾದ ನಂದನವನ್ನು ಮಾಡುವುದೂ ಹುಲ್ಲು ಕಡ್ಡಿಯೂ ಕಾಣದ ಬೆಂಗಾಡನ್ನು ಮಾಡುವುದೂ ಈಗ ನಿನ್ನ ಕಯ್ಯಲ್ಲಿದೆ. ನನ್ನ ಹೃದಯವನ್ನು ನಿನ್ನ ಪಾದ ತಲದಲ್ಲಿ ಒಪ್ಪಿ ಸಿದ್ದೇನೆ. ನನ್ನ ಜೀವಿತವನ್ನು ನಿನಗೆಂದು ಮೀಸಲು ಕಟ್ಟಿ ಇಟ್ಟಿ ದ್ದೇನೆ. ಕಾಲಲ್ಲ ನೂಕುವೆಯಾ? ತಳ್ಳಿಬಿಡುವೆಯಾ? ತಲೆಯಲ್ಲಿ ಮುಡಿದೆಸೆದ ಹೂವನ್ನೂ ನಾನು ಮುಡಿದಿದ್ದ ಹೂವೆಂದು ಹೇಳು ತ್ತಿದ್ದ ಕರುಣವಂತೆಯು ನೀನು, ನೀನಾಗಿ ಬೆಳೆಸಿದ ಗಿಡವನ್ನು ಕಡಿದು ಬೆಂಕಿಯೊಟ್ಟುವಿಯಾ? ಮತ್ತೊಮ್ಮೆ ಕೈಮುಗಿದು ಕೇಳಿ ಕೊಳುವೆನು. ನನ್ನ ಜನ್ಮವನ್ನು ಸಫಲಮಾಡು. ದಯೆಮಾಡು? ಎಂದನು.
ಹುಡುಗಿಯ ಉತ್ತರನು ಕೂಡಲೆ ಬಂದಿತು. ಮರ್ಮಾಂತಿಕ ವೇದನೆಯಿಂದ ಅಲ್ಲಲ್ಲಿ ನಿರುದ್ಧವಾಗಿಯಾಗಿ ಮುಂದರಿಯಿತು. ‘ರಾಮೂ! ನೀನು ನನಗಾಗಿ ಪಡುತ್ತಿರುವ ಕಷ್ಟವು ಅತಿಶಯವಾ ದುದು. ಕೆಲಸಕ್ಕೆ ಬಾರದ ನನ್ನಂತಹವಳಿಗಾಗಿ ನೀನು ಇಷ್ಟು ವ್ಯಧೆಪಡುತ್ತಿದ್ದರೆ, ನನ್ನ ಮನಸ್ಸು ಕರಗದೆಂದುಕೊಂಡಿದ್ದೀಯಾ? ನಾನು ಯಾವಾಗಲೂ ನಿನ್ನವಳೇ ರಾಮು! ಆದರೆ ಯೋಚಿಸು. ಜಗತ್ತಿನಲ್ಲಿ ಕೆಟ್ಟವಳೆನ್ನಿಸಿಕೊಳ್ಳಲು ನನಗೆ ಇಷ್ಟವಿಲ್ಲ. ರಾಮೂ! ನಾವಿಬ್ಬರೂ ಹೃದಯವನ್ನು ನೋಡಬಲ್ಲ ದೇವರೆದುರಿಗೆ ಧರ್ಮ ದಂಪತಿಗಳು. ಆದರೆ ಹೊರಗಣ ಕಣ್ಣಿಂದ ನೋಡುವ ಜಗತ್ತಿಗೆ ಪಾಪಿಗಳು ಧರ್ಮಭ್ರಷ್ಟರು. ಒಬ್ಬರಿಂದ ನಮಗಾಗಬೇಕಾದುದೇ ನೆನ್ನುವೆ? ಅದಕ್ಕೆ ನಾನೇನೂ ಹೇಳಲಾರೆ. ರಾಮು! ಲೋಕ ವನ್ನು ನಾನು ಕಂಡಿರುವೆನು. ಧರ್ಮವನ್ನು ನಾನು ಕಾಣೆ. ರಾಮು! ಕಂಡಿರುವ ಈ ಲೋಕವನ್ನ ಮೆಚ್ಚಿಸದ ನಾನು ಕ೦ಡರಿ ಯದ ದೇವರನ್ನು ಮೆಚ್ಚಿಸುವುದುಂಟೇ? ಎಲ್ಲರಿಂದಲೂ ಒಳ್ಳೆಯವ ಳೆನ್ನಿಸಿಕೊಳ್ಳಬೇಕೆಂಬ ಆಶೆಯು ಮಾತ್ರ ನನಗೆ ಬಹಳವುಂಟು ನಾಳೆಯ ದಿನ ನನ್ನ ಮಕ್ಕಳನ್ನು ನೋಡಿ ಯಾರಾದರೂ “ಇವ ರಿಂಧವಳ ಮಕ್ಕಳೆಂದರೆ, ಇವರ ತಾಯಿ, ಹೀಗೆಂದರೆ, ಅದನ್ನು ಕೇಳಿ ನನ್ನ ಮಕ್ಕಳು ಏನೆಂದುಕೊಳ್ಳುವರು ಯೋಚಿಸು. ಅಲ್ಲದೆ, ರಾಮ! ನಾಚಿಗೆಯನ್ನು ಬಿಟ್ಟು ಹೇಳಿಕೊಳ್ಳಬೇಕೆಂದರೆ ಮನಸ್ಸು ಬರದು. ಇಲ್ಲವಾದರೆ ನನ್ನ ಹೃದಯವನ್ನು ಬಿಚ್ಚಿ ನಿನ್ನ ಮುಂದಿ ಡುತ್ತಿದ್ದೆನು. ಹೇಳಲಾರೆನಾದರೂ ಒಟ್ಟಿನಲ್ಲಿ ಹೇಳುವೆನು ಕೇಳು. ನನ್ನ ವ್ಯಥೆಯು ನಿನ್ನ ವ್ಯಧೆಗೆ ಕಡಿಮೆಯಾಗಿಲ್ಲ. ನೀನು ದೇವ ರಾಗಿದ್ದರೆ ನನಗೆ ಮುಕ್ತಿಯು ಖಂಡಿತ ದೊರೆಯುತ್ತಿದ್ದಿತು. ಇನ್ನ ಲ್ಲಿಂದ ಮುಂದಕ್ಕೆ ಹೇಳಲಾರೆ. ಒಂದು ಮಾತ್ರ ಖಂಡಿತವಾಗಿರು. ನಿನ್ನ ಹೃದಯದಲ್ಲಿ ಅಚ್ಚಳಿಯದಂತೆ ಬರೆದಿಟ್ಟುಕೊ. ಸು೦ದ ರಿಯ ದೇಹವು ನಿನ್ನದಲ್ಲ. ಮನಸ್ಸು ನಿನ್ನದು. ಆದರೂ, ಈ ಜನ್ಮದಲ್ಲಿ ಮಾತ್ರ ನಿನ್ನವಳಾಗಲಾರೆನು. ನಿನ್ನವಳು ಹೌದು; ಆದರೆ ಮತ್ತೊಬ್ಬನೊಡನೆ ಸಂಸಾರ ಮಾಡಿಕೊಂಡಿರುವೆನು. ಅಲ್ಲದೆ ನೀನು ಮತ್ತೊಂದನ್ನು ಯೋಚಿಸಲಿಲ್ಲ. ನೀನು ಹಲವು ವರ್ಷದ ಹಿಂದಿನ ಸವಿಗನಸುಗಳನ್ನು ಇಂದು ಹೇಳುತ್ತಿರುವೆ. ನಾನು ಅಂದಿ ನಿಂದಲೂ ಬೆಳೆದಿದ್ದೇನೆ. ನೀನೂ ಬೆಳೆದಿದ್ದೀಯೆ. ಮೊದ ಮೊದಲು ನಾವಿಬ್ಬರೂ ಎಳೆತನದಲ್ಲಿ ಸಸಿಗಳ೦ತೆ ಒಟ್ಟಿಗಿದ್ದೆವು. ಈಗ ಜತೆಯಲ್ಲಿ ಹುಟ್ಟಿದರೂ ಪ್ರವಹಿಸುವಾಗ ಬೇರೆಯಾಗಿವ ನದಿಗ ಳಂತೆ ಇದ್ದೇವೆ. ನಿನ್ನ ಪಾಡಿಗೆ ನೀನಿರು ನನ್ನ ಪಾಡಿಗೆ ನಾನಿರು ವೆನು. ಒಂದು ವೇಳೆ ನಾನು ಸತ್ತು ಹೋಗಿದ್ದರೆ ಆಗ ನಿನೇನು ಮಾಡುತ್ತಿದ್ದೆ ? ಈಗಲೂ ಹಾಗೆಯೇ ಇರು, ನಿನಗೆ ಮದುವೆ ಯಾಗದೆ ಇಲ್ಲ. ಯಾರು ಬೇಕಾದರೂ ಹೆಣ್ಣು ಕೊಡುತ್ತಾರೆ. ಮದುವೆ ಮಾಡಿಕೊಂಡು ಸುಖವಾಗಿರು. ಇಂದಿನಿಂದ ಆಚೆಗೆ ನಾನೂ ನೀನೂ ಅಣ್ಣತಂಗಿಯರು. ಸೋದರಮಾವನ ಮಕ್ಕಳಲ್ಲ; ಒಂದು ಹೊಟ್ಟೆಯಲ್ಲಿ ಹುಟ್ಟಿದವರು’ ಎಂದಳು.
ತರುಣಣೇನೆನ್ನಬೇಕು ? ಪಾರ್ಥಿವವಾದ ಶರೀರವನ್ನು ಧರಿಸಿದ್ದರೂ ಕಾಮವಿಕಾರವಿಲ್ಲದೆ, “ ನಾನು ನಿನ್ನವಳು ಹೌದು. ಆದರೆ ತಂಗಿಯೆಂದು ತಿಳಿದುಕೊ ” ಎ೦ದು ಹೇಳುತ್ತಿರುವ ಹೆಂಗ ಸನ್ನು ಕಂಡು ಚಕಿತನಾಗಿ ಹೋದನು. ” ಹಣವೆಂದರೆ ಬಾಯ್ಬಿ ಡುವಳು. ಹೊಗಳಿದರೆ ವಶಳಾಗುವಳು ” ಎಂದು ತಾನೆಂದು ಕೊಂಡಿದ್ದ ಹೆಂಗಸಲ್ಲಿ ವಳು. ಅವನೂ ಪ್ರಪಂಚವನ್ನು ಬಲ್ಲವನು. ಪತ್ತೇದಾರರ ಇಲಾಖೆಯಲ್ಲಿ ಬಹು ನಿಪುಣನೆಂದು ಪ್ರಸಿದ್ಧನಾದ ವನು. ಮನುಷ್ಯ ಸ್ವಭಾವವನ್ನು ಚೆನ್ನಾಗಿಯೂ ಅರಿತವನು ; ಆದರೂ ಓದಿನ ಗುರುತರಿಯದ ಹುಡುಗಿಯ ಸಾಮಾನ್ಯವಾದ ಮಾತುಗಳಿಗೆ ಮುಗ್ಧನಾಗಿ ಹೋದನು; ಪರಾಜಿತನಾದೆನೆಂದು ಒಪ್ಪಿಕೊಂಡನು ಎಲ್ಲದಕ್ಕಿಂತಲೂ ಒಂದು ಮಾತು ಬಹಳ ಹಿಡಿ ಯಿತು. ಇಂದಿನ ಸುಂದರಿಯು ಅಂದಿನ ಸುಂದರಿಯೇ ? ಅ೦ದು ಕಿಲಕಿಲನೆಂದು ನಗುತ್ತಾ, ಲೋಕದ ಕಷ್ಟ ಸುಖಗಳರಿಯದೆ ಹಾರುವ ಹಕ್ಕಿಯಂತಿದ್ದ ಸುಂದರಿಯೇ ಈಗಲೂ ? ಸಾಧ್ಯವಿಲ್ಲ.
ಪಂಚಮ ಪರಿಚ್ಛೇದ
ಇಬ್ಬರಲ್ಲಿ ಯಾರೂ ಮಾತನಾಡಲಿಲ್ಲ. ಸುಮಾರು ಹೊತ್ತಾ ಯಿತು. ಎಲ್ಲಿಯೋ ಒಂದು ಝುಾಮದ ಕೋಳಿಯು ಕೊಕ್ಕೋ ಎಂದಿತು. ಇಬ್ಬರೂ ಯೆಚ್ಛೆತ್ತರು. ಹುಡುಗಿಯು “” ಆಗಲೇ ಕೋಳಿ ಕೂಗುವ ಹೊತ್ತಾಯಿತು. ಇನ್ನು ನಾನು ಹೋಗುವೆನು. ಎಂದೆದ್ದಳು. ತರುಣನು ಕೈಮುಗಿದುಕೊಂಡು ಅಂಗಲಾಚಿಕೊಂಡು ” ಸುಂದರ ! ನೀನು ಹೇಳಿದಂತೆ ಕೇಳಿಕೊಂಡಿರುವೆನು. ನಿನ್ನ ಚರಣಸೆೇವಕನಾಗುವೆನು. ನಿನ್ನ ದಾಸಾನುದಾಸನಾಗುವೆನು. ಕೊನೆಯ ಮಾತನ್ನು ಹೇಳು?” ಎಂದು ಮತ್ತೆ ಬೇಡಿಕೊಂಡನು, ಹುಡುಗಿಗೆ ಅಸಮಾಧಾನವಾಗಿ ಕೊಂಚ ಕೋಪ ಬಂದಿತು. ಕಡೆ ಗಣ್ಣು ತುದಿಯಿಂದ ಗಂಟಿಕ್ಕಿದ ಹುಬ್ಬಿನಿಂದ, ಗಂಭೀರವಾದ ಮುಖದಿಂದ ತನ್ನಕೋಪವನ್ನು ಸೂಚಿಸುತ್ತಾ ” ನಾನು ಹೇಳ ದನ್ನು ಆಗಲೇ ಹೇಳಿದ್ದೇನೆ ನಿನಗೆ ಈ ದೇಹದಮೇಲೆ ಆಶೆಯಾ ದರೆ ಈಗಲೆ, ಇದೊ ನಿನಗೆ ಬೇಕಾದುದನ್ನು ಮಾಡಿಕೋ ಆದರೆ ಒಂದು ತಿಳಿದಿರು. ಮಾನವನ್ನು ನೀಗಿ ನನ್ನನ್ನು ದನಕ್ಕಿಂತಲೂ ಕಡೆಯಾಗಿಸುವೆ ನೀನು. ಇಂತಹ ನಿನ್ನಲ್ಲಿ ಸಾಯುವವರೆಗೂ ದ್ವೇಷವನ್ನು ಸಾಧಿಸುವೆನು. ಒಂದು ಗಳಿಗೆಯ ಇಂದ್ರಿಯ ಸುಖ ಕ್ಕಾಗಿ ಜೀವಾವಧಿ ಶಪಿಸುವ ರಾಕ್ಷಸಿಯ ದ್ವೇಷ ಬೇಕೋ ಇಲ್ಲ ವಾದರೆ ನಿನ್ನ ಶ್ರೇಯಸ್ಸಿಗರಂದು ದಿನವೂ ದೇವರಿಗೆ ಹರಕೆ ಯನ್ನು ಹೊರುವ ತಂಗಿಯ ಪ್ರೇಮ ಬೇಕೊ ನೀನೇ ಗೊತ್ತು ಮಾಡು” ಎಂದು ಮತ್ತೆ ಕುಳಿತುಬಿಟ್ಟಳು.
ರಾಮುವು ” ಸುಂದರ! ಇನ್ನು ನಿನ್ನೂಡನೆ ಕಾಮದ ಮಾತುಗಳನ್ನಾಡುವುದಿಲ್ಲ. ಚಾಪಲ್ಯದ ನುಡಿಗಳನ್ನು ನುಡಿಯು ವುದಿಲ್ಲ ಆದರೆ ಬಹುದಿವಸದ ಆಶೆಯ ಪಿಶಾಚವು ನನ್ನನ್ನು ತಟ್ಟನೆ ಬಿಡುವುದಿಲ್ಲ. ನನಗೊಂದು ಮುತ್ತು ಕೊಡು. ವರ್ಷಾಂ ತರಗಳಿಂದಲೂ ಹಂಬಲಿಸಿದ್ದನೆ. ಮರುಮಾತನಾಡಬೇಡ. ನಾನು ಪಶು. ನನಗೆ ವಿವೇಕವಿಲ್ಲ ಇದೋ ಕೊನೆಯ ಪ್ರಾರ್ಥನೆ ಇದೊಂದನ್ನು ನೆರವೇರಿಸು. ಕೈಮುಗಿದು ಕೇಳಿಕೊಳ್ಳುವೆನು. ಇಲ್ಲವೆನ್ನ ಬೇಡ. ಕರುಣಿಸು?’ ಎಂದು ಮಂಚದಿಂದಿಳಿದು ಮುಂದ ರಿದನು ಹುಡುಗಿಯು ಅವಾಕ್ಕಾಗಿದ್ದಳು. ವಿರೋಧಿಸಲಿಲ್ಲ. ತರುಣನು ಮಹತ್ತರವಾದ ಮನೋವೇದನೆಯಿಂದ ಅವಳನ್ನು ಬರ ಸೆಳೆದು ಅಪ್ಪಿ ಕೊಂಡು, ತಗ್ಗಿಸಿದ್ದ ಮೊಗವನ್ನು ಎತ್ತಿ ಮುತ್ತಿಟ್ಟು ಕೊಂಡನು. ಆ ವೇಳೆಗೆ ಎಲ್ಲಿಯೂ ಇಲ್ಲದ ಗಾಳಿಯೊಂದು ಬಂದು ದೀಪವು ಆರಿಹೋಯಿತು. ಇಂತಹ ಅವಿವೇಕವನ್ನು ದೀಪವೆಂತು ಸೈರಿಸುವುದು? ನಂದಿ ಹೋಯಿತು. ಗುಡಾರವೆಲ್ಲವೂ ಅಂಧಕಾ ರಾವೃತವಾಗಿ ಹೋಯಿತು. ಪ್ರಕೃತಿಯು ಈ ಪ್ರಾಣಿಗಳಿಬ್ಬರೆ ಚರ್ಯೆಯನ್ನು ಪ್ರಪಂಚವು ಕಾಣದಿರಲೆಂದು ಕತ್ತಲೆಯಿಂದ ಮುಚ್ಚಿ ಬಿಟ್ಟಳು.
ಮಂಚದ ಕೆಳಗೆ ಅವಿತಿದ್ದ ವ್ಯಕ್ತಿಯು ಬದುಕಿದೆನೆಂದು ಓಡಿ ಹೋಯಿತು.
*****
ಮುಂದುವರೆಯುವುದು