ಪ್ರಥಮ ಪರಿಚ್ಛೇವ
ಅಳಿಯನು ಹಿಂದಿನ ದಿನ ಮಾವನೊಡನೆ “ನಾನು ನಾಟ ಕಕ್ಕೆ ಹೋಗಬೇಕ್ಕು ಮೈಸೂರಿಗೆ ಹೋಗಿಬರುವೆನೆಂ”ದು ಹೇಳಿ ಸಂಜೆಯಲ್ಲಿ ಎಲ್ಲಿಯೋ ಹೊರಟಹೋಗಿದ್ದನು; ರಾತ್ರಿ ಸುಮಾರು ನಾಲ್ಕು ಗಂಟೆಯ ಹೊತ್ತಿಗೆ ಈಚೆ ಬಂದಿದ್ದ ಮಾವನು ಅಳಿಯನ ಕಿರುಮನೆಯಲ್ಲಿ ಏನೋ ಸೊರಸೊರ್ರೆಂಬ ಶಬ್ದವನ್ನು ಕೇಳಿ ಅಲ್ಲಿಗೆ ಹೋಗಿ ಬಾಗಿಲಿಗೆ ಕಿವಿಕೊಟ್ಟು ಕೇಳಿದನು. ಯಾರೋ ಮರ್ಮಾಂ ತಿಕವಾದ ವೇದನೆಯಿಂದ. ನೀರವವಾಗಿ ಆಳುತ್ತಿರುವಂತೆ ತೋರಿತು. ಸಾಮಾನ್ಯವಾಗಿ ಸುಂದರಿಯು ಅಳುತ್ತಿರುವುದುಂಟು. ಆದರೆ ಅವಳ ಧ್ವನಿಯ ಹಾಗೆ ತೋರಲಿಲ್ಲ.
ಮಾವನು ಹಿಂತಿರುಗಿ ಬಂದು ತನ್ನ ಕಿರುಮನೆಗೆ ಹೋಗು ವುದರೊಳಗಾಗಿ, ಯಾರೋ ಛತ್ರದ ಹಿತ್ತಲ ಬಾಗಿಲನ್ನು ತೆರೆದಂತಾ ಯಿತು. ತಾನು ಆಗ ತಾನೇ ಬಾಗಿಲು ಹಾಕಿಕೊಂಡು ಬಂದಿದನು. ಆ ಬಾಗಿಲು ಹೊರಗಿಂದ ತೆಗೆಯಬೇಕಾದರೆ ತಮ್ಮ ಮನೆಯವರಿಗ ಲ್ಲದೆ ಇತರರಿಗೆ ತಿಳಿಯ್ದದು. ಕಳ್ಳರೇನೋ ಎಂದುಕೊಂಡು, ಹಾಗೆಯೇ ನಿಂತುಕೊಂಡನು. ಬಾಗಿಲು ತೆರೆದು, ಒಂದು ವ್ಯಕ್ತಿ ಯು ಒಳಗೆ ಬಂದು ನೇರವಾಗಿ ಸುಂದರಿಯ ಕಿರುಮನೆಗೇ ಹೋ ಯಿತು ಹಾಗೆಯೇ ನೋಡಿದನು. “ಬಂದವಳು ಹುಡುಗಿ. ಹಾಗಾದರೆ ಕೃನ್ನು ಮೂರ್ತಿಯೇ ಅಳುತ್ತಿ ದ್ದುದು? ಸಾಮಾನ್ಯವಾಗಿ ನಾಟಕಕ್ಕೆಂದು ಮೈಸೂರಿಗೆ ಹೋದವನು ಮರುದಿನ ಬೆಳಿಗ್ಗೆ ಹತ್ತು ಗಂಟೆಯ ವೇಳೆಗೆ ಬರುತ್ತಿದ್ದನು. ಈದಿನ ನಾಲ್ಕು ಗಂಟೆಗೇ ಬಂದಿರು ವನೇ? ಏನೋ ಹಾಳಾಗಿಹೋಗಲಿ ನನಗೇಕೆ ?” ಎಂದು ಒಂದು ದಪ್ಪ ಚಿಟಿಕೆ ನಸ್ಯವನ್ನು ಮೂಗಿಗೆ ಬಲವಾಗಿ ಏರಿಸಿ ಮುಸುಕನ್ನು ಬೀರಿ ಮಲಗಿಬಿಟ್ಟನು.
ಮರುದಿನ ಬೆಳಗಾಯಿತು. ಕೃಷ್ಣಮೂರ್ತಿಯ ಮುಖವನ್ನು ಕಂಡವರೆಲ್ಲರೂ ಜ್ವರಬಂದಿದಿಯೇ ಎನ್ನುವರು. ಕಣ್ಣುಗಳು ಕೆಂಪಾಗಿ ಹೋಗಿ. ಕೊಂಚ ಊದಿಕೊಂಡಂತೆ ಕಾಣುತ್ತವೆ. ಮೊಗನೆಲ್ಲನೂ ನಿಸ್ತೇಜವಾಗಿ ಹೋಗಿದೆ. ಅಂಗಾಂಗಗಳೆಲ್ಲವೂ ಬಳಲಿಕೆಯಿಂದ ಬೆಂಡುಗಿ ಹೋಗಿವೆ.
—–
ದ್ವಿತೀಯ ಪರಿಚ್ಛೇದ
ಹಿಂದಿನ ದಿನ ಒಡೆಯನ ಅಪ್ಪ ಣೆಯಾಗಿದ್ದಂತೆ. ಆಳುಗಳು ಮತ್ತೆಲ್ಲಿಯೋ ಮಲಗಿದ್ದು ಬೆಳೆಗ್ಗೆ ಆರು ಗಂಟೆಗೆ ಬಂದರು. ಆ ವೇ ಳೆಗೆ ಅವರೊಡೆಯನು ಎಂದಿನಂತೆ ಎದ್ದಿರದೆ ಇನ್ನೂ ಮಲಗೇ ಇದ್ದನು. ಪಕ್ಕದ ಮೇಜಿನ ಮೇಲೆ ಆಡಕೆಲತೆ, ಒಳ್ಳೆಯ ಹೂ, ಹಾಲಿನ ಚಂಬು, ಸಂಪಗೆ ಹೂವಿನ ಪೊಟ್ಟಣ, ಅಲಂಕೃತವಾದ ಹೆಣ್ಣು ಬೊಂಬೆ. ಸಾಮಾನ್ಯವಾಗಿ ಒಡೆಯನು ಏನುಮಾಡಿದರೂ ಅದನ್ನು ಕುರಿತು ಆಳು ಮರುಮಾತನಾಡುತ್ತಿರಲಿಲ್ಲ ಆದರೆ ಈಸಲ ಒಂದು ಸಣ್ಣ ನಗು ಬಂದಿತು. ಅದನ್ನು ಹಾಗೇ ತಡೆದು “ಅಡಕೆಲೆ ಹಾಕಿಕೊಂಡಿಲ್ಲ ಹೂ ಕಟ್ಟು ಬಿಚ್ಚಿಲ್ಲ. ಇದೇನು ಆಟವೋ? ಕೊನೆಯವರಿಗೆ ನೋಡೋಣ? ಎಂದುಕೊಂಡು ಸಾಹೇ ಬರು ಏಳುವುದರೊಳಗಾಗಿ ಎಲ್ಲವನ್ನೂ ಗುಡಿಸಿಬಿಡೋಣವೆಂದು ಹೊರಟನು ಹಾಸಿದ್ದ ರತ್ನಗಂಬಳಿಯೆಲ್ಲ ಸುಕ್ಕ ಸುಕ್ಕಾಗಿದ್ದಿತು. ಹಾಗೆಯೇ ಹುಡುಕಿಕೊಂಡು ಬಂದರೆ ಒಂದು ಚೂರಿ. ಸಂದೇಹವಿನ್ನೂ ಬಲವಾಗಿ, ಮತ್ತೊಬ್ಬನನ್ನು ಕರೆದು ಆದನ್ನು ತೋರಿಸಿದನು. ಬಾಗಿಲಲ್ಲಿ ಎಂದಿನಂತೆ ನಾಯಿಯಿಲ್ಲ; ಹುಡುಕಿ ದರೆ ಗುಡಾರದ ಹಿಂದೆ ಸುಮಾರು ದೂರದಲ್ಲಿ ಒಂದು ಮರಕ್ಕೆ ಕಟ್ಟಿಹಾಕಿದೆ. ಇಬ್ಬರಿಗೂ ಸಂಶಯವು ಬಲವಾಯಿತು. ಚಿನ್ನದ ಒಡವೆಗಳಿದ್ದ ಬೊಂಬೆಯೂ ಬೆಳ್ಳಿಯ ತಂಬಿಗೆಯೂ ಇದ್ದಹಾ ಗಿಯೇ ಇವೆ. ಮಂಚದಡಿ ಚೂರಿ ಇದೆ. ಅವರಿಬ್ಬರ ತರ್ಕದಲ್ಲಿ ಯಾರೋ ತಮ್ಮ ಸ್ವಾಮಿಯ ಜೀವಿತ ಹರಣಕ್ಕಾಗಿ ಬಂದಿರಬೇ ಕೆಂದು ಸಿದ್ಧವಾಯಿತು. ಹಗಲಿರರೂ ಪತ್ತೆದಾರಿಯ ಸಾಹಸ ಕರ್ಮದಲ್ಲಿ ತೊಡಗಿರುವವನ ಮೇಲೆ ಅಂತಹ ಅತ್ಯಾಚಾರ ನಡಿ ಯುವುದು ಅಸಂಭವವೇನೂ ಅಲ್ಲ.
ಅವರಿಗೂ ಆಗ ತಾವೇ ಒಂದು ಗಳಿಗೆಯ ಮುಂಚೆ ಜೊಂಪು ಹಿಡಿದಿದ್ದಿತು. ರಾತ್ರಿಯೆಲ್ಲವೂ ಹುಚ್ಚುಜ್ವರ ಕಾಯ್ದಂತೆ ಆದರೆ ಗಾಬರಿಯಿಲ್ಲ. ಒಂದುತರದ ಧೈರ್ಯವಿದೆ. ಎಲ್ಲವೂ ಅರಿಕೆ ಯಾಯಿತು ಅವರಿಗೂ ಆಶ್ಚರ್ಯವಾಗಿ ಚೂರಿಯನ್ನು ತರಿಸಿ ಕೊಂಡು ನೋಡಿದರು. ಹಣದ ಪಟ್ಟಗೆಯು ತೆರದಿದುದೂ ಅದ ರಲ್ಲಿ ಸುಮಾರು ನೂರೈವತ್ತು ರೂಪಾಯಿ ಹೋಗಿರುವುದೂ ಗೊತ್ತಾಯಿತು. ನಾಯಿಯನ್ನು ತರಿಸಿ, ಜಾಡೆಯನ್ನು ಗುರ್ತು ಹೆಚ್ಚಿಸಿದರು. ಎರಡು ಜಾಡೆಗಳು. ಎರಡೂ ಛತ್ರದ ಕಡೆಗೇ ಹೋಗುತ್ತ ಹಿಂಬಾಗಿಲಿಂದ ಒಳಕ್ಕೆ ಹೋಗುತ್ತವೆ. ಒಂದು ಪಾರು ಪತ್ತೆಗಾರರ ಕೊಠಡಿಗೆ ಹೋಗಿ, ಅಲ್ಲಿಂದ ಮತ್ತೊಂದು ಕಿರು ಮನೆಗೆ ಹೋಗುತ್ತದೆ. ಮತ್ತೊಂದು ಕಿರುಮನೆಯು ಯಾರದು ಎಂಬುದು ಸಾಹೇಬರಿಗೆ ಗೊತ್ತು.
ಆಳುಗಳಿಬ್ಬರೂ ಪ್ರಚಂಡರು. ದಫೇದಾರ್ ನರಸಿಂಗ ರಾಯನು ಬಂದಿರುವುದನ್ನು ಬಲ್ಲರು. ಒಬ್ಬನು ಹೋಗಿ ಕಥೆಯನ್ನು ಉಪ್ಪುಕಾರ ಹಚ್ಚಿ ಹೇಳಿ ಕರೆದುಕೊಂಡು ಬಂದನು. ಅವನೂ ‘ದೊಡ ಸಾಹೇಬರು, ಪತ್ತೇದಾರರ ಆಫೀಸರ್? ಎಂದು ತಿಳಿದು ಮುತುವರ್ಜಿವಾಡಿ, ಒಂದು ‘ಭಲೆ!’ ಹೊಡೆದು ಬಿಡಬೇಕೆಂದು ಬಂದನು. ಆಸೀಸರ್ ಇನ್ನೇನೂ ಕೊಡುವುದಿಲ್ಲವೆಂದು ಅವನ ಮತ ಬಂದು ಸಾಹೇಬರ ಮುಂದೆ, ಬಹು ಮರ್ಯಾದೆಯಿಂದ ಬಗ್ಗಿ ಸಲಾಂಮಾಡಿ, ತಾನು ಒಂದು ನಿಮಿಷದಲ್ಲಿ ಪತ್ತೆಮಾಡು ವುದಾಗಿ ಹೇಳಿದನು. ಏನೋ ಯೋಚನೆಯಲ್ಲಿದ್ದ ಆಫೀಸರ ಆಗಬಹುದೆಂದರು. ನರಸಿಂಗರಾಯನು ಚೂರಿಯನ್ನು ತೆಗೆದು ಕೊಂಡು ಹೋದನು.
ಆಫೀಸರಿಗೆ ಒಂದೇ ಯೋಚನೆ. “ಇನ್ನೂ ಹದಿನೆಂಟು. ವರ್ಷದ ಹುಡುಗಿ. ಹೆಚ್ಚು ಓದಿದವಳೂ ಅಲ್ಲ, ಇಷ್ಟು ಮಾತು ಎಲ್ಲಿ ಕಲಿತಳು?” ಆಶಾಭಂಗದಿಂದ ಭಗ್ನವಾದ ಮೃದು ಹೃದಯ ದಲ್ಲಿ, ಸಫಲವೂ ನಿಷ್ಫಲವೂ ಅಲ್ಲದ ಕಾಮವು ಕಡೆಕಡೆದು ಮನ ಸ್ಸನ್ನು ಹರಿತಮಾಡಿ, ತಿಳಿಯದುದನ್ನು ತಿಳಿಸಿಕೊಡುವುದೆಂಬ ಗುಟ್ಟು ಆಫೀಸರಿಗೆ ಇನ್ನೂ ತಿಳಿದಿರಲಿಲ್ಲ.
ಸುಮಾರು ಅರ್ಥ ಗಂಭಿಯಲ್ಲಿ ಆಫೀಸರು ಇನ್ನೂ ಹಾಸಿ ಗೆಯ ಮೇಲಿರುವಹಾಗೆಯೇ, “ಕಳ್ಳನು ಸಿಕ್ಕಿದ್ದಾನೆ. ಕದ್ದಿರು ವವನು ಛತ್ರದ ವಾರುಪತ್ತೇಗಾರ ವೆಂಕಟರಮಣಯ್ಯ. ಚೂರಿಯು ಅವನದೇ” ಎಂದು ವರದಿ ಬಂದಿತು, ಆಫೀಸರಿಗೆ ಮೈಹಿಡಿದು ಕುಲುಕಿದಂತಾಯಿತು.
————-
ತೃತೀಯ ಪರಿಚ್ಛೇದ
ಸುಮಾರು ಎಳುಗಂಟೆಯ ವೇಳೆಗೆ ಭತ್ರದಬಳಿ ಗದ್ದಲವೋ ಗದ್ದಲ. ಪಾರುಪತ್ತೆಗಾರರನ್ನು ಪೋಲೀಸಿನವರು ಹಿಡಿದುಕೊಂಡು ಹೋಗಿದಾರೆ. ಅನೇಕರಿಗೆ ಅದು ಸಮ್ಮತ. ‘ಆಗಬೇಕು. ಸುಮ್ಮನಿರು ಕಳ್ಳಲೆಖ್ಬ ಬರೆದು ಕೊಳ್ಳೆ ಹೊಡೆಯುತಿದ್ದ’ ಎಂದು ಕೆಲವರು ” ಎಲ್ಲಿಯೋ ಸಿಕ್ಕಿಬಿದ್ದಿದಾನೆ? ಎಂದಿಲ್ಲರ ಅಭಿಪ್ರಾಯವಾದರೂ ” ಗುಡಾರಕ್ಕೆ ನುಗ್ಗಿ ನೂರೈವತ್ತು ರೂಪಾಯಿ ಕದ್ದನೆಂ”ದರೆ ಯಾರೂ ಒಪ್ಪರು. ಎಲ್ಲರೂ “ಅಯ್ಯೋ ಪಾಪ; ಆ ಅಳ್ಳದೆಯ ಅಯ್ಯನಿಗೆ ಅಷ್ಟು ಧೈರ್ಯವೆಲ್ಲಿಂದ ಬಂತು?” ಎನ್ನುವರು, ಮತ್ತೆ ಕೆಲವರು ಸರ್ವಜ್ಞರು ” ಸರಿ! ಕೇಡುಕಾಲಕ್ಕೆ ಕೆಟ್ಟ ಬುದ್ಧಿ ಏನೋ? ಎಂತೋ? ಏನೂ ಇಲ್ಲದೆ ಪೋಲೀಸಿನವರು ಹಿಡಿದು ಕೊಂಡು ಹೋಗುತ್ತಾರೆಯೇ?? ಎಂದರು. ಹಿಡಿದು ಕೊಂಡು ಹೊಗಿರುವುದೇಕೆಂದು ವಿಚಾರಿಸಿ, ಅವನನ್ನು ಬಿಡಿಸಿಕೊಂಡು ಬರುವ ಬುದ್ದಿ ಒಬ್ಬರಿಗೂ ಇಲ್ಲ. ಎಲ್ಲರೂ ತರ್ಕವಿತರ್ಕವಾದ ವಿವಾದಗಳ ಪಾರ್ಲಿಮೆಂಟು ನಡೆಸುತ್ತಾ ಕುಳಿತಿದ್ದರು.
ಈ ಗದ್ದಲದಲ್ಲಿ ಸುಂದರಿಗೆ ಎಚ್ಚರವಾಯಿತು. ಈಚೆ ಬಂದು ವಿಚಾರಿಸಿ, ” ಅದೆಲ್ಲ ಸುಳ್ಳು.” ಎಂದಳು. ಯಾವನೋ “ನಿನಗೆ ಬಹಳ ಗೊತ್ತು ಕಾಣಮ್ಮ! ನಿನ್ನ ಕೊಠಡಿ ಬಿಟ್ಟು ಈಚೆಗೆ ಬರದ ವಳಿಗೆ” ಎಂದನು. ಅವಳೂ ಮರುಮಾತನಾಡದೆ ಬಂದು ಬಿಟ್ಟಳು ಒಬ್ಬ ಹುಡಗನನ್ನು ಒಳಕ್ಕೆ ಕರೆದು ಎಲ್ಲವನ್ನೂ ವಿಚಾರಿಸಿದಳು. ಅವಳಿಗೂ ” ಇರಬಹುದೇ?” ಎನ್ನಿಸಿತು.
ಅವಳು ಅತ್ತ ತಿರುಗಿದಾಗ ಯಾರೋ ” ಹುಡುಗಿಗೆಲ್ಲೊ ಭೀತಿಶಂಕೆಯಾಗಿದೆ ಕಣೋ! ಮೊನ್ನೆ ಒಳ್ಳೆಯ ನಿಂಬೆಹೆಣ್ಣಿನ ಹಾಗೆ ನೋಡುವುದಕ್ಕೆ ಅಷ್ಟು ಸೊಗಸಾಗಿದ್ದವಳು ಇವತ್ತು ಹೆಣದ ಹಾಗೆ ಆಗಿ ಹೋಗಿದ್ದಾಳೆ? ಎಂದನು. ಆ ಮಾತು ಅವಳ ಕಿವಿಗೆ ಬಿದ್ದಿತು. ಅವಳಿಗೆ ನಗು.
“ಭೀತಿಯೂಯಿಲ್ಲ ಗೀತಿಯೂ ಇಲ್ಲ ಆ ಹೆಣ್ಣಿ ಗೆ ಗಂಡ ಹೀಗೆ ದುರಿತಪ್ಪಿರುವನಲ್ಲ ಎಂದು ಯೋಚನೆ. ದಿನವೂ ಇರುಳೆಲ್ಲ ಅಳುತ್ತಲೇ ಇರುವಳಂತೆ. ನಿದ್ದೆ ಮಾಡದೆ ಅತ್ತುಅತ್ತು ಹೀಗಾಗಿ ದ್ದಾಳೆ” ಎಂದನು. “ತನ್ನ ಬಾಳು ಹೀಗಾಯಿತಲ್ಲಾ ! ” ಎಂಬ ಗಾಯವಡೆದ ಅಭಿಮಾನದಿಂದ ಅವಳಿಗೆ ಬಲುದುಃಖವಾಯಿತು.
ಗಂಡನು ಮನೆಯಲ್ಲಿಲ್ಲ. ಎಲ್ಲಿಯೋ ಹೋಗಿದ್ದಾನೆ. ಮತ್ತೆ ಬೆಳಗಾಗುವುದರೊಳಗಾಗಿ ಜೂಜಿನ ಕಟ್ಟಿಗೆ ಹೋಗಿರಬಹು ದೇನೋ ಎಂದಲ್ಲಿಗೂ ಒಬ್ಬಹುಡುಗನನ್ನು ಕಳುಸಿಸಿದಳು. ಕೊನೆಗೆ ಎಂದೂ ಇಲ್ಲದೆ ಇಂದು ಕೆರೆಯಕಡೆಗೆ ಹೋಗಿರುವನೆಂದು ತಿಳಿಯಿತು ನಡೆದುದನ್ನೆಲ್ಲಾ ಅಲ್ಲಿಗೇ ಮುಸುರೆಯುಜ್ಜುವವಳೊ ಡನೆ ಹೇಳಿಕಳುಹಿಸಿದಳು. “ಹಣವನ್ನು ಅವರೇ ಕದ್ದಿರಬಹುದೋ?” ಎಂದು ಅವಳಿಗೆ ಒಂದು ಸಂದೇಹ. ಜೂಜಿನಮನೆ ಗದ್ದಲವು ಅವಳ ಕವಿಗೂ ಬಿದ್ದಿದ್ದಿತು.
——
ಚತುರ್ಥ ಪರಿಚೀದ
ವೆಂಕಟರಮಣಯ್ಯನು ಚಾವಡಿಯಲ್ಲಿ ಕುಳಿತಿದ್ದಾನೆ. ನರ ಸಿಂಗರಾಯನು ಒಳ್ಳೆಯ ಜರ್ಬಿನಿಂದ, ಕುರ್ಚಿಯಲ್ಲಿ ಕಾಲುಮೇಲೆ ಕಾಲು ಹಾಕಿಕೊಂಡು, ಸೊಗಸಿಂದ ಸಿಗರೇಟ್ ಸೇದುತ್ತಾ ಕಳಿತಿ ದ್ದಾನೆ ಇಬ್ಬರಿಗೂ ಯೋಚನೆ.
ಒಬ್ಬನಿಗೆ ಇವನು ಒಳ್ಳೆಯ ಹಣವಂತ. ಚನ್ನಾಗಿ ಕಕ್ಕಿಸ ಬಹುದಾಗಿದ್ದಿತು. ಏನಿಲ್ಲವೆಂದರೂ ನೂರು ರೂಪಾಯಿ ಸಿಕ್ಕುತ್ತಿದ್ದಿತು. ಎರಡು ದಿನ ಗೋಳುಗುಟ್ಟಿಸಿ, ರೂಪಾಯಿ ಕಸಿದು ಕೊಂಡು ‘ಎವುಡೆನ್ಸು’ ಸಾಲದು ಎಂದು ಒಂದು ‘ಬಿ ಷೀಟ್’ ಕೊಟ್ಟಿದ್ದರೆ ಮುಗಿದುಹೋಗುತ್ತಿದ್ದಿತು. ಈ ಹಾಳು ಆಫೀಸರ್ ಬೇರೆ ಬಂದು ಕೆಲಸ ಕೆಟ್ಟುಹೋಗಿದೆ? ಎಂದು ಯೋಜನೆ.
ಮತ್ತೊಬ್ಬನು “ಸರಿ. ಅರ್ಧವಾಯಿತು. ಗಂಡ ನನ್ನನ್ನು ಹಣ ಕೇಳಿದರೆ, ನಾನು ಕೊಡಲಿಲ್ಲ. ಅವನೆಲ್ಲಿಯೋ ಅತ್ತು ಕೊಂಡಿದ್ದಾನೆ. ಅದನ್ನು ಕಂಡು ಅವಳಿಗೆ ಮರುಕ ಹುಟ್ಟಿದೆ. ಹೀಗೆ ಮಾಡಿಬಿಟ್ಟಿದ್ದಾಳೆ. ಅಯ್ಯೋ ! ಹಾಳು ಹುಡುಗಿ ! ನನ್ನ ಹತ್ತಿರಲೇ ತೆಗೆದುಕೊಳ್ಳಬಾರದಾಗಿತ್ತೆ? ಪೆಟ್ಟಿಗೆಯ ಬೀಗದ ಕೈಯಳೆರಡೂ ನಿನ್ನ ಹತ್ತಿರಲೇ ಇತ್ತಲ್ಲಾ ! ಎಲ್ಲಿ ? ಹೇಗೆ ತೆಗೆ ದುಕೊಳ್ಳುವುದು ? ನಾನು ಕೊಠಡಿಯಲ್ಲಿಯೇ ಕುಳಿತಿದ್ದೆನಲ್ಲ! ಹುಡುಗಿಗೆ ಹೀಗೆ ಗಂಡನಲ್ಲಿ ಇಷ್ಟು ಆಶೆ ಎಂದು ತಿಳಿದಿದ್ದರೆ ಕೊಟ್ಟು ಬಿಡುತ್ತಿದ್ದೆನಲ್ಲಾ” ಎಂದುಕೊಳ್ಳುತ್ತಿದ್ದನು.
ಹುಟ್ಟಿದ ಯೋಚನೆಯು ಬಲಪಟ್ಟು ಸಿದ್ದಾಂತವಾಗುವುದಕ್ಕೆ ಬಹಳ ಹೊತ್ತು ಬೇಕಾಗಿಲ್ಲ. ನಿರಾಧಾರವಾಗಿರುವಾಗಲ೦ತೂ ನಿರ್ಧಾರವಾಗುವುದು ಬಹುಬೇಗ. ಕೊನೆಗೆ ಹಾಗೆಯೇ ನಡೆದಿರ ಬೇಕೆಂದು ಖಂಡಿತ ಮಾಡಿಕೊಂಡು, “ ದಫೇದಾರೆ ! ಕದ್ದವನು ನಾನಲ್ಲ. ಕಳ್ಳರು ಯಾರು ಎನ್ನುವುದು ಊಹಿಸಿದ್ದೇನೆ. ದಯ ವಿಟ್ಟು ನನ್ನನ್ನು ಬಿಡಿಸಿ ಬಿಡಿ. ಅವರ ರೂಪಾಯಿ ಅವರಿಗೆ ಕೊಟ್ಟು ಬಿಡುತ್ತೇನೆ. ತಮಗೂ ಏನಾದರೂ ಸಂಭಾವನೆ ಕೊಡು ತ್ತೇನೆ” ಎಂದನು. ಸಂಭಾವನೆ ಎನ್ನುತ್ತಲೇ ದಫೇದಾರಿಗೆ ಕಿವಿ ನೆಟ್ಟಗಾಯಿತು. ” ಸಾಹೇಬರಿಗೆ ಅವರ ಹಣ ಅವರಿಗೆ ಬಂದ ಮೇಲೆ, ಇನ್ನೇನು? ತನಗೂ ಚೆನ್ನಾಗಿದೆ, ಇರಲಿ ?” ಎಂದುಕೊಂಡು “ಹಾಗಾದರೆ ಸಾಹೇಬರ ಹತ್ತಿರಲೇ ಈ ಮಾತು ಹೇಳುವಿರೋ ? ” ಎಂದನು. ವೆಂಕಟರಮಣಯ್ಯನೂ ಒಪ್ಪಿಕೊಂಡನು. ಇಬ್ಬರೂ ನೇರವಾಗಿ ಹೋಗಿ ಸಾಹೇಬರನ್ನು ನೋಡಿದರು.
ಸಾಹೇಬರ ಪರಿಚಯವು ವಾರುಪತ್ತೇದಾರ್ರಿಗೆ ಇಲ್ಲವಾದರೂ ಇವರ ಗುರುತು ಅವರಿಗೆ ಸಂಪೂರ್ಣವಾಗಿ ಉಂಟೆಂಬಂತೆ ತೋರಿತು. “ ಬನ್ನಿ ಕುಳಿತುಕೊಳ್ಳಿ” ಎಂದು ಒಂದು ಕುರ್ಚಿ ಕೊಟ್ಟು ಕೂರಿಸಿ ದರು. ದಫೇದಾರ್ರಿಗೆ ಸಂಕಟ ” ಕದ್ದ ಕಳ್ಳನಿಗೆ ಕುರ್ಚಿ ಕೊಟ್ಟ ರಲ್ಲಾ!” ಎಂದು.
ವೆಂಕಟರಮಣಯ್ಯನು ಕುಳಿತುಕೊಳ್ಳಲಿಲ್ಲ. ಕೈಕಟ್ಟಿಕೊಂಡು ವಿನಯದಿಂದ “ಸ್ವಾಮಿ! ಕ್ಷಮಿಸಬೇಕು. ತಮ್ಮಲ್ಲಿ ಹಣ ಕದ್ದ ವರು ಯಾರೆಂಬುದನ್ನು ನಾನ ಬಲ್ಲೆ. ಆದರೆ ಹೇಳಿಕೊಳ್ಳುವ ಹಾಗಿಲ್ಲ. ತಮ್ಮ ಹಣವನ್ನು ವಾಪಸು ತಮಗೆ ತಂದುಕೊಡು ತ್ತೇನೆ. ನನ್ನನ್ನು ಬಿಟ್ಟುಬಿಡುಂತೆ ಅಪ್ಪಣೆಯಾಗಬೇಕು” ಎಂದು ಕೇಳಿಕೊಂಡನು. ಸಾಹೇಬರಿಗೆ ಕುತೂಹಲವು ಹೆಚ್ಚಿ ಕದ್ದವರು ಯಾರು?” ಎಂದರು. ವೆಂಕಟರಮಣಯ್ಯನಿಗೆ ಕಷ್ಟಕ್ಕೆ ಬಂದಿತು. ಯತ್ನವಿಲ್ಲದೆ “ಸ್ವಾಮಿ! ಕದ್ದವಳು ನಮ್ಮ ಹುಡುಗಿ, ಗಂಡನಿಗಾಗಿ ಕದ್ದಿದ್ದಾಳೆ, ತಿಳಿಯದೆ ಮಾಡಿದ್ದಾಳೆ. ಕ್ಷಮಿಸಬೇಕು. ಇಲ್ಲವಾದರೆ ಮಾನ ಹೋಗುತ್ತದೆ ” ಎಂದನು.
ಸಾಬರ ಮುಖವು ಗಂಭೀರವಾಯಿತು. ”ಸುಂದರಾನೆ ?” ಎ೦ದರು. ಪಾರುಪತ್ತೆಗಾರನು ಹೌದೆಂದರೂ, ‘ಇವರಿಗೆ ಮಗಳ ಹೆಸರು ಹೇಗೆ ತಿಳಿಯಿತು?” ಎಂದು ಒಂದು ಪ್ರಶ್ನೆ ಹುಟ್ಟಿತು. ಆದರೆ ಆಫೀಸರ್ರು ! ಕೇಳುವುದು ಹೇಗೆ ?
ಕೊನೆಗೆ ವೆಂಕಟರಮಣಯ್ಯನಿಗೆ ಬಂಧನ ಮೋಕ್ಷವಾಯಿತು. ಸಾಹೇಬರೇ ಸ್ವಂತವಾಗಿ ದಫೇದಾರರನ್ನು ಕರೆದು ” ಇವರನ್ನು ಬಿಟ್ಟು ಬಿಡಿ” ಎಂದರು. ಆದರೂ ದಫೇದಾರ್ರು ತಮ್ಮ ಬಹು ಮಾನ ತಮಗೆ ಬರುವವರೆಗೂ ಬಿಡುವುದೆಲ್ಲಿ ?
ದಾರಿಯಲ್ಲಿ ಕೃಷ್ಣಮೂರ್ತಿಯು ಸಿಕ್ಕಿದನು. ಮಾವನವ ರನ್ನು ಬಿಡಿಸುವ ಯತ್ನವು ಸಫಲವಾಗಲಿಲ್ಲ. ಕೊನೆಗೆ ತಾನೇ ಸಾಹೇಬರ ಬಳಿಗೆ ಹೋದನು. ಅದರೆ ಅನನೊಡನೆ ಏನು ಹೇಳ ಬೇಕು? ಏನೂ ಹೇಳದೆ ಹೋದರೆ ಮಾವನನ್ನು ಬಡಿಸುವುದು ಹೇಗೆ? ಕೊನೆಗೆ ಏನಾದರೂ ಹೇಳಿಬಿಡುವೆನೆಂದುಕೊಂಡು ಅವರೆ ದುರಿಗೆ ಹೋಗಿ ನಿಂತನು. “ಯಾರು ನೀವು? “ಎಂಬ ಪ್ರಶ್ನೆಗೆ ಉತ್ತರವಾಗಿ ” ನಾನು ವಾರುಪತ್ತೆಗಾರರ ಅಳಿಯ ಕೃಷ್ಣ ಮೂರ್ತಿ” ಎಂದನು ಸಾಹೇಬರಗೆ ಈ ಮೂರ್ತಿ ಯನ್ನು ನೋಡಲು ಆಶೆಯಿದ್ದರೂ, ಹೀಗೆ ತಟ್ಟನೆ ನೋಡಲು ಅವರು ಸಿದ್ಧರಾಗಿರಲಿಲ್ಲ. ” ಅವಳ ಗಂಡನೇ ಇವನು?” ಮನಸ್ಸಿನ ಅಲ್ಲೋಲಕಲ್ಲೋಲ ವನ್ನು ಹೊರಗೆಡದೆ “ಏನು ಬಂದಿರಿ” ಎಂದರು; “ಸ್ವಾಮಿ! ನಮ್ಮ ಮಾವನವರು ತಮ್ಮಲ್ಲಿ ಹಣ ಕದ್ದರೆಂದು ಅವರನ್ನು ಪೋಲೀಸಿಗೆ ಕೊಟ್ಟದ್ದಿರಂತೆ ಕದ್ದವರು ಅವರಲ್ಲ. ಬೇರೆ. ಅವರನ್ನು ಬಿಡಿಸಿಬಿಡಿ” ಎಂದನು. ಮಾತು ಖಂಡಿತವಾಗಿದ್ದಿತು. ಮಾತಿನಲ್ಲಿ ವಿನಯವೂ ಧೈರ್ಯವೂ ಇದ್ದಿತು. “ಹೌದು. ಅವರೂ ಹಾಗೆಯೇ ಎ೦ದರು. ಆದರೆ ಕಳ್ಳರಾರು ಎ೦ಬುದು ತಿಳಿ ಯಬೇಕಲ್ಲಾ! ಎಂದರು. ಕೃಷ್ಣಮೂರ್ತಿಯು ” ಕಳ್ಳನು ತಮ್ಮೆದುರಿಗೆ ನಿಂತಿದ್ದಾನೆ ಕದ್ದವನು ನಾನು” ಎಂದನು. ಸಾಹೇ ತಮ್ಮೆದುರಿಗೇ ನಿಂತಿದ್ದಾನೆ. ಕದ್ದವನು ನಾನು” ಎಂದನು. ಸಾಹೇ ಬರಿಗೆ ಅತ್ಯಾಶ್ಚರ್ಯವಾಯಿತು. ಕದ್ದ ಕಳ್ಳನು ತಾನೇ ಬಂದು ಹೇಳಿಕೊಳ್ಳುವುದುಂಟೆ? ಅಸತ್ಯದ ಮೂಟೆಯಾದ ಪ್ರಪಂಚದಲ್ಲಿ ಸತ್ಯವು ಕಣ್ಣಿಗೆ ಬಿದ್ದರೆ ನಂಬುವುದು ಸಾಧ್ಯವೆ?
ಆಫೀಸರು ” ಇರಲಾರದು. ನಾನು ರಾತ್ರಿಯಲ್ಲಾ ಇಲ್ಲೇ ಇದ್ದೆ. ಅಲ್ಲದೆ ಚೂರಿಯು ನಮ್ಮ ಆ- ನಿಮ್ಮ ಮಾನನವರವದು ?? ಎಂದರು.
ಕೃಷ್ಣಮೂರ್ತಿಯು ಒಂದು ಗಳಿಗೆ ಹಿಂದು ಮುಂದೆ ನೋಡಿ ದನು. ಒಂದು ಗಳಿಗೆ ಅಸ್ಥಿರನಾಗಿದ್ದು ಮತ್ತು ಔಡುಕಚ್ಚಿದ ದೃಢ ಮನಸ್ಸಿನಿಂದ ಹೇಳಿದನು. ” ಹೌದು! ಚೂರಿಯು ಅವರದು ಆದರೆ ಕದ್ದವನು ನಾನೇ! ತಾವು ನಾಯಿ: ಕಟ್ಟುವ ವುದಕ್ಕೆ ಹೊರಗೆ ಹೋದಿರಿ. ನಾನು ಒಳಗೆ ಬಂದೆ. ನಾನು ಮತ್ತೆ ಹೊರಗೆ ಹೋಗುವುದರೊಳಗಾಗಿ ತಾವು ಬಂದುಬಿಟ್ಟಿರಿ. ಕೊನೆಗೆ ನಾನು ಓಡಿಯೋಗುವುದಕ್ಕೆ ಅವಕಾಶವಾದಾಗ ಅವಸರದಲ್ಲಿ ಚೂರಿಯನ್ನು ಮರೆತ ಬಿಟ್ಟೆಎಂದನು,
“ನೀವು ಓಡಿಹೋದಾಗ ಎಷ್ಟು ಹೊತ್ತು?“
“ಸುಮಾರು ನಾಲ್ಕು ಗಂಟೆ?”
ಆಫೀಸರಿಗೆ ತಲೆಯಮೇಲೆಸಿಡಿಲುಬಿದ್ದಂತಾಯಿತು. ನಾಲಿಗೆ, ಗಂಟಲು, ಎಲ್ಲಾಒಣಗಿಹೋಯಿತು ಬಹುಕಷ್ಟದಿಂದ ‘ನಿರ್ದ್ರವವಾದ ಬರಿಯ ಧ್ವನಿಯಿಂದ, “ಹಾಗಾದರೆ………..” ಎಂದರು. ಕೃಷ್ಟಮೂರ್ತಿಯು ಕೂಡಲೇ ಅದೇ ಗಂಭೀರ, ಸ್ಥಿರ, ಅಚಲಿತ ವಾದ ಮುಖ ಮುದ್ರಿಯಿಂದ “ಹೌದು. ನಾನು ನಡೆದುದನ್ನೆಲ್ಲಾ ಬಲ್ಲೆ, ಇಲ್ಲಿಯೇ ಇದೇ ಮಂಚದ ಕೆಳೆಗೆ ಕುಳಿತಿದ್ದೆ. ತಾವು ನೆಲದಮೇಲೆ ಬಿದ್ದಾಗ ತಮ್ಮನ್ನು ಎತ್ತು ಒವುದಕ್ಕೆ ಅವಳು… ಆ… ಆಕೆಯು ಬಗ್ಗಿದಾಗ ನನ್ನನ್ನು ಕಾಣಬಹುದಿಂದಿದ್ದೆ. ಕಾಣ ಲಿಲ್ಲ. ” ಕೊನೆಗೆ ಗಂಟಲು ಒಣಗಿತು. ಒಮ್ಮೆ ನೀರು ನುಂಗಿ ಮತ್ತೆ ಹೇಳಿದನು. “ದೀಪವಾರಿದಾಗ ಓಡಿಹೋದೆ” ಎಂದನು.
ಆಫೀಸರಿಗೆ ತಲೆ ತಿರುಗಿತು. ಕಣ್ಣು ಕತ್ತಲೆಯಾಯಿತು. ನೆಲವು ಬಾಯಿಬಿಟ್ಟು ನುಂಗಿಬಿಟ್ಟಿದ್ದರೆ ಅವರಿಗೆ ಎಷ್ಟೋ ಸಂತೋಷವಾಗುತಿದ್ದಿತು.
ಸುಮಾರು ಅರೆಗಂಟೆ ಹೊತ್ತು ಒಬ್ಬರೂ ಮಾತನಾಡಲಿಲ್ಲ. ಇಬ್ಬರೂ ತಲೆ ತಗ್ಗಿಸಿದ್ದರು. ಒಬ್ಬರಿಗೆ ಕಣ್ಣಿನಲ್ಲಿ ನೀರು ಬರುವ ಸ್ಥಿತಿ ಇದ್ದರೂ ದೇಹದಲ್ಲಿ ದ್ರವವಿಲ್ಲದುದರಿಂದ ಕಣ್ಣಿನಲ್ಲಿ ನೀರು ಬರುತ್ತಿರಲಿಲ್ಲ. ಮತ್ತೊಬ್ಬರಿಗೆ ಹೃದಯವೆಲ್ಲ ಕರಗಿ ಕಣ್ಣಿನಲ್ಲಿ ನೀರಾಗಿ ಹರಿಯುತಿದ್ದಿತು. ಕೊನೆಗೆ ರಾಮುವು ” ನೀನೆ ನನಗೆ ಅಪರಿಚಿತರು. ಆದರೂ ನಿಮಗೆ ತಿಳಿಯದ ವಿಷಯವಲ್ಲ. ನಿಮ್ಮಲ್ಲಿ ನನ್ನದೊಂದು ಬೇಡಿಕೆ ಯುಂಟು. ಸಲ್ಲಿಸುವಿರಾ? ಎಂದು ಬೇಡಿಕೊಂಡನು. ಮಾತಿ ನಲ್ಲಿ ದೈನ್ಯವು ಮನೆಮಾಡಿದ್ದಿತು. ಹೃದಯವು ಕರಗಿ ಹೋಗುವಂ ತಿರುವ ಆ ಪ್ರಾರ್ಥನೆಯನ್ನು ಕೃಷ್ಣಮೂರ್ತಯು ಸಲ್ಲಿಸುವುದಿಲ್ಲ ವೆಂಬುದೆಂತು? ” ಅಪ್ಪಣೆಯಾಗಲಿ” ಎಂದನು. ರಾಮುವು “ಆ ಹುಡುಗಿಯು ನನ್ನ ಪ್ರಾಣ. ಅವಳನ್ನು ಗೋಳುಗುಟ್ಟಿಸಬೇಡಿ. ನೀವು ಕೇಳಿದುದದನ್ನು ಕೊಡುವೆನು. ಹೇಳಿದುದನ್ನು ಮಾಡು ವೆನು. ನಿಮ್ಮ ದಾಸಾನುದಾಸನಾಗುವೆನು. ಇಷ್ಟು ಮಾಡಲಾ ರಿರಾ? ಎಂದನು ಕೃಷ್ಣಮೂರ್ತಿಯು ನೀರವವಾಗಿ ಅಳುತ್ತಿದ್ದ ವನು ಬಿಕ್ಕಳಿಸಿ ಬಿಕ್ಕಳಿಸಿ ಅತ್ತುಬಿಟ್ಟನು. ಕೊನೆಣಗೆ ಬಿಕ್ಕಳಿಕೆಯ ಮಧ್ಯದಲ್ಲಿ “ಸ್ವಾಮಿ! ತಾವೆಂದುದು ನಿಜ. ಅಕೆಯು ದಿವ್ಯ ಧಾಮ ದೇವಿ. ನಾನು ನರಲೋಕದ ಪಶು. ಸ್ವರ್ಗದ ದೇವಿ ಯೆಂದು ತಿಳಿಯದೆ ದನವಾಗಿದ್ದೆ. ಇನ್ನು ಮುಂದೆ ಹಗಲಿರುಳೂ ಆಕೆಯ ಸುಖಕ್ಕಾಗಿ ಬದುಕಬೇಕೆಂದಿರುವೆನು. ಸರ್ವಶಕ್ತಿ ಯಿಂದಲೂ ಆಕೆಯನ್ನಾರಾಧಿಸುವೆನು. ನನ್ನ ಆಶೆಯು ಅಫಲವಾ ಗುವಂತೆ ತಾವು ಆಶೀರ್ವಾದ ಮಾಡಿ” ಎಂದು ರಾಮಸ್ವಾಮಿಯ ಕಾಲಿಗೆ ಬಿದ್ದನು.
ಆ ವೇಳೆಗೆ ಸರಿಯಾಗಿ ಸರಿಯಾಗಿ ಪಾರುಪತ್ತೆಗಾರರು ಬ೦ದರು. ಅಳಿ ಯನು ಆಫೀಸರ ಪಾದಮೂಲದಲ್ಲಿ ಒಮ್ಮೆ ಬಿದ್ದುದನ್ನು ಕ೦ಡು, ಅವರಿಗೆ ತಮ್ಮ ಊಹೆಯೇ ಸರಿಯೆನ್ನಿಸಿತು. ಮನೆಗೆ ಹೋಗಿ ಮಗಳನ್ನು ಕೇಳಿದಾಗ, ಅವಳು ಕಣ್ಣಿರಿಟ್ಟಾಗ, ಹುಟ್ಟಿದ್ದ ಸಂಶ ಯವು ದೂರವಾಯಿತು. ಹಮೊರಹವೆಂದು ವ್ಯಥೆಪಟ್ಟುಕೊಳ್ಳುತ್ತಾ, ಪಂಚೆಯ ಸೆರಗಿನಲ್ಲಿ ಗಂಟುಹಾಕಿದ್ದ ಹಣವನ್ನು ಬಿಚ್ಚಿ ಎಣಿಸಿ, ಆಫೀಸರ ಮು೦ದೆ ನೆಲದ ಮೇಲಿಟ್ಟು – ಮೇಜಿನ ಮೇಲಿಡುವುದಕ್ಕೆ ಹೆದರಿಕೆ ಕೈ ಮುಗಿದುಕೊಂಡು ” ಮಹಾಸ್ವಾಮಿ ! ಹಣವನ್ನು ಒಪ್ಪಿಸಿಕೊಳ್ಳಬೇಕು.” ಎಂದರು.
ಆಫೀಸರು “ ಹಣವು ತಮ್ಮಲ್ಲೇ ಇರಲಿ. ಇಟ್ಟುಕೊಂಡಿರಿ?” ಎ೦ದರು.
ವೆಂಕಟರಮಣಯ್ಯನವರಿಗೆ ಹಣವು ಉಳಿಯಿತೆಂದು ಮರಣ ಸಂತೋಷವಾಯಿತು.
**
ಮರುದಿನ ವೆಂಕಟರಮಣಯ್ಯನವರ ಮನೆಯಲ್ಲಿ ಔತಣ. ಮುದುಕನಿಗೆ ಅತ್ಯಾಶ್ಚರ್ಯ ಗಂಡಹೆಂಡಿರು ಒಬ್ಬರೊಬ್ಬರು ಸರಿ ಯಾಗಿ ಮುಖಕೊಟ್ಟು ಮಾತನಾಡಿದುದನ್ನೇ ಆತನದುವರೆಗೆ ಕಂಡಿ ರಲಿಲ್ಲ. ಇಂದು ಇಬ್ಬರೂ ಅತ್ಯಂತ ಆದರದಿಂದ, ಬಲು ಸಂಭ್ರಮ ದಿಂದ ಓಡಾಡುತ್ತಿದ್ದಾರೆ.
ಊಟ ಮಾಡುವಾಗ ಸುಂದರಿಯು ” ಅಡಿಗೆ ಹೇಗಿದೆ ? ರಾಮೂ!” ಎಂದಳು. ರಾಮುವೂ “ ನೀನು ಮಾಡುವುದು ಯಾವು ದು ಚನ್ನಾಗಿರುವುದಿಲ್ಲವಮ್ಮಾ ! ?” ಎಂದನು ವೆಂಕಟರಮಣಯ್ಯ ನಿಗೆ ಕಣ್ಣು ಅರಳಿತು, ಹಾಗಾದರೆ, ಸಾಹೇಬರು ರಾಮೂನೆ ? ಅದಕ್ಕೆ ಹಣವನ್ನು ಹಿಂತಿರುಗಿ ಕೊಟ್ಟದು ?
ಕೊನೆಗೆ ಮೂವರೂ ಸೇರಿದರು. ಅಡಕೆಲೆಯನ್ನು ಹಾಕಿ ಕೊಳ್ಳುತ್ತಾ ಆಮಾತು ಈ ಮಾತು ಬಂದು ರಾಮವು “ ಏನೋಪ್ಪ! ಏನಾದರೂ ಆಗಲಿ ಸುಂದರ ಅ೦ತಹ ತಾಯಿ ಇರಬೇಕಪ್ಪ. ಜನ್ಮ ಜನ್ಮಾಂತರಕ್ಕೂ ಇವಳೇ ತಾಯಿಯಾಗಲಪ್ಪ! ” ಎಂದನು. ಕೃಷ್ಣ ಮೂರ್ತಿಯು “ ನನಗೂ ಇಂತಹವಳೇ ಹೆಂಡತಿಯಾಗಲಿ ಎನ್ನಿಸು ತ್ತದೆ. ಆದರೆ ಒಂದು ಮಾತ್ರ ಕಷ್ಟ ಆಕೆಯು ಇನ್ನೊಬ್ಬರಿಗೆ ಮುತ್ತು ಕೊಡುವುದನ್ನು ನೋಡುವುದು ಮಾತ್ರ……..?” ಎಂದನು.
ರಾಮ ಸುಂದರಿಯರು ಮುಖವನ್ನು ತಗ್ಗಿಸಿದರು. ಕೃಷ್ಣ ಮೂರ್ತಿಗೂ ನಾಚಿಕೆಯಾಯಿತು.
ಸುಂದರಿಯು ಮನದಲ್ಲಿಯೇ “ಮನವೊಪ್ಪಿದವನನ್ನು ಮದುವೆಯಾಗುವ ಭಾಗ್ಯವು ನನ್ನದಾಗಲಿ ” ಎಂದುಕೊ೦ಡಳು.
——–
ಉಪಸಂಹಾರ
ವೆಂಕಟರಮಣಯ್ಯನು ಈಗ ಛತ್ರದಲ್ಲಿಲ್ಲ. ಮೈಸೂರಿನಲ್ಲಿ ದ್ದಾನೆ. ಗಂಡಹೆಂಡಿರು ಬಹಳ ಅನುಕೂಲರಾಗಿದ್ದಾರೆಂದು ಮೊನ್ನೆ ಯಾರೋ ಹೇಳಿದರು. ರಾಮಸ್ವಾಮಿಗೆ ಮದುವೆಯಂತೆ.
*****
ಮುಗಿಯಿತು