ಪ್ರಥಮ ಪರಚ್ಛೇದ
ರಾತ್ರಿ ಸುಮಾರು ಹೆತ್ತು ಗಂಟೆಯಾಗಿರಬಹುದು. ಎಲ್ಲರೂ ಮಲಗಿದ್ದಾರೆ. ಯಾರ ಮನೆಯಲ್ಲೂ ದೀಪವಿಲ್ಲ. ಕತ್ತಲಿನ ಚೀಲ ದಲ್ಲಿ ಕೂಡಿಟ್ಟಿದ್ದರೆ ಇರುವಂತೆ ಹಳ್ಳಿಯೆಲ್ಲಾ ನಿಶ್ಚಬ್ದವಾಗಿದೆ.
ಛತ್ರದ ಮಗ್ಗುಲಲ್ಲಿರುವ ತೋಪಿನ ನಡುವಿನ ಗುಡಾರದಲ್ಲಿ ಮಾತ್ರ ದೀಪವಿನ್ನೂ ಇದೆ. ಬಾಗಿಲಲ್ಲಿ ರಾಮಸ್ತಾಮಿಯು ಒಂದು ಆರಾಮ ಕುರ್ಚಿಯಲ್ಲಿ ಕುಳಿತಿದ್ದಾನೆ. ಆದರೆ ಕುಳಿತಿರುವುದು ಹೆಸರಿಗೆ ಮಾತ್ರ. ಗಳಿಗೆಗೆಂಟುಸಲ ಏಳುವುದು ಅತ್ತಕಡೆ ಹೋಗಿ ದಾರಿನೋಡುವುದು, ಹಿಂತಿರುಗಿ ಬಂದು ಗುಡಾರದೊಳಗೆ ಹೊಗುವುದು ಅಲ್ಲಿಟ್ಟರುವ ಸಾಮಾನುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಇಡುವುದು. ಮತ್ತೆ ಬಂದು ಕೂರುವುದು. ಗಳಿಗೆ ಗೊಂದುಸಲ ಕೈಗೆ ಕಟ್ಟಿರುವ ಗಡಿಯಾರವನ್ನು ನೋಡಿಕ್ಕೊಂಡು “ಇನ್ನೂ ಎಷ್ಟು ಹೊತ್ತಪ್ಪಾ!” ಎಂದು ಒಂದು ದೊಡ್ಡ ನಿಟ್ಟು ಸಿರು ಬಿಡುವುದು. ಅಂತೂ ಸಂಜೆಯಷ್ಟು ನಿರಾಶೆಯಿಲ್ಲ ಹುಡು ಗಿಯು ಕೈಗೆ ಸಿಕ್ಕಿದಳೆಂಬ ನಂಬಿಕೆ. ಇಲ್ಲವಾದರೆ ಸಂಜೆಗೆ ಬಂದು ಅಷ್ಟು ಬುದ್ಧಿ ವಂತಿಗೆಯಿಂದ, ತನಗೆ ಒಂದು ಗಂಟೆಗೆಂದು ಬರೆದಿ ‘ರುವ ಚೀಟಿಯನ್ನು ತಲಪಿಸುತಿದ್ದಳೆ? ಬೇಟೆಯು ಬಲೆಗೆ ಬಿದ್ದಿದೆ, ಒಂದೊಂದುಸಲ ಮಾತ್ರ ಒಂದು ಪ್ರಶ್ನೆಯು ತಲೆದೋರುವುದು; ಸುಂದರಿಯು ಪರಸ್ತ್ರೀ! ಅವಳನ್ನು ತಾನು ಗ ಗ್ರಹಣಮಾಡುವುದೇ?’ ರಾಮಸ್ವಾಮಿಯು ಈ ಪ್ರಶ್ನೆ ಬಂದಾಗಲೆಲ್ಲಾ ಅಪ್ರತಿಭನಾಗು ವನು. ಅವಾಕ್ಕಾಗುವನು. ಉತ್ತರ ಕೊಡಲಾರದೆ ಹೋಗು ವನು. ಬೇರೆ ಏನೂ ತೋರದೆ ಆ ಇರಲಿ! ಆ ವಿಚಾರ ಆಮೇಲೆ” ಎನ್ನುವನು
ಆದರೂ ಕಾಯುವುದು ಮಾತ್ರ ಕೆಟ್ಟ ವೈರಿಗೂ ಬೇಡ. ರಕ್ತವೇ ಕುದಿದು ಬಿಡುತ್ತದೆ. ರಾಮಸ್ವಾಮಿಯು ತಾನೇ ಎಷ್ಟು ಹೊತ್ತು ಒಂದೆಡೆ ಕುಳಿತು ಕಾದಾನು? ಅಸಾಧ್ಯವಾಯಿತು. ಅಲ್ಲದೆ ಅವನಿಗೂ ಬಹಳ ಹೊತ್ತಿನಿಂದ ಒಳಗೂ ಹೊರಗೂ ತಿರುಗಿ ತಿರುಗಿ ಕೈಕಾಲು ನೋವು. ಏನುಮಾಡುವುದು? ಏನು ಮಾಡುವುದಕ್ಕೂ ತೋರದು. ನೋಡುವವರಿಗೆ ಚಿಕ್ಕದಾಗಿ, ನಿವಾರಿಸುವುದಕ್ಕೆ ಸಾಧ್ಯವಾಗಿ, ಮನಸಿಗೆ ಆಯಾಸವನ್ನುಂಟುಮಾಡಿ ಬಂದ ಕೋ ಪವನ್ನು ತೀರಿಸಲು ದಾರಿಕಾಣದೆ ಕೋಪವನ್ನು ಸಂವರಣಮಾಡ ಲಾರದೆ ಬೇಸರಪಟ್ಟುಕೊಳ್ಳುವಂತೆ ಮಾಡಿ ಗೋಳು ಹುಯ್ದು ಕೊಳ್ಳವ, ಮಾವಿನಹಣ್ಣಿನ ಕಾಲಲ್ಲಿ ಮುತ್ತುವ ನೊಣದಂತೆ. ಹೆಣ್ಣಿನ ಬಯಕೆಯು ನುಣ್ಣಗೆ ಮನಸ್ಸಿನಲ್ಲಿ ಮನೆ ಮಾಡಿ ರಲು ಸುಮ್ಮನೆ ಕುಳ್ಳಿರುವುದು ಹೇಗಾದೀತು?
ಒಳಗೆ ಹೋಗಿ ಯಾವುದಾದರೂ ಒಂದು ಪುಸ್ತಕವನ್ನಾದರೂ ಓದೋಣವೆಂದುಕೊಂಡು ಹೋದನು. ದೀಪವನ್ನು ದೊಡ್ಡದು ಮಾಡಿದುದಾಯಿತ್ತು ಪುಸ್ತಕವನ್ನು ತೆರೆದುದಾಯಿತು. ಓದಬೇ ಕೆನ್ನುವಷ್ಟರಲ್ಲಿ ಮನಸ್ಸು ಮತ್ತೊಂದುರಡೆ ತಿರುಗಿ, ” ಓದುವು ದಿರಲಿ ಅವಳು ಪರಸತಿಯಲ್ಲಾ” ಎನ್ನಿಸಿತು. ಪುಸ್ತಕವನ್ನು ಮುಚ್ಛಿ ಅತ್ತಿಟ್ಟಿನು, ಮತ್ತೆ ಅದೇ ಪ್ರಶ್ನೆ. ಆದೇ ಮೌನ. ಮೊದಲಿನಂತೆಯೇ ಆ ವಿಚಾರ ಆಮೇಲಾಗಲೆಂದು ಸಿದ್ಧಾಂತ ಇನ್ನೊಂದು ಗಳಿಗೆಯಾಯಿತು. ಮತ್ತೆ ಒಳಗೆ ಹೋದನು. ಮತ್ತೊಂದು ಪ್ರಶ್ನೆ ಹುಟ್ಟಿತ್ತು. ” ಅವನು ಬಂದರೆ ಎಲ್ಲಿ ಕುಳ್ಳಿರಿಸುವುದು?’ ಕುಳಿತಿದ್ದ ವೆ.ತ್ತೆಯ ಕುರ್ಚಿಯನ್ನು ಮಂಚದ ಬಳಿ ಎಳೆದು ಅಲ್ಲಿ ಅವಳು ಬಂದು ಕುಳಿತಂತೆಯೂ, ತಾನು ಅವಳ ಪಾದ ಮೂಲ ದಲ್ಲಿ ಕುಳಿತು, ತನ್ನ ಕಷ್ಟನಿಷ್ಟೂರಗಳ ಕಾರುಣ್ಯ ಪೂರ್ಣವಾದ ಕೂರ್ಮೆಯ ಕಥೆಯನ್ನು ಹೇಳಿಕೊಳ್ಳುತ್ತಿರುವಂತೆ ಭಾವಿಸಿ ಕೊಳ್ಳುತ್ತಾ, ಕಣ್ಣು ಮುಚ್ಚಿ ಕೊಂಡು ಭಾವನಾತರಂಗಿಣಿಯಲ್ಲಿ ಮನಸನ್ನು ಕೊಚ್ಚಿಬಿಟ್ಟು ಹಾಗೆಯೇ, ಆ ಕುರ್ಚಯಲ್ಲಿಯೇ ತಾನರಿಯದೇ ಕುಳಿತು ಬಿಟ್ಟನು.
—–
ದ್ವಿತೀಯ ಪರಿಚ್ಛೇದ
ಹಾಗೆಯೇ ನಿದ್ದೆ ಅದರಲ್ಲೊಂದು ಪುಟ್ಟಕನಸು. ಎಲ್ಲಿಯೋ ಒಂದು ಕಿರುಮನೆ. ಪಟಗಿಟಗಳೇನು ಇಲ್ಲ. ಮೂಲೆಯಲ್ಲಿ ಒಂದು ಹಾಸಿಗೆ ಹಾಸಿದೆ. ತಲೆದಿಂಬಿನ ಮಗ್ಗುಲಲ್ಲಿ ಒಂದು ಬೆಳ್ಳಿಯ ತಟ್ಟೆ. ಅದರಲ್ಲಿ ಅಡಿಕೆಲೆ ಹೂವು. ಇನ್ನೊಬ್ಬರು ತಂದರೆ ಚೆನ್ನಾಗಿರುವುದಿಲ್ಲವೆಂದು ಅಂದಿನ ಮಧ್ಯಾನ್ಹ ತಾನೇ ಮೈಸೂರಿಗೆ ಹೋಗಿ ಚಿಗುರಲೆಯನ್ನೂ ಪರಿಮಳದ ಹೂವನ್ನೂ ಸುಂದರಿಗೆಂದು ತಂದಿದ್ದನು. ನೋಡಿದರ ಅದೇ ಎಲೆ, ಅದೇ ಹೂ ವೆಂದು ತೋರುತ್ತದೆ. ಅದರ ಮಗ್ಗುಲಲ್ಲಿ ಹಾಲು ತುಂಬಿರುವ ರೈಲು ಚೊಂಬೊಂದು. ತಾನು ಬಹಳ ಹೊತ್ತು ಕಾತರನಾಗಿ ಕಾದಿದ್ದ ಮೇಲೆ ಸುಂದರಿಯು ಬಂದಿದ್ದಾಳೆ. ತನಗೆ ಖಂಡುಗ ದಷ್ಟು ಅಶೆಯಿದ್ದರೂ ಧಾರಾಳವಾಗಿ ಬರಲಾರದೆ ಹೆಜ್ಜೆಯಮೇಲೆ ಹೆಜ್ಜೆಯನ್ನಿಟ್ಟುಕೊಂಡ್ಕು ಮನವು ಮೊದಲು ಹೋಗಿರುವೆಡೆಗೆ ತನುನನ್ನು ನಡೆಸಿಕೊಂಡು ಹೋಗುವೆ ಹೊಸತಾಗಿ ಪ್ರಸ್ತವಾದ ಹುಡುಗಿ ಮದುವಣಗಿತ್ತಿಯಂತೆ, ಗಳಿಗೆಗೊಂದುಸಲ ಹೆಜ್ಜೆಯ ನ್ನಿಟ್ಟುಕೊಂಡು ಬಂದಿದ್ದಾಳೆ. ಬಾಗಿಲಿಂದ ಹಾಸಿಗೆಗೆ ಸರಿಯಾಗಿ ನಡೆದರೆ ಸುಮಾರು ಮೂರು ಹೆಜ್ಜೆಯಿರಬಹುದು. ನಾಚಿಕೆಯ *ಹೆದ್ನ ಹಾಕಿದಂತೆ ಅಶೆಯು ನೂಕಿದಂತೆ, ನಡೆವ ಅವಳಿಗೆ ಅಲ್ಲಿಂದಲ್ಲಿಗೆ ಬರುವುದಕ್ಕೆ ಸುಮಾರು ಹೊತ್ತಾಗಿದೆ. ತಾನು ಆ ವಿಳಂಬವನ್ನು ಸೈರಿಸಲಾರದೆ ಕೇವಲ ಕಾತರನಾಗಿ ಕೈನೀಡಿ ಕರೆ ಯುತ್ತಿದ್ದಾನೆ. ಮಧುವ್ಯಧೆಯು ಹಿಡಿದು ಮಂಕಾಗಿರುವ ಮದ ಗಜದಂತೆ ಅವಳೂ ಬಲುಮೆಲ್ಲಗೆ ನಡೆದುಬಂದು ಪಕ್ಕದಲ್ಲಿ ಕುಳಿತಿ ದ್ದಾಳೆ. ತಾನೂ ಯವ್ವನಭರದಲ್ಲಿ, ಸಪೂರ್ಣನಾದ ಪ್ರೀತಿಯ ಆವೇಶದಲ್ಲಿ, ಮಾತ್ರ ಸಾಧ್ಯವಾದ ಒಂದು ರಭಸದಿಂದ ಅವಳನ್ನು ಬರಸೆಳೆದು ಅಪ್ಪಿಕೊಂಡು ಮುದ್ದಿಸಿದ್ಧಾನೆ. ಸುಂದರಿಯ ಸೀ ಸಹಜವಾದ ವೈಯ್ಯಾರದಿಂದ ಬಿಡಿಸಿಕೊಂಡು ಅತ್ತ ಸರಿದು ಹಾಲಿನ ತಂಬಿಗೆಯನ್ನು ಕೈಗೆ ತೆಗೆದುಕೊಂಡಿದ್ದಾಳೆ. ಅದನ್ನು ನೋಡಿ, ಉಕ್ಕುತ್ತಿದ್ದ ಸಂತೋಷ ಸಂಭ್ರಮಗಳು ಅಲ್ಲಿಯೇ ತಟ್ಟನೆ ತಿರೋಧಾನವಾಗಿ, ಮುಖವು ಗಂಭೀರವಾಗಿದೆ. ಮೋಹಾ ವೇಶಪರವಶನಾಗಿದ್ದ ಇವನಿಗೂ ಇದನ್ನು ನೋಡಿ, ಭಯವಾಗಿ, ಅದೇನೆಂದು ನೋಡಿದ್ದಾನೆ. ಕೆಂಪಗೆ ಕಾಸಿದ ಗಮಗಮನೆ ನರು ಗಂಪಿಡುವ, ಹೆಚ್ಚಗೆ ಕೆನೆಗಟ್ಟದ ಹಾಲಿನಲ್ಲಿ ಒಂದು ನೊಣ. ಇಬ್ಬರಿಗೂ ಅಸಮಾಧಾನ. ಆದರೂ ರಾಮುವು “ಅದು ಹೋಗಲಿ ನೀನಿರುವೆ” ಯೆಂದು ಅವಳನ್ನು ಮತ್ತೊಮ್ಮೆ ತಬ್ಬಿಕೊಳ್ಳಲು ಕೈ ನೀಡಿದ್ದಾನೆ.
ಆವೇಳೆಗೆ ಬಾಗಿಲಲ್ಲಿದ್ದ ನಾಯಿ ಬಗುಳಿತು ಕನಸು ಮುರಿದು ಎಚ್ಚರವಾಗಿ ರಾಮುವು ಕಣ್ಣು ಬಿಟ್ಟನು ಎದುರಿಗೆ ಗುಡಾರದ
…………….
* ತೇರುಗಳ ಚಕ್ರಗಳು ಅತ್ತಲಾಗಿ ಇತ್ತಲಾಗಿ ಹೋಗದೆ ಸರಿ ಯಾಗಿ ನಡೆಯಲು ಅಡ್ಡಗಿಸುವ ಮರದ ತುಂಡು.
ಬಾಗಿಲು. ಬಾಗಿಲಿನಲ್ಲಿ ಸುಂದರಿಯು ಕರಿಯ ಸೀರೆಯುಟ್ಟು ನಿಂತಿದಾಳೆ. ಮೂಗಿನಲ್ಲಿ. ಒಂದು ವಜ್ರದ ಮೂಗುಬಟ್ಟು. ಸಂಧ್ಯಾಕಾಲದ ಮೃದುವಾದ ಬಿಸಿಲು ಬಿದ್ದು ಉಜ್ವಲವಾಗಿ ಬೆಳ ಗುತ್ತಿರುವ ಮುಖವು ನಗೆಯನ್ನು ಸೂಸುತ್ತಿದೆ. ನೋಡಿದವರ ಮನಸ್ಸನ್ನು ಮೋಹಗೊಳಿಸಿ ಸೂರೆಗೊಳ್ಳಲು ಬಂದಿರುವ ಮದನ ಮೋಹನ ಮಂತ್ರದಧಿದೇವತೆಯೆಂಬಂತಿದೆ.
ಆ ದಿವ್ಯ ಮೂರ್ತಿಯನ್ನು ನೋಡಿ ಭ್ರಾಂತನಾಗಿ ತರುಣನು ‘ಸುಂದರಾ! ಎಂದು ಒಣಗಿರುವ ಗಂಟಲಿನ ಕಿರಚು ಧ್ವನಿಯಲ್ಲಿ ಕೂಗಿಕೊಂಡು ಕೈ ನೀಡಿಕೊಂಡು ಮುಂದರಿದನು. ಬಾಗಿಲಿಗೆ ಬರುವುದರೊಳಗಾಗಿ ಉಟ್ಟಿದ್ದ ಪಂಚೆಯು ಕಾಲಿಗೆ ತೊಡರಿತು ಬಿದ್ದುಬಿಟ್ಟನು. ಮತ್ತೆ ಎದ್ದು ಕಣ್ಣುಬಿಟ್ಟು ನೋಡಿದರೆ ಯಾರೂ ಇಲ್ಲ. ಗುಡಾರದ ಬಾಗಿಲಲ್ಲಿ ಇಳಿಯಬಿಟ್ಟಿದ ಕಡ್ಡಿಯ ಪರ ದೆಯು ನಟ್ಟಿರುಳಿನ ತಂಗಾಳಿಯಲ್ಲಿ ನರ್ತಿಸುತ್ತ ನಗುತ್ತಿದೆ. ಹೊರಕ್ಕೆ ಬಂದು ಸುತ್ತಲೂ ನೋಡಿದನು. ಎಲ್ಲಿಯೂ ಜನರ ಸುಳಿವೇ ಇಲ್ಲ.
ರಾಮಸ್ವಾಮಿಯು ಮಂಕಾಗಿ ಹೋದನು. “ತಾನು ಸುಂದ ರಿಯ ಆಕಾರವನ್ನು ಕಂಡುದುಂಟು. ಬಂದಿದ್ದರೆ ಇಷ್ಟುಬೇಗ ಎಲ್ಲಿ ತಾನೆ ಹೋಗಿದ್ದಾಳು? ಅಥವಾ ಗಿಡದಮರೆಯಲ್ಲಿರಬಹುದೇ? ಹುಡುಗಿಯು ನಟ್ಟಿರುಳಿನಲ್ಲಿ ಮರೆಯಲ್ಲಿ ಮರೆಸಿಕೊಂಡು ಹುಡು ಗಾಟವಾಡುವಳೇ? ನೋಡಿಬಿಡಬೇಕು.” ಎನ್ನಿಸಿತು. ಹಾಗೆಯೇ ಹೊರಟನು. ಬಾಗಿಲಲ್ಲಿದ್ದ ನಾಯಿಯೂ ಜತೆಯಲ್ಲಿಯೇ ಬಂತು.
ಅಷ್ಟು ದೂರ ಹೋಗುವುದರೊಳೆಗಾಗಿ ನಾಯಿಯು ಏನ ನ್ನೋ ಕಂಡು ಬೊಗಳಿತು. ರಾಮುವು ಹಾಗೇ ನಿಂತು ” ಇದನ್ನು ಬಿಚ್ಚಿದ್ದರೆ ಅನರ್ಥ. ಗುಡಾರದಲ್ಲೂ ಇರಬಾರದು” ಎಂದುಕೊಂಡು, ಹಿಂತಿರುಗಿ ಹೋಗಿ ಅದರ ಸರಸಣಿಯನ್ನು ತಂದು, ಗುಡಾರದ ಹಿಂದೆ ಸುಮಾರು ದೂರದಲ್ಲಿ ಒಂದು ಮರಕ್ಕೆ ಕಟ್ಟಿಹಾಕಿ ತಜೆ ಯಮೇಲೆ ಒಂದು ಏಟು ಹೊಡೆದು ” ಸದು ಮಾಡಿಯೆ ಎಂದು ಹೊರಟುಹೋದನು. ಗುಪ್ತದಳದವರಲ್ಲಿ ತಯಾರಾದ ನಾಯಿ. ಮತ್ತೆ ಉಸರಿತ್ತದೆ ಮಲಗಿಬಿಟ್ಟಿತು. —–
ತೃತೀಯ ಪರಿಚ್ಛೇದ
—
ರಾಮನು ಅತ್ತಕಡೆಗೆ ಹೋಗುತ್ತಲೇ ಒಂದು ವ್ಯಕ್ತಿಯು ಗುಡಾರವನ್ನು ಹೊಕ್ಕಿತು, ತಲೆಯಿಂದ ಕಾಲುವರೆಗೂ ದೊಡ್ಡ ನಿಲುವಂಗಿಯಂತೆ ಕರಿಯ ಕಂಬಳಿಯ ಗೊರಟೆಯೊಂದು. ನಡುವಿ ನಲ್ಲಿ ಒಂದು ದೊಡ್ಡ ಚಾಕು. ಮೊಗಕ್ಕೆಲ್ಲ ಕೀಲೆಣ್ಣೆಯಂ ತಿರುವ ಮಸಿ. ನೋಡಿದರೆ ಭಯಂಕರ. ಯಾರೆಂದು ಗುರ್ತಿ ಸಲು ಸಾಧ್ಯವಿಲ್ಲ.
ಬಂದವನು ಮೊದಲು ಹೋಗಿ ದೀಪವನ್ನು ತಗ್ಗಿಸಿದನು. ಮೊದಲೇ ಹಸುರು ಬುರುಡೆಯ ದೀಪ. ಸಣ್ಣ ಮಾಡುತ್ತಲೇ ಬೆಳಕು ಇನ್ನೂ ಮಸಕಾಯಿತು. ಆ ಮಸಕಿನಲ್ಲಿಯೇ, ವ್ಯಕ್ತಿಯು ಏನನ್ನೋ ಹುಡುಕಲು ಮೊದಲು ಮಾಡಿದನು. ಇತ್ತ ತಿರುಗುವು ದರೊಳಗಾಗಿ ಮಗ್ಗಲಲ್ಲಿದ್ದ ಮೇಜು ಕಣ್ಣಿಗೆ ಬಿತ್ತು. ಅದರ ಮೇರೆ ಒಂದು ವಿಲಾಯಿತಿ ಮಣ್ಣಿನ ಸುಮಾರು ಒಂದಡಿ ಎತ್ತರದ ಬೊಂಬೆ. ಅದಕ್ಕೆ ಕಲಾಬತ್ತಿನ ಸೀರೆಯುಡಿಸಿ, ಸಕಲವಾದ ಆಭ ಣಗಳನ್ನು ತೊಡಿಸಿದೆ. ನವರಾತ್ರಿಯ ಬೊಂಬೆಯಂತೆ ಕಾಣು ತ್ತದೆ. ಆ ಬೊಂಬೆಯ, ಎಳೆತನನು ಹೊರಸೂಸುತ್ತಿರುವ ಮುಖವು ಅವನಿಗೆ ಚಿರಪರಿಚಿತವಾಗಿರುವಂತೆ ಕಾಣುತ್ತಿದೆ. ಕಳ್ಳನಿಗೆ (ಅದು ನಮ್ಮ ಊಹೆ. ಅನೇಕವೇಳೆ ಊಹೆಗಳು ನಿಜವಾಗುವುದೂ ಉಂಟು.) ಆ ಬೊಂಬೆಯನ್ನು ಮತ್ತೊಮ್ಮೆ ನೋಡಬೇಕೆನ್ನಿ ಸಿತು. ದೀಪವನ್ನು ದೊಡ್ಡದು ಮಾಡಿ, ಒಂದೆರಡು ಸಲ ರೆಪ್ಪೆ ಹುಯ್ಯುವವಷ್ಟು ಹೊತ್ತು ನೋಡಿ, “ಅವಳೆ ಇರಬಹುದೇ?’ ಎಂದುಕೊಂಡನು. ಬೊಂಬೆಯ ಮೇಲಿನ ಒಡವೆಗಳನ್ನು ನೋಡಿ ” ಎಷ್ಟು ಬೆಲೆಯಾಗುವುದು! ಇಷ್ಟು ದುಡ್ಡಿದ್ದರೆ ಒಂದು ವಾರ ಆತಂಕವಿಲ್ಲದೆ ಆಡಿಕೊಳ್ಳಬಹುದು” ಎಂದುಕೊಂಡನು, ಆದರೆ ಏನನ್ನೂ ತೆಗೆದುಕೊಳ್ಳಲಿಲ್ಲ. ಅಲ್ಲದೆ, ನಿಂತು ಮುಂದೆ ನೋಡಲು ಅವಕಾಶವಿಲ್ಲ. ಅಲ್ಲಿಂದ ತಿರುಗಿದರೆ ಅದರ ಮಗ್ಗುಲಲ್ಲಿ. ಒಂದು ತಟ್ಟೆಯಲ್ಲಿ ಬಲು ಸೊಗಸಾದ ಚಿಗುರೆಲೆ. ಗಮ್ಮೆಂದು ತನಿಗಂ ಪನ್ನು ಬೀರುತ್ತಿರುವ ಜಾಜಿಯ ಒತ್ತುಸರ. ಆದರ ಮುಗ್ಗುಲಲ್ಲಿ ಒಂದು ಕಾಗದದ ಮೇಲೆ ಸಂಪಿಗೆ ಹೂವಿನ ಪೊಟ್ಟಣವೊಂದು. ಕಾಗದದಲ್ಲಿ ಏನೋ ಬರೆವಣಿಗೆ. ಪೊಟ್ಟಣವನ್ನು ಜರುಗಿಸಿ ನೋಡಿ ದರೆ ಹೆಂಗಸಿನ ಬರೆಹದಲ್ಲಿ “ಒಂದು ಗಂಟೆ” ಎಂದು ಬರೆದಿದೆ. ಬರಹದ ಗುರುತಿರುನಂತಿದೆ, “ಮತ್ತೆ ಅವಳೇನೋ?–ಇರ ಬಹುದು ಇದ್ದೀತೆ? -ಹಾಗಾದರೆ-” ಕಳ್ಳನಿಗೆ ಯೋಚನೆ ಬಂದಿತು. ” ನಾನು ಇವನ ಹಣವನ್ನು ಕದಿಯುವುದಕ್ಕೆ ಬಂದರೆ ಇವನು ಬಂದಿರುವುದು ತನ್ನ….?” ಕಳ್ಳನಿಗೆ ಮೈ ಜುಮ್ಮೆ ನ್ನಿಸಿತು ಮುಂದಕ್ಕೆ ಯೋಚಿಸಲಿಲ್ಲ. ತನ್ನ ಕೆಲಸಕ್ಕೆ ಹೋದನು.
ಕೈ ಪೆಟ್ಟಿಗೆ ಮಂಚದ ಕೆಳಗೆ ಇದ್ದಿತು. ಕಳ್ಳನಿಗದನ್ನು ಕಂಡು ಹಿಡಿಯುವುದು ಕಷ್ಟವಾಗಲಿಲ್ಲ. ಅನುಕೂಲವಾಯಿತೆಂದು ಮಂಚದ ಕೆಳಗೆ ತೂರಿ ಕೈ ಪೆಟ್ಟಗೆಯನ್ನು ಎಳೆದುಕೊಳ್ಳ ಬೇಕೆಂದು ಯತ್ನಿಸಿ ದನು. ಸರಪಳಿಯಿಂದ ಮಂಚದ ಕಾರಿಗೆ ಕಟ್ಟಿರಲು ಅದಾಗಲಿಲ್ಲ ತಾನೇ ಮುಂದಕ್ಕೆ ಹೋದನು.
ಪೆಟ್ಟಗೆಯ ಬಾಗಿಲು ತೆರೆದುದಾಯಿತು. ಒಂದು ಮಗ್ಗುಲಲ್ಲಿ ರೂಪಾಯಿ ತುಂಬಿದ್ದಿತು. ಆದರಲ್ಲಿ ಲೆಖ್ಬಮಾಡಿ ನೂರು ರೂಪಾಯಿ ತೆಗೆದುಕೊಂಡು, ಅದನ್ನು ಉಟ್ಟಿದ್ದ ಪಂಚೆಯ ಕೊನೆಯಲ್ಲಿ ಕಟ್ಟಿ, ನಡುನಿಗೆ ಸಿಕ್ಕಿಸಿಕೊಂಡು, ಮಂಚದಡಿಯಿಂದ ಹೊರಗೆ ಬಂದು ಸುತ್ತಲೂ ನೋಡಿದನು. ಯಾರೂ ಇದ್ದಂತೆ ಇರಲಿಲ್ಲ ಹೊರಟು ಬಾಗಿಲಿಗೆ ಬಂದನು. ಒಂದು ಯೋಚನೆ ಹೊಳೆಯಿತು. ” ಇದು ಸಾಲ ತೀರಿಸುವುದಕ್ಕಾಯಿತು ಆಟಕ್ಕೆ? ಇನ್ನೂ ರೂಪಾಯಿ ಇದೆ. ಒಂದು ಹಿಡಿಯಷ್ಟಾದರೂ ತಂದರೆ ?’ ಎಂದುಕೊಂಡನು. ಆಟದ ಆಶೆಯು ಬಲವಾಗಿ, ಮುಂದಕ್ಕೆ ಹೋಗಲಾರದೆ ಹಿಂದುರಿಗಿ ದನು, ಮತ್ತೆ ಮಂಚದಡಿಗೆ ಹೋಗಲು, ನಡುವಿನಲ್ಲಿ ಚಾಕೂ, ಹಣದ ಗಂಟು, ಚಾಕುವನ್ನು ತೆಗೆದು ಎಡಗೈಯಲ್ಲಿ ಹಿಡಿದುಕೊಂ ಡು, ಪೆಟ್ಟಿಗೆಯ ಬಾಗಿಲನ್ನು ತೆಗೆದು ಒಂದು ಹಿಡಿ ಹಣವನ್ನು ತೆಗೆದುಕೊಂಡಿದ್ದಾನೆ. ಇನ್ನೂ ಅರೆಗಯ್ಯು ಪೆಟ್ಟಿಗೆಯ ಒಳಗೇ ಇದೆ. ಗುಡಾರದ ಹೊರೆಗೆ ಯಾರೋ ಮಾತನಾಡಿದಂತೆ ಆಯಿತು. ಕಳ್ಳನಿಗೆ ಜೀವವು ಹಾರಿ ಹೋದಂತಾಯಿತು. ಉಸಿರು ಗಟ್ಟಿ ಯಾಗಿ ಬಿಡದೆ ಸದ್ದಾಗದಂತೆ ಪೆಟ್ಟಿಗೆ ಮುಚ್ಚಿ, ಅಲ್ಲಿಯೇ ಕಂಬ ಳಿಯನ್ನೆಳೆದುಕೊಂಡು ಕುಳಿತು ಕೊಂಡನು.
ಇತ್ತ ತಿರುಗಿ ನೋಡಲು, ಒಬ್ಬ ಗಂಡುಸು ಒಳಗೆ ಬಂದನು. ಕಳ್ಳನಿಗೆ ಮಂಚದಡಿಯೇ ಸೆರಮನೆಯಾಯಿತು.
*****
ಮುಂದುವರೆಯುವುದು