ನನ್ನವಳ ಕಣ್ಣು ರವಿಯಂತೆ ಖಂಡಿತ ಇಲ್ಲ.
ಅವಳ ತುಟಿ ಕೂಡ ಹವಳದ ಹಾಗೆ ಕೆಂಪಲ್ಲ ;
ಮೊಲೆ ಬಣ್ಣ ತುಸು ಕಂದು, ಹಿಮದಂಥ ಬಿಳುಪಲ್ಲ,
ಕೂದಲೋ ತಂತಿ ಥರ, ತಲೆಯೊ ಕರಿ ತಂತಿ ಹೊಲ.
ರೇಷ್ಮೆ ನುಣುಪಿನ ಕೆಂಪು ಬಿಳಿ ಗುಲಾಬಿಯ ಬಲ್ಲೆ,
ಅದನು ನಾ ಕಂಡಿಲ್ಲ ನನ್ನವಳ ಕೆನ್ನೆಯಲಿ.
ಅವಳು ಸೂಸುವ ಉಸಿರಿಗಿಂತ ಹಿತವಿದೆ, ಮೊಲ್ಲೆ
ಜಾಜಿ ಸಂಪಿಗೆಯಂಥ ಹಲವು ಪರಿಮಳಗಳಲಿ,
ಅವಳ ಸವಿನುಡಿಯ ಆಲಿಸುವಾಸೆ ಇದೆ ನನಗೆ,
ಅದರದಕಿಂತ ಸಂಗೀತವೇ ಸವಿ ಬಲ್ಲೆ;
ನೆಲನಡೆವ ದೇವತೆಯ ಕಂಡಿಲ್ಲ ಈ ವರೆಗೆ,
ನನ್ನರಸಿ ನಡೆವಾಗ ಚಲಿಸುವುದು ನೆಲದಲ್ಲೆ.
ಆದರೂ ದೇವರಾಣೆಗು ಅವಳು ಚೆಲುವೆಯೇ,
ಹುಸಿಯುಪಮೆ ಹೊತ್ತ ಹೆಣ್ಣಿನ ಹಾಗೆ ವಿರಳವೇ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 130
My mistress’ eyes are nothing like the sun
Related Post
ಸಣ್ಣ ಕತೆ
-
ಬಾಗಿಲು ತೆರೆದಿತ್ತು
ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…
-
ಸ್ವಯಂಪ್ರಕಾಶ
ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…
-
ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು
ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…
-
ಮಾದಿತನ
ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…
-
ಮೌನವು ಮುದ್ದಿಗಾಗಿ!
ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…