ಮಧ್ಯಾಹ್ನ, ಭೋಜನವಾದ ಕೂಡಲೆ, ಶಂಕರರಾಯನೂ, ನವಾ ಬನೂ, ಮಾಧವರಾಯನೂ ಫೋಲೀಸು ಠಾಣೆಗೆ ಹೋ ದರು ಅಷ್ಟುಹೊತ್ತಿಗೆ ನವಾಬನ ಮಾತಿನಮೇರೆ ಒಬ್ಬ “ಮ್ಯಾಜಿಸ್ಟ್ರೇಟನೂ” ಬಂದು ಕುಳಿತಿದ್ದ ನು. ಆತ್ಮಾ ರಾಮನು ಒಂದು “ಹೇಳಿಕೆ“? ಯನ್ನು ಬರೆದು ಸಿದ್ಧ ಮಾಡಿಕೊಂಡಿದ್ದನು. ಅದು ಬಹಳ ಲಂಬವಾಗಿದ್ದುದರಿಂದ ಅದರ ಸಾರಾಂಶವನ್ನು ಮಾತ್ರ ಇಲ್ಲಿ ತಿಳಿಸುವೆವು. ಆತ್ಮಾ ರಾನುನು ಶಂಕರರಾಯನ ಮನೆಯನ್ನು ಬಿಟ್ಟು ಓಡಿ ಹೋಗಿ ಇಪ್ಪತ್ತುವರ್ಷಗಳಾದಮೇಲೆ ಮದುವೆಯನ್ನು ಮಾಡಿಕೊಳ್ಳ ಬೇಕೆಂದು ಇಷ್ಟಹುಟ್ಟಿ ಹೆಣ್ಣು ಹುಡುಕಿಕೊಂಡು ರಾಂಪುರಕ್ಕೆ ಬಂದನು. ಅಲ್ಲಿ ಮದುವೆಗೆ ಎಲ್ಲವೂ ಸಿದ್ದವಾಯಿತು. ಆದರೆ ಮದು ವೆಯ ಹಿಂದಿನದಿನ ಎದುರುಗೊಳ್ಳವ ಸಮಯದಲ್ಲಿ ಪೋಲೀಸಿನವರು ಹಿಡಿದುಕೊಂಡುಹೋಗಿ ಪುನಹೆಯಲ್ಲಿ ಸೆಷನ್ ಕೋರ್ಟಿಗೆ ದಾಖ ಲ್ಮಾ ಡಿಸಿದರು. ಅನಂತರ ರಾಂಪುರದ ರಾಮರಾಯರು ಬಹಳದ್ರವ್ಯ ವನ್ನು ವ್ಯಯಮಾಡಿ ಆತ್ಮಾ ರಾಮನಿ ಗೆ ಬಿಡುಗಡೆಮಾಡಿಸಿದಲ್ಲದೆ ಸಿವಿ ಲ್ ಕೋರ್ಟಿನಲ್ಲಿ ಹುಡುಗಿಯನ್ನು ಸಾಧೀನಕ್ಕೆ ಕೊಡಿಸಬೇಕೆಂದು ದಾವಾಹಾಕಿಸಿದರು ಅದಕ್ಕೂ ಅವರು ಸಾಕ್ಷಿಗಳಿಗೆಲ್ಲಾ ಲಂಚಕೊಡ ಬೇಕಾಯಿತಾದುದರಿಂದ ಬಹಳ ಹಣವು ವೆಚ್ಚವಾಯಿತು. ಸಿವಿಲ್ ಕೋರ್ಟಿನ ‘ಡಿಕ್ರಿ’ಯಂತೆ ಹುಡುಗಿಯನ್ನು ಸ್ವಾಧೀನಪಡಿಸಿಕೊಂಡು ರಾಮರಾಯರ ಅಪ್ಪಣೆಯಂತೆ ಯಾರಿಗೂ ಪತ್ತೆಯಾಗದ ಸ್ಥಳದಲ್ಲಿ ಕೆಲವು ಕಾಲವಿರಬೇಕೆಂದು ಆತ್ಮಾ ರಾಮನು ಗೊತ್ತು ಮಾಡಿಕೊಂಡು ನಿಜಾಮ ರಾಷ್ಟ್ರಕ್ಕೆ ಹೋಗಿಸೇರದನು ಅಲ್ಲಿಯೂ ರೈಲ್ವೆಸ್ಟೇಷನ್ ಗಳಬಳಿ ವಾಸಮಾಡಿದರೆ ತೊಂದರಿಯಾದೀತೆಂಬ ಭೀತಿಯಿಂದ ರೈಲ್ವೆ ಸ್ಟೇಷನ್‌ಗೆ ಒಂದುದಿನದ ದಾರಿಯಲ್ಲಿರುವ ನಿರ್ಮಲಕ್ಕೆ ಹೋದನು. ಅಲ್ಲಿ ವಿಶೇಷ ಜನಸಂಚಾರವಿಲ್ಲದ ಬೀದಿಯಲ್ಲಿ ಒಂದುಮುರುಕು ಮನೆಯನ್ನು ಬಾಡಿಗೆಗೆ ತೆಗೆದುಕೊಂಡನು. ನಿರ್ಮಲವನ್ನು ಸೇರಿದಮೇಲೆ ಸುಭ ದ್ರೆಯುಒಂದೆರಡುದಿನ ಸ್ವಲ್ಪ ಮುಷ್ಟರ ಸ್ವಭಾವವನ್ನು ತೋರಿಸಿದಳು. ಅನಂತರ ಪ್ರಯೋಜನವಿಲ್ಲವೆಂದು ತಿಳಿದು ಕೇವಲ ವಿಧೇಯಳಾದಳು. ಆತ್ಮಾ ರಾಮನು ಆ ಮನೆಯಹೊರಬಾಗಿಲಿಗೆ ಬೀಗವನ್ನು ಹಾಕಿಹಿತ್ತ ಲ ಬಾಗಿಲಿನಿಂದ ಸಂಚಾರಮಾಡುತ್ತಿದ್ದನು. ಹಿತ್ತಲಬಾಗಿಲಿಗೂ ಒಳ ಗಡೆ. ಬೀಗವನ್ನು ಹಾಕಿಕೊಳ್ಳುತ್ತಿದ್ದನು. ಹೀ ಗೆ ಸುಭದ್ರೆಗೆ ಅ ಮನೆಯು ಪ್ರತ್ಯಕ್ಷ ಕಾರಾಗೃಹವಾಗಿಯೆ ಪರಿಣಮಿಸಿತ್ತು. ಅತ್ಮಾ ರಾಮನು ಒಂದು ಶುಭಮುಹೂರ್ತವನ್ನು ಕಟ್ಟಿಸಿ ಸುಭದ್ರೆಯನ್ನು ಮದುವೆಮಾಡಿ ಕೊಳ್ಳಯಬೇಕೆಂದು ಪ್ರಯತ್ನ ಮಾಡಿದನು. ಲಗ್ನವು ಇನ್ನೂ ಎರಡು ಮೂರು ದಿನವಿರುವಾಗ ಒಂದುದಿನ ರಾತ್ರೆಅವನಿಗೆ ಭಯಂಕರವಾದ ಕನಸಾಯಿತು. ಒಬ್ಬ ಕೃಷ್ಣವರ್ಣದ ಪುರುಷನು ದೊಡ್ಡ ದೊಡ್ಡ ಗೋಪೀಚಂದನದ ನಾಮಗಳನ್ನು ಧರಿಸಿಕೊಂಡು. ನಿಂತಂತಿತ್ತು. ಒಂದೊಂದುಸಾರಿ ಆ ಮೂರ್ತಿಯ ಮುಖವು ಸಿಂಹದ ಮುಖದಂತೆ ತೋರುತ್ತಿತ್ತು. ಆ ಮೂರ್ತಿಯ ಕಣ್ಣುಗಳನ್ನು. ಕೆಂಪಗೆ ಮಾಡಿ ಕೊಂಡು ಆತ್ಮಾ ರಾಮನನ್ನು ದುರುದುರನೆ ನೋಡುತ್ತಾ “ನಿನಗೆ ಬಂದಿದೆ ಕೇಡು“ ಎಂದು ಅರ್ಭಟಿಸಿ, “ಅ ಹುಡುಗಿಯನ್ನು ಮನೆ ಯಿಂದ ಕಳುಹಿಸುವೆಯಾ ಇಲವೆ? ” ಎಂದು ಕೇಳಿದನು. ಆತ್ಮಾ ರಾಮನು ಯಾವ ಉತ್ತರವನ್ನೂ ಕೊಡಲಿಲ್ಲ. ಅವನಿಗೆ ಥಟ್ಟನೆ ಎಚ್ಚ ರವಾಯಿತು. ಮೈ ಬೆವತುಹೋಗಿತ್ತು. ಹಾಗೆಯೆ “ಇದು ಬರೀ ಕನಸು“ ಎಂದಂದುಕೊಂಡು ಎದ್ದು ಕುಳಿತನು. ಅದರೂ ಮನಸ್ಸಿ ನಲ್ಲಿ ಭೀತಿಯು ತಪ್ಪಲಿಲ್ಲ. ಎದ್ದು. ತಿರುಗಾಡಿದರೆ ಸರಿಯಾಗಬಹು ದೆಂದುಕೊಂಡು ಏಳಲು ಪ್ರಯತ್ನ ಮಾಡಿದನು. ಸಾಧ್ಯವಾಗಲಿಲ್ಲ. ಕಾಲುಗಳೆರಡರ ಕೀಲುಗಳೂ ಕಟ್ಟಿಕೊಂಡು ಹೋಗಿದ್ದುವು. ಅಂದಿ ನಿಂದ ಹಾಸಿಗೆ ಹಿಡಿದು ಮಲಗಿಬಿಟ್ಟನು. ಮನೆಯೊಳಗೆ ಒಂದೆರಡು ವಾರಕ್ಕೆ ಸಾಕಾ ಗುವಷ್ಟು ಆಹಾರಪದಾರ್ಥಗಳಿದ್ದುವು.ಅದುವರೆಗೂ ಅತ್ಮರಾರಾಮನೆ ಅಡಿಗೆಯನ್ನು ಮಾಡಿ ಸುಭದ್ರೆಗೂ ಬಡಿಸುತ್ತಿದ್ದ ನು. ಆಗ ಸುಭದ್ರಿಯು ಅಡಿಗೆಮಾಡಬೇಕಾಯಿತು ಅಡಿಗೆ ಮಾಡಬೇಕಾ ದರೆ ನೀರಿಗೆ ಹೊರಗೆ ಹೋಗಬೇಕಾಗುತ್ತಿತ್ತು. ಸುಭದ್ರೆಯನ್ನು ಹೊರಗೆ ಬಿಟ್ಟರೆ ಕೈಗೆ ಸಿಕ್ಕುವಳೆ? ಮನಸ್ಸಿಗೆಬಹಳ ಯೋಚನೆಯುಂಟಾಯಿತು. ಕೊನೆಗೆ ಅವಳನ್ನು ನಿರ್ಬಂಧದಿಂದಿಡುವುದು ಅಸಾಧ್ಯವೆಂದು ತಿಳಿದು ಅವಳನ್ನು ಕರೆದು “ಸುಭದ್ರೆ! ನನಗೆ ಏಳುವುದಕ್ಳೂ ಕೂರುವುುದಕ್ಕೂ ಆಗುವುದಿಲ್ಲ. ನಿನಗೇನಾದರೂ ಕನಿಕರವಿದ್ದು ನನ್ನ ಪ್ರಾಣವನ್ನುಳಿಸಿ ನಿನ್ನ ಪ್ರಾಣವನ್ನೂ ಉಳಿಸಿಕೊಳ್ಳಬೇಕೆಂದಿದ್ದರೆ, ಇಗೋ ಈ ಬೀ ಗದ ಕೈಯನ್ನು ತೆಗೆದುಕೊ. ಬಾವಿಗೆ ಹೋಗಿ ನೀರು ತಂದು ಸ್ವಲ್ಪ ಅನ್ನ ವನ್ನು ಮಾಡಿಹಾಕು ನನ್ನ್ನ ನ್ನು ಬಿಟ್ಟು ಓಡಿಹೋಗಲು ಇಷ್ಟವಾ ದರೆ ಹಾಗೂಮಾಡಬಹುದು. ಆದರೆ ನಿನಗೆ ಅದರಿಂದ ಅನೇಕ ತೊಂದರೆ ಗಳುಂಟಾಗುವುವು ನೋಡಿಕೊ“ಎಂದನು . ಸುಭದ್ರೆಯು ಅಂದಿನಿಂದ ಆತ್ಮಾ ರಾಮನಿಗೆ ಅಡಿಗೆಮಾಡಿಹಾಕುವುದಲ್ಲದೆ, ಅವನು ಮನಸ್ವಿ ಯಾಗಿ ಬೈಯು ಬೈಗಳನ್ನೂ ಸಹಿ ಸಿಕೊಂಡು ಅವನ ಕಾಲುಗಳಿಗೆ ಎಣ್ಣೆಯನ್ನು ನೀವುವುದು, ಸೇಕವನ್ನು ಕೊಡುವುದು. ಮುಂತಾದ ಶುಶ್ರೂಷೆಗಳನ್ನು ಬೇಸರವಿಲ್ಲದೆ ಮಾಡುತ್ತಿದ್ದಳು. ಕಾಯಿಲೆಯು ಹೆಚ್ಚುತಹೆಚ್ಚುತ ಆತ್ಮಾ ರಾಮನ ಹಿಂಸೆಯೂ ಹೆಚ್ಚುತ್ತಿತ್ತು. ಅದರೂ ಸುಭದ್ರೆಯು ಅದನ್ನು ಸಹಿಸಿಕೊಂಡಿದ್ದಳು. ಕೊನೆಗೆ, ಮೊರುದಿನ ಗಳು ಅವಳಿಗೆ ಸ್ವಲ್ಬವೂ ವಿಶ್ರಾಂತಿಯಿಲ್ಲದಂತಾಯಿತು. ಅದನ್ನೂ ಸಹಿಸಿಕೊಂಡಿದ್ದಳು. ನಾಲ್ಕನೆಯ ದಿನ ಬೆಳಗ್ಗೆ ಪೋಲೀಸಿನವರು ಮನೆಯೊಳಗೆ ನುಗ್ಗಿ ಆತ್ಮಾ ರಾಮನನ್ನು ಹಿಡಿದುಕೊಂಡುಹೋದರು. “ಸುಭದ್ರಾಬಾಯಿಯವರನ್ನು ನಮ್ಮ ತಾಯಿಗೆ ಸಮಾನರನ್ನಾಗಿ ಭಾವಿಸಿದ್ದೇನೆ. ಅವರು ನಿಷ್ಕಲ್ಮಷ ಹೃದಯರಾದ ಕನ್ನಿಕೆಯಾದು ದರಿಂದ ಮಾಧವರಾಯರು. ಸ್ವಲ್ಪವೂ ಸಂದೇಹಪಡದೆ ಅವರನ್ನು ಪರಿಗ್ರಹಿಸಬಹುದು. ನಾನು ನಿರ್ಮಲದ ಮನೆಯಲ್ಲಿ ಹೂತಿಟ್ಟಿ ರುವ. ೧೦೦೦ ರೂಪಾಯಿಗಳನ್ನು ಸುಭದ್ರಾಬಾಯಿಯವರಿಗೆ ಬಳುವಳಿಯಾಗಿ ಕೊಟ್ಟಿದ್ದೇನೆ. ನಾನು ಇನ್ನು ಒಂದು ಕ್ಷಣವೂ ಈ ಪಾಪಿ ಶರೀರವನ್ನಿ ಟ್ಟು ಕೊಂಡು ಬಾಳಲು ಇಷ್ಟವಿಲ್ಲ ಆದರೆ ಒಂದುಸಾರಿ ಸುಭದ್ರಾ ಬಾಯಿಯವರನ್ನು ದರ್ಶನ ಮಾಡಿಕೊಂಡು ಅವರಿಗೆ ಕೊಟ್ಟ ಹಿಂಸೆಯನ್ನು ಕ್ಷಮಿಸುವಂತೆ ಕೇಳಿಕೊಳ್ಳಲು ಅವ ಕಾಶಕೊಟ್ಟರೆ ಬಹಳ ಕೃತಜ್ಞನಾಗಿರುವೆನು“. ಹೀಗೆಂದ್ದು. ಆ ” ಹೇಳಿಕೆ“`ಯು ಮುಗಿಸಲ್ಪಟ್ಟಿತ್ತು. ಆತ್ಮಾ ರಾಮನು ಅ ಕಾಗದಕ್ಕೆ ಮ್ಯಾಜಿಸ್ಟ್ರೇಟಿನ ಮುಂದೆ ರುಜುಹಾಕಿದನು. ನವಾಬನು ಸಾಕ್ಷಿ ಹಾಕಿದನು. ಮ್ಯಾಜಿಸ್ಟೈಟನೂ ರುಜುಮಾಡಿದನು. ” ನಾಳೆ ಬೆಳಗ್ಗೆ ಸುಭದ್ರೆಯನ್ನು ನೀನು ನೋಡಬಹುದು“ ಎಂದು ಹೇಳಿ ಶಂಕರರಾಯನು ನವಾಬ್, ಮಾಧವನೊಡನೆ ಬಿಡಾರಕ್ಕೆ ಹೋದನು. ಮ್ಯಾಜಿಸ್ಟ್ರೇಟನು ಠಾಣೆಯ ದರೋಗನಿಗೆ . ಆತ್ಮಾ ರಾಮನು ಅತ್ಮ ಹತ್ಯೆ ಮಾಡಿಕೊಳ್ಳದಂತೆ. ಎಚ್ಚರವಾಗಿ ನೋಡಿಕೊಂಡಿರಬೇ ಕೆಂದು ಸೂಚನೆ ಹೊರಟುಹೋದನು .
ಬಿಡಾರಕ್ವೆ ಬಂದೊಡನೆಯೆ ಕಂಕರರಾಯನು ಸುಭದ್ರೆ ಮತ್ತು ಗಂಗಾಬಾಯಿ ಇವರೆದುರಿಗೆ ಆತ್ಮಾ ರಾಮನ ಹೇಳಿಕೆಯನ್ನು ಒದುತ್ತ, ಸುಭದ್ರೆಯು ಅವಕಾಶ ಸಿಕ್ಕಿದರೂ ಓಡಿಹೋಗದೆ ಇದ್ದುದು ಆಶ್ಚರ್ಯ ಎಂದನು. ಅದಕ್ಕೆ ಗಂಗಾಬಾಯಿಯು “ಈ ವಿಚಾರವನ್ನು . ನಾನು ಮೊದಲೇ ಕೇಳಿದೆನು. ನಮ್ಮ ಸುಭದ್ರೆಯು ಹುಡುಗಿಯಾದರೂ ದೂರದೃಷ್ಟಿಯುಳ್ಳವಳು. ರಾಮರಾಯನು ತನಗೆ ಶತ್ರುವಾಗಿ ನಿಂತಿ ರುವುದು ಅವಳಿಗೆ ತಿಳಿದಿದ್ದುದರಿಂದ ತಪ್ಸಿಸಿ ಕೊಂಡುಹೋಗುವುದು. ಮತ್ತಷ್ಟು ಅನರ್ಥಳ್ಳ ಕಾರಣವಾಗಬಹುಬಿಂದು ತಿಳಿದು ಆತ್ಮಾ ರಾಮ ನಿಗೆ ವಿಧೇಯಳಾಗಿದು, ಶುಶ್ರೂಷೆ ಮಾಡುವುದರ ಮೂಲಳ ಅವನಲ್ಲಿ ಕನಿಕರವನ್ನು ಹುಟ್ಟಿಸಿ ತನ್ನ ಪತಿಯನ್ನು ಸೇರಲು ಅವನಿಂದಲ್ಲೇ ಸಹಾಯವನ್ನು ಪಡೆಯುವ ಉದ್ದೇಶದಿಂದ ನಿಂತುಬಿಟ್ಟಳಂತೆ. ಆದರೆ ಅವನಿಗೆ ರೋಗವು ಗುಣವಾಗುವ ಸಂಭವವು ತೋರಲಿಲ್ಲವಾದುದ ರಿಂದಲೂ, ಕೊನೆಕೊನೆಗೆ ಅವನ ಹಿಂಸೆಯು ಸಹಿಸಲಸಾಧ್ಯವಾಗಿ ಪರಿಣಮಿಸಿದುದರಿಂದಲೂ ಪ್ಲಾಣತ್ಯಾಗ ಮಾಡಲು ನಿಶ್ಚಯಿಸಿ ಆಹಾರವನ್ನು ಬಿಟ್ಟ್ಗಳಂತೆ“ ಎಂದು ಹೇಳಿದಳು.
ಕಾಗದವನ್ನೋದಿ ಪೂರೈಸುತ್ತಲೆ ಸುಭದ್ರೆಗೆ ಮನಸ್ಸಿನಲ್ಲಿದ್ದ ಆತಂಕವು ದೂರವಾಯಿತು. ಅತ್ಮಾ ರಾಮನು ಯಥಾರ್ಥವನ್ನು ಬರೆ ದು ತನ್ನ ಮೇಲೆ ಸಂದೇಹಕಕ್ಕೆ ಆಸ್ಪದವಿಲ್ಲದಂತೆ ಮಾಡಿದುದಕ್ಕೋಸ್ಫರ ಅವಳ . ಹೃದಯವು ಕೃತಜ್ಞತೆಯಿಂದ ತುಂಬಿ ತುಳುಳಾಡುತ್ತಿತ್ತು. ಕಣ್ಣುಗಳು ಅನಂದಾಶ್ರುನನ್ನು ಸುರಿಸಿದುವು. ಶಂಕರರಾಯನು ಸುಭದ್ರಯ ಸಹನಗುಣವನ್ನೂ ದೂರಾಲೋಚನೆಯನ್ನೂ ಬಹಳವಾಗಿ ಶ್ಲಾಗಿಸಿದನು.
*****
ಮುಂದುವರೆಯುವುದು