ಮಾತೆ ಭುವನೇಶ್ವರಿ ಜಗನ್ಮಾತೆ
ನನ್ನನ್ನು ಮಾಯೆಯಿಂದ ನಿ ಕಾಪಾಡು
ನೀನು ಎನ್ನ ಕೈ ಬಿಟ್ಟ ಮೇಲೆ
ನಾನು ಬದುಕುಳಿಯುವದೇ ಇದು ಕಾಡು
ವಿಷಯ ಸುಖಕ್ಕೆ ಇಂದ್ರಿಯಗಳ ಚಡಪಡಿಕೆ
ಮನಸ್ಸು ಇಂದ್ರಿಯಗಳ ಮೇಲೆ ಸವಾರಿ
ಅವುಗಳ ನಡುವೆ ನಾನು ಅನಾಥ
ನರಕವೇ ಗತಿ ನಾ ಜನುಮಗಳ ಸುತ್ತುತ್ತ
ಸಾವಿವೆಂಬ ಘೋರ ತಮಸ ಗರ್ಭದಲಿ
ಕರಗಿ ಹೋಗಿ ನಾನು ಕಂಗಾಲಾಗಿರುವೆ
ಅದಕ್ಕೂ ಮುಂಚೆ ನನ್ನೆಳೆದು ರಕ್ಷಿಸು
ನಾನಿನ್ನ ಪಾದಗಳಲಿ ಎರಗುವೆ
ನಿ ನನ್ನ ಜೀವನವ ಆಡಿಸುತ್ತಿರುವವಳು
ನೀನೇ ನನ್ನ ಯಂತ್ರದ ಒಡೆಯಳು
ನೀ ನಾಡಿಸುವ ಗೊಂಬೆ ನಾನು
ನೀ ದಯೆ ತೋರಿ ಎನ್ನ ರಕ್ಷಿಪಳು
ಹೌದು ಈಗ ಅರಿತಿರುವೆ ನಾ ಹೀನಧನ್ಯ
ನನ್ನ ಬದುಕಿನ ದೇವತೆ ನೀ ಅನನ್ಯ
ಇನ್ನು ಮುಂದೆ ಎಂದೆಂದು ಪಾತಾಳಕ್ಕೆ
ದೂಡದೆ, ಮಾಣಿಕ್ಯ ವಿಠಲನಾಗಿಸು ಮಾನ್ಯ
*****