ಮಾರನೆಯ ದಿನ ಬೆಳಗಾಗುತ್ತಲೆ ಸುಭದ್ರೆಯು ಎಂದಿನಂತೆ ಪಾಠಶಾಲೆಗೆ ಹೋದಳು. ಅಲ್ಲಿ ಆಕೆಯ ಮುಖವು ಬಾಡಿರುವುದನ್ನು ಉಪಾಧ್ಯಾಯೆಯೂ, ಸುಭಧ್ರೆಯಸಂಗಾತಿಯರೂ ನೋಡಿದರು. ಕಾರಣವು ಯಾರಿಗೂ ತಿಳಿಯದು. ಸುಭದ್ರೆ ಯಾವಾ ಗಲೂ ಪಾಠವನ್ನು ತಪ್ಪುತ್ತಿದ್ದವಳಲ್ಲ. ಈ ದಿನ ಉಪಾಧ್ಯಾಯೆ ಯೊಂದನ್ನು ಕೇಳಿದರೆ ಇವಳೊಂದನ್ನು ಹೇಳುವಳು. ಹೀಗಿದ್ದುದ ರಿಂದ ಇವಳಮನಸ್ಸಿ ನಲ್ಲಿ ಏನೋ ವ್ಯಸನವಿರಬಹುದೆಂದು ಉಪಾಧ್ಯಾ ಯೆಯು ಊಹಿಸಿ ಸುಭದ್ರೆಯನ್ನು ಕರೆದು, “ಸುಭದ್ರೆ! ನೀನು ಈಗ ಮನೆಗೆ ಹೋಗು, ನಾನೂ ಪಾಠಗಳನ್ನೆಲ್ಲಾ ಮುಗಿಸಿಕೊಂಡುಬರು ತ್ತೇನೆ ಎಂದು ಹೇಳಿ ಕಳುಹಿ ಸಿಬಿಟ್ಟ್ಗಳು, ಸುಭದ್ರೆಯು ಮನೆಗೆ ಬಂದಳು. ತಾಯಿಯು :, ಇದೇನು ಇಷ್ಟು ಬೇಗ ಬಂದೆ ” ಎಂದು ಕೇಳಲು “ಮೈಯಲ್ಲಿ ಸ್ಕರಸ್ಥ್ರವಿಲ್ಲ`“ ಎಂದು ಉತ್ತರಕೊಟ್ಟು ತನ್ನ ಚಿಕ್ಕ ಮನೆಗೆ ಹೋಗಿ ಕೂತುಕೊಂಡು ಉಪಾಧ್ಯಾಯೆ ಬರುವುದನ್ನ ಎದುರುನೋಡುತ್ತಿದ್ದಳು. ೧೦ ಗಂಟಿಗೆ ಸರಿಯಾಗಿ ಉಪಾಧ್ಯಾ ಯೆ ಬಂದಳು. ರಮಾಬಾಯಿಯ ಸಂಗಡ ಹೇಳಿ ಸುಭದ್ರೆಯನ್ನು ಮನೆಗೆ ಕರೆದುಕೊಂಡು ಹೋದಳು. ಈ ಉಪಾಧ್ಯಾಯೆಯ ಹೆಸರು ಗಂಗಾಬಾಯಿ. ಈಕೆ ವಯ ಸ್ಸಾದವಳಾಗಿಯೂ, ವಿದ್ಯಾವತಿಯಾಗಿಯೂ ಇದ್ದಳು, ಈಕೆಗೆ ಚಿಕ್ಕಂದಿನಲ್ಲಿಯೆ ಪತಿವಿಯೋಗವುಂಟಾದುದರಿಂದ ತನ್ನ ಕಾಲವನ್ನು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವುದರಲ್ಲಿ ಕಳೆಯುತ್ತಿದ್ದಳು. ಮತ್ತು ಮಳ್ಳಳಿಲ್ಲದವಳಾದಕಾರಣ ವಿದ್ಯಾರ್ಥಿನಿಯರನ್ನೆ ತನ್ನ ಮಕ್ಕ ಳೆಂದು ಭಾವಿಸಿಕೊಂಡಿದ್ಗಳು . ಸುಭದೆ,ಯಲ್ಲಿ ಮಾತ್ರ, ಉಳಿದೆಲ್ಲರ ಲ್ಲದ್ದುದಕ್ಕಿಂತಲೂ ಅತಿಶಯವಾದ ಪ್ರೇಮವಿದ್ದಿತು.
ಸುಭದ್ರೆಯೂ ಗ೧ಗಾಬಾಯಿಯ್ಗೂ. ಮನೆಗೆ ಬಂದಕೂಡಲೆ ಉಯ್ಯಾ ಲೆ ಮಣೆಯ ನಮೇಲೆ ಕುಳಿತುಕೊಂಡರು. ಗಂಗೆಯು – ಏಕಮ್ಮ ಸುಭದ್ರೆ ! ಮಂಕಾಗಿದ್ದೀಯೆ ! ಎಂದು ಕೇಳಿದೊಡನೆಯೆ ಸುಭದ್ರೆಯ ಮುನಸ್ಸಿನಲ್ಲಿದ್ದ ದುಃಖಕ್ಕೆ ತಡೆಯಿಲ್ಲದಂತಾಗಿ ಬಿಕ್ಕಿ ಅಳತೊಡಗಿದಳು. . ಅಳುವು ನಿಲ್ಲುವತನಕ ಗಂಗಾಬಾಯಿ ಸುಮ್ಮ ನಿದ್ದಳು, ಅಳುವು ನಿಂತಮೇಲೆ “ತಾಯಿ ! ನೀನು ಸ್ವಲ್ಪವೂ ಹೆದರಬೇ ಡ, ನಿನ್ನ ಮನಸ್ಸಿನಲ್ಲಿ ಯಾವ ಗುಟ್ಟಿನ ಸಂಗತಿಯಿದ್ದರೂ
ನನ್ನೊಡನೆ ಹೇಳು, . ನಾಚಿಕೆ ಪಡಬೇಕಾದುದಿಲ್ಲ“ ಎಂದಳು.
ಸುಭದ್ರೆ–ಏನು ಹೇಳಲಿ, ಮದುವೆ. ಮಾ. . .. . .. . -” ಪುನಃ ಅಳತೊಡಗಿದಳು
ಗಂಗಾ .-(ಕಣ್ಣೊರಸಿ) ,,ಯಾರಿಗೆ ಕೊಡುತ್ತಾರಂತೆ ?”
ಸುಭದ್ರೆ__ಬಿಕ್ಕಿ ಬಿಕ್ಕಿ ಅಳುತ್ತಾ ” ಒಬ್ಬ ಭೂ. ಊ-ತ-ನಿಗೆ“ ಗಂಗೆಯು ಎಲವನ್ನೂ ಊಹಿಸಿದಳು, ಹಿಂದಿನ ದಿನ ಸಾಯಂ ಕಾಲ ನಾವು ಹಿಂದೆ ವಿವರಿಸಿದ ವ್ಯಕ್ತಿಯು ವಿಶ್ವನಾಥನ ಮನೆಯನ್ನು ಕಂಡು ಹಿಡಿಯುವುದಕ್ಕೋಸ್ಕರ ಗಂಗಾಬಾಯಿಯನ್ನೆ ಬಂದು ಕೇಳಿ ದ್ದನು. ಆಗ ಅವನನ್ನು ಚೆನ್ನಾಗಿ ನೋಡಿ ಅವನ ಆಡಂಬರದಿಂದ ಕಾರಣವನ್ನು ಸ್ವಲ್ಪಮಟ್ಟಿಗೆ ಊಹಿಸಿದ್ದಳು. ಈಗ ಸ್ಥಿರಪಟ್ಟಿತು.
ಗಂಗಾಬಾಯಿ__ಸುಭದ್ರೆ ! ನೀನು ಸ್ವಲ್ಫವೂ ಹೆದರಬ್ಗೇಡ, ಆ ಭೂತನಿಗೆ ನಿನ್ನನ್ನು ಕೊಡದಹಾಗೆ ಮಾಡುವ ಭಾರ ನನ್ನದು.
ಸುಭದ್ರೆ__=-ಅಮ್ಮಾ ನೀವೇ ನನ್ನನ್ನು ಕಾಪಾಡಬೇಕು, ನಮ್ಮ ತಂದೆ ತಾಯಿಗಳೇನೊ ನನ್ನನ್ನು ಹಣದ ಆಶೆಗೆ ಮಾರಿ ಬಿಡುತ್ತಾರೆ.
ಹೀಗೆ ಮಾತನಾಡುತ್ತಲಿರುವ ಹೊತ್ತಿಗೆ ಸರಿಯಾಗಿ, ಒಬ್ಬ ತರುಣನು ಮನೆಯೊಳಕ್ಕೆ ಪ್ರವೇಶಮಾಡಿದನು. ಸುಭದ್ರೆಗೆ ಒಂದು ತೇಜೋಮಯವಾದ ರೂಪವು ಬಂದು ಎದುರಲ್ಲಿ ನಿಂತಂತಾಯಿತು. ತರುಣನ್ಸು ಸುಭದ್ರೆಯನ್ನು . ನೋಡಿದಕೂಡಲೆ ಸಂಭ್ರಾಂತನಾಗಿ ಸುಮ್ಮನೆ ದೃಷ್ಟಿಸುತ್ತಾ ನಿಂತುಬಿಟ್ಟನು, ಇವರ ಮನೋಭಿಪ್ರಾಯ ಗಳನ್ನು ತಿಳಿದ ಗಂಗೆಯು ಸ್ವಲ್ಪ ಹೊತ್ತು ಸುಮ್ಮ ನಿದ್ದುಅನಂತರ — ` ಮಾಧವಾ ಸೌಖ್ಯವಾಗಿದ್ದೀಯಾ ಎಂದು ಕೇಳಿದಳು. ಮಾಧವನಿಗೆ ಜ್ಞಾನೋದಯವಾಯಿತು. ತನ್ನ ಚಿಕ್ಕಮ್ಮನಿರುವುದು ಆಗ ಗೊತ್ತಾಯಿತು. . ಮನಸ್ಸಿನಲ್ಲಿ ತನ್ನನ್ನು ತಾನೆ ಬೈದುಕೊಂಡು ” ಈಗ ತಾನೆ ಟಪಾಲುಗಾಡಿಯಲ್ಲಿ ಬಂದೆ“ ಎಂದನು. ಗಂಗೆಯು – “ಬಾ ಕೂತುಕೊ. “ ಎಂದು. ಹತ್ತಿರ ಕುಳ್ಳಿ ರಿಸಿಕೊಂಡಳು. ಸುಭದ್ರೆಯು ಅಲ್ಲಿಂದೆದ್ದು “ನಾನು ಮನೆಗೆ ಹೋಗುತ್ತೇನಮ್ಮ“ ಎಂದಳು, ಗಂಗೆಯು ..ಹೋಗಿ ಬಾ ನಾನು ಹೇಳಿದುದನ್ನು ಮರಿಯಬೇಡ“ ಎಂದು ಹೇಳಿ ಕಳುಹಿಸಿಕೊಟ್ಟಳು.
ಸುಭದ್ರೆಗೆ ಮನೆಗೆ ಹೋಗಲು ಕಾಲೇ ಬಾರದು. ಆಗ ತಾನೆ ಕಂಡ ತರುಣನ ರೂಪವೂ ಹಿಂದಿನರಾತ್ರಿ ಕಂಡ ಮುದುಕನರೂಪವೂ ಕಣ್ಣೆದುರಿಗೆ ನಿಂತುಕೊಂಡಿದ್ದುವು. ಆ ತರುಣನನ್ನು ಕಂಡಕೂಡಲೆ ಏನೊ ಒಂದು ವಿಧವಾದ ಭಾವನೆಯುಂಟಾಯಿತು. ಅದು ಇಂತಹು ದೆಂಬುದು ಸುಭದ್ರೆಗೆ ತಿಳಿಯಲಿಲ್ಲ. ಆದರೆ ಆ ವಿಧವಾದ ಭಾವನೆಯು ಮೊದಲೆಂದಿಗೊ ಆಗರಲಿಲ್ಲವೆಂಬುದುಮಾತ್ರ ಗೊತ್ತಾಗಿದ್ದಿತು. ಸುಭ ದ್ರೆಗೆ ಯಾವಾಗಲೂ ಆತನ ಧ್ವನಿಯನ್ನೇ ಕೇಳುತ್ತಾ ಆತನ… ಬಳಿ ಯಲ್ಲೇ ಇರಬೇಕೆನ್ನಿಸುತ್ತಿದ್ದಿತು.
*****
ಮುಂದುವರೆಯುವುದು