ಸಾಮಾನ್ಯವಾಗಿ ಮೊಬೈಲ್ ಫೋನ್‌ಗಳನ್ನು, ಗುರುತಿನ ಚೀಟಿಗಳನ್ನು ಕೊರಳಲ್ಲಿ ಹಾಕಿಕೊಂಡು ತಿರುಗಾಡುವವರನ್ನು ನೋಡಿದ್ದೇವೆ. ಈ ರೀತಿ ಕಂಪ್ಯೂಟರ್‌ಗಳನ್ನೇ ಕೊರಳಲ್ಲಿ ನೇತು ಹಾಕಿಕೊಂಡು ತಿರುಗಾಡುವುದನ್ನು ಕಂಡಿಲ್ಲ. ಹಾಗೇನಾದರೂ ಇದ್ದರೆ ಸೂಕ್ಷ್ಮ ಯಂತ್ರಗಳನ್ನು ತಯಾರಿಸುವ ಜಪಾನ್ ದೇಶಕ್ಕೆ ಮೀಸಲು ಎನ್ನಬಹುದು. ನಿಜ ಜಪಾನ್ ದೇಶದ National Electronic Corporation ಸಂಸ್ಥೆಯು ದೇಹದ ಮೇಲೆ ಧರಿಸಬಹುದಾದ ವಯಕ್ತಿಕ ಕಂಪ್ಯೂಟರ್ಗಳನ್ನು (P.C.) ವಿನ್ಯಾಸಗೊಳಿಸಿದೆ. ಈ P.C. ಗಳು ಉದ್ಯಮಿಗಳಿಗೆ ಅವಶ್ಯಕವಾಗಿಬೇಕಾಗುತ್ತವೆ ಎಂದು ಬಳಸುವವರು ಹೇಳುತ್ತಾರೆ. ಇದನ್ನು ಕತ್ತಿನಲ್ಲಿಯೂ, ಸೊಂಟದಲ್ಲಿಯೂ ಸಿಕ್ಕಿಸಿಕೊಳ್ಳಬಹುದು. ವೈದ್ಯಕೀಯ ರಂಗದಲ್ಲಿ ಇದು ಹೆಚ್ಚು ಪ್ರಯೋಜನವಾಗುತ್ತದೆ. ಚಿಕಿತ್ಸೆಯಗುಣಮಟ್ಟವನ್ನು ಹೆಚ್ಚಿಸುತ್ತದೆಂದು ಅಲ್ಲಿಯ ವೈದ್ಯರು ಹೇಳುತ್ತಾರೆ. ವೈದ್ಯರು ರೋಗಿಗಳಿಂದ ಸಾವಿರಾರು ಕಿ.ಮೀ. ಗಳ ದೂರವಿದ್ದರೂ ರೋಗಿಯ ಶರೀರದ ಮೇಲೆ ಅಳವಡಿಸಿದ ಕಂಪ್ಯೂಟರ್ ಮೂಲಕ ರೋಗಿಯ ದೇಹಸ್ಥಿತಿಯ ಬಗೆಗೆ ಮಾಹಿತಿಗಳನ್ನು ಸಂಗ್ರಹಿಸಿ ಕಂಪ್ಯೂಟರ್ ಮೂಲಕವೇ ಪರಿಹಾರ ನೀಡಬಲ್ಲದು.
ಈ ಕಂಪ್ಯೂಟರ್ ಮಿನಿಕೀರ್ಬೊರ್ಡ್, ಡಾಯ್ಸ್‌ಬೋರ್ಡ್, ಟೆಲಿಫೋನ್, ಫ್ಯಾಕ್ಸ್ ಸಿ.ಡಿ. ರೋಮ್ಸ್ ಕ್ಯಾಮರಾ ಇಂಥಹ ವೈವಿಧ್ಯಮಯ ವಸ್ತುಗಳನ್ನು ಹೊಂದಿದೆ, ಎಂದರೆ ಆಶ್ಚರ್ಯವಾಗಬಹುದು. ಇವೆಲ್ಲವೂ ಸೇರಿ ಕೊರಳಲ್ಲಿ ಒಂದು ಕೆ.ಜಿ. ಭಾರವಾಗಬಹುದೆಂದು ಹೇಳುತ್ತಾರೆ. ಇವು ಬಲಿಷ್ಟವಾದ ಪ್ಲಾಸ್ಟಿಕ್‌ನಿಂದ ತಯಾರಾಗಿರುತ್ತವೆ. ಮಾತ್ರವಲ್ಲ ಶರೀರ ಸೆನ್ಸರ್‌ಗಳು, ರೋಗಿಯ ಚಿತ್ರಗಳನ್ನು ರವಾನಿಸಲು ವಿಡಿಯೋ ಕ್ಯಾಮರಾ ವೈದ್ಯಕೀಯ ವಿಶ್ವಕೋಶ ಇವುಗಳನ್ನು ಸಹ ಇದರಲ್ಲಿ ಅಳವಡಿಸಲಾಗಿದೆ. ಇದೊಂದು ಕ್ರಾಂತಿಕಾರಿ ಶೋಧನೆಯಲ್ಲವೆ?
*****