ನಾವನ್ನುತ್ತೇವ ವೇದಾಂತಿಗಳಂತೆ
ನಮ್ಮ ಜೀವನದ ಹರಿಕಾರರು ನಾವೇ ಎಂದು,
ಬೀಗುತ್ತೇವೆ
ಯಾರ ಕೈವಾಡವೂ ಅಲ್ಲಿಲ್ಲ ಎಂದು.
ಕಾಣದಿರುವ ಕೈಯದೊಂದು
ನಮ್ಮ ಕತ್ತಿಗೆ ದಾರ ಹಾಕಿ ಎಳೆಯುವಾಗ
ಅದು ಎಳೆದಂತೆ ನಾವು ಕುಣಿಯುವಾಗ
ನಾವನ್ನುತ್ತೇವ ಸ್ಥಿತಪ್ರಜ್ಞರಂತೆ –
ಇದುವೆ ಜೀವನವೆ೦ದು!
ಕಾಣದಿರುವ ಕೈಯ
ಸೂತ್ರದ ಬೊಂಬೆಗಳು ನಾವಾದಾಗ
ಅದರ ತಾಳಕ್ಕೆ ನಮ್ಮ ಕುಣಿತ
ಸೇರಲೇ ಬೇಕಲ್ಲ ಎನುತ
ಸೋಲುತ್ತಾ ಕುಣಿಯುತ್ತೇವೆ
ಕಥೆ ಹೇಳುವ ತೊಗಲು ಗೊಂಬೆಗಳಂತೆ!
*****