ಗುಂಡನ ಮನೆಯ ಮುಂದೊಂದು
ಇತ್ತು ಮಾವಿನ ಮರವೊಂದು
ರೆಂಬೆ ಕೊಂಬೆಗಳ ಹರಡಿಬಿಟ್ಟು
ಬಿಸಿಲಿಗೆ ಹಸಿರನು ಹೊದಿಸಿತ್ತು
ಮುದ್ದಾಗಿ ಬೆಳೆದ ಮರವನು ನೋಡಿ
ತೋರಣಕಾಗಿ ಜನ ಮುಗಿಬಿದ್ದು ಗುದ್ದಾಡಿ
ಹಿಂಸೆಯ ಕೊಡುತ್ತಿದ್ದರು ಆ ಮರಕೆ
ಮರೆತಂತೆ ಮನುಷತ್ವ ಕರುಣೆ ಮರುಕ
ವಸಂತ ಮಾಸಕ್ಕೆ ಮಾಮರದಲ್ಲಿ
ಬಿಟ್ಟವು ಹೀಚುಗಳು ಮಾಮೂಲಿ
ಹಿರಿಯರು ಕಿರಿಯರು ಬೀರುವ ಕಲ್ಲಿಗೆ
ಆ ಮರ ಮುಲುಗಿತ್ತು ಮೈ ನೋವಿಗೆ
ನೆರಳು ಆಶ್ರಯ ಹಣ್ಣನು ಕೊಟ್ಟರೂ
ಕರಗದ ಕೃತಘ್ನ ಮನುಜರ ಮನಸು
ಉಪಕಾರಕೆ ಅಪಕಾರವನು ಬಗೆದರೂ
ಹಣ್ಣನೀವ ಮಾಮರ ಅಲ್ಲವೆ ದೇವರು?
ನಮಗಿರುವಂತೆ ಜೀವ ಸಸ್ಯಗಳಿಗೂ ಇದೆ
ಎಂದರು ಸರ್ ಸಿ.ವಿ.ರಾಮನ್ ವಿಜ್ಞಾನಿಗಳು
ಹೇಳುವರು ಪ್ರತಿ ಜೀವಿ ದೇವಾಂಶ ಸಂಭೂತ
ಸಸ್ಯಗಳಿಗೂ ಹನಿಸಿ ಕರುಣಾ ರಸ ಪೂರ್ತ.
*****