ಸಾಲು ಮರಗಳ ಊರು
ಜೀವ ಸಂಕುಲಕೆ ಸೂರು
ಬಗೆ ಬಗೆ ಹೂವಿನ ತೇರು
ಸವಿ ಸವಿ ಹಣ್ಣಿನ ಸಾಲು
ಹತ್ತಿರದಲ್ಲೇ ಕೆರೆಯೊಂದು
ನೀರು ನೆರಳಿಗೆ ಬರವಿಲ್ಲ
ಸೊಂಪಾದ ಮರಗಳು
ತಂಪಾದ ನೆರಳನು
ನೀಡುತಲಿದ್ದವು ನಿತ್ಯ
ಪ್ರಾಣಿ ಪಕ್ಷಿಗಳು
ಸುಖವಾಗಿದ್ದವು ಸತ್ಯ
ಆ ಮರದಲ್ಲಿ ಮಂಗಗಳು
ಈ ಮರದಲ್ಲಿ ಹಕ್ಕಿಗಳು
ಪಕ್ಕದ ಮರದಲಿ ಪಾಪದ ಗೂಬೆ
ಆ ಕಡೆಯಲ್ಲಿ ಅಳಿಲಿನ ವಾಸ
ರಸ್ತೆಯ ಅಗಲವ ಮಾಡುವ ಜನರು
ಹಿಡಿದರು ಕೈಯಲ್ಲಿ ಕೊಡಲಿಯನು
ಸಿಕ್ಕಿದ ಮರಗಳ ಕಡಿಯುತಲಿಹರು
ಆಗುವ ನಷ್ಟವ ಲೆಕ್ಕಕೆ ಇಡರು
ಮರಗಳು ಎಲ್ಲಾ ಉರುಳಿದವು
ಮರಿಗಳೆಲ್ಲಾ ನರಳಿದವು
ಕೂಗಿಕರೆದವು ಹೆತ್ತವರನ್ನು
ಜರೆದವು ಮರವ ಕಡಿದವರನ್ನು.
*****