ಸ್ವರ್ಣಸಮುದ್ರದಿ ಪಯಣಿಸಿಹೆ
ರಜತತೀರವನು ನೂಕಿರುವೆ
ಜ್ಞಾನಭಾಸ್ಕರನ ತಲುಪಿರುವೆ
ಇಳೆಯಿರುಳಭಿಜಿತ್ ಸೋಕಿರುವೆ.
ದೃಷ್ಟಿದೀಪಿಸುವ ಕ್ಷೇತ್ರಗಳು
ಕೆಚ್ಚಿನ ಕಸುವಿನ ಬೆಟ್ಟಗಳು
ಹರ್ಷಜ್ವಾಲೆಯ ಶಿಖರಗಳು
ಕೇವಲ ಬೆಳಕಿನ ಗಾಳಿಯೊಳು.
ಆತ್ಮವಿಸ್ಕೃತಿಯ ಕಡಲುಗಳು
ರುದ್ರನಿದ್ರೆಗಳ ಗಿರಿದರಿಯು
ನನ್ನ ಜೀವದಾ ರಾಜ್ಯದೊಳು
ನಂದಾ ದ್ವೀಪಾವಳಿಗಳೊಳು.
ದೇವನೆ ದೇವ ಮೌನೋ ಮೌನ
ಕಾಲರಹಿತವಹ ಕಾಲದ ಅಯನ
ಅಲ್ಲಿ ಜೀವನವು ರಾಗದ ಮೂರ್ತಿ.
ಸತ್ಯ ವಿಚಾರವೆ ಛಂದಃಶಯನ
ಅಲ್ಲಿಯ ಬೆಳಕೇ ಸುತ್ತೂಮುತ್ತು.
ಇಲ್ಲಿಗೆ ಬಂದರು ಎತ್ತಲು ಇತ್ತು
ಅಮೃತ ಜ್ಞಾನವು ಇಳೆಗಿಳಿದಿತ್ತು
ಮೌನವ ಜನ್ಮದ ಗರ್ಭದಿ ಬಿತ್ತು.
*****