ಕನಕಸಭಾನಾಯಕನು ನ್ಯಾಯಸ್ಫಾ ನದಲ್ಲಿ ಸಾಕ್ಷಾತ್ ಯಮಧರ್ಮ ನಂತೆ ನಿಷ್ಠರುಣಿಯು ನೀತಿಧರ್ಮವನ್ನು ಪರಿಪಾಲಿಸುವದರಲ್ಲಿ ಸ್ವಂತಮಗ ನಿಗಾದರೂ ಲಕ್ಷ್ಯಮಾಡದ ಸ್ವಭಾವವುಳ್ಳನನು. ಪರಂತು ಕೊಂಚ ಸ್ತುತ್ಯಪ್ರಿಯನೂ ಚಾಡಿಮಾತುಗಳಿಗೆ ಕಿವಿಕೊಡುವ ದುರಭ್ಯಾಸದವನೂ ಆಗಿರುವ ಕುಂದು ಮಾತ್ರ ಸೂರ್ಯಚಂದ್ರಾದಿಗಳಿಗೆ ಗ್ರಹಣ ತಗಲುವ ಹಾಗೆ ಅವನಿಗೆ ಅಂಟಿಕೊಂಡಿತ್ತು. ಹಾಹಾ ಹೀಹೀಗಳಂತಿರುವ ವೇದ ವ್ಯಾಸ ಉಪಾಧ್ಯನೂ ಅವನ ಅನುಜ ರಾಘವೇಂದ್ರನೂ ರಾಮದಾಸನ ಧೈರ್ಯ ಬಲದಿಂದ ಏನನ್ನಾದರೂಮಾಡಿ ಜಯ ಪಡೆಯಬೇಕೆಂಬ ಹಟದಿಂದ ಕಚೇರಿ ಬಾಗಲು ಕಾಯುವದರಲ್ಲಿ ಕಡಿಮೆಮಾಡಲಿಲ್ಲ. ನಿಯ ಮಿತ ದಿನ ಕ್ಲಪ್ತಸಮಯಕ್ಕೆ ಆ ಅಧಿಕಾರಿಯು ಒಳ ಅಧಿಕಾರಸ್ಥರ ವ್ಯವ ಹರಣೆಗಳನ್ನೆಲ್ಲಾ ಮೊಕದ್ದಮೆಯ ಲವಾಜಮೆಗಳಿಂದ ತಿಳಿಯುವಷ್ಟರ ಮಟ್ಟಿಗೆ ಗ್ರಹಿಸಿನೋಡಿ ಪಕ್ಷಪಾತದ ಅಪವಾದಕ್ಕೆ ಗುರಿಯಾಗುವ ಸ್ವಭಾ ವದ ಯಾವದೊಂದು ವೈಪರೀತ್ಯ ನಡಿಸಿದ್ದು ಕಂಡುಬಾರದಿರುವ ಪ್ರಯುಕ್ತ ರಾಮದಾಸನ ಅಧಿಕಪ್ರಸಂಗ ಲೆಕ್ಕಿಸದೆ ಪ್ರಕರಣವನ್ನು ಕಾರಭಾರಿಯಿಂದಲೇ ವಿಮರ್ಶೆಯಾಗಲಿಕ್ಕೆ ಆಕ್ಷೇಪವಿರಕೂಡದಾಗಿ ತೀರ್ಮಾನಿಸಿದರು. ಈ ವಾರ್ತೆಯು ವಾಯುವೇಗದಿಂದ ಊರು ಪರಉಊರಿಗೆ ಹಬ್ಬಿತು. ವಿಪರೀತ ಧೈರ್ಯವಂತನಾದ ರಾಮದಾಸನು ಮುಖಕಂದಿದವನಾಗಿ ಮೂಗಿನ ಮೇಲೆ ಬೆರಳಿಟ್ಟು ಮುಂದಿನಿಂದಲೂ ಸೋತು ಕಂಗಾಣದ ವೇದವ್ಯಾಸನು ಆಶಾ ಭಂಗ ಪ್ರದರ್ಶನಕ್ಕೆ ಚಿನ್ಹೆಯನ್ನು ತೋರಿಸುವದಕ್ಕೆ ಉಭಯಪಾಣಿಗಳನ್ನು ತಲೆಯ ಮೇಲಿರಿಸಿಕೊಂಡು ಹಿಂದಿನಿಂದಲೂ ಅಮಿತಭಾರವುಳ್ಳ ವಸ್ತುವನ್ನು ಹೇರಿದ ಸಂಬಂಧ ಕುಸಿದು ಬಳಲುವವನ ಗತಿಯನ್ನು ಹೊಂದಿದ ಗರುಡಾ ಚಾರ್ಯನು ನಿಸ್ತೇಜವದನನಾಗಿ ಪೂರ್ವ ಸುಮಂಗಲೆಯರ ಹಾಗೆ ಮುಸುಕು ಹಾಕಿಕೊಂಡು ಚಿಂತೆಯಲ್ಲಿ ಮುಳುಗಿದರು. ಈ ಶುಭವಾರ್ಶೆಯು ಕಾರಭಾರಿಯ ಕಿವಿಗಳಿಗೆ ಬಿದ್ದಕೂಡಲೇ ಅವ ನಿಗೆ ನವಯವ್ವನ ಇನ್ನೊಮ್ಮೆ ಬಂದಂತಾಗಿ ಉಚ್ಬೇರಿದನು. ಅತಿಸುಲಭ ವಾಗಿ ಜಯಸಿರಿಯು ತಮಗೆ ಮೈದೋರಿದಳೆಂದು ಹಿಗ್ಗಿದ ಭೀಮಾಜಿಯು ಅಂದು ಸಾಯಂಕಾಲ ವಾಗ್ದೇವಿಯ ಒಟ್ಟಿನಲ್ಲಿ ಶಾಬಯ್ಯನನ್ನು ಕಂಡನು. ವಾಗ್ದೇವಿಯು ಹರುಷಾಶ್ರುಗಳನ್ನು ಸುರಿಸಿದಳು. ಮಂದಸ್ಮಿತವದನದಿಂದ ಜಯಮದೋನ್ಮತ್ತತೆಯನ್ನು ತಾಳಿದ ಕಾರಭಾರಿಯು ಬಂದಕಾರಣವೇ ನೆಂದು ವಿಚಾರಿಸಲಾಗಿ-“ತಮ್ಮ ದಯದಿಂದ ಇದುವರೆಗಿನ ಕೆಲಸವೆಲ್ಲಾ ಸುಧಾರಿಸಿಕೊಂಡಂತಾಯಿತು. ಆಶ್ರಮಕ್ಕೆ ನೆನದ ಲಗ್ಯಕ್ಕೆ ಇನ್ನು ದಿನತ್ರ ಯವೇ ಉಂಟು, ಈ ಮಂಗಲಕಾರ್ಯ ನಿರ್ವಿಘ್ನವಾಗಿ ನಡೆಯುವದಕ್ಕೆ ಶತ್ರುಬಾದೆಯಲ್ಲಡೆ ಇನ್ನೊಂದು ಅಡಚಣೆ ತಮ್ಮ ಪಾದದ ಆನುಗ್ರಹದಿಂದ ಇರದು. ಅಭಯಕೊಟ್ಟು ರಕ್ಷಣೆಯ ವಾಗ್ದಾನ ಪಾಲಿಸಿದ ಮಾತ್ರವೇ ಅದನ್ನು ನೆರವೇರಿಸುತ್ತೇನೆ. ಅಲ್ಲವಾದರೆ ಅದರಗೊಡವೆಯೇ ಬಿಟ್ಟು ಬಿಡು ವೆನು” ಎಂದು ವಾಗ್ದೇವಿಯು ಹೇಳಿಕೊಂಡಳು. ನಿರ್ಭಯವಾಗಿರಲಿಕ್ಕೂ ಸಂತಸದಿಂದ ಶುಭಕೆಲಸವನ್ನು ತೊಡಗಲಿಕ್ಕೂ ಅಭಯಕೊಡಲ್ಪಟ್ಟತು.
ಇನ್ಯಾಕೆ ಹಳವಳಿಸೋಣ! ವಾಗ್ದೇವಿಯು ಅತ್ಯಾನಂದದಿಂದ ಮಠಕ್ಕೆ ಮರಳಿ ಯತಿಯನ್ನು ಶೀಘ್ರ ಕಂಡು ಕಾರಭಾರಿಯು ಇತ್ತ ಅಭಯದಾನದ ಸುವಿಶೇಷವನ್ನು ಅರಿಕೆಮಾಡಿದಾಗ ಬೇಗ ಚಂಚಲನೇತ್ರರು ವೆಂಕಟಪತಿ ಆಚಾರ್ಯನನ್ನು ಕರೆಸಿ ಸೂರ್ಯನಾರಾಯಣನ ಆಶ್ರಮಕ್ಕೆ ಸೋಪಸ್ಕರ ಗಳನ್ನು ಜಾಗ್ರತೆಯಿಂದ ಒದಗಿಸಿಕೊಳ್ಳ ಬೇಕೆಂದರು. ಒಳ್ಳೇ ಅನುಭವಸ್ಥ ಮತ್ತು ಯುಕ್ತಿವಂತ ಪಾರುಪತ್ಯಗಾರನಾದ ಆ ಪುರುಷನು ಕ್ಷಿಪ್ರ ಸಕಲ ಸಾಹಿತ್ಯಗಳನ್ನು ಸವಣಿಸಿ ಮಾತಿನವಾಶಿ ಬಾರದಂತೆ ಮುಂಜಾಗ್ರತೆ ತಕ್ಕೊಂಡನು. ದಿಗಿಲುಹತ್ತಿ ಬಳಲುವ ಉಭಯಉಪಾಧ್ಯರು ಗರುಡಾಚಾರ್ಯ ಮತ್ತು ಅವನ ಸಂಗಡಿಗರಾದ ಅಪರಾಧಿಗಳು ರಾಮದಾಸರಾಯನ ದುರಾ ಲೋಚನೆಯಿಂದ ಏನಾದರೂ ಕಿತಾಪತಿ ಮಾಡುವರೆಂಬ ಭಯದಿಂದ ಕೊತ್ವಾಲನು ಒಂದು ಬಿನ್ನವತ್ತಳಿಕೆಯನ್ನು ಕಾರಭಾರಿಗೆ ಬರಕೊಂಡನು. ಅಪರಾಧಿಗಳನ್ನು ನಜರಬಂದಿಯಲ್ಲಿಡದೆ ಹೋದರೆ ಆಶ್ರಮಕ್ಕೆ ವಿಘ್ನಪಡಿಸುವ ಆಲೋಚನೆಯಿಂದ ಅವರು ನಡೆಸಬೇಕೆಂದು ಯೋಚಿಸಿರುವ ಕಲಾಪವು ತೊಡಗಿದರೆ ಭಾರಿಹೊಡೆದಾಟ ಉಂಟಾಗಿ ಜನರ ನೆಮ್ಮದಿಗೆ ಭಾಧಕ ಇರುವದೆಂಬದಾಗಿ ಅದರ ತಾತ್ಸರ್ಯವಾಗಿತ್ತು. ಆ ಬಿನ್ನಪವ ಶಾಬಯ್ಯಗೆ ತಲ್ಪು ತ್ತಲೇ ಕ್ಷಣತಡಿಯದೆ ಅಪರಾಧಿಗಳನ್ನು ಕರತರಿಸಿ, ಪ್ರತಿ ಒಬ್ಬನೂ ತಾರತ ಮ್ಯಾನುಸಾರವಾದ ಜಾಮೀನು ಕೊಡದೆ ಹೋದರೆ ಕಾರಾಗೃಹವಾಸ ಮಾಡಬೇಕಾಗುವದೆಂದು ಎಚ್ಚರಿಸಿದನು. ರಾಮದಾಸನು ಕುಗ್ಗಿಹೋದನು. ವೇದವ್ಯಾಸ ಗರುಡಾಚಾರ್ಯ ಮುಂತಾದವರು ಹರಿನಾಮನ್ಮರಣೆ ಮಾಡ ಲೆಸಗಿದರು. ನಿರ್ವಾಹವಿಲ್ಲದ ವಿಷಯದಲ್ಲಿ ಏನುಮಾಡಬಹುದು. ಯಾರ್ಯಾರ ಕಾಲುಹಿಡಿದು ಜಾಮೀನು ನಿಲ್ಲಿಸಿ ಬಂದ ಸಂಕಷ್ಟ ನಿನಾರಣೆ ಮಾಡಿ ಕೊಂಡರೂ ಆಶ್ರಮದ ದಿವಸ ಇವರಲ್ಲಿ ಒಬ್ಬನಾದರೂ ಮನೆಬಿಟ್ಟು ಬೀದಿಗೆ ಇಳಿಯಲಿಲ್ಲ.
ಸುಮೂಹೂರ್ತದಲ್ಲಿ ಆಶ್ರಮಕೊಡುವ ಮಹತ್ಕಾರ್ಯ ಉಪಕ್ರಮಿ ಸೋಣಾಯಿತು. ನೋಟಕರ ಸಂದಣಿಯು ಹೆಚ್ಚಿತು. ದೊಡ್ಡ ಬ್ರಹ್ಮ ಸಭೆಯು ನೆರೆದಿತ್ತು. ವಿಧಿಗನುಸಾರವಾಗಿ ಸುಮೂಹೂರ್ತದಲ್ಲಿ ಶ್ರೀಪಾದಂ ಗಳು ಸೂರ್ಯನಾರಾಯಣ ಗೆ ಆಶ್ರಮಕೊಟ್ಟು ಯಥೋಚಿತ ಆಶೀರ್ವಚನ ಯುಕ್ತವಾಗಿ ಸುನೇತ್ರ ಭಾರತಿ ಎಂಬ ಅಭಿಧಾನವನ್ನು ಇಟ್ಟು ವಾಗ್ದೇವಿಯ ಮನ ಕುಮುದಚಂದ್ರರಾದರು. ತನ್ನ ಪೂರ್ವ ಸ್ಥಿತಿಗೆ ಪ್ರಕೃತದ ವೈಭವ ವನ್ನು ಹೋಲಿಸಿ ನೋಡುವಾಗ ಕೇವಲ ಬಡತನದಿಂದ ಮೂಲೆಗೆ ಸೇರಿದ ತನ್ನ ಮೇಲೆ ದೈವಾನುಗ್ರಹ ಉಂಟಾದ್ದು ಸುಕೃತವೆಂದು ಸಾನಂದದಿಂದ ವಾಗ್ದೇವಿಯು ವೆಂಕಟಪತಿ ಆಚಾರ್ಯನ ಕಾಲಿಗೆ ಬಿದ್ದು- “ಆಚಾರ್ಯರೇ! ನಿಮ್ಮ ದಯದಿಂದ ನನಗೆ ಈ ಸಂಭ್ರಮವು ದೊರತಿದ್ದಕ್ಕಾಗಿ ಕೃತಜ್ಞತೆ ಯುಳ್ಳವಳಾಗಿರುತ್ತೇನೆ? ಎಂದು ದೀನ ಭಾವದಿಂದ ಹೇಳಿ ಮೃದು ನುಡಿ ಯಿಂದ ಅವನ ಮನಸ್ಸನ್ನು ಆಕರ್ಷಿಸಿಕೊಂಡಳು. ಮಠದ ಸಂಪ್ರದಾಯ ಕೃನುಗುಣವಾಗಿ ಆವಾವ ರಾಜಸೇವಕರಿಗೂ ಗ್ರಾಮಾಧಿಕಾರಿ ಪುರಾಧಿಕಾರಿ ಗಳಿಗೂ ಸಂತಸಜ್ಜನರಿಗೂ ಅರದೇಶಿ ಪರದೇಶಿಗಳಿಗೂ ಯೋಗ್ಯತಾನುಸಾರ ವಾದ ಸಾಮ್ಯವು ಕೊಡೋಣಾಯಿತು. ಎಲ್ಲರ ಮನಸ್ಸಿಗೂ ತೃಪ್ತಿಯಾಯಿತು. ಭೀಮಾಜಿಗೂ ಶಾಬಯ್ಯಗೂ ಅತಿರೇಕ ಮನೋರಂಜಕ ಒಡವೆ ವಸ್ತುಗಳು ಊಟೋಪಚಾರಗಳು ಉಡುಗೊರೆ ಉಚಿತಗಳು ಪದ್ಧತಿಗನು ಸಾರವಾಗಿ ಕೊಡಲ್ಪಟ್ಟವು. ಅವರಿಬ್ಬರೂ ಸಂತುಷ್ಟರಾಗಿ ವಾಗ್ದೇವಿಯನ್ನು ಹೆಚ್ಚು ಶ್ಲಾಘನೆಮಾಡಿದರು. ತನು ಮನ ಧನದಿಂದಲೂ ಮರೆಹೋದ ಅಬಲೆಯೆನ್ನು ಕಡೆವರೆಗೂ ಬಿಟ್ಟುಹಾಕದೆ ತನ್ನ ಮಗನ ಅಭ್ಯುದೆಯನನ್ನು ಪಾಲಿಸಬೇಕಾಗಿ ಮಂಜುಳ ವಚನಗಳಿಂದ ವಾಗ್ದೇವಿಯು ಉಭಯತರಿಗೂ ಅಡ್ಡಬಿದ್ದಳು. ಶಾಬಯ್ಯನು ಅವಳನ್ನು ಕೈಗಳಿಂದ ಹಿಡಿದೆಬ್ಬಿಸಿ ತನ್ನ ಜೀವ ಇರುವ ಪರಿಯಂತರ ಮುಡಿದ ಹೂ ಬಾಡದು; ನಿರ್ಭೀತಳಾಗಿಕೆಂದು ಅವಳ ಬೆನ್ನಿನ ಮೇಲೆ ಕರಸ್ಪರ್ಶನ ಮಾಡಿದನು. ಬ್ರಹ್ಮಸಮೂಹಕ್ಕನಕ ಚಲೋ ಭೋಜನವಾಯಿತು. ಸೂರ್ಯನಾರಾಯಣನ ಆಶ್ರಮದ ಸಂಬಂಧ ವೇದ ವ್ಯಾಸ ಉಪಾಧ್ಯ ಮತ್ತು ಅವನ ಪಕ್ಷದವರಿಗಲ್ಲಡೆ ಇನ್ಯಾರಿಗೂ ಹೊಟ್ಟೆ ಕಿಚ್ಚು ಇರಲಿಲ್ಲ… ಸದ್ಗುಣವಂತನಾದ ಅವನು ಸರ್ವರ ಮನಸ್ಸನ್ನು ಉಂಟುಮಾಡಿಕೊಳ್ಳುವ ಸಮಾಧಾನಿಯೂ ಧರ್ಮಶೀಲನೂ ಆಗಿರುವದ ರಿಂದ ಅವನ ಮೇಲೆ ಬಹುಮಂದಿ ನಿರ್ವೈರಭಾವದಿಂದಿಗುವದು ಏನೂ ಅಶ್ಚರ್ಯವಲ್ಲ.
*****
ಮುಂದುವರೆಯುವುದು