ಓದಿ ಬೋಧಿಸಿ ಇದಿರಿಗೆ ಹೇಳವನ್ನಬರ ಚದುರತೆಯಲ್ಲವೆ
ತಾ ತನ್ನನರಿದಲ್ಲಿ
ಆ ಅರಿಕೆ ಇದಿರಿಗೆ ತೋರಿದಲ್ಲಿ
ಅದೆ ದೇವತ್ವವೆಂದನಂಬಿಗ ಚೌಡಯ್ಯ
[ಚದುರತೆ-ಚಾತುರ್ಯ]
ಅಂಬಿಗ ಚೌಡಯ್ಯನ ವಚನ. ಚಾತುರ್ಯ ಯಾವಾಗ ಬೇಕೆಂದರೆ ನಮಗೆ ಗೊತ್ತಿರುವುದನ್ನು ಇನ್ನೊಬ್ಬರಿಗೆ ತಿಳಿಸಿ ಹೇಳುವಾಗ. ಆದರೆ ನಮ್ಮನ್ನೇ ನಾವು ತಿಳಿಯಲು ಹೊರಟರೆ ಚಾತುರ್ಯದಿಂದ ಉಪಯೋಗವಿಲ್ಲ. ನಮ್ಮೊಳಗಿರುವ ಅರಿವು ನಮಗೇ ಕಾಣುವಂತಾದಾಗ ಅದು ದೈವತ್ವ ಅನ್ನಿಸಿಕೊಳ್ಳುತ್ತದೆ.
ಈಗಿನ ನಾಲೆಜ್ ಇಂಡಸ್ಟ್ರಿ ಚಾತುರ್ಯಕ್ಕಷ್ಟೇ ಗಮನ ಕೊಡುತ್ತದೆ ಅನ್ನಿಸುವುದಿಲ್ಲವೇ? ಗೊತ್ತಿರುವುದನ್ನು ಹೇಳುವ, ಹೇಳಿ ದುಡ್ಡು ಮಾಡಿಕೊಳ್ಳುವ ಚಾತುರ್ಯ ಇರಲಿ, ಅದರೊಡನೆ ನಮ್ಮ ಒಳಗನ್ನು ನಾವು ಅರಿಯುವ ಜ್ಞಾನಕ್ಕೂ ಬೆಲೆ ಕೊಡಬೇಕಲ್ಲವೆ?
*****