ಮನುಷ್ಯ ಅಂದ ಮೇಲೆ ಕೈಕಾಲು ನೋವು, ಹೊಟ್ಟೆನೋವು, ಹೃದಯದ ಬೇನೆ, ಪಾರ್ಶ್ಯುವಾಯು ಕಣ್ಣಿನ ದೋಶ, ರಕ್ತದ ಹೆಚ್ಟು ಒತ್ತಡ ಹೀಗೆ ಏನೇನೋ ಕಾಯಿಲೆಗಳು ಬರುತ್ತವೆ. ಇವೆಲ್ಲವುಗಳಿಗೂ ಬೇರೆ ಬೇರೆ ಔಷಧಿ ಪಡೆದು ಸೇವಿಸುವುದು ಕಷ್ಟ. ಜತೆಗೆ ಇವೆಲ್ಲಕ್ಕೂ ಹಣವ್ಯಯವೂ ಹೆಚ್ಚು. ಅದರಲ್ಲೂ ಬಡವರಿಗೆ ಇಂಥಹ ರೋಗಗಳು ಕಾಣಿಸಿಕೊಂಡರೆ ಇನ್ನು ಕಷ್ಟ. ಆದರೆ ಇವೆಲ್ಲವುಗಳನ್ನು ಗುಣಪಡಿಸುವ ಏಕೈಕ ಮಾತ್ರೆ ಒಂದು ಇದೆ ಎಂದರೆ ನಂಬುವಿರಾ? ಅಂಥಹ ಔಷಧಿಯೇ ಆಸ್ಟರಿನ್. ಇದನ್ನು ಸೇವಿಸಿದರೆ ಹೃದಯಾಘಾತವಾಗುವುದನ್ನು ಕಡಿಮೆ ಮಾಡುತ್ತದೆ ಪಾರ್‍ಶ್ವವಾಯುರೋಗ ನಿವಾರಣೆಯಾಗುತ್ತದೆ. ಗರ್ಭಪಾತವನ್ನು ತಡೆಗಟ್ಟುತ್ತದೆ. ಕಣ್ಣಿಗೆ ಪರೆ ಬರುವುದನ್ನು ನಿಲ್ಲಿಸುತ್ತದೆ. ರಕ್ತದ ಒತ್ತಡವನ್ನು ಸಮಗೊಳಿಸುತ್ತದೆ. ಜ್ವರ, ನೆಗಡಿ, ನೋವುಗಳನ್ನು ಉಪಶಮನ ಮಾಡುತ್ತದೆ! ಇದು ಬಹುರೋಗಿ ನಿವಾರಣಾ ರಾಮಬಾಣವಾಗಿದೆ. ಈ ಸಿದ್ಧೌಷಧವು ೧೮೦೦ ಅಂತ್ಯದಲ್ಲಿ ಕಂಡು ಹಿಡಿಯಲ್ಪಟ್ಟಿತು. 325 M.G.ಯ ಇದರ ಮಾತ್ರೆಯನ್ನು ದಿನಂಪ್ರತಿ ಜಗತ್ತಿನಾದ್ಯಂತ ಲಕ್ಷಾಂತರ ಜನಸೇವಿಸುತ್ತಾರೆ. ಮಾನವ ಶರೀರದಲ್ಲಿ ತಯಾರಾಗುವ ಇಂಟರ್‌ಲ್ಯೂಕೆನ್-2, ಮತ್ತು ಇಂಟರ್‌ಪೆರಾನ್, ಎಂಬ ರೋಗ ನಿರೋಧಕಗಳನ್ನು ಶರೀರ ತೀವ್ರವಾಗಿ ಉತ್ಪತ್ತಿ ಮಾಡುವುದಕ್ಕೆ ಆಸ್ಟಿರಿನ್ ಸರಿಪಡಿಸುತ್ತದೆ ಎಂದು ಇತ್ತೀಚೆಗೆ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.
ಆದರೆ ಕೆಲವರಿಗೆ ಆಸ್ಟಿರಿನ್ ತೆಗೆದುಕೊಂಡಾಗ ವಾಂತಿ, ಅಲರ್ಜಿ, ಎದೆಉರಿ ಉಂಟಾಗುತ್ತದೆ ಇದರಿಂದ ಅಂತರಿಕ ರಕ್ತಶ್ರಾವ ಮೂತ್ರಜನಾಂಗಕ್ಕೆ ಹಾನಿ ಉಂಟಾಗಬಹುದು. ಅಸ್ತಮಾ ಇರುವವರಿಗೆ ಇದರಿಂದ ತೊಂದರೆಯಾಗಬಹುದು. ಆದ್ದರಿಂದ ಈ ನೋವು ನಿವಾರಕ ಸಿದೌಷಧಿಯನ್ನು ವೈದ್ಯರನ್ನು ಕೇಳಿಯೇ ತೆಗೆದುಕೊಳ್ಳಬೇಕು.
*****