ಶ್ರಾವಣದ ಗುಬ್ಬಿ ಮಳೆಯ ನಡುವೆ
ಆಗಾಗ ಬೀಸುವ ತಂಗಾಳಿ, ಮಲ್ಲಿಗೆ
ಬಿಳಿ ನಕ್ಷತ್ರಗಳಂತೆ ಬಳ್ಳಿ ತುಂಬ ಹರಡಿ
ಓಲಾಡಿದೆ, ಒಳಗೆ ಪುಟ್ಟ ಗೌರಿ ಅಲಂಕಾರವಾಗಿ
ಕುಳಿತಿದ್ದಾಳೆ. ಅಮ್ಮನ ಕೈಗಳಿಗೆ ಹೊಸ ಚಿಕ್ಕೀ
ಬಳೆ ಕಳೆ ಕೊಟ್ಟಿದೆ. ಅವನ ನೆನಪಲಿ ಅವಳ
ಅರಸಿಕ ಕುಂಕುಮ ಏರಿಸಿಕೊಂಡಿದ್ದಾಳೆ.
ಹಸಿರು ಬಸಿರು ಒಡಲು ತುಂಬ ಸಿರಿಗೌರಿಯ
ಅಂದ ಚಂದ, ಭಾರವಾದ ಒಡಲು ಹೊತ್ತ
ಪ್ರಥಾ, ಜಡೆಯ ತುಂಬ ಹೂಗಳು ಅರಳಿ
ಬಸುರಿ ಬಯಕೆ ಜಗದೊಳು, ನದಿ ಹರಿದ
ಬಯಲ ತುಂಬ ಆರತಿ ಆಚರಣೆಗಳು
ಅವನ ಪ್ರೇಮ ಅವಳ ಒಡಲ ತುಂಬಿದೆ.
ಆನಂದದ ಹರವು ಉಕ್ಕಿ, ಒಳಗೊಳಗೆ
ಚಿಗುರಿ ಚಿಮ್ಮುವ ಹಸಿರು ಜೀವ ಜಲ,
ಒಲಿದ ಮನಸ್ಸುಗಳ ಸಮ್ಮೋಹನ ನೆಲ,
ಬಾನು ಹಾಡಿದ ಅಮೃತರಾಗ, ಎದೆ ತುಂಬ
ಹಾಲು ಸ್ಪುರಿಸುವ ಭಾವ ಒಡಲೊಳು,
ಬೆಳಕಿನ ಅಕ್ಕರೆಯ ಪ್ರೀತಿಯ ರೂಪವತಿ ಕವಿತಾ.
ನಾದ-ನೀನಾದ ಶಬ್ದರೂಪಗಳ ರೂಪಂಗಳ
ಬರೆದ ಒಡಲು ತುಂಬದ ಹಸಿರು, ಮಥಿಸಿ
ಒಲವಾದ ಬದುಕು, ಅರಳಿದ ಶ್ರಾವಣದ
ಸಂಜೆ, ಸಂತಳಾದ ಕವಿತಾ ಬೆಳಕ ಹಿಡಿದಳು.
*****