ಮಗುವೆ, ನಿನ್ನಯ ಮೈಗೆ ಗುರಿ ಇಟ್ಟು ಹೊಡೆವಾ
ಬಗೆ ಬಗೆಯ ಬೇಡರಿಂದಲಿ ದೂರವಾಗು.
ಹೊತ್ತನ್ನು ತಿಂಬ ಸೋಮಾರಿತನ ಬೇಡ!
ಮತ್ತು ಹಿಡಿಸುತ ಮೈ ಕೊಲುವ ಕಳ್ಳು ಬೇಡ!
ಕತ್ತು ಕೊಯ್ಕರ ಕೂಡೆ ನಂಟುಬೇಡತನ!
ಉತ್ತಮೋತ್ತಮರಲ್ಲಿ ನಿನ್ನ ಹಗೆ ಬೇಡ!
ಎತ್ತಿದ್ದ ಸಾಲವನು ಕೊಡದ ಮನ ಬೇಡ!
ವಿತ್ತ ವಸ್ತುವ ನುಂಗುವಾ ಮೋಸ ಬೇಡ!
ಚಿತ್ತವನು ಕೆಡಿಪ ಹೊಟ್ಟೆಯ ಕಿಚ್ಚು ಬೇಡ!
ಮತ್ತೆ ಪಾಪದ ತರುವ ಕೆಡುಗೆಲಸ ಬೇಡ!
*****
(ಕವಿಶಿಷ್ಯ)