ಕರ್ನಾಟಕ ನಮ್ಮದು, ಆದರೆ
ಕಾವೇರಿ ನಮ್ಮದಲ್ಲ ಎನ್ನುವ
ಮನೋ ಭಾವ ಕೆಲವರದ್ದು
ಮನದಿಂದ ಕಿತ್ತೊಗೆದು ಒಂದಾಗಬೇಕು
ಕನ್ನಡಿಗರು ಮೊದಲು ಇದನ್ನು
ಕಾವೇರಿಯಾದರೇನು? ಕೃಷ್ಣೆ, ತುಂಗ
ಭದ್ರ, ಮಹದಾಯಿ ಆದರೇನು?
ರಾಜ್ಯದ ವಿಚಾರ ಬಂದಾಗ ಕನ್ನಡಿಗರೆಲ್ಲ
ಒಂದೇ ಎನ್ನುವ ಮನೋ ಭಾವ ಇರಲಿ
ಮನೆಯೊಳಗೆ ಕಲಹಕೆ
ಸಹೋದರರೇ ದಾಯಾದಿಗಳಂತೆ
ನೆರೆಮನೆಗಳ ಕಲಹದಲಿ
ದಾಯಾದಿಗಳೇ ಒಂದಾಗುವರು
ಓಣಿಯ ಅಥವಾ ಕೇರಿಗಳ ಕಲಹದಲಿ
ಮನೆ-ಮನೆಗಳು ಕಲಹ ಮರೆತು
ಒಂದಾಗಿ ಓಣಿಯೇ ಸೇರಿ ಒಂದಾಗಿ ನಿಲ್ಲುವುವು
ಅದೇ ರೀತಿಯಲ್ಲಿ ನಾವು ಕೂಡ
ರಾಜ್ಯದ ಸಮಸ್ಯೆಗೆ ರಾಜ್ಯವೇ ಒಂದಾಗಿ
ದೇಶದ ಸಮಸ್ಯೆಗೆ ರಾಜ್ಯಗಳೆಲ್ಲಾ ಒಂದಾಗಿ
ಸಮಸ್ಯೆಯನ್ನು ಎದುರಿಸುವ ಮನೋಭಾವ
ಬೆಳೆಸಿಕೊಂಡಾಗಲೇ ಮಾತ್ರ ನಾವು
ನಡೆಸಬಹುದು ನೆಮ್ಮದಿಯ ಜೀವನ
*****