ಈ ನೋವು
ಸಪಾಟು ಬಯಲಿನಲಿ
ತಣ್ಣಗೆ ಹರಿವ ನದಿಯಲ್ಲ
ಸೂಜಿ ಕಣ್ಣಿನಲಿ ಬಳುಕುತ್ತಾ
ಮೈಕೈ ನೆಗ್ಗಿಸಿ ಹಾದು
ತೊಟ್ಟು ತೊಟ್ಟಾಗಿ ಆವರಿಸುತ್ತದೆ
ಮಳೆ ನೀರು ಹನಿಹನಿಯಾಗಿ
ಭೂಮಿಯಾಳಕ್ಕೆ ಇಳಿಯುತ್ತಾ
ಒಳಗನ್ನೇ ಆವರಿಸಿದಂತೆ ಈ ತೇವ
ಕೊನೆಗೀಗ ನೋವೆಂದರೆ…….
ಒಣಗಿದ ಮೇಲ್ಮೈ ತುಟಿಗೆ
ತನ್ನ ಹಸಿ ಹಸಿ ಜೀವದ್ರವ್ಯ ಸೋಕಿಸಿ
ನೋಯಿಸುವ ನೋವನೇ
ಆಲಂಗಿಸಿ ತುಂಬಿಕೊಳುತಾ
ಜೀವಂತವಾಗಿಡುವ ಸಖ.
*****