ಕೆಂಬಾವುಟದಡಿಯಲ್ಲಿ…

ಕನಸುಗಳು ಕರೆದಾವೊ ಮನಸುಗಳು ಬೆರೆತಾವೊ
ಕೆಂಬಾವುಟದಡಿಯಲ್ಲಿ ಹೊಸ ಹಾಡು ಕೇಳಿದವೊ ||

ಕತ್ತಲಲಿ ಕರಗಿದ ಸೂರ್‍ಯ ಇನ್ನು ಕರಗೋದಿಲ್ಲವಣ್ಣ
ಕಣ್ಣೀರಲಿ ತೊಳೆದ ಬದುಕು ಇನ್ನು ಮುಂದೆ ಬೇರೆಯಣ್ಣ
ಇನ್ನು ಯಾಕ ಒಳಗ ಕುಂತಿ ಎದ್ದು ಹೊರಗೆ ಬಾರಣ್ಣ…
ನನಗೆ ನಿನಗೆ ಬೇರೆಯಲ್ಲ ಕೆಂಪು ಸೂರ್‍ಯ ನಮ್ಮ ಅಣ್ಣ

ಜಾರುತಿರುವ ದಾರಿಯಲ್ಲಿ ಜಾರೆಯಾದ ಜಾಗತಿಕರಣ
ಕೇಳಿ ಬಂದ ನಮ್ಮ ದನಿಗೆ ಕೊರಗುತಿದೆ ಕೇಸರಿಕರಣ
ಇನ್ನು ನಮ್ಮ ಹೆಜ್ಜೆ ಗೆಜ್ಜೆ ಭೂಮಿಽ ಆಕಾಶದ ತುಂಬ…
ಮೂಡುತಿರುವ ಹೊಸ ಚರಿತೆಯಲಿ ಇರುಳಿನಲೂ ಸೂರ್ಯಬಿಂಬ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾನು-ನೀನು
Next post ಒಳಕಲ್ಲ ಪೂಜೀ ಹಾಡು

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…