ಸುವ್ವಿ ಸುವ್ವ ಲಾಲೀ ಹಾಡೆ ತಂಗಾಳಿ
ಸುವ್ವಿ ಸುವ್ವ ಲಾಲೀ ಹಾಡಿ ತಂಪಾಗಿಸಿ
ನನ್ನ ಮನಸನು ಓಲಾಡಿಸು ತಂಗಾಳಿ
ನಿನ್ನ ಬಯಸಿ ಬಯಕೆಗಳ
ಚಿಗುರಲಿ ಹೊಸ ಗೀತೆಯ
ಬರೆದು ವಸಂತನ ಕರೆದು
ನನ್ನ ಮನಸನು ತೂಗಿಸು ತಂಗಾಳಿ
ಆ ಮರದ ಹೂವು ಈ ಮರದ
ಹೂ ಗೊಂಚಲು ನನ್ನ ಮುಡಿಯೇರಿ
ನಗುತಾದ ಮಲ್ಲಿಗೆ ಹಾಸಿಗೆ
ಜಾಜಿ ಸುಪ್ಪತ್ತಿಗೆ ಏರಿ ದಿಬ್ಬಣ ಹೊರಟಾವು ತಂಗಾಳಿ
ನಿನ್ನ ರಾಗದೊಳಗೆ ಔತಣಕೂಟ
ಹೂ ಕಾಯಿ ಪಲ್ಯೆ ಹೂರಣ
ಭರಪೂರ ಭೋಜನ ಲಗ್ನದಾಗ
ವಧುವರರು ಸಪ್ತಪದಿಯ ತುಳಿದಾರು ತಂಗಾಳಿ
ನಾನು ಹಾಡಿ ನಲಿವಾಕೀ ತಂಗಾಳಿ
ನಿನ್ನ ರಾಗದೆ ತಾಳವ ಮೇಳವ
ಕೂಡಿಸಿ ಒಲಿಸಿ ಹೊಳ ಬಾಳಿಗೆ
ಓಕಳಿ ಆಡಿಸಿ ಮದು ಮಕ್ಕಳ
ಸಿಂಗಾರ ಬಂಗಾರ ಕೊಡುತೀನಿ ತಂಗಾಳಿ
ಸುವ್ವಿ ಸುವ್ವ ಲಾಲೀ ಹಾಡೆ ತಂಗಾಳಿ
ನನ್ನಲ್ಲಿ ನೀನು ಬೆಸೆದು
ಹೊಸ ಕಾವ್ಯಕೆ ಮುನ್ನುಡಿ ಬರೆದು
ನನ್ನ ಮನಸನು ಮುದಗೊಳಿಸು ತಂಗಾಳಿ
*****