ನಡುರಾತ್ರಿ ಪರಿಯಂತರ ನೇಮರಾಜ ಸೆಟ್ಟಿಯು ಮನೆಗೆ ಬಾರದೆ ಇರುವದರ ಕಾರಣವನ್ನು ತಿಳಿಯದೆ ದಿಗ್ಭ್ರಾಂತಿಯಿಂದ ಅವನ ಸತಿಸುತರು ನೌಕರ ಜನರು ಖೇದಪಟ್ಟು ಊರು ಇಡೀ ಅವನನ್ನು ಹುಡುಕಿದರು. ಎಲ್ಲಿ ನೋಡಿದರೂ ಅವನು ಸಿಕ್ಶಲಿಲ್ಲ. ಯಾರ ಹತ್ತಿರ ಕೇಳಿದರೂ ತಾನರಿಯೆ ಒಂಬ ಉತ್ತರ ಸಿಕ್ಕಿತಲ್ಲದೆ ಇಂಧಾ ಸ್ಥಳಕ್ಕೆ ಹೋಗುವದು ತಾನು ಕಂಡೆ ನೆಂದು ಒಬ್ಬನಾದರೂ ಹೇಳುವವನಿರಲಿಲ್ಲ. ಇದೇನು ಪರಮಾಶ್ಚರ್ಯ! ಮನೆಯಲ್ಲಿ ತಿಳಿಸದೆ ಪರ ಊರಿಗೆ ಅವನು ಎಂದಿಗೂ ಹೋಗತಕ್ಕವನಲ್ಲ. ಎಂಥಾ ಅಗತ್ಯ ಜಂಬರವಿದ್ದರೂ ಸಕಾಲದಲ್ಲಿ ಊಟಕ್ಕೆ ಮನೆಗೆ ಬಾರದೆ ಇರುವವನಲ್ಲ. ಘಾಸಿಯಾದನೋ ಎಂಬ ಅನುಮಾನ ಹೆಂಡತಿ ಮಕ್ಕಳ ಮನಸ್ಸಿಗೆ ಸಹಜವಾಗಿ ಹೊಕ್ಕು ಅವರನ್ನು ಬಹಳವಾಗಿ ಕಳವಳಗೊಳಿಸಿತು. ಮುಂಜಾನೆ ಪರಿಯಂತರ ಊರು ಇಡೀ. ಸಂಚಾರ ಮಾಡಿ ನೋಡಿದರೂ ಸಾವಕಾರನ ಇರುವಿಕೆಯ ಗೊತ್ತು ಹತ್ತದೆ ಹೋಯಿತು.
ನಡುಪ್ರಾಯದ ಸುಂದರ ಪುರುಷನಾಗಿ ವಧುನಿಕರವೆಂಬ ಸಮುದ್ರಕ್ಕೆ ಹಿಮಕರನಂತೆ ಶೋಭಿಸುತಿದ್ದ ಅವನು ಅಜಾಗ್ರತೆಯ ದ್ವಾರ ಎಲ್ಲಾದರೂ ಸಿಲುಕೆ ಬಿದ್ದನೋ ಅಥವಾ ದುರ್ವ್ಯಾಸಂಗದ ದೆಸೆಯಿಂದ ಉಂಟಾದ ಮಾತ್ಸ ರ್ಯಕ್ಕೆ ಬಲಿಯಾದನೋ ಎಂಬ ಶಂಕೆಯು ಕಾಲಗತಿಸುತ್ತಾ ಸ್ಥಿರವಾಯಿತು. ಕುದಪುರ ಮಠಕ್ಕೆ ಅವನು ವಿಶೇಷವಾಗಿ ಹೋಗುವದನ್ನು ಹಲವರು ಜನ ಜನಿತವಾಗಿ ನೋಡಿರುವರು. ಶೃಂಗಾರಿಯ ಹಾಗೂ ವಾಗ್ದೇವಿಯ ನಡ ತೆಯು ಲೋಕನಿಂದ್ಯವಾದ್ದೆಂದು ವಿಶಿಷ್ಟ ಜನರಿಗೂ ಗೊತ್ತಿರುವುದು. ಆ ಉಭಯ ಸ್ತ್ರೀಯರ ಪ್ರೇಮಿಯಾಗಿ ಸದಾಕಾಲ ಅವರ ಒಟ್ಟಿನಲ್ಲಿ ಸುಖ ವನ್ನು ಅನುಭವಿಸಿಕೊಂಡಿರುವನೆಂದು ಕೆಲವರು ಹೇಳುತ್ತಿರುವರು– “ಹಾಗಲ್ಲ, ಅವನು ಮಠಕ್ಕೆ ಹೆಚ್ಚುದ್ರವ್ಯವನ್ನು ಸಾಲವಾಗಿ ಕೊಟ್ಟರುವುದ ರಿಂದ ಅದನ್ನು ಬರಮಾಡಿಕೊಳ್ಳುವುದಕ್ಕೋಸ್ಟರ ವತ್ತಾಯ ಮಾಡಿದಾಗ ಮಾತಿಗೆ ಮಾತು ಬಂದುಹೋಯಿತು; ಚಂಚಲನೇತ್ರರಿಗೆ ಸಿಟ್ಟುಬಂದು ಅವರು ಕೊಟ್ಟ ಆಜ್ಞೆಯಂತೆ ಮಠದ ಚಾಕರನು ಅವನನ್ನು ಹೊಡೆದು ಕೊಂದುಹಾಕಿದನು” ಎಂದು ಬೇರೆ ಕೆಲವರು ಅಂದು ಕೊಂಡರು. ಯಾವ ಕಾರಣದಿಂದಾಗಲೀ ಯಾವವಿಧದಿಂದಲಾಗಲೀ ಅವನು ಮಠದಲ್ಲಿ ಅಥವಾ
ಮಠದವರ ಪ್ರೇರಣೆಯಿಂದ ಅವರ ಕಡೆ ಜನರಿಂದ ಹತವಾದನೆಂಬುದಕ್ಕೆ ಕೊಂಚವಾದರೂ ಅನುಮಾನವಿಲ್ಲವೆಂದು ಬಹು ಜನರು ಹೇಳುವವರಾ ದರು. ಅಂದು ಅವನು ಮಠಕ್ಕೆ ಹೋದದ್ದು ನೋಡಿದವರು ಕೂಡಾ ಕೇಳಲ್ಪ ಟ್ಟಾಗ ತಾವು ನೋಡಲಿಲ್ಲವೆಂದರು ಅವನ ನಂಬಿಗಸ್ತ ಚಾಕರರಲ್ಲಿಯೂ ನಿಜತ್ವ ಚೆನಾಗಿ ತಿಳಿದವರೂ ಎಷ್ಟು ಮಾತ್ರಕ್ಕೂ ಗುಟ್ಟು ಬಿಡುವಲ್ಲದೆ ಹೋದರು.
ನೇಮರಾಜನು ಕಾಣೆಯಾದನೆಂಬ ವರ್ತಮಾನ ಕೇಳಿದವರಾದ ಆತನ ಸ್ನೇಹಿತರು ಬಂಧುಬಾಂಧವರು ಸಾಲುಗಟ್ಟಿ ಮೃತನ ಮನೆಗೆ ಬಂದು ಅವನ ವಿಧವೆಯನ್ನೂ ಮಕ್ಕಳನ್ನೂ ದುಃಖೋಪಶಮನ ಮಾಡುವುದರಲ್ಲಿ ಬಿದ್ದರು. ಅವನು ಮರಣಪಟ್ಟನೆಂದು ಸರ್ವರ ಮನಸ್ಸಿಗೂ ನಿರ್ಧರವಾದ ಮೇಲೆ ಕಾಲಹರಣ ಮಾಡದೆ ಸರ್ಕಾರಕ್ಕೆ ತಿಳಸುವದಕ್ಕೂ ಮೃತನ ಭಂಡ ಸಾಲೆಯ ಕಾರ್ಖೂನ ಕಚ್ಚೆತಿಪ್ಸಯ್ಯ ಶಾನಭಾಗನು ಎತ್ತುಗಡೆ ಮಾಡಿದನು. ಪ್ರಥಮತ ವರದಿಯನ್ನು ತಿಳಿಯತಕ್ಕ ಅಧಿಕಾರಿಯು ಕೊತ್ವಾಲನಲ್ಲವೇ! ಭೀಮಾಜಿಯ ಬಳಿಗೆ ಕಾರ್ಖೂನನು ಬಂದು ನೇಮರಾಜಸೆಟ್ಟಿಯು ಕಾಣದಿ ರುವಿಕೆಯನ್ನು ಕುರಿತು ವರ್ತಮಾನ ಬರಹ ಮೂಲಪಡಿಸಿಕೊಟ್ಟನು. ಕೊತ್ವಾಲನು ಏನೂ ಅರಿಯದವನಂತೆ ಬೆರಗಾಗಿ ಯಾಕುಬಖಾನ ಮುಂತಾದ ಪರಿವಾರ ಸಂಘವನ್ನು ಸಂಗಡತಕ್ಕೊಂಡು ಪಟ್ಟಣದಲ್ಲೆಲ್ಲಾ ಪರಿಶೀಲನ ಮಾಡುವುದರಲ್ಲಿ ಕ್ಷಣ ಸುಸ್ತಿ ಮಾಡಲಿಲ್ಲ. ಪರಂತು ಅವನು ಕುಮದಪುರದ ಮಠದವರ ಮೇಲೆ ಅನುಮಾನಬೀಳುವ ಸಮಾಚಾರವನ್ನು ಕೇಳಿದರೂ ಕೇಳದವನಂತೆ ಸುಮ್ಮಗಿದ್ದು ಅಷ್ಟು ವಠಾರಕ್ಕೆ ಅವನು ಹೋಗಲೂ ಇಲ್ಲ. ತನ್ನ ಪೇದೆ ಒಬ್ಬನನ್ನಾದರೂ ಅಲ್ಲಿಗೆ ಕಳುಹಿಸಿಕೊಡಲೂ ಇಲ್ಲ. ಸ್ತ್ರೀ ಮೂಲಕದ ದ್ರೇಷದಿಂದ ಅವನ ಪ್ರಾಣವು ಕುಮುದಪುರದ ಮಠದಲ್ಲಿ ಹಾನಿಯಾಯಿತೆಂದು ಒಬ್ಬರಿಬ್ಬರು ಪ್ರಕಟವಾಗಿ ಆಡಿದರೂ ಮನ ಸ್ಸಿನಲ್ಲಿ ಹೆಚ್ಚು ಕ್ರೋಧ ಹುಟ್ಟಿದ ಭೀಮಾಜಿಯು ನಗೆಮುಖದಿಂದ –“ಆ ಹುಳಿ ರಗಳೆ ಅಂತಿರಲಿ, ನೇಮರಾಜನ ಹೆಂಡತಿಯು ದುಶ್ಶೀಲಳೆಂದು ಬಹು ಜನರು ಹೇಳುವರಷ್ಟೇ! ಅವಳ ದುರ್ನಡಶೆಯ ಸಂಬಂಧ ಮೃತನಿಗೆ ಅವಳ ಮೇಲೆ ಆದದ್ವೇಷದ ಹೇತುವಿನಿಂದ ಅವಳ ಸ್ನೇಹಿತರಿಂದ ಅವನು ಮರಣಪಟ್ಟ ನೆಂಬದೊಂದು ಪ್ರವಾದವು ಕೇಳಬರುವುದಿಲ್ಲವೇ?” ಎಂದು ಪ್ರಶ್ತೆಮಾಡಿದನು. ಅತಿ ತುಚ್ಛ ವಾದ ಈ ಮಾತು ಕಿವಿಗೆ ಬಿದ್ದಾಗಲೇ ಜಿನೇಶ್ವರನಾಮ ಸ್ಮರಣೆ ಯಿಂದ ಮೃತನ ನೆಂಟರು ಕಿವಿಯನ್ನು ಮುಚ್ಚಿಕೊಂಡರು. ಮತ್ತು ಕೊತ್ವಾ ಲನು ಮಠದ ಮೇಲಿನ ವಾತ್ಸಲ್ಯದಿಂದ ಖೂನಿಯನ್ನು ಅಡಗಿಸುವುದಕ್ಕೆ ಅಪರಾಧಿಗಳಿಗೆ ಸಂದರ್ಭವಾಗುವ ಹಾಗೆ ಸಮಯ ಕಳೆಯುವನೆಂಬ ಅನು ಅನುಮಾನದಿಂದ ಅವನ ಮುಖಾವಲೋಕನವೇ ಮಾಡದೆ ಒಡನೆ ಕಾರ ಭಾರಿಯನ್ನು ಕಂಡು ನೇಮರಾಜನು ಕಾಣೆಯಾದ ವಿಷಯವನ್ನೂ ಅದನ್ನು ಕುರಿತು ಕೊತ್ವಾಲನು ಸರಿಯಾದ ಶೋಧನೆ ಮಾಡಲಿಕ್ಕೆ ಮನಸ್ಸಿಲ್ಲದವ ನಾಗಿರುವನೆಂಬ ದೂರನ್ನೂ ಹೇಳಿದರು.
“ಕೊತ್ವಾಲನು ಹಾಗೆ ಪಡಪೋಶಿ ಮಾಡತಕ್ಕವನಲ್ಲ. ನೀವು ಅವನ ಮೇಲೆ ನಿಷ್ಕಾರಣವಾಗಿ ತೋಹಮಾತು ಹಾಕುವದು ನಿಮ್ಮ ದುಷ್ಟ ಸ್ವಭಾವದ ದೃಷ್ಟಾಂತವೆಂತಲೇ ತಿಳಿಯಬೇಕು. ಪರ್ವಾಇಲ್ಲ. ನಾಳೆ ನಾವು ಸ್ವತಃ ಅನ್ವೇಶಣ ಮಾಡುವೆವು. ಮುಂಚಿತವಾಗಿ ಕೊತ್ವಾಲನನ್ನು ಕರೆಸಿ ಅವನು ನಡೆಸಿದ ತನಿಖೆಯ ಸ್ವಭಾವವನ್ನು ತಿಳಕೊಳ್ಳ ಬೇಕಾಗಿದೆ. ಈಗ ನೀವು ಮನೆಗೆ ಹೋಗಿ ನಾಳೆ ಪ್ರಾತಃಕಾಲಕ್ಕೆ ನಮ್ಮ ಮುಂದಿ ಹಾಜರಾದರೆ ಅಪ್ಪಣೆ ಕೊಡುವೆವು” ಎಂದು ಕಾರಬಾರಿಯು ಉತ್ತರಕೊಟ್ಟನು. ಈ ಮಾತುಗಳು ಮೃತನ ನೆಂಟರಿಷ್ಟರಿಗೆ ಅಷ್ಟು ಕರ್ಣ ಮಧುರವಾಗದಿದ್ದರೂ ಅವನು ನಿಜ ವಾಗಿ ಮಠದವರ ವಕೀಲಿ ಮಾಡುವನೆಂದು ಮನಸ್ಸಿಗೆ ಖಚಿತವಾಗುವ ತನಕ ಅಷ್ಟು ದೊಡ್ಡ ಅಧಿಕಾರಿಯನ್ನು ದೂರುವುದು ನ್ಯಾಯವಾಗಿ ತೋರಲಿಲ್ಲ. ಅಪ್ಪಣೆಯಂತೆ ಮರುದಿನ ಅವರು ಕಾರಭಾರಿಯ ಕಚೇರಿ ಬಾಗಲಲ್ಲಿ ಅವನ ಸವಾರಿಯನ್ನು ನಿರೀಕ್ಷಿಸುತ್ತಾ ನಿಂತುಕೊಂಡರು. ಕಾರಬಾರಿಯು ಭೀಮಾಜಿ ಯನ್ನು ಕರೆಸಿ, ಹುಬ್ಬು ಗಂಟುಹಾಕಿಕೊಂಡು “ಏನಯ್ಯಾ ಕೊತ್ವಾಲರೇ! ಇಷ್ಟು ಭಾರಿ ಪ್ರಕರಣದಲ್ಲಿ ನೀವು ತುಸು ತಾತ್ಸರ್ಯವಾದರೂ ಕೊಡದೆ ಕೊಲೆಪಾತಕಿಗಳು ಪಾಪಕೃತೃದ ಪ್ರಮಾಣವನ್ನು ಅಡಗಿಸಿ ಬಿಡುವ ಹಾಗಿನ ಅನುಕೂಲ ಅವರಿಗೆ ಕೊಡಿಸುತ್ತಿರೇನು? ಇವು ನಮ್ಮ ಮೇಲಿನ ಅಧಿಕಾರಿ ಗಳ ಕಿವಿಗೆ ಬಿತ್ತೆಂದರೆ ಅವರು ರೇಗಿಬಿಟ್ಟು ನಿಮ್ಮನ್ನೂ ನಾವು ಸುಮ್ಮಗಿದ್ದು ಬಿಟ್ಟರೆ ನಮ್ಮನ್ನೂ ಛಾನಾ ಹಾನಿ ಮಾಡಿಬಿಡರೇ ಎಂದು ಟೊಳ್ಳು ಬೆದರಿಸು ವಿಕೆಯ ದ್ವಾರ ಕೇಳುವವರೆಲ್ಲರ ಕಿವಿಗೆ ಇಂಪಾಗುವಹಾಗಿನ ಮಾತುಗಳ ನ್ನಾಡಿದ ಮೇಲೆ ದೊಡ್ಡ ಸಿಟ್ಟಿನ ಭಾವವನ್ನು ತಾಳಿ ನಾವು ಸ್ವತಃ ಈ ವಿಷಯದಲ್ಲಿ ಶೋಧನೆ ಮಾಡುತ್ತೇವೆ; ನಮ್ಮ ಸಂಗಡ ಬನ್ನಿರಿ” ಎಂದು ಕೊತ್ವಾ ಲನಿಗೂ ಕಕ್ಕಿಗಾರರಿಗೂ ಅಜ್ಜಾಪಿಸಿದರು. ಅಪ್ಪಣೆಯಾದ ಹಾಗೆ ಅವರು ನಡೆದುಕೊಂಡರು.
ಮೊದಲು ಮೃತನ ಮನೆಗೆ ಸವಾರಿ ತೆರಳಿತು. ಅವನ ಮನೆಯಲ್ಲಿ ನಾಯ ಬೆಕ್ಕು ಮುಂತಾದ ಪ್ರಾಣಿಗಳನ್ನು ಮಾತ್ರ ಬಿಟ್ಟು ಮನುಷ್ಯ ರೂಪ ವುಳ್ಳ ಸರ್ವರಿಗೂ ಇಡೀ ದಿನ ಸಾವಿರಾರು ಪ್ರಶ್ನೆಗಳ ಮೂಲಕ ವಿಚಾರ ಣೆಯಾಯಿತು. ಅವನ್ನೆಲ್ಲಾ ಬರಕೊಳ್ಳಯ್ಯಾ ಎಂದು ಕಾರಭಾರಿಯ ಅಪ್ಪಣೆ ಯನ್ನು ಹೊಂದಿದ ಅವನ ಕಾರಕೂನನು ಸೀಸದ ಕಡ್ಡಿಯಿಂದ ಕಾಗದದ ಮೇಲೆ ಎಡೆಬಿಡದೆ ಗೀಚಿಹಾಕಿದನು. ಅವನ ಬರಹವು ಅವನಿಂದಲೇ ಓದ ಲಸಾಧ್ಯವಾದದ್ದು, ಮತ್ತೆ ಕಾರಭಾರಿಯು ಅದನ್ನು ಓದಬಲ್ಲನೇ? ಅದು ಕಾಕಲಿಪಿಯೋ ಬ್ರಹ್ಮಲಿಪಿಯೋ ಪರಮಾತ್ಮನೇ ಬಲ್ಬನೆಂದು ಹಲವರು ಹೇಳುತ್ತಾ ನಗಲಕ್ಕೆ ಅನುಕೂಲವಾಯಿತು. ಆ ಇಡೀ ದಿನ ಮೃತನ ಮನೆಯ ನಿವಾಸಿಕರ ಚಾಕರರ ಮತ್ತು ನೆರೆಕೆರೆಯವರ ವಿಚಾರಣೆಯು ನಡೆ ದರೂ ಅದು ಸಂಪೂರ್ಣವಾಗದೆ. ಮರುದಿನವೂ ಕೊಂಚ ಉಳಿಯಿತು. ಕಾರ್ಭಾರಿಯ ವಿಚಾರಣೆಯ ಹೊಸಪರಿಯನ್ನು ನೋಡಿ ಪುರನಾಸಿಗಳು ಅತಿ ವಿಸ್ಮಮಪಟ್ಟು–“ಇನ್ನು. ಊರಲ್ಲಿ ಪ್ರಾಣವನ್ನುಳಿಸಿಕೊಂಡಿರುವದು ಹ್ಯಾಗಪ್ಪಾ!” ಅಂದರು.
ಮೃತನ ಕಾಣದಿರುವಿಕೆಯ ಸುದ್ದಿಯು ಇಡೀ ಸಂಸ್ಥಾನದಲ್ಲಿ ಹಬ್ಬಿ ನೃಸಿಂಹಪುರಲ್ಲಿರುತಿದ್ದ ರಾಮದಾಸನಿಗೂ ತಿಳಿದು ಬಂತು. ವೇದವ್ಯಾಸ ನನ್ನು ಕಟ್ಟಿಕೊಂಡು ಆ ವಕೀಲನು ಕುಮುದಪುರಾಧೀಶ ಯತಿಗೇನಾದರೂ ಉಪದ್ರ ಕೊಡಬಹುದೊ? ನೋಡಿಬಿಡುವಾ ಎಂದು ಕೂಡಲೇ ಬಂದನು. ಕಾರ್ಭಾರಿಯೂ ಕೊತ್ವಾಲನೂ ಇಷ್ಟು ಭಾರಿ ಖೂನಿ ಮೊಕ ದ್ಹಮೆಯಲ್ಲಿ ಸ್ವಲ್ಪವಾದರೂ ತಾತ್ಪರ್ಯ ಕೊಡದೆ ದಿನ ಜಾಪ್ಯಮಾಡಿ ಖೂನಿ ಯನ್ನು ಮರೆಪಡಿಸುವುದಕ್ಕೆ ಸಾಕಷ್ಟು ಅನುಕೂಲವನ್ನು ಕೊಡುವ ಇಚ್ಛೆ ಯಲ್ಲಿರುವರೆಂದು ಜನಜನಿತವಾಗಿ ತಿಳಿಯುವ ಇಂಥಾ ಪ್ರಸಕ್ತಿಯಲ್ಲಿ ತಾನು ಪ್ರವೇಶಿಸಿದರೆ ಕ್ಳೆಗೆ ಎರಡು ಕಾಸು ತಗಲುವದಲ್ಲದೆ ಕಾರಭಾರಿಗೆ ಮೇಲು ಅಧಿಕಾರಿಗಳಿಂದ ಲತ್ತೆಗಳು ಬರಲಿಕ್ಕೂ ಸಾಕೆಂಬ ಧೈರ್ಯದಿಂದ ವೇದವ್ಯಾಸ ನನ್ನು ನೇಮರಾಜನ ಪತ್ನಿಯ ಕೂಡೆ ಮಾತನಾಡುವ ಉದ್ದಿಶ್ಯ ಕಳುಹಿಸಿ ಕೊಟ್ಟನು. ಅವಳು ತನ್ನ ಸಂಕಷ್ಟವನ್ನೂ ಸಂತಾನವನ್ನೂ ಉಪಾಧ್ಯಗೆ ತಿಳಿಸಿ ಸಹಾಯಹೀನಳಾದ ತನಗೆ ಕೊತ್ವಾಲನೂ ಕಾರ್ಭಾರಿಯೂ ಮಾಡುವ ಅನ್ಯಾಯದ ಸ್ಥಿತಿಯನ್ನು ವರ್ಣಿಸಿದಳು. ಒಬ್ಬ ಒಳ್ಳೇ ನ್ಯಾಯ ಶಾಲಿಯಾದ ವಕೀಲನನ್ನು ಕಟ್ಟಿಕೊಡಲೇ ಎಂದು ಉಪಾಧ್ಯನು ಕೇಳಿದನು. ಅಂಧಾದ್ದೊಂದು ಉಪಕಾರವನ್ನು ಮಾಡಿದರೆ ಸರ್ವದಾ ಕೃತಜ್ಞತೆಯುಳ್ಳವ ಳಾಗಿರುವೆನೆಂದು ಆವಳು ಉತ್ತರಕೊಟ್ಬಳು.
ಆ ಕ್ಷಣವೇ ವೇದವ್ಯಾಸನು ಓಡುತ್ತಾ ಬಂದು ರಾಮದಾಸರಾಯ ನನ್ನು ಮೃತನ ಮನೆಗೆ ಕರತಂದು ಅವನ ಪತಿಯ ಪರಿಚಯವನ್ನು ಮಾಡಿ ಸಿದನು. ಅವಳು ಇಂಧಾ ಘನ ವಕೀಲ ಸಿಕ್ಕಿದ್ದು ದೊಡ್ಡ ಅನುಕೂಲವೇ ಎಂದು ಸ್ವತ್ತ ಚಿತ್ತಳಾಗಿ ಪ್ರಾಸಂಗಿಕ ವರ್ತಮಾನವನ್ನೆಲ್ಲಾ ಕೂಲಂಕುಷ ವಾಗಿ ವಕೀಲಗೆ ತಿಳಿಸಿದಳು. ಅದಲ್ಲದೆ ಕೊತ್ವಾಲನೂ ಕಾರ್ಭಾರಿಯೂ ಆ ದಿನ ಪರಿಯಂತರ ನಡೆಸಿದ ಪರಿಶೋಧನೆಯ ವೃತ್ತಾಂತವನ್ನು ತನಗೆ ತಿಳಿ ದಿರುವ ಮಟ್ಟಿಗೆ ಹೇಳಿದಳು. ನಾಳೆ ಬೆಳೆಗ್ಗೆ ಬರುವೆನೆಂದು ರಾಮದಾಸನು ಹೊರಟುಹೋದನು. ಹಾಗೆಯೇ ಮರದಿನ ಪ್ರಾತಃಕಾಲ ಅವನು ಅಲ್ಲಿಗೆ ಹೋದ ಸಮಯ ಕಾರ್ಭಾರಿಯೂ ಕೊತ್ತಾಲನೂ ಬರುತ್ತಾ ದೂರದಿಂದ ಕೊತ್ತಾಲನು ರಾಮದಾಸನನ್ನು ಕಾರ್ಭಾರಿಗೆ ತರ್ಜನಿ ಬೆರಳಿನಿಂದ ತೋರಿ ಸಿದನು. ಕಾರ್ಭಾರಿಯ ಮುಖವು ಸಿಟ್ಟಿನಿಂದ ರಕ್ತವರ್ಣವಾಯಿತು. ಕಣ್ಣಿ ನಿಂದ ಸಿಟ್ಟಿನ ಕಿಡಿಗಳು ಉದುರಿದುವು. ಅವನ ಕ್ರೋಧವು ಅಸಂತೋಷವೂ ಏರುವಂತೆ ಕೊತ್ತಾಲನು ತನ್ನ ಕೈಲಾಗುವ ಮಟ್ಟಿಗೆ ಚಮತ್ತಾರದ ಚಾಡಿ ಮಾತುಗಳನ್ನು ಹದದಿಂದ ಆಡಿಬಿಟ್ಟನು. ಉಭಯ ಅಧಿಕಾರಸ್ಥರೂ ಸಮೀಪಿಸುವಾಗ ರಾಮದಾಸನು ಅವರಿಗೆ ಸಲಾಂ ಮಾಡಿ ಮೃತನ ಪತ್ನಿಯ ಕಡೆ ವಕೀಲನಾಗಿ ನೇಮಿಸಲ್ಪಟ್ಟಿದ್ದೇನೆಂದು ವಿಜ್ಞಾಪನೆ ಮಾಡಿದನು. ಕಾರ್ಭಾರಿಯ ಬಾಯಿಯಿಂದ ಒಂದು ಹುಂಕಾರ ಮಾತ್ರ ಹುಟ್ಟಿತು. ಕೊತ್ತಾಲನು ಮುಗುಳು ನಗೆಯಿಂದ ಸುಮ್ಮಗಿದ್ದನು.
ಕಾರ್ಭಾರಿಯು ಕೊಂಚ ಸಮಯ ಅತ್ತಿತ್ತ ನೋಡುತ್ತಾ ಅತಿ ಚಂಚಲ ಮನಸ್ಸಿನವನಂತೆ ಘಳಿಗೆಗೆ ಒಂದೊಂದು ವಿಧಮಾಡುತ್ತಾ ಗಪ್ಪನೆ ರಾಮದಾಸನನ್ನು ಸಮೀಪಕ್ಕೆ ಕರೆದು -“ನಿನ್ನ ಕಕ್ಷಿಗಾರಳ ಕಡೆಯಿಂದ ನೀನು ನಮಗೆ ಅರಿಕೆ ಮಾಡತಕ್ಕದ್ದೇನದೆಯೋ ಅದೆಲ್ಲಾ ಹೇಳಿಬಿಡು; ತಡವಾಗಬಾರದು” ಎಂದು ಕಟ್ಟಾಜ್ಞೆ ಮಾಡಿದನು.
ರಾಮದಾಸ–“ಪರಾಕೆ! ತನ್ನ ಪತಿಯು ಕುಮುದಪುರದ ಮಠದಲ್ಲಿ ಘೋರವಾದ ಕೊಲೆಪಾತಕ ಮೂಲ ಪ್ರಾಣಬಿಟ್ಟನೆಂದು ನನ್ನ ಕಕ್ಷಿಗಾರಳಿಗೆ ಉಂಟಾದ ಅನುಮಾನ ನಿವೃತ್ತಿಮಾಡುವುದಕ್ಕೋಸ್ಕರ ಆ ಸ್ಥಾನಕ್ಕೆ ಸವಾರಿ ಚಿತ್ತೈಸಿ ಶೋಧನವಾಗಬೇಕೆಂಬ ನನ್ನ ಬಿನ್ನಪ ಲಾಲಿಸಬೇಕು.?
ಕಾರ್ಭಾರಿ — “ಅಂಧಾ ಅನುಮಾನಕ್ಕೆ ನ್ಯಾಯವಾದ ಕಾರಣ ಗಳಿವೆಯೋ?”
ರಾಮದಾಸ–“ಓಹೋ! ಅನೇಕ ಕಾರಣಗಳಿವೆ.” ಕಾರ್ಭಾರಿ–“ವಿವರಿಸಿದರೆ ಆಲೋಚನೆ ಮಾಡೋಣ.”
ರಾಮದಾಸ–“ಅತಿ ಅವಶ್ಯವಾದರೆ ಕೆಲವು ಕಾರಣಗಳನ್ನು ವಿವರಿಸ ಬಹುದು. ಚಂಚಲನೇತ್ರರು ಆಗಾಗ್ಗೆ ಮೃತನಿಂದ ಹೆಚ್ಚು ದ್ರವ್ಯವನ್ನು ಸಾಲವಾಗಿ ತರಿಸಿಕೊಳ್ಳುವ ವಾಡಿಕೆಯಿತ್ತು. ಹಾಗೂ ವಾಗ್ದೇವಿಗೂ ಮೃತ ನಿಗೂ ಲೇವಾದೇವಿ ಇತ್ತು. ಬೇರೆ ಸಂಗತಿ ಹ್ಯಾಗೂ ಇರಲಿ.”
ಕಾರ್ಭಾರಿ–“ಹಾಗೆಂದರೇನು? ಗೂಡಾರ್ಥದ ಮಾತೇಕೆ? ಒದರಿ ಬಿಡಬಾರದೇ?”
ರಾಮದಾಸ–“ಲೋಕವೇ ಒದರುತ್ತದೆ. ನಾನು ಮತ್ತೆ ಪ್ರತ್ಯೇಕ ಒದರಬೇಕೆ?”
ಕಾರ್ಭಾರಿ–“ವೃರ್ಥವಾಗಿ ಹರಟಬೇಡ. ಸ್ಪಷ್ಟವಾದ ಮಾತುಗಳಿಂದ ನಿನ್ನ ಮನೋಭಾವವನ್ನು ತಿಳಿಸಿ ಬಿಡು.”
ರಾಮದಾಸ–“ಅಪ್ಪಣೆಯಾದ ಮೇಲೆ ಅರಿಕೆ ಮಾಡದೆ ನಿರ್ವಾಹ ಉಂಟೇನು? ವಾಗ್ದೇವಿಯೂ ಶೃಂಗಾರಿಯೂ ತಿಲೋತ್ತಮೆ ಮೇನಕೆಯರಂತೆ ಬಂಡೆಯಂತಿರುವ ತಪಸಿಗಳ ಹೃದಯವನ್ನು ಕೂಡ ಕಡೆಗಣ್ಣ ನೋಟವೆಂಬ ಬಾಣದಿಂದ ಭೇದಿಸಿಬಿಡುವ ಚಾಪಲ್ಯ ಉಳ್ಳವರೆಂದು ಸನ್ನಿಧಾನಕ್ಕೆ ಪೂರ್ಣ ನಾಗಿ ಪರಾಂಬರಿಕೆ ಇರಬಹುದು. ನೇಮರಾಜನ ಪಾಡೇನು? ಅವನು ವಿಷಯಲಂಪಟನೆಂದೇ ಹೆಸರು ಹೊಂದಿದ್ದನು.?
ಈ ಮಾತು ಕೇಳಿದೊಡನೆ ಕಾರ್ಭಾರಿಗೂ ಕೊತ್ವಾಲನಿಗೂ ಅಂಗುಷ್ಟ ದಿಂದ ನೆತ್ತಿಯವರೆಗೂ ಸಿಟ್ಟೇರಿ ಅವರ ತನು ಕಂಪಿಸಲಿಕ್ಕೆ ಪ್ರಾರಂಭವಾ ಯಿತು. ಅಪಸ್ಮಾರ ವ್ಯಾಧಿಗ್ರಸ್ತರಂತೆ ಅವರ ಅವಸ್ಥೆ ತೋಚಿತು. ಸಿಟ್ಟಿನ ಭರದಿಂದ ಅವರ ವಾಗ್ಫಲವೇ ಸ್ತಬ್ಧವಾಯಿತು. ಹಿಂದು ಮುಂದು ನೋಡಿ ಕೊಂಡಿದ್ದ ನೋಟಕರು ಬೆರಗಾದರು. ನಿಷ್ಪಕ್ಷಪಾತಿಗಳಾಗಿರಬೇಕಾದ ಉಭಯ ಅಧಿಕಾರಿಗಳು ವಕೀಲನು ಹೇಳಿದ ನ್ಯಾಯವಾದ ಮಾತಿಗೆ ಇಷ್ಟು ಘನ ಕೋಪವನ್ನು ತಾಳತಕ್ಕ ಅಗತ್ಯನೇನಿದೆ? ಈ ವೈಪರೀತ್ಯವು ಕಾಲದ ಮಹಿಮೆಯೇ ಸರಿ ಎಂದು ಅನೇಕರು ತಮ್ಮಷ್ಟಕ್ಕೆ ಅಂದು ಕೊಂಡರು. ಕೊಂಚ ಸಮಯ ಕಳೆದ ನಂತರ ಕಂಪನ ಕಡಿಮೆಯಾದರೂ ಸಿಟ್ಟಿನ ಕಾವು ತಣಿಯಲಿಲ್ಲ– “ಎಲೇ! ಚಂದ್ರನನ್ನು ನೋಡಿ ನಾಯಿ ಬೊಗಳುವಂತೆ ಪರಸ್ತ್ರೀಯರ ಗೌರವಕ್ಕೆ ಹಾನಿಯುಂಟಾಗುವ ಕುತ್ಸಿತ ಮಾತುಗಳನ್ನು ಲಜ್ಜಾ ಭಂಡನಂತೆ ಆಡುತ್ತೀಯಾ? ನಿನ್ನ ಕಕ್ಷಿಗಾರಳ ಮೋಜುಗಾರಿಕೆಯ ರಭಸದಿಂದ ಪತಿಯ ಪ್ರಾಣವನ್ನು ಹೋಗಲಾಡಿಸಿಕೊಂಡಳೆಂದು ಹೇಳವ ಲ್ಲೆಯಾ! ವಕೀಲನೆಂಬ ಹೆಸರು ತಾಳಿ ಕೊಂಡು ಪುಂಡಗಾರನಂತೆ ಗಳಹುವ ನಿನ್ನಂಥಾ ಕತ್ತೆಯನ್ನು ನಾನು ಇದುವರೆಗೂ ನೋಡಿರಲಿಲ್ಲ.” ಹೀಗೆಂದು ಕಾರ್ಭಾರಿಯು ನೊರೆ ಸೂಸುವ ತುಟಿಗಳ ಮಧ್ಯದಿಂದ ರಾಮದಾಸನನ್ನು ಜರದನು. ರಾಮದಾಸನು ತನ್ನ ಸಿಟ್ಟು ತಾಳಲಾರದೆ ಭೀಕರವದನನಾಗಿ ಪ್ರತ್ಯುತ್ತರ ಕೊಟ್ಟನು. ಹ್ಯಾಗೆಂದರೆ–
“ತಮ್ಮ ಮನಸ್ಸೆಂಬ ಆಕಾಶದಲ್ಲಿ ಚಂದ್ರನಂತೆ ಶೋಭಿಸುವ ವಾಗ್ದೇ ವಿಯನ್ನೂ ದ್ವಿತೀಯ ಚಂದ್ರನ ಹಾಗಿರುವ ಶೃಂಗಾರಿಯನ್ನೂ ನೋಡಿ ಬಗ ಳುವ ನಾಯಿಗೆ ನನ್ನನ್ನು ತಾವು ಹೋಲಿಸಿದರೂ ಇಂಥಾ ಚಂದ್ರ ಮೂರುತಿ ಗಳಿಗೆ ಸಾವಿರಕಟ್ಟಳೆಯಲ್ಲಿ ಕಸಬರಿಕೆಗಳನ್ನು ಕೈಯಲ್ಲಿ ಹಿಡಕೊಂಡು ಅಂಗಳ ವನ್ನು ಗುಡಿಸಿರೆಂದು ಹೇಳುವ ಯೋಗ್ಯತೆಯುಳ್ಳ ನನ್ನ ಕಕ್ಷಿಗಾರಳಾದ ಕುಲೀನ ಸ್ತ್ರೀಯ ಸದ್ಗುಣಗಳನ್ನು ಹೊಗಳುವದರ ಬದಲಾಗಿ ಅವಳೆಂದೂ ಮಾಡದ ಪಾಪಗಳನ್ನು ಅವಳ ಮೇಲೆ ಇಂಥಾ ಕಷ್ಟಕಾಲದಲ್ಲಿ ಆರೋಪಿಸಿ ಬಹಿರಂಗವಾಗಿ ಅವಳನ್ನು ದೂಷಿಸುವ ಪಾಪಿಯು ಯಾವ ಮೃಗಕ್ಕೆ ಎಣೆ ಯಾಗುತ್ತಾನೆಂದು ನಾನು ಹೇಳಲಿ! ಪತಿವ್ರತಾಶಿರೋಮಣಿಯಾದ ಈ ಸ್ತ್ರೀಯನ್ನು ಮೋಜಗಾರತಿಯೆಂದು ಗಳಹಲಿಕ್ಕೆ ಒಪ್ಪದ ವಕೀಲನಾದ ನಾನು ಕತ್ತೆಯೂ ಪುಂಡುಗಾರನೂ ಎಂಬ ಉಪನಾಮಗಳನ್ನು ಧರಿಸತಕ್ಕಂತವನಾ ದರೆ ಸಂತೆ ಸೂಳೆಯರಿಗಿಂತಲೂ ನಿಕೃಷ್ಟರೆನ್ಸಿಸಿಕೊಂಡು ಕಾಕುಪೋಕರರಿಂದ ರಚಿಸಲ್ಪಟ್ಟ ಭಂಡು ಹಾಡುಗಳಿಂದ ನಿಂದಿಸಲ್ಪಟ್ಟು ಕೃಷ್ಣವದನರಾಗಿ ತಲೆಯನ್ನು ಎತ್ತಲಾರದೆ ನಾಚಿಕೆಯಿಂದ ನಿಸ್ತೇಜರಾಗುವ ಸ್ತ್ರೀಯರನ್ನು ಚಂದ್ರ ನಿಗೆ ಹೋಲಿಸಿ ಅವರ ಗೌರವದ ಉನ್ನತಿಯನ್ನು ಅಳಿಯುವ ಮಹಾಪುರು ಷರಿಗೆ ಕತ್ತೆ ಮತ್ತು ನಾಯಿಯಂತೆ ಬಗಳುವ ನಾನು ಯಾವ ಹೆಸರಿನಿಂದ ಕರಿಯಬೇಕೆಂಬ ಜ್ಞಾನವುಳ್ಳವನಾಗಿರುವುದಿಲ್ಲ. ಸ್ಟಾಮೀ! ತಾವು ದೊಡ್ಡ ಆಧಿಕಾರಸ್ಥರು. ನಾನೊಬ್ಬ ಬಡವಕೀಲನಾಗಲೀ ಪುಂಡುಗಾರನಾಗಲೀ ತಮ್ಮ ಆಶ್ರಿತನಾಗಿ ಜೀವನವನ್ನು ನಡೆಸುವ ಇಚ್ಛೆಯಿಂದ ನನ್ನ ನ್ಯಾಯ ನಾದ ಉದ್ಯೋಗವನ್ನು ಸರಿಯಾಗಿ ನಡೆಸುವ ವೇಳೆ ಕಂಡಾಬಟ್ಟೆ ಆಡುವ ಅಧಿಕಾರಿಯ ಸಮ್ಮುಖದಲ್ಲಿ ಇರುವದು ಮಾನುಷರೂಪಿಯಾದ ನನ್ನ ಗೌರ ವಕ್ಕೆ ಅನುಚಿತವಾಗಿ ತೋಚುವದರಿಂದ ನನ್ನ ಕಕ್ಷಿಗಾರಳ ವಕಾಲತ್ತನ್ನು ಈಗಲೇ ರದ್ದು ಮಾಡಿ ಅವಳಿಗೆ ಮರಳಿ ಕೊಟ್ಟುಬಿಟ್ಟೆ; ಇಕೊಳಿ ಅಮ್ಮಾ” ಎಂದು ವಕಾಲತ್ತನ್ನು ಮೃತನ ಪತ್ನಿಗೆ ಕೊಟ್ಟು ಹಿಂದೆ ನೋಡದೆ ರಾಮ ದಾಸನು ಮುಂದರಿಸಿಬಿಟ್ಟನು.
ಆಗ ಮೆಲ್ಲನೆ ಅಡಿಇಡುತ್ತಾ ಭೀಮಾಜಿಯು ಶಾಬಯ್ಯನ ಸಮೀಪ ಬಂದು ಸ್ವಲ್ಪ ಹದ ಮೀರಿತಲ್ಲಾ ಎಂದು ಕಿವಿಯಲ್ಲಿ ಕುಸುಗುಟ್ಟಿದನು. ಶಾಬ ಯ್ಯನು ತನ್ನ ನಾಲಿಗೆಯು ಮುಂದರಿಸಿದ್ದನ್ನು ಕುರಿತು ಬಹಳ ಪಶ್ಚಾತ್ತಾಪ ಪಟ್ಟು–“ಅಯ್ಯಾ ಪ್ರಾಣಸಖನೇ! ಬೆಂಕಿ ಚೂರಿನಂತೆ ಹಾರುವ ಆ ಪೋರ ನನ್ನು ಹ್ಯಾಗಾದರೂ ಸಂಬಾಳಿಸಿ ಒಮ್ಮೆ ಇತ್ತ ಕರಕೊಂಡು ಬಾರಯ್ಯಾ. ಅವನಿನ್ನೆಂಧಾ ಪಿಕಲಾಟಿ ಮಾಡಿ ಬಿಡುತ್ತಾನೋ. ನಿನ್ನ ಬುದ್ಧಿವಂತಿಕೆ ಒಮ್ಮೆ ನೋಡಿಬಿಡೋಣ?” ಎಂದು ಭೀಮಾಜಿಗೆ ಹೇಳುತ್ತಲೇ ಅವನು ರಾಮದಾಸ ನನ್ನು ಹಿಂಬಾಲಿಸಿ–“ಅಯ್ಯಾ, ವಕೀಲರೇ ಹಾಗೆ ಗಬಕ್ಕನೆ ಸಿಟ್ಟಿನಿಂದ ಹೋಗಿಬಿಡುವುದು ನಿಮ್ಮ ವೃತ್ತಿಗೂ ವೃದ್ಧಿಗೂ ಬಾಧಕಕರದ್ದಲ್ಲವೇ? ಬನ್ನಿ ನಾನು ಮಧ್ಯಸ್ತನಾಗಿ ನಿಮ್ಮೊಳಗಿನ ವಿರೋಧವನ್ನು ವಿವೇಕದಿಂದ ತೀರಿಸಿ ನಿಮ್ಮಲ್ಲಿ ಮಿತ್ರತ್ವನನ್ನುಂಟುಮಾಡಿಬಿಡುತ್ತೇನೆ” ಎಂದು ಎಷ್ಟು ಹೇಳಿದರೂ ರಾಮದಾಸನು ಅವನ ಮುಖವನ್ನು ತಿರುಗಿ ನೋಡದೆ ಮಹಾ ಸಿಟ್ಟಿನಿಂದ ಭೂಮಿಯು ಅದುರುವಂತೆ ಕಾಲೆತ್ತಿ ಭರದಿಂದ ಅಡಿಯಿಡುತ್ತಾ ಮುಂದೆ ನಡೆದನು. ಭೀಮಾಜಿಯು ಹಿಂತಿರುಗಿದನು. “ರಾಯರೇ! ಮಂತ್ರವಾದಿಯ ಕೈಗೆ ಸಿಕ್ಕದ ದೈವವುಂಟೀ? ಇದನಕ ಕ್ಷುದ್ರ ದೇವತೆ! ಸಣ್ಣದೊಂದು ಮಂತ್ರದ ತುಂಡಿನಿಂದ ಕಟ್ಟಿ ಬಿಡಬಹುದು. ಭೀಮಾಜಿಯ ಮಾಟದ ಪ್ರತಾಪ ಮುಂದೆ ಕಂಡುಬರುವುದು. ಮನಸ್ಸಿನಲ್ಲಿ ಸಂಕೋಚಪಡತಕ್ಕ ಕೆಲಸವಿಲ್ಲ. ಆದದ್ದು ಆಗಿ ಹೋಯಿತು. ಮುಂದಿನ ಕೆಲಸ ನೋಡುವಾ” ಎಂದು ಕೊತ್ವಾ ಲನು ಕಾರ್ಭಾರಿಯನ್ನು ಕರಕೊಂಡು, “ಕುಮುದಪುರದ ಮಠದಲ್ಲಿ ಖೂನಿ ಆಗಿಯದೆ ಎಂಬ ಅನುಮಾನ ಆ ಹೆಂಗಸು ಹೇಳಿದ ಬಳಿಕ ನಾವು ಅಲ್ಲಿಗೆ ಹೋಗಿ ನೋಡದಿದ್ದರೆ ನಮ್ಮ ಮೇಲೆ ಅಪವಾದ ಬರಲಿಕ್ಕೆ ಆಸ್ಪದವಿದೆ? ಎಂದನು. “ಸರಿಯಾದ ಮಾತು; ಆಗಲಿ, ಆ ಠಾವಿಗೆ ಹೋಗಬೇಕೆಂದು ನಮ್ಮ ಮನಸ್ಸಿನಲ್ಲಿಯೂ ಸಂಕಲ್ಪವಿದೆ; ಬರ್ರಿ? ಎಂದು ಭೀಮಾಜಿಯನ್ನು ಸಂಗಡ ಕರಕೊಂಡು ಕಾರಭಾರಿಯು ಮತಾಭಿಮುಖನಾದನು.
*****
ಮುಂದುವರೆಯುವುದು