ವಾಗ್ದೇವಿ – ೪೪

ವಾಗ್ದೇವಿ – ೪೪

ಸೂರ್ಯ ನಾರಾಯಣನ ಅವಗುಣಕ್ಕೆ ದ್ವಿತೀಯಾಶ್ರಮವಾಯಿತೆಂಬ ದುರ್ವಾರ್ತೆಯು ತಲಪಿ, ಸ್ವಾಮಿಗಳೂ ವಾಗ್ದೇವಿಯೂ ಏಕಾಂತ ಗೃಹದಲ್ಲಿ ಅನುವಾದಿಸಿಕೊಂಡಿರುವ ವೇಳೆಯಲ್ಲಿ ನೇಮರಾಜಸೆಟ್ಟಿಯು ಶೃಂಗಾರಿಯ ಸಂಗಡ ಸಂಭಾಷಣೆ ನಡಿಸುತ್ತಿದ್ದನು. ಇದನ್ನು ಹ್ಯಾಗೋ ತಿಳಿದ ತಿಪ್ಪಾಶಾ ಸ್ತ್ರಿಯು ತಪ್ಪನೆ ಆ ಸ್ಥಳಕ್ಕೆ ಪ್ರವೇಶವಾಗಿ ಕಾಲರುದ್ರನಂತೆ ಕನಲಿ ಹಿಂದು ಮುಂದು ನೋಡದೆ ನೇಮರಾಜನ ಮೇಲೆ ಬಿದ್ದು ಅವನ ಗಂಟಲನ್ನು ಒತ್ತಿ ಅವನು ಬಿಡಿಸಿಕೊಳ್ಳು ವಷ್ಟರಲ್ಲಿ ಸಮಾಪವಿರುವ ತಾಂಬೂಲದ ಹರಿವಾಣ ದಲ್ಲಿ ಕೈಗೆ ಸಿಕ್ಕಿದ ಚೂರಿಯಿಂದ ಅವನ ಹೊಟ್ಟೆಗೆ ತಿವಿದುಬಿಟ್ಟನು. ಕರುಳು ಹೊರಗೆ ಬಂದು ನೇಮರಾಜಸೆಟ್ಟಿಯು ಪ್ರಾಣಬಿಟ್ಟನು. ಆವಾಗ ಶಾಸ್ತ್ರಿಗೆ ಕಂಪನವಾಗಲಿಕ್ಕೆ ಪ್ರಾರಂಭವಾಯಿತು. ಶೃಂಗಾರ೦ಯು ದೆವ್ವಬಡದವಳಂತೆ ಘಟ್ಟಿಯಾಗಿ ಒಮ್ಮೆ ಕೂಗಿಬಿಟ್ಟು ಸ್ಮೃತಿತಪ್ಪಿ ಬಿದ್ದಳು. ಆ ಕೂಗು ಕೇಳಿ ಏನೋ ಅಸಂಭವ ನಡಿಯಿತೆಂಬ ಅನುಮಾನದಿಂದ ಒಡನೆ ವಾಗ್ದೇವಿಯು ಬಂದಳು. ಕೊಲೆಪಾತಕವನ್ನು ನೋಡಿ ಅವಳ ಕಣ್ಣಗಳಿಗೆ ಕತ್ತಲೆ ಬಂದು “ಅಯ್ಯೋ, ತಿಪ್ಪಾ! ಜೀವಕ್ಕೆ ಮುನದಿಯಾ” ಎಂದು ತಟ್ಟನೆ ಶೃಂಗಾರಿಯ ಸಮಾಪ ಮೂರ್ಛೆ ಹೊಂದಿ ನೆಲಕ್ಕೆ ಉರುಳಿದಳು. “ವಾಗ್ದೇವಿಯು ತಿರುಗಿ ಬರಲಿಲ್ಲವ್ಯಾಕೆ? ಇದೇನು ದುರ್ದಿನ” ಎಂದು ಚಂಚಲನೇತ್ರರು ತಾವೇ ನೇಮ ರಾಜಸೆಟ್ಟಿಯು ಮೃತಹೊಂದಿದ ಕೋಣೆಯ ಬಾಗಲಿಗೆ ಬಂದು ನೋಡಿ ಸಂತಪ್ತರಾಗಿ “ಕೊಲೆಗಾರ ನೀನೇ?” ಎಂದು ಅಲ್ಲಿ ನಿಂತು ಕೊಂಡಿದ್ದ ತಿಪ್ಪಾ ಶಾಸ್ತ್ರಿಯನ್ನು ಕೇಳಿದರು. ಧೂರ್ತನಾದ ತಿಪ್ಪನ ಬಾಯಿಯಿಂದ ಪ್ರತ್ಯುತ್ತರ ಹೊರಡದೆ ಇರುವುದರಿಂದ ಮಿತಿಮಾರಿ ಕೋಪ ಹುಟ್ಟಿದ ಚಂಚಲನೇತ್ರರು ಅವನ ಎದೆಗೆ ಒಂದಾವರ್ತಿ ಒದ್ದುಬಿಟ್ಟು ಅವನ ಪ್ರಾಣವನ್ನು ತೆಗೆಯಲಿಕ್ಕೆ ಒಂದು ಆಯುಧವನ್ಮು ಹುಡುಕುತ್ತಾ ಇರುವ ಸಂಧಿಯಲ್ಲಿ’ ವಾಗ್ದೇವಿಯು ಚೇತರಿಸಿಕೊಂಡೆದ್ದು ಯತಿಗಳನ್ನು ಅಲ್ಲಿಂದ ಹಿಂದಕ್ಕೆ ಎಳಕೊಂಡು ಅವರ ಸಿಂಹಾಸನದ ಕೋಣೆಯಲ್ಲಿ ಕೂರಿಸಿ ಮರಳಿ ಕೊಲೆ ಪಾತಕದ ಗೃಹಕ್ಕೆ ಬಂದಳು.

ಶೃಂಗಾರಿಯನ್ನೂ ತಿಪ್ಪಾಶಾಸ್ತ್ರಿಯನ್ನೂ ಆ ಕೊಠಡಿಯಿಂದ ಹೊರಡಿಸಿ ಕದವನ್ನು ಘಟ್ಟಿಯಾಗಿ ಮುಚ್ಚಿ ಬಿಟ್ಟು ಚಂಚಲನೇತ್ರರ ಕಿವಿಯಲ್ಲಿ ವಾಗ್ದೇವಿಯು ಕುಸಕುಸುಗುಟ್ಟುತ್ತಿರುವ ಹೊತ್ತಿನಲ್ಲಿ ಭೀಮಾಜಿಯ ಸವಾರಿಯು ಬಂದಿರುವದೆಂದು ಹರಿಕಾರನೊಬ್ಬನಿಂದ ಗೊತ್ತಾಯಿತು. ವಾಗ್ದೇವಿಯೂ ಚಂಚಲನೇತ್ರರೂ ಒಟ್ಟಿನಲ್ಲಿ ಏಕಾಂತ ಕೋಣೆಗೆ ಪ್ರವೇಶಿಸಿ ಅಲ್ಲಿ ಭೀಮಾಜಿ ಯನ್ನು ಸನ್ಮಾನದಿಂದ ಕುಳ್ಳಿರಿಸಿದರು. ಅಶ್ರುಜಲಧಾರೆಗಳು ಪ್ರವಹಿಸುತ್ತಿ ರುವ ವಾಗ್ದೇವಿಯನ್ನೂ ಭೀತಿಯಿಂದ ಗಡಗಡನೆ ನಡುಗುವ ಚಂಚಲನೇತ್ರ ರನ್ನೂ ಕೊತ್ವಾಲನು ಈಕ್ಷಿಸಿ ಸೂರ್ಯನಾರಾಯಣನನ್ನು ಕುರಿತು ಅಂದು ಸಿಕ್ಕಿದ ಅಶುಭವಾರ್ತೆಯಿಂದ ಈ ಅವಸ್ಥೆಯು ಇವರಿಬ್ಬರಿಗಾಯಿತೆಂಬ ಸಂದೇ ಹದಿಂದ ಉಭಯತರಿಗೂ ಅವರ ಗಣ್ಯಮಾಡಬೇಡಿರೆಂದು ಸಮಾಧಾನ ಪಡಿಸುವ ಪ್ರಯತ್ನದಲ್ಲಿರುವಾಗ–“ಅದೆಲ್ಲಾ ಅಂತಿರಲಿ! ನಾವೀಗ ಗಲ್ಲಿಗೆ ಬೀಳುವ ಸಂಭವ ಒದಗಿಯದೆ, ಸ್ವಾಮೀ! ನಮ್ಮನ್ನು ರಕ್ಷಣೆ ಮಾಡುವವರು ತಾವಲ್ಲದಿನ್ಯಾರು? ನಮಗಿಡುತ್ತಿರೋ? ಈಗಲೇ ನಮ್ಮ ಪ್ರಾಣತ್ಯಾಗದ ಉಪಾಯ ನೋಡುವದಕ್ಕೆ ಅನುಜ್ಞೆಯಾಗುತ್ತೋ?” ಎಂದು ಕೇಳುತ್ತಾ ಅವಗೀರ್ವರೂ ಮರುಗಿದರು. “ಸ್ವಾಮಾ! ಯಾಕೆ ಶೋಕಮಾಡುತ್ತೀರಿ? ಏನು ಕಷ್ಟ ಬಂದದೆ? ಈಗಲೆ ಹೇಳಿ. ನಿವೃತ್ತಿಯ ಉಪಾಯ ಹೇಳುವೆನು? ಎಂದು ಕೊತ್ವಾಲನು ಚಂಚಲನೇತ್ರರಿಗೆ ಅತಿ ವಿನಯದಿಂದ ಭರವಸೆಯನ್ನು ಕೊಟ್ಟನು. ನಡೆದ ಕೃತ್ಯವನ್ನು ನಮ್ಮ ಬಾಯಿಯಿಂದ ಕೇಳುವದಕ್ಕಿಂತಲೂ ಕಣ್ಣಿನಿಂದ ನೋಡಿದರೆ ಸಕಲ ವೃತ್ತಾಂತವು ಮನಸ್ಸಿಗೆ ಹೋಗುವದೆಂದು ವಾಗ್ದೇವಿಯ ಸಮೇತ ಯತಿಗಳು ಕೊತ್ವಾಲನನ್ನು ಸಂಗಡ ಕರಕೊಂಡು ನೇಮರಾಜನ ಶವವು ಬಿದ್ದಿರುವ ಕೋಣೆಯ ಬಾಗಲನ್ನು ತೆರೆದು ತೋರಿಸಿ ದರು.

ಭೀಮಾಜಿಯು ಒಮ್ಮೆ ಮೈ ತೆಗೆದನು. ಕೋಣೆಯ ಹೊರಗೆ ಶೃಂಗಾ ರಿಯೂ ತಿಪ್ಪಾಶಾಸ್ತ್ರಿಯೂ ಬಾಗಿಲ ಇಕ್ಕೆಡೆಗಳಲ್ಲಿ ಬಾಗಲು ಕಾಪುಗೊಂಬೆ ಗಳಂತೆ ನಿಂತು ಕೊಂಡಿದ್ದರು. ಶೃಂಗಾರಿಯು ನಾಚಿಕೆಯಿಂದಲೂ ವ್ಯಸನ ದಿಂದಲೂ ತಲೆಯನ್ನು ಬಗ್ಗಿಸಿಕೊಂಡಿದ್ದಳು. ತಿಪ್ಪಾಶಾಸ್ತ್ರಿಯ ಮುಖದ ಮೇಲೆ ಕೊಲೆಪಾತಕದ ಭೀಕರ ಛಾಯವು ನೆಲೆಯಾಗಿತ್ತು. “ಈ ನಾಯಿ ಯನ್ನು ಅರೆನಿಮಿಷದಲ್ಲಿ ಗಲ್ಲಿಗೆ ತೂಗ ಹಾಕ ಬಹುದಿತ್ತು. ಪರಂತು ಮಠದ ಮೇಲೆ ಬರುವ ಅಧ್ವಾನವು ಸಣ್ಣದಾಗಿರಲಿಕ್ಕಿಲ್ಲ. ನಾನು ಇಂಥಾ ಸಂದು ಗಟ್ಟನಲ್ಲಿ ಈ ಸ್ಥಳಕ್ಕೆ ಬಂದದ್ದು ಪರಿಷ್ಕಾರವಾಗಿ ನನಗೆ ತೋರುವುದಿಲ್ಲ. ಕದವನ್ನು ಮುಚ್ಚಿಬಿಡಿ. ಸಿಂಹಾಸನದ ಕೋಣೆಗೆ ಹೋಗುವಾ” ಎಂದು ಭೀಮಾಜಿಯು ಹೇಳಿದನು. ಹಾಗೆ ಅನುವರ್ತಿಸೋಣಾಯಿತು. ಆ ಕೋಣೆ ಯಲ್ಲಿ ವಾಗ್ದೇವಿಯೂ ಚಂಚಲನೇತ್ರರೂ ಭೀಮಾಜಿಯೂ ಹೆಚ್ಚುಸಮಯದ ವಕೆಗೂ ಗುಪ್ತ ಸಂಭಾಷಣೆಮಾಡಿದರು. ಸುಸೂತ್ರವಾದ ಅನುಸಂಧಾನವನ್ನು ಭೀಮಾಜಿಯು ಸೂಚಿಸಲಿಕ್ಕೆ ಅನುಮಾನಪಡುತ್ತಾ ಕಾಲ ಕಳೆದನು. ಘೋರವಾದ ಪಾಪಕೃತ್ಯವು ಮಠದಲ್ಲಿ ನಡೆಯಿತಲ್ಲ! ಅಪರಾಧಿಗಳು ಯಾರಾ ದರೂ ಸರಿ. ಮಠದ ಕಲೆಗುಂದುವ ಸಂಭವ ಒದಗಿತು! ಶಾಬಯ್ಯನ ಕಿವಿಗೆ ಈ ದುರ್ವಾರ್ಶೆಯು ಬೀಳುತ್ತಲೇ ಅವನ ಮನಸ್ಸು ಮುರಿಯುವುದು. ಬೇಕಾದಷ್ಟು ದ್ರವ್ಯವನ್ನು ಮಠಮಾರಿಯಾದರೂ ವೆಚ್ಚಮಾಡಲಿಕ್ಕೆ ಸಿದ್ದ ವಿರುವದಾಗಿ ಚಂಚಲನೇತ್ರರು ಹೇಳಿಕೊಂಡರು. ತಾನಾಗಲೀ ಕಾರಭಾರಿ ಯಾಗಲೀ ಲಂಚಲವಣವನ್ನು ವಮನದಂತೆ ಎಣೆಸುವವರೆಂದು ಇದುವರೆ ಗೂ ನಡೆದ ವಿದ್ಯಮಾನಗಳಿಂದ ಪ್ರತ್ಯಕ್ಷವಾಗಲಿಲ್ಲವೇ? ಅಂಧ ಹೀನ ವಿಚಾ ರವನ್ನು ಬಿಟ್ಟುಬಿಡಬೇಕೆಂದು ಖಂಡಿತವಾಗಿ ಭೀಮಾಜಿಯು ನುಡಿದನು. ಅದು ತಾನು ಚೆನ್ನಾಗಿ ಅರಿತವಳು ಮುಖ್ಯ ಅನಾಥೆಯಾದ ತನನ್ನು ಕಡೇ ವರೆಗೆ ರಕ್ಷಿಸುವೆವೆಂದು ಉಭಯತರು ಕೊಟ್ಟ ಭಾಷೆಯು ಹುಸಿಯಾಗದೆಂಬ ಥೈರ್ಯದಲ್ಲಿರುತ್ತೇನೆ. ಪ್ರಕೃತ ಪಾಪಕೃತ್ಯದಲ್ಲಿ ತಾನೂ ಶ್ರೀಪಾದಂಗಳೂ ನಿರಾಪರಾಧಿಯಾದವರು. ಮಠದಲ್ಲಿ ನಡೆದುಹೋದ ಕೊಲೆಪಾತಕದ ಅರಿಷ್ಟ ಪರಿಹಾರವಾಗುವದಕ್ಕೆ ಎರಡು ಲಕ್ಷ್ಮ ರೂಪಾಯಿಗಳನ್ನು ಪ್ರಾಯಶ್ಚಿತ್ತ ರೂಪವಾಗಿ ಪುಣ್ಯಸಂಗ್ರಹಸಂಘದವರಿಗೆ ಒಪ್ಪಿಸಿ ಕೊಡುವೆನೆಂದು ವಾಗ್ದೇ ವಿಯು ಭೀಮಾಜಿಯ ಕಾಲುಗಳ ಮೇಲೆ ಬಿದ್ದು ಕಂಬನಿಗಳಿಂದ ಅವನ ಪಾದಗಳನ್ನು ತೊಳೆದಳು. ಭೀಮಾಜಿಯು ಉತ್ತರಕೊಡದೆ ಸುಮ್ಮಗಿರುವದು ಅನುಮಾನಕರವಾಗಿ ತೋರಿದ ಕಾರಣ ಚಂಚಲನೇತ್ರರು ತಾವೇ ಎದ್ದು ವಾಗ್ದೇವಿಯಂತೆ ನಡಕೊಳ್ಳುವದಕ್ಕೆ ಅನುವಾದರು. ಭೀಮಾಜಿಯು ಫಕ್ಕನೆ ನಿಂತು ಕೊಂಡು-“ಪರಾಕೆ! ನೆವನ ಮೂಲಕವಾದ ಉಪಚಾರದಿಂದ ಕಿಂಕ ರನಾದ ನನ್ನ ಆಯುಷ್ಯ ಕ್ಸೀಣವಾಗುವ ಗಂಡಾಂತರದಲ್ಲಿ ನನ್ನನ್ನು ಹಾಕ ಬಾರದು” ಎಂದು ಪ್ರಣಾಮಮಾಡಿ ಹೇಳಿಕೊಂಡನು. ಹಾಗೂ ಹೆದರಬಾರ ದಾಗಿ ಧ್ರೈರ್ಯ ಹೇಳಿದರು.

ಪುಣ್ಯಸಂಗ್ರಹ ಸಂಘಕ್ಕೆ ಎರಡು ಲಕ್ಷ್ಮ ರೂಪಾಯಿ ಕೊಡುವದಕ್ಕೆ ಅಗತ್ಯ ಬೀಳುವ ಸಾಧನೆಯು ತಾಮಸವಿಲ್ಲದೆ ನಡೆಯಲಿ ಶಾಬಯ್ಯನನ್ನು ಕಂಡು ಬರುವೆನೆಂದು ಕೊತ್ವಾಲನು ಕಾರ್ಭಾರಿಯ ಮನೆಗೆ ನಡೆದನು. ಭೀಮಾಜಿಯು ದುಮ್ಮಾನದ ಮುಖಭಾವವನ್ನು ತಾಳಿಕೊಂಡು ಶಾಬಯ್ಯ ನನ್ನು ಶೀಘ್ರ ಕಂಡು ಆ ದಿನ ತಾನು ತಂದಿರುವ ಸಮಾಚಾರವನ್ಕು ತಿಳಿಸಿ ದನು. ಇಂಧಾ ಪಾಪಕೃತ್ಯ ನಡೆದ ಆ ಮಠದ ಕಡೆಗೆ ತಲೇ ಹಾಕಿ ಮಲಗ ಬಾರದು; ಕೇವಲ ದುರಾಚಾರದ ವಾಯು ಸಂಚಾರದಿಂದ ಮಲೀನವಾದ ಆ ಗೃಹದೊಳಗೆ ಇನ್ನು ಯಾರೂ ಪ್ರವೇಶಿಸಬಾರದೆಂದು ಕಾರಭಾರಿಯು ಖಂಡಿತವಾಗಿ ಹೇಳಿದನು. ವಾಗ್ದೇವಿಯ ಸದ್ಗುಣಗಳನ್ನೂ ಅವಳಿಗೆ ಕೊಟ್ಟ ಭಾನೆಯನ್ನೂ ಅವಳು ಈ ಕೃತ್ಯದಲ್ಲಿ ರವಷ್ಟಾದರೂ ಸೇರದೆ ನಿರಾಪರಾಧಿ ಯಾಗಿರುತ್ತಾ ಅವಳ ಮೇಲೆ ಬಂದಿರುವ ಕಷ್ಟವನ್ನು ಆಲೋಚಿಸಿದರೆ ಶಾಬ ಯ್ಯನ ಮನಸ್ಸಿನ ಭಾವದಲ್ಲಿ ಮಾರ್ವಾಟ ಉಂಟಾಗಲಿಕ್ಕೆ ಸಾಕೆಂದು ತಾನು ತಿಳಕೊಳ್ಳುವದಾಗಿ ಭೀಮಾಜಿಯು ಉತ್ತರಕೊಟ್ಟನು. ಕೊಂಚ ಸಮಯ ದೊಡ್ಡ ಆಲೋಚನೆಯ ಸಾಗರದಲ್ಲಿ ಮುಳುಗಿ ಹೋದವನಂತೆ ಕಣ್ಣಿನ ಮತ್ತು ಮುಖದ ಆವಭಾವಗಳನ್ನು ಸ್ವಲ್ಪ ಪಲ್ಲಟ ಮಾಡಿದ ಬಳಿಕ– “ಭೀಮಾಜಿ, ನಿನ್ನ ಮಾತು ದೈವನುಡಿಯೆನ್ನಬೇಕಪ್ಪಾ. ಕೊಟ್ಟ ಭಾಷೆಗೆ ಭಂಗ ಬರಕೂಡದು. ಏನು ಹೇಳುತ್ತಿ ಕೇಳೋಣ? ಎಂದು ಕಾರಭಾರಿಯು ನಯನುಡಿಯಿಂದ ಸಂಭಾಷಣೆಗೆ ಮನಸ್ಸುಕೊಟ್ಟನು. ಮೊದಲು ಒಂದು ಲಕ್ಷ್ಮ ರೂಪಾಯಿ ಪುಣ್ಯಸಂಗ್ರಹ ಭಂಡಾರಕ್ಕೆ ಸೇರಿತು. ಈಗ ನಡೆದ ದುಷ್ಟ ತ್ಕದ ಅರಿಷ್ಟ ಪರಿಹಾರಾರ್ಥವಾಗಿ ಒಟ್ಟು ಲಕ್ಷ್ಮ ರೂಪಾಯಿ ಆ ಸಂಘದವರಿಗೆ ಸಲ್ಲುವದಕ್ತೆ ಸಿದ್ಧವಾಗಿಯದೆ ಇಂಥ ಪುಣ್ಯದ ಭಾವವು ಸಾಮಾನ್ಯವಾದದ್ದಲ್ಲ. ಹೆಚ್ಚಿಗೆ ಏನು ಅರಿಕೆ ಮಾಡಲಿ ಎಂದು ಭೀಮಾಜಿಯು ಭಿನ್ನವಿಸಿದನು. ಅದಲ್ಲದೆ ಇದೊಂದು ಘೋರವಾದ ಪಾಪಕೃತ್ಯವು. ಆದರೆ ಪ್ರಾಯಶ ದತ್ತಾ ರ್ಥನಾಗಿ ದತ್ತವಾದ ದ್ರವ್ಯವನ್ನು ಸಂಘದ ಸಮಷ್ಠಿಯಾದ ವಿತ್ತದ ಸಂಗಡ ಇಡಬೇಕ್ಯಾಕೆ? ಪ್ರತ್ಯೇಕವಾಗಿರಲಿ. ಈ ಸಮಾಜಕ್ಕೆ ತಾವು ಹ್ಯಾಗೂ ಅಗ್ರಾ ಸನೀಯರು. ಸನ್ಮಾನಿತ ಕಾರ್ಯದರ್ಶಿಯು ನಾನು ತಾನೇ. ಧನಾಧಿಪನೆಂಬ ಗೌರವವನ್ನು ತಾಳಿದರೂ ಚಿಕ್ಕಾಸು ಮುಟ್ಟುವ ಸ್ವತಂತ್ರವಿಲ್ಲದ ವರುಣ ನಂತೆ ಬಕ್ಷಿಯು ವಿತ್ತವನ್ನು ಕಾದುಕೊಂಡಿರುವವನೇ ಸರಿ. ಮತ್ತು ಅವನು ತಮ್ಮ ನೆಂಟನಲ್ಲವೇ, ನಮಗೂ ಈ ಪಾಪದ ಸೋಂಕು ತಗಲೀತೆನ್ನುವಾ. ದಾನವಾದ ವಿತ್ತವನ್ನು ವಿಶ್ಶೇಷವಾಗಿ ಅದರ ಪರಿಹಾರಕ್ಕೆ ವಿನಿಯೋಗಿಸಿ ಬಿಟ್ಟರೆ ಆಗಿಹೋಯಿತು. ವ್ಯರ್ಥವಾದ ಆನುಮಾನವ್ಯಾಕೆ? ಎಂದು ಭೀಮಾ ಜಿಯು ಹೆಚ್ಚಿಗೆಯಾಗಿ ಅರಿಕೆ ಮಾಡಿಕೊಂಡನು.

ಈ ಬುದ್ಧಿವಾದದ ಮಾತು ಕಿವಿಗೆ ಬೀಳುತ್ತಲೇ ಭೀಮಾಜಿಗೆ ಕಾರ ಭಾರಿಯು ಶ್ಲಾಘನೆ ಮಾಡಿ ಜಾಗ್ರತೆಯಾಗಿರೆಂದು ಎಚ್ಚರಿಕೆ ಮಾತು ನುಡಿ ದನು. ಶಾಬಯ್ಯನ ಮನಸ್ಸಿನ ಮರ್ಮ ಚನ್ನಾಗಿ ಗೊತ್ತಿರುವ ಭೀಮಾಜಿಯು ತನ್ನ ವಿಷಯದಲ್ಲಿ ಚಿಂತೆ ಬೇಡ; ಎಮ್ಮೆಗೆ ಕರುವನ್ನು ಈಯಲಿಕ್ಕೆ ಕಲಿಸ ಬೇಕೇನು? ಮುಖ್ಯ ತಮ್ಮ ಮನಸ್ಸಿಗೆ ವಿಜತವಾಗಬೇಕೆಂಬುದೇ ತನ್ನ ಹಟ ವೆಂದು ಭೀಮಾಜಿಯು ಪ್ರತ್ಯುತ್ತರ ಕೊಟ್ಟನು. “ಸದ್ದು! ಇನ್ನು ಹೆಚ್ಚು ರಾತ್ರೆ ವರೆಗೆ ಉಪದ್ರ ಕೊಡಬೇಡ; ಮುಂದಿನ ಕಾರ್ಯ ಪರಿಷ್ಠಾರವಾಗಿ ಸುಧಾರಿಸಿ ಬಿಡು; ಶವದ ವಿನಿಯೋಗ ಸೂಕ್ಷ ರೀತಿಯಿಂದಾಗಲಿ? ಎಂದು ಶಾಬಯ್ಯನು ಸದುತ್ತರ ಕೊಟ್ಟನು. ಭೀಮಾಜಿಯು ಬೇಗ ಮಠಕ್ಕೆ ಬಂದನು. “ಬಹು ಪ್ರಯಾಸದಿಂದ ಕಾರಭಾರಿಯ ಸಿಟ್ಟು ಶಾಂತಪಡಿಸಿ ಬಂದಿರುವೆ; ಇದೇನು ಸಣ್ಣ ಕಾರ್ಯವೇ) ಮಠದ ಮೇಲೆ ಇರುವ ಶ್ರದ್ಧೆಯಿಂದ ನಾನೊಬ್ಬ ಒದ್ದಾಡುತ್ತೇನೆಂದು ಇನ್ನೊಬ್ಬನಿಗೆ ಏನು ಅಗತ್ಯ ಬಿದ್ದದೆ? ಮುಂದಿನ ಉಪಾಯ ಈಗಲೇ ನಡಿಸಬೇಕು; ಜಾಪ್ಯವಾಗಕೂಡದು” ಎಂದು ಭೀಮಾ ಜಿಯು ಹೇಳಿದನು

ತರುವಾಯ ಪುಣ್ಯಸಂಗ್ರಹಸಂಘಕ್ಕೆ ಪ್ರಾಯಶ್ಚಿತ್ತರೂಪವಾದ ದ್ರವ್ಯಾ ನುಕೂಲವನ್ನು ಪಾವತಿ ಮಾಡುವ ಏರ್ವಾಡು ನಡೆಯಿತು. ಹಾಗೆಯೇ ವಾಗ್ದೇವಿಯು ಕಾರಭಾರಿಯ ಮನೆಗೆ ಹೋಗಿ ಅವನನ್ನು ಕಂಡು ತನಗೆ ಪ್ರಾಪ್ತಿಯಾದ ವೈಧವ್ಯದ ಮತ್ತು ಸೂರ್ಯನಾರಾಯಣಗೆ ಚತುರ್ಮಠದ ವರು ಮಾಡಿದ ಘೋರವಾದ ಅನ್ಯಾಯದ ಪ್ರಸ್ತಾಸ ಮಾಡಿ ಧೀರ್ಫ್ಥಸ್ವರ ದಿಂದ ಅತ್ತಳು. “ಯಾಕೆ ಹೆದರುತ್ತೀ? ಶಾಬಯ್ಯನ ಜೀವ ಒಂದಿದ್ದರೆ ಇಂಥಾ ಸಾವಿರ ಮಠಗಳನ್ನು ಒಮ್ಮೆಯೇ ನುಂಗಿಬಿಡುವನು; ಮನೆಗೆ ನಡಿ” ಎಂದು ಅವಳ ಕಣ್ಣಿನಿಂದ ಸುರಿಯುವ ಜಲವನ್ನು ತನ್ನ ಉಭಯಹಸ್ತದಿಂದ ಒರಸಿ ಕಾರಭಾರಿಯು ಅವಳನ್ನು ಸಂತೈಸಿ ಕಳುಹಿಸಿಕೊಟ್ಟನು.

ವಾಗ್ದೇವಿಯೂ ತರಾತುರಿಯಿಂದ ಮಠಕ್ಕೆ ಬಂದು ಕಾರಭಾರಿಯ ಅನುಗ್ರಹ ಪುನರಪಿ ದೊರಕಿದ ಶುಭವಾರ್ತೆಯನ್ನು ಯತಿಗಳಿಗೆ ತಿಳಿಸಿ ಅವರ ಮನಸ್ಸಿನ ದಿಗಿಲು ಪರಿಹರಿಸಿದಳು. ಕೊತ್ವಾಲನ ಅನುಜ್ಞೆಯಂತೆ ನೇಮರಾಜನ ಶವದ ನಿನಿಯೋಗವನ್ನು ಮಾಡಲೆಸಗಿದರು. ಹೆದರಿಕೆಯಿಂದ ಕಂಗೆಟ್ಟಿರುವ ತಿಪ್ಬಾಶಾಸ್ತ್ರಿಯನ್ನು ಕೊತ್ವಾಲನು ಕರೆದು–“ನಿನ್ನ ಸೊಕ್ಳಿ ನಿಂದ ಆದ ಈ ದುಷ್ಕೃತ್ಯದ ನಿವಾರಣೆಯು ನಿನ್ನಿಂದಲೇ ಆಗಬೇಕು; ಹೇಳಿ ದಂತೆ ನಾಯಿಯ ಹಾಗೆ ಕೇಳದಿದ್ದರೆ -ನಿನ್ನನ್ನು ಫಾಶಿಗೆ ಹಾಕುವದರಲ್ಲಿ ವಿಳಂಬವಾಗದು. ಮಠದ ಅನ್ನದಿಂದ ನಿನಗೆ ಏರಿದ ಮದ ಮಠದ ಮೇಲೆಯೇ ಮೆರಸಿಬಿಟ್ಟಿಯಾ ಲುಚ್ಛಾ! ಎಂದು ಗದರಿಸಿದನು. “ಪರಾಕೇ! ತಮ್ಮ ಅಪ್ಸಣೆಯಂತೆ ನಡಕೊಳ್ಳುವೆನು. ಕೆಟ್ಟ ಸಮಯದಲ್ಲಿ ಒಂದು ಪಾಪಕೃತ್ಯ ನನ್ನ ಕೈಯಿಂದ ನಡೆಯಿತು. ನನ್ನ ಪ್ರಾಣ ರಕ್ಷಿಸಿ ಮಠದ ಮರ್ಯಾದೆಯನ್ನು ಕಾಪಾಡುವ ಭಾರವು ತಮ್ಮ ಪಾದಕ್ಕೆ ಕೂಡಿಯದೆ” ಎಂದು ಕಣ್ಣೀರಿಡುತ್ತಾ ಭೀಮಾಜಿಯ ಕಾಲಿಗೆ ಬಿದ್ದನು. “ನಡುವಿರುಳು ಕಳೆಯುವ ಮೊದಲೇ ಇದರ ವ್ಯವಸ್ಥೆಯಾಗಬೇಕು. ಸಾವಕಾಶ ಮಾಡದೆ ಶವವನ್ನು ಕೊಚ್ಚಿ ಪಾತ್ರಗಳಲ್ಲಿ ತುಂಬಿಸಿ ಜನಸಂಚಾರವಿಲ್ಲದ ಕಾಡಿನಲ್ಲಿ ಹಾಳುಬಾವಿಯಿದ್ದರೆ ನೋಡಿ ಅದರಲ್ಲಿ ಹಾಕಿಬಿಡಬೇಕು. ಸ್ವಲ್ಪ ಜಾಗ್ರತೆ ಕಡಿಮೆಯಾಯಿತೋ! ಕುತ್ತಿಗೆಗೆ ಹಗ್ಗ ಬರುವದು ನೋಡಿಕೊ” ಎಂದು ಕೊತ್ವಾಲನು ಎಚ್ಚರಿಸಿದನು. ಅವನ ಅನುಜ್ಞೆಯನ್ನು ಶೀಘ್ರ ಕೈಕೊಳ್ಳೋಣಾಯಿತು. ಹೊಸ ಮಡಿಕೆಗ ಳಲ್ಲಿ ಗರಗಸಿನ ಹುಡಿ ಅಡಿಯಲ್ಲಿ ಚಲ್ಲಿ ಅದರಮೇಲೆ ನಿಶ್ಶೇಷವಾಗಿ ಕೊಚ್ಚಿದ ಹೆಣದ ಮಾಂಸವನ್ನು ತುಂಬಿ ಮೇಲ್ಗಡೆಯಲ್ಲಿಯೂ ಗರಗಸಿನ ಪುಡಿಚಲ್ಲಿ ಬಿಟ್ಟು ಮಡಿಕೆಯ ಬಾಯಿಯನ್ನು ಹಾಳೆಗಳಿಂದ ಮುಚ್ಚಿ ಘಟ್ಟಿಯಾಗೆ ಕಟ್ಟಿ ಆ ಮಡಿಕೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ನಾಲ್ಕು ಜನ ದಾಡಿ ಗರು ಬೇರೆ ಬೇರೆ ದಿಕ್ಕುಗಳಿಗೆ ಹೋಗಿ ಅವರವರಿಗೆ ಗುರ್ತವಿರುವ ಹೊಟ್ಟು ಭಾವಿಗಳಲ್ಲಿ ಬಿಸಾಡಿ ಬಿಟ್ಟು ಚಾಚೂ ಅನ್ನದೆ ಮರಳಿ ಬಂದು ಮಠವನ್ನು ಸೇರಿ ದ್ರವ್ಯಾನುಕೂಲವನ್ನು ಪಡಕೊಂಡು ಸ್ವಸ್ಥವಾಗಿದ್ದರು. ಒಳ್ಳೇಗುಡಿಗಾ ರರನ್ನು ತರಿಸಿ ರಕ್ತದ ಗುರ್ತುಗಳು ತುಂಬಿರುವ ಗೋಡೆಗಳ ಮಣ್ಣು ಕೆರಸಿ ತೆಗೆದು ಚಲೋ ಬಣ್ಣದಿಂದ ಚಿತ್ರಾದಿಗಳನ್ನು ಬಿಡಿಸಿ ಕೋಣೆಯ ನೆಲವನ್ನು ಆಗದು ಪಸಂದಾಗಿ ಗಚ್ಚಿನಿಂದ ಮುಚ್ಚಿ ಅನುಮಾನಕರ ಕುರಹುಗಳನ್ನೆಲ್ಲಾ ಮಾಜಿಸಿ ಬಿಟ್ಟರು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾನವ-ಬೌದ್ಧಿಕ ಪ್ರಾಣಿ
Next post ದೇಹ ಆತ್ಮಗಳ ಗೂಢತೆ

ಸಣ್ಣ ಕತೆ

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಎಪ್ರಿಲ್ ಒಂದು

    ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…