ವರ್ಗ: ಲೇಖನ / ಹಾಸ್ಯ / ನಗೆಹನಿ
ಪುಸ್ತಕ: ನಗೆ ಡಂಗುರ
ಲೇಖಕ: ಪಟ್ಟಾಭಿ ಎ ಕೆ
ಕೀಲಿಕರಣ:
ವ್ಯಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ
ಅದೊಂದು ಮೃಗಾಲಯ. ಮಧ್ಯಾಹ್ನ ಮೃಗಾಲಯವನ್ನು ವೀಕ್ಷಿಸಲು ದಂಪತಿಗಳು ಬಂದರು. ಹೆಂಡತಿ ಒಂದು ಆರಾಮ ಕುರ್ಚಿಯಲ್ಲಿ ಮಲಗಿ ಸುಖನಿದ್ರಯಲ್ಲಿದ್ದ ಗೊರಿಲ್ಲ ಕಂಡು “ಅದು ಗಂಡೋ ಹೆಣ್ಣೋ ಗೊತ್ತಾಗುತ್ತಿಲ್ಲವಲ್ಲ ನಿಮಗೇನಾದರೂ ಗೊತ್ತಾ?” ಕೇಳಿದಳು.
ಗಂಡು: “ಹೋ. ನನಗೆ ಗೊತ್ತು. ಅದು ಗಂಡು ಗೊರಿಲ್ಲ. ಹೆಣ್ಣು ಗೊರಿಲ್ಲಾಗೆ ಹಗಲು ಹೊತ್ತು ಎಲ್ಲಿ ಪುರುಸತ್ತು ಇರುತ್ತದೆ ನಿದ್ರೆಯ ಸುಖ ಅನುಭವಿಸಲು?”
***