ಗುಂಡನ ಮೇಲೆ ಅಂಗಡಿ ಯಜಮಾನ ರೇಗಿದರು. “ಸೇಲ್ಸ್ಮನ್ ಆಗಿರಲು ನೀನು ನಾಲಾಯಕ್. ನಿನ್ನಿಂದ ವ್ಯಾಪಾರವೆಲ್ಲಾ ತಲೆಕೆಳಗಾಗುತ್ತಿತ್ತು- ಆ ಮಹಿಳೆಯ ಜೊತೆ ಹಾಗೆನಾ ವರ್ತಿಸೋದು? ಅವಳು ಕೇಳಿದ ಡಿಸೈನ್, ಬಣ್ಣದ ಸೀರೆ ನಮ್ಮಲ್ಲಿದ್ದರೂ ಇಲ್ಲ ಎಂದು ಅವಳನ್ನು ವ್ಯಾಪಾರ ಮಾಡದಂತೆ ವಾಪಸ್ ಕಳುಹಿಸಿ ಬಿಟ್ಟೆಯಲ್ಲಾ, ನಿನಗೆ ತಲೆ ಇದೆಯೇನಯ್ಯಾ?” ರೇಗಿದ.
ಗುಂಡ ಯಜಮಾನನಿಗೆ ಕೈಮುಗಿಯುತ್ತಾ “ಕೋಪಮಾಡಿಕೊಳ್ಳಬೇಡಿ. ನಾನು ಮಾಡಿದ್ದು ನನ್ನ ಒಳ್ಳೆಯದಕ್ಕೆ. ಅವಳು ಕೇಳಿದ ಡಿಸೈನ್ ಹಾಗೂ ಬಣ್ಣವುಳ್ಳ ಸೀರೆ ಇತ್ತು. ನಿಮಗೆ ಲಾಭವೂ ಆಗುತ್ತಿತ್ತು. ಆದರೆ ನನ್ನ ಜೇಬುಮಾತ್ರ ಖಾಲಿಯಾಗಿ ಬಿಡುತ್ತಿತ್ತು.
“ಏನೋ ಹಾಗೆಂದರೆ?” ರೇಗಿದ ಯಜಮಾನ.
“ಅವಳು ನನ್ನ ಧರ್ಮಪತ್ನಿ!” ಎಂದ ಗುಂಡ.
***
Related Post
ಸಣ್ಣ ಕತೆ
-
ಮುಗ್ಧ
ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…
-
ಕೇರೀಜಂ…
ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…
-
ಮನೆಮನೆಯ ಸಮಾಚಾರ
ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…
-
ಕರೀಮನ ಪಿಟೀಲು
ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…