ನಾಳೆ ಎಂಬುದು ಹಾಳು ಕಾಣಿರೊ

ನಾಳೆ ಎಂಬುದು ಹಾಳು ಕಾಣಿರೊ – ಓ ನರ ಮಾನವರೇ
ನಾಳೆ ಎಂಬುದು ಹಾಳು ಕಾಣಿರೊ \\ಪ\\

ಇಂದು ಮಾಡುವುದು ಉತ್ತಮವು
ಈಗಲೆ ಎಂಬುದು ಅತ್ಯುತ್ತಮವು \\ಅ.ಪ.\\

ಗತಿಸಿದ ಕಾಲ ಬರುವುದೆ ಹೇಳು
ನುತಿಸಿದ ದೈವ ಹೆಲ್ಪ್‌ಲೆಸ್ ಕೇಳು!
ಒಡೆದ ಗಾಜು ಕೂಡುವುದಿಲ್ಲ
ಮಡಿದ ಮನುಜ ಮರಳುವುದಿಲ್ಲ

ನಾಳೆಯನಾರೂ ಕಂಡವರಿಲ್ಲ
ವೀಳೆಯವನ್ನು ತೊರೆದವರಿಲ್ಲ
ಸಂದ ಕಾಲವ ಒದ್ದರೆ ಕಾಲಲಿ
ನಿನಗೇನುಂಟು ಹೇಳು ಜಗದಲಿ?

ಹೋದವರಾರೂ ಬಂದವರಿಲ್ಲ
ಬಂದವರಿಲ್ಲಿ ಉಳಿಯುವುದಿಲ್ಲ
ಸಂದ ದಿನದಲಿ ಸಲ್ಲದೆ ಹೋದರೆ
ಸಂದಾಯವೇನು ಹೊಂದಿದ ಜನ್ಮಕೆ?

ಕಾಲವನಾರೂ ಗೆದ್ದವರಿಲ್ಲ
ಕಾಲನೆ ಶರಣು ಅದಕ್ಕೆ ಇಲ್ಲಿ
ಇದರ ವಿವೇಚನೆ ವರ್ತಮಾನವು
ಇನ್ನೇತಕೆ ಜೋತಿಷ್ಯ ಭವಿಷ್ಯವು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಂಗಣ್ಣನ ಕನಸಿನ ದಿನಗಳು – ೧೩
Next post ಹೇಳಿದರೆ ನಕ್ಕು ಬಿಡುವಿರಿ ಕೇಳಿ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…