ನೀರು… ನೀರು… ನೀರು…

ನೀರು… ನೀರು… ನೀರು…
ಬದುಕಿಗೆ ಅಲ್ಲವೆ ಅದು ಬೇರು
ಬೇರು ಇಲ್ಲದ ಮರವುಂಟೆ?
ಇದ್ದರೂ ಅದಕೆ ಉಸಿರುಂಟೆ?? /ಪ//

ಗೆದ್ದನು ಜಗವ ಅಲೆಗ್ಸಾಂಡರ
ಕಡೆಗೆ ಸತ್ತನು ಕಾಣದೆ ನೀರ
ಹೆಣ್ಣನು ಗೆದ್ದ ಭಾವ ಮದಲಿಂಗ
ಕೂಡ ಸೇರಿದ ಅದೇ ಜವನೂರ
ಏನೇ ಆದರೂ ಏನೇ ಹೋದರೂ
ಅಲ್ಲಿ ಪ್ರವಾಹ, ಇಲ್ಲಿ ಬರ
ಈ ನಿಜಕಿಂತಲೂ ಆಳದ ನಿಜವು
ನಮ್ಮ ವಿವೇಕಕೆ ಕೂಡ ಬರ!

ನೀರಿಗೆ ನಾವ್ ಬೆಲೆ ಕೊಡಲೇ ಇಲ್ಲ
ಅದಕೆ ಬಾಟಲಿ ಸೇರಿದೆ ನೀರು
ಆದರೂ ಶ್ರೀಮಂತ ಹುಂಬತನ
ಅದಕೆ ಪಶುಪಕ್ಷಿಗೆ ಕಣ್ಣೀರು
ಇದನು ಕಂಡಿದೆ ಬೆಟ್ಟ ಅರಣ್ಯ
ಕೊಡಲಿ ಪೆಟ್ಟನು ಬುಡದಲಿ ತಿಂದು
ಸತ್ತರೆ ಭೂಮಿ ಕಾಯ್ವುದೆ ಗಗನ
ಎಂದು ಕೇಳಿದೆ ನಿಸರ್ಗ ನೊಂದು !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವರೇ ಪಾರುಮಾಡಿದಿ ಕಂಡಿಯಾ
Next post ಒಂದು ಹಳೆಯ ಕತೆ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…