ಅಪ್ಪಾಜಿ . . . ಅಪ್ಪಾಜಿ. . .

ಅಪ್ಪಾಜಿ ಅಪ್ಪಾಜಿ ಎಲ್ಲಿಗೆ ಹೋಗಿದ್ದೆ?
ಆಡಲು ನಿನಗೆ ಹುಣ್ಣಿಮೆ ಚೆಂಡನು ತರಲು ಹೋಗಿದ್ದೆ

ಅಪ್ಪಾಜಿ ಅಪ್ಪಾಜಿ ಹೇಗೆ ಹೋಗಿದ್ದೆ?
ಮೋಡವನೇರಿ ತಾರೆಗಳೂರಲಿ ಹುಡುಕಿ ಹೋಗಿದ್ದೆ

ಅಪ್ಪಾಜಿ ಅಪ್ಪಾಜಿ ಮೋಡವೆಲ್ಲಿ ಈಗ?
ನನ್ನನು ಇಳಿಸಿ ತನ್ನಯ ಊರಿಗೆ ಹಾರಿ ಹೋಯಿತೀಗ

ಅಪ್ಪಾಜಿ ಅಪ್ಪಾಜಿ ಆರಿಸು ನಕ್ಷತ್ರ
ಅವುಗಳ ಪೋಣಿಸಿ ನಿನ್ನಯ ಕೊರಳಿಗೆ ಮಾಡಬೇಕೆ ಹಾರ?

ಅಪ್ಪಾಜಿ ಅಪ್ಪಾಜಿ ಹಾರಬೇಕು ದೂರ
ಶಾಲೆಯ ಹೋಂವರ್ಕ್ ಭಾರವ ಕಳೆದು ಆಗಬೇಕೆ ಹಗುರ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಂಗಣ್ಣನ ಕನಸಿನ ದಿನಗಳು – ೧೨
Next post ಚೆನ್ನ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…