ಜೀವನ ಬೇವು-ಬೆಲ್ಲ

ಪ್ರಿಯ ಸಖಿ,
ಅರ್ಥಪೂರ್ಣವಾದ ಹಳೆಯ ಚಿತ್ರಗೀತೆಯೊಂದು ತೇಲಿಬರುತ್ತಿದೆ.
ಈ ಜೀವನ ಬೇವುಬೆಲ್ಲ
ಬಲ್ಲಾತಗೆ ನೋವೇ ಇಲ್ಲ
ಬಾ ಧೀರರಿಗೆ ಈ ಕಾಲ
ನಿನಗುಂಟು ಜಯ
ನಿನಗುಂಟು ಜಯ ?
ನಿಜಕ್ಕೂ ಈ ಬದುಕು ಬೇವು ಬೆಲ್ಲಗಳ ಸಮಪಾಕವೇ ಅಲ್ಲವೇ ಸಖಿ. ಬದುಕಿನ ನಾಣ್ಯದ ಒಂದು ಮಗ್ಗುಲಿಗೆ ಸುಖ ಇನ್ನೊಂದು ಮಗ್ಗುಲಿಗೆ ದುಃಖ ಸುಖ ಅಥವಾ ದುಃಖ ಒಂದೇ ಸದಾ ಇಲ್ಲಿ ಸ್ಥಿರವಾಗಿರುವುದಿಲ್ಲ. ಈ ನಿಜವನ್ನು ಅರಿತವನು ತನಗೆ ಸದಾ ನೋವೇ ಎಂದು ವೃಥಾ ಚಿಂತಿಸಿ ಕೊರಗುವುದಿಲ್ಲ. ತನ್ನ ನೋವನ್ನೂ ದಿಟ್ಟತನದಿಂದ ನಲಿವನ್ನಾಗಿಸಿಕೊಳ್ಳಬಲ್ಲ ಕಲೆ ಅರಿತ ವ್ಯಕ್ತಿಗೆ ಸದಾ ಗೆಲುವು ಕಟ್ಟಿಟ್ಟ ಬುತ್ತಿ.

ಬರಿಯ ಸುಖವನ್ನೇ ಕಂಡ ಮನುಷ್ಯನಾಗಲೀ ಬರೀ ದುಃಖವನ್ನೇ ಕಂಡ ಮನುಷ್ಯನಾಗಲೀ ಎಂದಿಗೂ ಪರಿಪೂರ್ಣನಲ್ಲ. ಅವನ ಭಾವಗಳು ಪಕ್ವಗೊಳ್ಳಲು ದುಃಖ ಎರಡರ ಅನುಭವವೂ ವ್ಯಕ್ತಿಗೆ ಬೇಕು. ಹೀಗೆಂದೇ ಯುಗಾದಿಯಂದು ಸಾಂಕೇತಿಕವಾಗಿ, ನಾವು ಬೇವು ಬೆಲ್ಲವನ್ನು ಒಟ್ಟಾಗಿ ಸೇವಿಸಿ ವರ್ಷವಿಡೀ ಬದುಕು ಕಷ್ಪ ಸುಖಗಳ ಸಮನ್ವಯವಾಗಲೆಂದು ಆಶಿಸುತ್ತೇವೆ.

ಡಾ. ರೆಹೀನ್‍ಹೋಲ್ಡ್ ಅವರು,
God, grant me the sensibility
to accept the things I cannot change,
The courage to change the things I can,
And the wisdom to know the difference!

ದೇವರೇ, ನನ್ನಿಂದ ಬದಲಿಸಲಾಗದ ಸಂಗತಿಗಳನ್ನು ಒಪ್ಪಿಕೊಳ್ಳುವಂತಾ ತಿಳಿವು ನೀಡು. ನನ್ನಿಂದ ಬದಲಿಸಲಾಗುವ ಸಂಗತಿಗಳನ್ನು ಬದಲಿಸಲು ಧೈರ್ಯ ನೀಡು ಮತ್ತು ಇವೆರಡರ ನಡುವಿನ ವ್ಯತ್ಯಾಸ ತಿಳಿಯುವ ಬುದ್ಧಿಶಕ್ತಿ ನೀಡು ಎಂದು ಪ್ರಾರ್ಥಿಸುತ್ತಾರೆ. ಇಂತಹ ಮೌಲಿಕ ನುಡಿಗಳನ್ನು ಅರ್ಥೈಸಿಕೊಂಡು ನಮ್ಮ ಬದುಕಿನಲ್ಲೂ ಅಳಿವಡಿಸಿಕೊಂಡು, ಸುಖ-ದುಃಖ ಎರಡನ್ನೂ ಒಂದೇ ರೀತಿ ನೋಡುವ ಸ್ಥಿತ ಪ್ರಜ್ಞೆಯನ್ನು ನಾವೂ ಬೆಳೆಸಿಕೊಳ್ಳಲು ಸಾಧ್ಯವಾದರೆ, ಅದೇ ಈ ಹೊಸವರ್ಷಕ್ಕೆ, ಸಂವತ್ಸರಕ್ಕೆ ನಮಗೆ ನಾವು ಕೊಟ್ಟುಕೊಳ್ಳುವ ಕೊಡುಗೆ ಅಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೇರ್‍ ಗೇರ್‍ ಮಂಗಣ್ಣ
Next post ನಿಜಬುದ್ಧ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…