“ಓಂಕಾರಾತ್ಮಂ ತ್ವಂ ಮಮಕಾರಾನ್ವಿತಂ
ಜಗತ್ ಸ್ವರೂಪಾಯ ವಿಶಾನಿಕೇತನಂ ||ಓಂ||”
ಒಂದು ಮುಷ್ಠಿ ಒಂದೇ ತಂತ್ರ
ಐಕ್ಯತೆ ಒಂದೇ ಮಂತ್ರ ಒಂದೇ
ಜಾತಿ ಭೇದ ಭಾವ ದೃಷ್ಟಿ
ಎಲ್ಲಾ ಒಂದೇ ಸೃಷ್ಟಿಯೂ ||
ರೆಂಬೆ ಕೊಂಬೆ ಒಂದೇ ಹಸಿರು
ನೆಲದ ಬೇರು ಮಣ್ಣ ಬಸಿರು
ಹೂವು ಹಣ್ಣು ಕಾಯಿ ಒಂದೇ
ಎಲ್ಲಾ ಒಂದೇ ಸೃಷ್ಟಿಯೂ ||
ಕಡಲ ತೀರ ಧರೆಯು ಒಂದೇ
ಮುತ್ತು ರತ್ನ ಹೊನ್ನು ಬೆಳ್ಳಿ
ಜೀವ ಜೀವನ ಒಂದೇ
ಎಲ್ಲಾ ಒಂದೇ ಸೃಷ್ಟಿಯೂ ||
ವೇದ ಮಂತ್ರ ಧರ್ಮ ಒಂದೇ
ರಾಮ ರಹಿಮ ಏಸು ಬುದ್ಧ
ವೇಷ, ಭಾಷೆ ನೀತಿ ನೇಮ
ಎಲ್ಲಾ ಒಂದೇ ಸೃಷ್ಟಿಯೂ ||
ಒಂದೇ ಸಂಸ್ಕೃತಿ ಒಂದೇ ತತ್ವ
ದ್ವೇಷ ಕ್ಲೇಶ ಎಲ್ಲಾ ಅಂತ್ಯ
ಭಾರತೀಯರು ನಾವು ಧನ್ಯರು
ಕನ್ನಡ ತಾಯೆ ಮಡಿಲು ಮಾನ್ಯವು
“ನಮಾಮಿತಂ ನಮಾಮಿತಂ ಭೂಗರ್ಭಧಾತಂ
ಸರ್ವಂ ಸುಖ ಪ್ರಾತ್ಪಂ ಸರ್ವ ಜೀವ ಜೀವಾತ್
ಓಂ ಶಾಂತಿಃ ಶಾಂತಿಃ ಶಾಂತಿಃ”
*****