ಇಳೆ ಸಂಜೆ ಹೊತ್ತು
ಅಮ್ಮಾ ನೀನು ಹಣತೆ
ಹಚ್ಚಿದ ಮನೆಯು
ಬೆಳಕಾಯ್ತು ||
ಕತ್ತಲೆ ಕಳೆದು
ಬೆತ್ತಲೆ ಕಳೆದು
ತಂಪ ಚಲ್ಲಿ ದನಿಗೂಡಿತು ||
ನಿನ್ನ
ಬೆಚ್ಚನೆ ಗೂಡಲಿ ಸೇರಿದ
ಹಕ್ಕಿಗಳು ನಾವು
ಕೈ ತುತ್ತ ನಿತ್ತು ಹಸಿವ
ನೀಗಿಸಿ ಜೋಗುಳ ಹಾಡಿದೆ ||
ಸಂಸಾರ ಎಂಬ ಗುಡಿಯಲಿ
ನ್ಯಾಯ ನೀತಿ ಧರ್ಮದ
ತಕ್ಕಡಿಯ ತೂಗಿ
ತ್ಯಾಗಮಯಿ ಎನಿಸಿದೆ ||
ಅಪ್ಪನ ಪಡೆದು
ನಮ್ಮನು ಹಡೆದೆ
ನಿನ್ನ ಹಾಲಿನ ಋಣ
ಹೇಗೆ ತೀರಿಸಲಿ ಅಮ್ಮ ||
*****