ಕಲಿಯುಗದಲಿ ಸಾಗಿದೆ ನಿತ್ಯದ ಜೀವನ
ಸ್ಥಾನ ಮಾನಗಳಿಗಾಗಿಯೇ ಹೋರಾಟ
ಜೀವ ಹೋದರೂ, ಜೀವ ತೆಗೆದರೂ ಸಹ
ನಡೆಯುತ್ತಿದೆ ನಿತ್ಯವೂ ಬಡಿದಾಟ
|| ಕಲಿಗಾಲ ಇದು ಕೊಲೆಗಾಲ ||
ಮಾನವೀಯತೆಯ ಮಮಕಾರವಿಲ್ಲ
ಸಂಬಂಧಗಳ ಸಹವಾಸವಿಲ್ಲ
ಕೂಗಿಕೊಂಡರೂ ಕೇಳುವುದಿಲ್ಲ
ಮನದೊಳಗೇ ಮತ್ಸರ ಮನೆಮಾಡಿದೆಯಲ್ಲ
|| ಕಲಿಗಾಲ ಇದು ಕೊಲೆಗಾಲ ||
ಅಂಧಕಾರದ ಅರಮನೆಯಲ್ಲಿ
ಅವರುಗಳದ್ದೇ ಕಾರುಬಾರು
ನೆತ್ತರು ಹೀರುವ ನರಿ ನಾಯಿಗಳು
ಕಚ್ಚುತ ಕೊಚ್ಚುತ ಸಾಗಿಹ ದುಷ್ಟರು
|| ಕಲಿಗಾಲ ಇದು ಕೊಲೆಗಾಲ ||
ಅಂಧಾಭಿಮಾನಕೆ ಅಂಧರಾಗಿಹರು
ಯಾವುದೋ ಆಮಿಷಕೊ ಬಲಿಯಾಗಿಹರು
ಅಮಾಯಕರ ಬಲಿ ತೆಗೆಯುವ ಮೂಢರು
ಕರುಣೆಯು ಬಾರದ ಕಟುಕರು ಇವರು
|| ಕಲಿಗಾಲ ಇದು ಕೊಲೆಗಾಲ ||
ಈ ಘೋರ ಅನ್ಯಾಯವ ಎದುರಿಸ ಬೇಕಿದೆ
ಅಮಾಯಕ ಜೀವಿಗಳ ಜೀವ ಉಳಿಸ ಬೇಕಿದೆ
ಮಾನವತೆಯ ಮಮತೆಯ ತೋರಬೇಕಿದೆ
ಮಾನವ ಧರ್ಮವು ಮುಂದೆ ಸಾಗುತಿರಲಿ
ಕಲಿಗಾಲದಲ್ಲೂ ಕರುಣೆಯ ಬೆಳಕು ಕಾಣ
*****