ಜೆಟ್ ವಿಮಾನಗಳು

 

ಈ ದಿನಗಳಲ್ಲಿ ಸೈಬರ್ ಕೆಫೆಯ ಹುಡುಗಿ ನನ್ನ ಜೊತೆಯಲ್ಲಿಲ್ಲ.
ಅವಳನ್ನು ಪ್ರೇಮಿಸಿದ ತಪ್ಪಿಗೆ ಮಧ್ಯಾಹ್ನದ ಬಿಸಿಲು,
ಹೃದಯಕ್ಕೆ ಅಸಂಖ್ಯಾತ ಚೂರಿಗಳನ್ನು ಏಕಕಾಲಕ್ಕೆ ಹೊಡೆದಂತೆ.

ಕಪ್ಪುಮಿಶ್ರಿತ ಹಳದಿಬಣ್ಣದ ಹಕ್ಕಿಗಳು ಹೊಂಬಣ್ಣದ ರೇಖೆಗಳಿಂದ
ನೀಲಗಿರಿ ಕಾಡು ಹೊಕ್ಕುವುದನ್ನು ದಿಟ್ಟಿಸುತ್ತಾ ನಿಂತಿರುತ್ತೇನೆ.

ಅಲ್ಲಿ ಅವಳು ಮೂಡಿಬರುತ್ತಾಳೇನೊ ಎಂಬ ಹುಚ್ಚು ಕನಸು; ಸಾವು.
ಮತ್ತೆ ಆ ಹಕ್ಕಿಗಳು ಜೆಟ್ ವಿಮಾನಗಳಂತೆ ನನ್ನ ಕಣ್ಣೆದುರಿನಲ್ಲೇ
ಮೋಡದಲ್ಲಿ ಬೆರೆತುಹೋಗುತ್ತವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೫೦
Next post ಛೇ ಛೇ ಬ್ಯಾಡ ಬ್ಯಾಡ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…