ಜನುಮ ಜನುಮಗಳ ದಾಟಿ ಬಂದು
ಮತ್ತೆ ಈಗ ಪಡೆದಿರುವೆ ಈ ನರದೇಹ
ಈ ಜನುಮದಲಿ ಮತ್ತೆ ಮನವನಂಬಿರುವೆ
ಬೇಡ ಬೇಡೆನಗೆ ಕಾಮ ಕಾಂಚನ ಮೋಹ
ನಿನ್ನ ಭಜಿಸಬೇಕೆಂದಾಗಲೆಲ್ಲ ಈ ಮನ
ಕನ್ಸು ಕಟ್ಟುವುದು ವಿಷಯ ಭೋಗದಿ
ಹರಿಯ ಧ್ಯಾನಿಸುತ್ತ ನಾನು ಇರುವಾಗಲೇ
ಏನೇನೋ ಚಿಂತಿಸಿ ನರಳುವುದು ಭವರೋಗದಿ
ಜನುಮ ಜನುಮಗಳಲ್ಲೂ ಇಂದ್ರಿಯಗಳ
ವ್ಯಾಪಾರದಲ್ಲಿ ಸೋತು ಹರಿಯ ಮರೆತು
ಮನುಷ್ಯ ಜನ್ಮದ ಉದ್ದೇಶ ತೊರೆದು
ಏನು ಮಾಡಲುಂಟು ಏನೆಲ್ಲ ಅರಿತು
ಕಾಂಚನದ ಸಂಚಯ ಯಾರಿಗಾಗಿ ಮತ್ತೆ
ಕಾಮಿನಿಯ ವೈ ಭೋಗ ಯಾತಕ್ಕಾಗಿ ಯೋಚಿಸು
ನಶ್ವರ ದೇಹವಿದು, ಭೋಗಿಸಿ ತೀರುವುದು
ಮಾಣಿಕ್ಯ ವಿಠಲನಾಗಲು ನೀನು ಕಾಡುವವು ಯೋಚಿಸು
*****