ಕ್ಷಣವು ಧೀರ, ಕ್ಷಣವು ಚಂಚಲವು
ಈ ನನ್ನ ತನುವಿನಲ್ಲಿ ಮೆರೆವಮನ
ಹರಿ ನಿನ್ನ ಧ್ಯಾನಿಸುತ್ತಿರುವಾಗಲೆ ನಾ
ಮತ್ತೆ ಹರಿವುದು ವಿಷಯಗಳಲ್ಲಿ ಮನ
ಜನುಮ ಜನುಮಕ್ಕೂ ಹೀಗೆ ಬೆಂಬಿಡದೆ
ನನ್ನ ಜನುಮಗಳಿಗೆಲ್ಲ ಕಾರಣವು ಈ ಮನ
ಮತ್ತೆ ಮತ್ತೆ ಇಂದ್ರಿಯ ಒಡನಾಟದಲಿ
ಭೋಗೆಗಳಿಗೆ ಹೋರಾಡುವುದು ಈ ಮನ
ಅತಿನಿಕಟವಾಗಿರುವ ಅಂತರಂಗಕ್ಕೆ ಇಣಕದೆ
ಬರೀ ಬಹಿರಂಗದಲ್ಲಿ ತೋರುವುದು ಆಟ
ವ್ಯಕ್ತಿತ್ವವನ್ನೆ ಬಲಿ ನೀಡಿದರೂ ಮರುಗದೆ
ದುಕ್ಕ ದುಮ್ಮಾನಗಳಿಗೆ ನೀಡುವುದು ಊಟ
ಹರಿ ಮಾಯೆ ನನ್ನ ಮುಂದೆ ಪಸರಿ ನೀನು
ಮತ್ತೆ ನೀಡಿದೆ ಮರ್ಕಟದ ಮನ
ನೀನು ಬಿಡಿಸದೆ ಹೊರತು ಎಳೆವ ಮನ
ಮಾಣಿಕ್ಯ ವಿಠಲನಿಗೇನು ಸಾಟಿಮನ
*****