ಹರಿ ನಿನ್ನ ನಿತ್ಯ ನಿತ್ಯ ಧ್ಯಾನಿಸಿ
ಎನ್ನ ಈ ಬದುಕು ಸದಾ ಭವ್ಯವಾಗಲಿ
ನಿನ್ನ ರೂಪವೊಂದೇ ಈ ಕಂಗಳಲಿ ಕುಣಿದು
ಅರಳಿ ಅರಳಿ ಈ ಜನುಮ ದಿವ್ಯವಾಗಲಿ
ಹರಿ ನಿನ್ನ ತೊರೆದು ಕ್ಷಣವು ಎಲ್ಲವೂ
ಯುಗದ ಸಮಾನವೆಂದು ನಾ ಹೇಳಬೇಕೆ!
ನವ ವಧು ತನ್ನ ಸಂಗಾತಿಗೆ ಕಾಣದೆ
ಚಡ ಪಡಿಕೆ ಹೇಗೆಂದು ನಿ ಕೇಳಬೇಕೆ!!
ನೋಡು ಹರಿ ನನ್ನ ನಿನ್ನ ಸಂಬಂಧವೆಲ್ಲ
ಜನುಮ ಜನುಮಗಳಿಂದ ಹೀಗೆ ತೂರಿ ಬಂದಿದೆ
ನಿನ್ನ ನೆನಪುಗಳಲಿ ಈ ನಯನಗಳು ಸೋತು
ಕಂಬನಿ ಧಾರೆಯಾಗಿ ತಾ ಸೋರಿ ಬಂದಿದೆ
ಇನ್ನೂ ಕಾಡಿಸದಿರು ಹರಿ ನಾ ತಾಳಲಾರೆ
ಕಾರಣ ನಿನಗಿರುವ ತಾಳ್ಮೆ ಮತ್ತೆ ನನಗುಂಟೆ
ನಿನ್ನೊಂದಿಗೆ ಧ್ಯಾನ ಮತ್ತೆ ಒಡನಾಟವೆಲ್ಲವು
ಮಾಣಿಕ್ಯ ವಿಠಲನಾಗಿ ಮಾಡದುಂಟೆ!
*****