ಒಂದಿನಿತು ಮರೆತರೆ

ಹರಿಯೆ ನಿನ್ನ ಒಂದಿನಿತು ನಾ ಮರೆತರೆ
ಸಾಗಬೇಕು ನಾ ಅಂಧಕಾರ ಆಗರಕ್ಕೆ
ಮತ್ತೆ ಮತ್ತೆ ಜನ್ಮ ಮರಣಕ್ಕೆ ಅಂಟಿ
ಬಿದ್ದು ನರಳಬೇಕು ಭವದ ಸಾಗರಕ್ಕೆ

ವ್ಯಾಕುಲತೆ ಎನ್ನಲ್ಲಿ ಅಚಲವಾಗಿರಲಿ
ಅದು ನಿನ್ನ ಪಡೆಯುವವರೆಗೆ ಹರಿ
ನೀನೇ ನನ್ನ ಮನದ ಸಂಚಾಲಕನು
ನನ್ನ ಯುಗದ ದಾತಾರ ನೀನೇ ಶ್ರೀ ಹರಿ

ನಾನರಿತೆ ನೀ ಮರೆಯಲಿ ನಿಂತು ನೋಡಿ
ನನ್ನ ಭಾವಗಳಿಗೆ ಪರೆಕಿಸುತ್ತಿರುವೆ
ದೇವರೇ ಈ ಜೀವಾತ್ಮನಿಗೆ ಹೀಗೆ ತಾನು
ಅವಲೋಕಿಸಿದರೆ ಪರಿಹಾರವೇನ ಅರಿವೆ!

ಇನ್ನೂ ಬೇಡನಗೆ ಈ ಭವದ ದುರ್ಗತಿ
ನಿನ್ನ ನಾಮವೊಂದೆ ನಿಚ್ಚ ನಾ ನುಡಿಯಲಿ
ನನ್ನ ಭಾವ ಭಾವಗಳಲಿ ನಿನ್ನ ನೋವವೊಂದೆ
ಹೆಪ್ಪುಗಟ್ಟಿ ಬೀಳಲಿ ಮಾಣಿಕ್ಯ ವಿಠಲ ನುಡಿಯಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಕ್ಕು ಬಿಡು ಒಮ್ಮೆ
Next post ತಿರುಪ್ಪಲ್ಲಾಣ್ಡು- ೧

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ದೇವರ ನಾಡಿನಲಿ

    ೧೯೯೮ ಜೂನ್ ತಿಂಗಳ ಮೊದಲ ವಾರದಲ್ಲಿ ನಾ ದೇವರನಾಡಿನಲಿ, ವಿಭಾಗೀಯ ಸಾರಿಗೆ ಅಧಿಕಾರಿ ಎಂದು, ವಿಭಾಗೀಯ ಕಛೇರಿ ಮಂಗಳೂರು ವಿಭಾಗ ಅಂದರೆ.... ದಕ್ಷಿಣ ಕನ್ನಡ ಜಿಲ್ಲೆಯಲ್ಲಿ... ಹರ್ಷದಿ,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…