ನಕ್ಕು ಬಿಡು ಒಮ್ಮೆ

ನಕ್ಕು ಬಿಡು ಒಮ್ಮೆ
ಗುಳಿಬೀಳಲಿ ಕೆನ್ನೆ|
ಸರಿಯಲ್ಲ ಈ ಮೌನ ನಿನಗೆ
ನನ್ನ ಮಾತೇ ಮರೆತು ಹೋಗಿದೆ ನನಗೆ|
ಮನೆ ಮನದ ತುಂಬೆಲ್ಲ
ಹರಿಯುತಿದೆ ಬರಿಯ ಮೌನ…
ನನಗೀಗ ನಿನ್ನ ಮೌನದೇ ವ್ಯಸನ||

ಮರೆತುಬಿಡು ಎಲ್ಲಾ,
ನನ್ನೆಲ್ಲಾ ಒರಟುತನ|
ಅಪ್ಪಿಕೋ ನನ್ನೆಲ್ಲಾ ಒಳ್ಳೆಯಾತನ
ತಾಳಲಾರೆ ನಿನ್ನಯಾ ಈ ಒಂಟಿತನ|
ಮುನಿಸು ಸರಿಸಿ ನಗಬಾರದೇ ರನ್ನ, ನನ್ನ ಚಿನ್ನಾ||

ನಿನ್ನಂತಹ ಚೆಲುವೆಗೆ
ಮೃದು ಮಾತೇ ಬಂಗಾರ|
ಕಿಲಕಿಲ ನೀ ನಗುತಲಿರೆ
ಸಂಭ್ರಮ ಸಂತೋಷ ಸಡಗರ|
ನೀ ನಸುನಗುತ ಮಿನಗುತಿರೆ
ರಸಶೃಂಗಾರ ಸೌಂದರ್ಯ
ಇಲ್ಲದಿರಿನ್ನೆಲ್ಲಿ ಮಾಧುರ್ಯ ||

ಬೆಳಗಾದರೆಮ್ಮ
ಮದುವೆಯಾದ ಸುದಿನ|
ಕರೆದೊಯ್ಯುವೆ
ನಿನ್ನನಂದಿನ ರಸಘಳಿಗೆಯಾಕ್ಷಣ|
ಕೈ ಮುಗಿವೆ ಮನ್ನಿಸೆನ್ನ
ತಮಾಷೆಗೆ ಹಾಗಂದೆ ನಿನಗಿಂತ
ಅವಳೇ ಲಕ್ಷಣಾ|
ಸದಾ ಮುನಿಸುತಿರೆ ನೀ
ಮುಗಿದಂತೆಯೇ ನನ್ನ ಜೀವನ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಬ್ಬರಿಗೆ ಮುದ್ದು ಇನ್ನೊಬ್ಬರಿಗೆ ಗುದ್ದು
Next post ಒಂದಿನಿತು ಮರೆತರೆ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ನೆಮ್ಮದಿ

    ಅವನಿಗೆ ನೆಮ್ಮದಿ ಬೇಕಿತ್ತು. ಆ ಜನನಿಬಿಡ ರಸ್ತೆಯ ಪಕ್ಕದಲ್ಲಿರುವ ನ್ಯೂಸ್ ಪೇಪರ್ ಸ್ಟಾಲಿಗೆ ತಾಗಿ ನಿಂತು ಅವನು ರಸ್ತೆಯನ್ನು ವೀಕ್ಷಿಸುತ್ತಿದ್ದ. ಸೂರ್‍ಯೋದಯವಾಗಿ ಕೆಲವೇ ಗಂಟೆಗಳಾಗಿರಬಹುದು. ಜಾತ್ರೆಗೆ ಸೇರಿದಂತೆ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…