ಮೂಲತಃ ಮರದ ಕುರ್ಚಿ, ಟೇಬಲ್‌ಗಳಿಂದ ಮನೆಯನ್ನು ಶಂಗರಿಸಲಾಗುತಿತ್ತು. (ಇಂದಿಗೂ) ನಂತರ ಈ ಸ್ಥಳವನ್ನು ಸ್ಟೀಲ್ ತುಂಬಿತು. ಇದೂ ಕೂಡ ಅನೇಕ ಕಾರಣಗಳಿಗಾಗಿ ಬೇಡವೆನಿಸಿ ಷ್ಟಾಸ್ಟಿಕ್, ಟೇಬಲ್, ಕುರ್ಚಿಗಳು ಬಂದವು. ಇವು ಯಾವವನ್ನು ಪೂರ್ಣ ತಿರಸ್ಕರಿಸಲಾಗದಿದ್ದರೂ ಹೊಸ ಆವಿಷ್ಕಾರಗಳು ದಿನೇ ದಿನೇ ಆಗುತ್ತಿರುವುದರ ಪರಿಣಾಮವಾಗಿ ನೂತನ ತಂತ್ರಜ್ಞಾನ ಮತ್ತು ಯಂತ್ರಗಳಿಂದ ದೊಡ್ಡಪ್ರಮಾಣದಲ್ಲಿ ಉತ್ತಮ ಗುಣಮಟ್ಟದೆಂದು ಕರೆಯಿಸಿಕೊಳ್ಳುವ ಫರ್ನಿಚರ್‌ಗಳು ತಯಾರಾಗುತ್ತಲಿದೆ.
ಹುಸೈಫಾ ಫರ್ನಿಚರ್ ಇಂಡಸ್ತ್ರೀಸ್ ಈ ತರಹ ಹೊಸ ಫರ್ನೀಚರ್ ತಯಾರಿಸುವ ಒಂದು ಸಂಸ್ಥೆ. ಇಟಾಲಿಯನ್ ಮಾದರಿ ಫರ್ನಿಚರ್‌ಗಳ ಪ್ರಾಯಶಃ ಏಕಮಾತ್ರ ತಯಾರಿಕರಾದ ಇವರ ಉತ್ಪನ್ನಗಳು ರೆಸಿಡೆನ್ಸಿ ರಸ್ತೆಯ ಶೋರೂಮ್ ಹುಸೈಫಾ ಡೆಕೋರ್‌ನಲ್ಲಿ “ಇಂಡೋಲೈನ್” ಎಂಬ ಬ್ರ್ಯಾಂಡ್‌ನಲ್ಲಿ ದೊರೆಯುತ್ತವೆ. ಅಂದವಾಗಿ ಕಾಣುವ ದೀರ್ಘವಾಗಿ ಬಾಳಿಕೆ ಬರುವ, ಸುಲಭವಾಗಿ ನಿರ್ವಹಿಸಲ್ಪಡುವ ಇವುಗಳ ಮಾರಾಟದ ಬೆಲೆಯೂ ಕೂಡ ದುಬಾರಿ ಅಲ್ಲವೆಂದು ತಯಾರಕರು ಹೇಳುತ್ತಾರೆ.
ಹುಸೈಫಾ ಡೆಕೋರಾದಲ್ಲಿ ಸಿಜನ್ ಮಾಡಿದ ಹಾಗೂ ಟ್ರೀಟ್ ಮಾಡಿದ ರಬ್ಬರ್ ಮರ ಮತ್ತು ಎಂ.ಡಿ.ಎಫ್ (ಮಿಡಿಯಂ ಡೆನ್ಸಿಟಿ ಪೈಬರ ಬೋರ್ಡ್, ಇದನ್ನು ಅಮೇರಿಕಾದಲ್ಲಿ ಮರಕ್ಕೆ ಸಮಾನವೆಂದು ತಿಳಿಯುತ್ತಾರೆ) ನಲ್ಲಿ ಕುರ್ಚಿ, ಟೇಬಲ್‌ಗಳು ದೊರೆಯುತ್ತವೆ. ಆಧುನಿಕ ಯಂತ್ರಗಳಿಂದ ತಯಾರಾದ ಫರ್ನಿಚರ್‌ಗಳಿಗೆ ವೆನಿರ್ ಅಥವಾ ಪೇಂಟ್ ಹಚ್ಚಿ ಪಾಲಿಯರಿಥೇನ್ ಕೋಟಿಂಗ್ ಕೊಟ್ಟಿರುವುದರಿಂವ ಇದು ಫರ್ನಿಚರ್ ಅನ್ನು ರಕ್ಷಿಸುತ್ತದೆ. ಸುಲಭದರದ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಸಾಟಿಯಾಗಿ ನಿಲ್ಲುವ ೨೧ನೇ ಶತಮಾನದ ಸಿದ್ಧ ಫರ್ನಿಚರ್‌ಗಳು ಇವು ಆಗಿದೆ.
*****