ಬಾ ಗೆಳತಿ ಕಾದಿರುವೆ ನನ್ನೆದೆಯ ಕದ ತೆರೆದು
ಪ್ರೀತಿ ಪರಿಮಳದ ಹೂ ಹೊಸಿಲಲ್ಲಿ ಹಾಸಿ
ಬಾಡುತಿದೆ ನೋಡು ಅದು ತಡ ಬೇಡ ಕರುಣೆ ಇಡು
ಪ್ರೀತಿ ಸಿಂಚನ ಮಾಡಿ ಬಾರೆ ನಗೆ ಸೂಸಿ //ಪ//
ಕಟ್ಟಿರುವೆ ಕನಸನ್ನು ಮುಗಿಲನ್ನು ಮುಟ್ಟಿರುವೆ
ಗಾಳಿ ಗೋಪುರ ಬೇಡ ಬಾ ಬಾರೆ ಚೆಲುವೆ
ನನಗಿರುವ ಕನಸಿನಲಿ ವಿಶ್ವಾಸ ಸಹ ಇಹುದು
ನಾ ಬಲ್ಲೆ ನಿನ್ನಿಂದ ಅದು ಎಂದೂ ಗೆಲುವೆ
ಕತೆ ನೂರು ಬರೆದಿರುವೆ ವೆತೆ ಇನಿತು ಅಲ್ಲಿಲ್ಲ
ಬರೆವ ಕವನದ ಸಾಲು ನೀ ತುಂಬಬೇಕು
ಇದು ನನ್ನ ಹಾರೈಕೆ ಪ್ರೀತಿ ತುಂಬಿದ ಹರಕೆ
ಇದರ ಪ್ರತಿ ಅಕ್ಷರ ನೀ ಆಗಬೇಕು
*****