ಆ ವೃದ್ಧನ ನೆನಪು

 

ಬೃಹತ್ ಕಟ್ಟಡದಲ್ಲಿ ವಾಸಿಸುವ ಆ ಕುಟುಂಬದ ಮನುಷ್ಯನೊಬ್ಬ
ಪ್ರತಿದಿನ ಬೆಳಿಗ್ಗೆ ಶೇವಿಂಗ್ ಮಾಡಿಸಿಕೊಳ್ಳಲು ಬರುತ್ತಿದ್ದ.
ವಾಪಸ್ಸು ಹೋಗುವಾಗ ರಕ್ತ ಸುರಿಸಿಕೊಂಡೇ ಹೋಗುತ್ತಿದ್ದ.
ಹಾಗೆ ಹೋಗುತ್ತಿದ್ದವನು, ಒಂದು ಪೆಗ್ ವಿಸ್ಕಿ ಏರಿಸದೇ ಹೋಗುತ್ತಿರಲಿಲ್ಲ.
ಗ್ಲಾಸಿನಿಂದ ಒಂದು ತೊಟ್ಟು ಹೊರಗೆ ಸುರಿಸಿದನೆಂಬ ಕಾರಣಕ್ಕಾಗಿ
ಬಾರ್ ಕ್ಯಾಷಿಯರ್ ಮೇಲೆ ಜಗಳ ತೆಗೆದು,
ಮುಸುಡಿ ಗುದ್ದಿಸಿಕೊಂಡು ಅಳುತ್ತಾ ನಡೆದುಹೋಗುತ್ತಿದ್ದ.

ಆ ಓಣಿಯ ಬಟ್ಟೆ ಒಗೆಯುವ ಮಂದಿ ಇವನನ್ನು ಮಾತನಾಡಿಸುತ್ತಿರಲಿಲ್ಲ.
ಏಕೆಂದರೆ ಅವರಿಗೆ ಇವನ ಪರಿಚಯವಿರಲಿಲ್ಲ.

ಆದರೆ, ಇದೇ ವೃದ್ಧ ವಯಸ್ಸಾಗಿ ನೋಡುವವರಿಲ್ಲದೆ ತೀರಿಹೋದಾಗ
ಮೇಲಿನ ಎಲ್ಲರೂ ಸಾವಿಗೆ ಬಂದಿದ್ದರು.

ಅವನನ್ನು ಪ್ರೀತಿ ಮಾಡುತ್ತಿದ್ದ ಅವರಲ್ಲಿ ಯಾರೊಬ್ಬರೂ ಕಾಣಿಸಿಕೊಂಡಿಲ್ಲ;
ಮುನಿಸಿಪಾಲಿಟಿ ಆರೋಗ್ಯಾಧಿಕಾರಿಯೊಬ್ಬ
ಆವೊತ್ತು ವಿಶೇಷವಾಗಿ ನಗುತ್ತಾ ಓಡಾಡುತ್ತಿದ್ದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಕೇತ
Next post ಬುವಿ – ಬಾನು

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…