ಅವಳಿಗೆ ಯವಾಗಲೂ ಚಿಂತೆ : ‘ನಾನು… ನಾನು…’
‘ಯಾರು ನೀನು ಮರಿಯಾ?’
‘ನಾನು ರಾಣಿ | ನಾನು ರಾಣಿ |
ನಮಸ್ಕಾರ ಮಾಡಿ | ಹ್ಞೂ, ಮೊಳಕಾಲೂರಿ!’
ಅವಳಿಗೆ ಯಾವಾಗಲೂ ಅಳು : ‘ನಾನು … ನಾನು…’
‘ನೀನ ಯಾರು ಮರಿಯಾ?’
‘ಅಪ್ಪ ಗೊತ್ತಿಲ್ಲ, ಅಮ್ಮ ಗೊತ್ತಿಲ್ಲ, ಯಾಕೋ ತಿಳಿಯೆ
ನಾನು ಬಡವಿ.’
‘ಹಾಗಾದರೆ ಬಡ ಹುಡುಗಿ
ಎಲ್ಲರೂ ವಂದಿಸಬೇಕಾದ ರಾಣಿ ಆದದ್ದು ಹೇಗೆ?’
‘ಭಿಕ್ಷುಕಿ ಅಂದುಕೊಂಡದ್ದೇ ಬೇರೆ
ಈಗ ಆದದ್ದೇ ಬೇರೆ, ಅದಕ್ಕೇ.’
‘ಹಾಗಾದರೆ ನಿನ್ನ ಭ್ರಮೆ ನಿನ್ನ ಸಿಂಹಾನದ ಏರಿಸಿತೆ?
ನಿಜವೂ ನಿನಗನ್ನಿಸಿದ್ದೂ ಬೇರೆ ಆದದ್ದು ಯವಾಗ, ಹೇಗೆ?’
‘ಅವತ್ತು ರಾತ್ರಿ, ಅವತ್ತೊಂದೇ ದಿನ ರಾತ್ರಿ
ಎಲ್ಲರ ಕಣ್ಣಲ್ಲಿ ಬೇರೆ ಥರ ಕಂಡೆ ನಾನು
ಬೀದಿಯಲ್ಲಿ ನಡೆದಿದ್ದೆ
ನನ್ನೊಳಗೆ ಕಂಪಿಸುವ ತಂತಿಗಳು ಮಿಡಿದವು
ಮರಿಯಾ ಸಂಗೀತವಾದಳು, ಸಂಗೀತ…
ಅವರ ಹಾಡಿಗೆ ಕುಣಿದಳು,
ನೋಡಿದವರು ಹೆದರಿ
ಕಾಲು ನಿಂತಲ್ಲೇ ಬೇರು ಬಿಟ್ಟವು.
ರಾಣಿ ಮಾತ್ರ ಹೀಗೆ ನರ್ತಿಸುವ ಧೈರ್ಯ,
ಊರ ಬೀದಿಯಲ್ಲಿ ಕುಣಿಯುವ ಧೈರ್ಯ.’
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke