ತಿಂಗಳ ಬೆಳಕಿಗೆ

(ಸಿ. ಅಶ್ವತ್ಥ್ ಗೋಸ್ಕರ)

ತಿಂಗಳ ಬೆಳಕಿಗೆ ಭಾವದ ಸೆಳಕಿಗೆ
ಏತಕೊ ತುಂಬಿದೆ ನೋವಿನ ಅನಿಸಿಕೆ

ಯಾರು ಬಂದರು ನನ್ನ ಬಳಿಗೆ
ಯಾರೂ ಇಲ್ಲದ ವೇಳೆಗೆ
ಅಂಥ ನೆನಪು ಇಂದು ಹೀಗೆ
ಸುಳಿವುದೇ ಈ ತೆರದಲಿ

ಯಾರು ನುಡಿದರು ನನ್ನ ಜತೆಗೆ
ಯಾರೂ ನುಡಿಯದ ಮಾತನು
ಅಂಥ ಮಾತು ಮತ್ತೆ ಮತ್ತೆ
ಕಾಡುವುದೆ ಈ ಭರದಲಿ

ಯಾವ ಮಿಂಚು ಹರಿಯಿತೆಂದು
ಯಾವ ದೀಪ ಉರಿಯಿತೊ
ಎಂಥ ಮಾತು ಮರೆಯಿತೆಂದು
ಭಾವಲೋಕ ಮರುಗಿತೊ

ಯಾವ ಗೆಜ್ಜೆ ಕುಣಿಯಿತೆಂದು
ಯಾರ ಹೆಜ್ಜೆ ದಣಿಯಿತೊ
ಎಂಥ ಕಣ್ಣು ಸೊರಗಿತೆಂದು
ಯುಗವೆ ಹಿಂದೆ ಸರಿಯಿತೊ

ತಿಂಗಳ ಬೆಳಕಿಗೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೀತೆಯಲ್ಲಿ ಮುಪ್ಪುರಿ
Next post ಬಚಾವಾದೆ

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…