ಊದ್ಸೋರು ಬಂದಾರ ಬಾರ್‍ಸೋರು ಬಂದಾರ

ಊದ್ಸೊರು ಬಂದಾರ ಬಾರ್‍ಸೋರು ಬಂದಾರ
ಬೆಂಗ್ಳೂರ ಹುಡಿಗಿ ಬರಲಿಲ್ಲೋ
ಹುಬ್ಬಳ್ಳಿ ಹುಡುಗಾ ಕಂಚೀನ ಕಡಗಾ
ತಲವಾರ ಬೆಡಗಾ ಸಜ್ಜಾದೋ ||೧||

ಸೋಗ್ಲಾಡಿ ಮೂಲಂಗಿ ಹುಳಕ್ಲಾಡಿ ಹುಚಗಿಂಡಿ
ಹಿಂಗ್ಯಾಕ ಮಾಡ್ತಾಳ ಸುಸ್ತಸುಸ್ತಾ
ದೀಡ್ ಪೈಯಿ ಧೀಮಾಕಿ ಥೈಯ್‍ಥೈಯಿ ಹಾಲಕ್ಕಿ
ಮೈಯ್ ಮೈಯಿ ಯಾಲಕ್ಕಿ ಮಸ್ತಮಸ್ತಾ ||೨||

ಕಮಟೆಣ್ಣಿ ಯರಕೊಂಡ ಕಿಲುಬುಂಡ ಬಿಕನೇಸಿ
ಕರಕೊಂಡ ಹೋಕ್ಕಾಳ ಗುಳುಗುಳುಕಿ
ಜಾರ್‍ಕೊಂಡ ಹೋದರ ಮಾರ್‍ಕೊಂಡ ಹೋಕ್ಕಾಳ
ಹೋಕೊಂಡ ಹೋಗಲೆ ಹುಳುಹುಳುಕಿ ||೩||

ಕಾಡೆಮ್ಮಿ ಕ್ವಾಣಕ್ಕ ತಾಳೀಯ ಕಟತೇನೆ
ಬಂದಾರ ಬರಲೇ ಬುಬ್ಣಗಿತ್ತಿ
ಕರಿಮುಸ್ಸಾ ಮಂಗ್ಯಾಗ ಸೀರೀಯ ಉಡಸ್ತೇನೆ
ತಂದಾರ ತರಲೇ ನಿಬ್ಣಗಿತ್ತಿ ||೪||

ಪ್ಯಾಟ್ಯಾನ ಉಂಡಿಗೆ ಕೋಟೀಯ ನೊಣಮುಕ್ರಿ
ಹೇತಾಡಿ ಹೋಗ್ಯಾವ ಭಾರಿಭಾರಿ
ಸೀರೀಯ ಉಡಲಾಕ ಈಸೊಂದು ತಡಯಾಕ
ನಾಯ್ನೂರು ನೆಕ್ಕ್ಯಾವ ಜೋರಾಜೋರಿ ||೫||
*****
ಬೆಂಗ್ಳೂರ ಹುಡಿಗಿ = ಪರಮಾತ್ಮ
ಹುಬ್ಬಳ್ಳಿ ಹುಡುಗಾ = ಜೀವಾತ್ಮ
ಸೋಗ್ಲಾಡಿ = ಪರಮಾತ್ಮ
ಬಿಕನೇಸಿ = ಮಾಯೆ
ನೋಣ, ನಾಯಿ = ಐಹಿಕ ಭೋಗಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಣ್ಣೀರ ಹನಿ
Next post ಹೇಗೆ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…