ಬಾರೆ ತಾರೆ ಚಂದ್ರ ನೀರೆ
ಮುಗಿಲ ಮಂಚ ಕರೆದಿದೆ
ನೂರು ನೂರು ಚುಕ್ಕೆ ಹೂವು
ಎದೆಯ ಕಮಲ ತೆರೆದಿದೆ ||೧||
ಕುಣಿವುದೊಂದೆ ಗೊತ್ತು ನನಗೆ
ಹೊತ್ತು ಗೊತ್ತು ಕಿತ್ತೆನೆ
ಗೆಜ್ಜೆ ಝಣಣ ಹೆಜ್ಜೆ ಝನನ
ಪ್ರೇಮ ಪೈಜೆ ಕುಣಿದೆನೆ ||೨||
ಕುಚದ ಕುತನಿ ಕಚದ ಕಮನಿ
ನೀನೆ ನೀನೆ ರೂಪಸಿ
ತೊಡೆಯ ತಂಪು ಮುಡಿಯ ಸಂಪು
ಮಿಲನ ಮಂತ್ರ ಗಾರುಢಿ ||೩||
ನೀನು ಅರ್ಥ ಮರಹು ವ್ಯರ್ಥ
ನೀನೆ ರಸದ ಗೋಪುರಂ
ನೀನೆ ಗಲ್ಲ ನೀನೆ ಬೆಲ್ಲ
ನೀನೆ ಚಲುವಿ ಚುಂಬನಂ ||೪||
*****