ನಾನು ಕೊಳ
ನೀನು ಮನುಜ
ನನ್ನದು ನಿನ್ನದು ತೀರದ ಅನುಬಂಧ.
ಬಾ ! ನನ್ನ ಬಳಿ
ಕೊಳೆ ತೊಳೆದುಕೋ.. ದಾಹ ತೀರಿಸಿಕೋ..
ಸಾರ್ಥಕ್ಯ ತಾ !
ಬಂದು ನಿಲ್ಲು, ಬಗ್ಗಿ ಒಳ ನೋಡು
ರಾಚುವೆ ದರ್ಪಣವಾಗಿ
ನಿನಗೇ.. ನಿನ್ನ ರೂಪವ.
ದರ್ಶಿಸು
ನಾನು ನೀನು ಒಂದು
ಒಳಗೊಂದು ಹೊರಗೊಂದೆಂಬ ಸತ್ಯವ.
ಪ್ರಕ್ಷುಬ್ಧತೆ
ಬಯಲಿಗಿಡಿಯುವುದು ನನ್ನ ನಿನ್ನ
ಕೊಳಕು ಮುಖವ.
ಆದರೂ.. ನನಗೂ ನಿನಗೂ ಭಿನ್ನತೆಯೊಂದಿದೆ
ನಾನು ನಾಚಿಕೊಳ್ಳಲಾರೆ
ನಿನಗೆ ಆ ಅವಕಾಶವಿದೆ.
*****