Home / ಲೇಖನ / ವಿಜ್ಞಾನ / ಭವಿಷ್ಯದ ಮಾರಕ ರೋಗ ನಿರೋಧಕ ಶಕ್ತಿ: ಎದೆ ಹಾಲು

ಭವಿಷ್ಯದ ಮಾರಕ ರೋಗ ನಿರೋಧಕ ಶಕ್ತಿ: ಎದೆ ಹಾಲು

ಜಗತ್ತಿನಲ್ಲಿರುವ ಕೋಟ್ಯಾಂತರ ತಾಯಿಯರಿಗೆ ವಾಸ್ತವತೆಯ ಅರ್ಥವನ್ನು ಮಾಡಿಕೊಡಲೆಂದೇ “ವಿಶ್ವಸ್ತನಪಾನ” ಪೋಷಕ ಸಂಸ್ಥೆ ಜನ್ಮತಾಳಿದೆ. ವಿಶ್ವಾದಾದ್ಯಂತ ಇದರ ಶಾಖೆ, ಉಪಶಾಖೆಗಳು ಕಾರ್ಯನಿರ್ವಹಿಸುತ್ತಲಿವೆ. ಬಾಟಲಿ ಹಾಲಿನ ಬಗೆಗೆ ಬೆಳದಿರುವ ಮೋಹವನ್ನು, ಎದೆಹಾಲಿನ ಬಗೆಗೆ ಬೆಳದಿರುವ ಮೌಢ್ಯವನ್ನು ವಿಜ್ಞಾನವೆಂಬ ಹರಿತವಾದ ಕತ್ತರಿಯಿಂದ ಕತ್ತರಿಸಿ ಹಾಕಲು ಈ ಸಂಸ್ಥೆ ನಿರಂತರ ಸೇವೆ ಸಲ್ಲಿಸುತ್ತಲ್ಲಿದೆ. ಕೃತಕವಾದ ಡಬ್ಬಿಹಾಲನ್ನು ತಿರಸ್ಕರಿಸಿ ಕೇವಲ ತಾಯಿಯ ಹಾಲನ್ನೆ ಮಗುವಿಗೆ ಉಣಬಡಿಸಲು ಶ್ರಮಿಸುತ್ತಿರುವ ಆಸ್ಪತ್ರೆ, ಇತರ ಸಂಸ್ಥೆಗಳಿಗೆ (ಸ್ತನ ಪಾನ ಉತ್ತೇಜಕ ಸಂಸ್ಥೆಗಳು) ಮಕ್ಕಳ ಸ್ನೇಹ ಪರ (Baby Friendly) ಆಸ್ಪತ್ರೆ ಎಂಬ ಪ್ರಮಾಣಪತ್ರದ ಬಿರುದನ್ನು ವಿಶ್ವಮಟ್ಟದ ಸಂಸ್ಥೆ ನೀಡುತ್ತದೆ.

ತಾಯಿಯ ಹಾಲು ಜಗತ್ತಿನಲ್ಲಿಯೇ ಶ್ರೇಷ್ಠವಾದ ಮಕ್ಕಳಿಗೆ ಪೋಷಕಾಂಶ ನೀಡುವ ವಸ್ತುವಾಗಿದೆ. ಮಗುವಿನ ಸಮಸ್ತ ಪೋಷಕಾಂಶಗಳ ಖಣಜ. ನವಜಾತ ಶಿಶುವಿಗೆ ಮೊದಲು ರೋಗ ನಿರೋಧಕ ಶಕ್ತಿ ಸಂಚಯವಾಗುವುದು, ತಾಯಿಯ ಎದೆ ಹಾಲಿನಿಂದ ಮಾತ್ರ ಹೆರಿಗೆಯಾದ ನಂತರ ತಾಯಿಯ ಎದೆಯಲ್ಲಿ ವಸರುವ ಗಟ್ಟಿಹಾಲು (ಕೊಲೆಸ್ಟರಂ) ರೋಗ ನಿರೋಧಕ ಶಕ್ತಿಯ ಭಂಡಾರವೆನಿಸಿದೆ. ಈ ಗಟ್ಟಿ ಹಾಲು ‘ಗೀಬು’ ಎಂದು ಚಲ್ಲುವ ಕೆಟ್ಟ ಸಂಪ್ರದಾಯ ಬಂದಿದೆ. ಮಗು ಹುಟ್ಟಿದ ೬ ಗಂಟೆಯೊಳಗೆ ಮಗುವಿಗೆ ಎದೆ ಚೀಪಿಸಲು ಬಿಡಬೇಕು. ತಾಯಿಯ ಹಾಲನ್ನೇ ಕುಡಿದು ಬೆಳೆದ ಮಗು ದೊಡ್ಡದಾದಾಗ ಬಿ.ಪಿ. ಬೊಜ್ಜು, ಹೃದಯಾಫಾತ, ಸಕ್ಕರೆಕಾಯಿಲೆ, ಕ್ಯಾನ್ಸ್‌ರ್ ಮುಂತಾದ ಮಾರಕ ರೋಗಗಳಿಗೆ ತುತ್ತಾಗುವುದು ಅತಿವಿರಳವೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಧೂಮಪಾನ, ಮಧ್ಯಪಾನ, ಲೈಂಗಿಕ ಅಪರಾಧ, ಮಾಧಕ ಔಷಧಿಗಳ ಚಟ ಮುಂತಾದ ಸಮಾಜ ವಿರೋಧಿ ನಡವಳಿಕೆಗಳು ಎದೆ ಹಾಲು ಕುಡಿದು ಬೆಳೆದ ಮಕ್ಕಳಲ್ಲಿ ಕಡಿಮೆ. ಮಗು ತಾಯಿಯ ಹಾಲನ್ನು ಚೀಪಿ ಚೀಪಿ ಹೀರುವಾಗ ಮಗುವಿನ ಮುಖಕ್ಕೆ ದೊರೆಯುವ ವ್ಯಾಯಾಮದಿಂದಾಗಿ ಮಗುವಿನ ಮುಖ ಸುಂದರವಾಗಿ ರೂಪುಗೊಳ್ಳುತ್ತದೆ. ತಾಯಿಯ ಎದೆಹಾಲು ಕುಡಿದು ಬೆಳೆದ ಮಕ್ಕಳಿಗೆ ಬೇಧಿ, ಶೀತ, ಜ್ವರ, ನ್ಯೂಮೋನಿಯಾ, ಕ್ಷಯಾ ಹಾಗೂ ಜಂತು ರೋಗಗಳು ಕಡಿಮೆ ಪ್ರಮಾಣದಲ್ಲಿರುತ್ತದೆ.

ಗರ್ಭಿಣಿಯಾಗಿದ್ದಾಗ ಹಿಗ್ಗಿದ್ದ ಗರ್ಭಕೋಶ ಬೇಗನೇ ಸುಸ್ಥಿತಿಗೆ ಮರಳಲು ಸ್ತನ ಪಾನ ಸೂಕ್ತ ಪರಿಹಾರ. ತಾಯಿಗೆ ಇದರಿಂದ ಸ್ತನದ ಕ್ಯಾನರ್ ಬರುವುದಿಲ್ಲ. ಸೌಂದರ್ಯ ಕ್ಷೀಣಿಸುತ್ತದೆ ಎಂಬ ತಪ್ಪು ಕಲ್ಬನೆಯಿಂದ ಬಹಳೇ ಮಹಿಳೆಯರು ಮಕ್ಕಳಿಗೆ ಹಾಲು ಕುಡಿಸಲು ಹಿಂಜರಿಯುತ್ತಾರೆ. ವಾಸ್ತವವಾಗಿ ಸ್ತನ ಪಾನದಿಂದ ತಾಯಿಯ ದೇಹದ ಕೊಬ್ಬು ಕರಗಿ ಸೌಂದರ್ಯ ಅಧಿಕಗೊಳ್ಳುತ್ತದೆ. ಈ ಕಾರಣವಾಗಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬ ಆಕಾಂಕ್ಷೆಹೊಂದಿದ ಮಕ್ಕಳ ತಾಯಂದಿರು ಹೆಚ್ಚು ಹೆಚ್ಚು ಮಕ್ಕಳಿಗೆ ಸ್ತನ ಪಾನ, ಮಾಡಿಸುತ್ತಿರಬೇಕು. ಇದು ನಿಸರ್ಗದ ಸತ್ಯ.
*****

Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...