ನೋಡಿ, ಮತಾಂತರ ಅನ್ನೋದು- ಆದು ವೈಯಕ್ತಿಕವೋ, ಸಾಮೂಹಿಕವೋ- ಆರೋಗಯಕರ ಅಲ್ಲ. ಮತಾನೇ ತೊಲಗಬೇಕು ಅನ್ನೋ ಈ ವೈಜ್ಞಾನಿಕ ಯುಗದಲ್ಲಿ ನನಗೆ ಇದೊಂದು ಹಾಸ್ಯ.
ಹರಿಜನರು ಮುಸ್ಲಿಮರಾದರೆ ಆರ್. ಎಸ್. ಎಸ್, ಪೇಜಾವರ ಸ್ವಾಮಿಗೆ, ವಿಶ್ವ ಹಿಂದೂ ಪರಿಷತ್ತಿನವರಿಗೆ ತಮ್ಮ ಅಸ್ತಿತ್ವಾನೆ ಹೋದಂಗಾಗ್ತದೆ. ಏಕೆ? ನಿತ್ಯ ಜೀವನದಲ್ಲಿ ಹರಿಜನರ ಸ್ಥಾನಮಾನದ ಬಗ್ಗೆ ತಿರಸ್ಕಾರ ಹೊಂದಿರೊ ಇವರಿಗೆ ಮತಾಂತರದಿಂದ ತಮ್ಮ ಕುಳಿತು ತಿನ್ನುವ ಸ್ಥಿತಿಗೆ ಎಲ್ಲಿ ಧಕ್ಕೆ ಬರುತ್ತೋ ಎನ್ನುವ ಭಯ. ಆದ್ದರಿಂದ ಮೊಗವಾಡ ಹಾಕಿಕೊಂಡು ಭಾರತೀಯ ಸಂಸೃತಿ, ಭಾರತರಾಷ್ಟ್ರ, ಹಿಂದೂರಾಷ್ಟ್ರ ಅಂತ ಏನೋ ಕಂಡು ಬೊಳ್ಳು ಹಾಕೋ ನಾಯಿ ಹಂಗೆ ಬೊಳ್ಳು ಹಾಕ್ತಾರೆ.
ಮತಾಂತರ ಆದಾಗ ಹರಿಜನರು ತಮ್ಮ ಸ್ವಜನ ಬಂಧುಗಳೆ ಎನ್ನುವ ಹುನ್ನಾರದ ನಾಟಕ ಹೂಡೋ ಈ ಜನ ಇಡೀ ಸಮಾಜಕ್ಕಷ್ಟೆ ಅಲ್ಲ, ತಮಗೂ ಮೋಸಮಾಡಿಕೊಂಡು ದಿವಾಳಿಯಾಗ್ತಾರೆ. ದೇಶನ ಹರಾಜು ಹಾಕ್ತಾರೆ. ಕಾಲಕ್ಕೆ ತಕ್ಕ ಹಾಗೆ ಬಣ್ಣ ಬದಲಾಯಿಸೋ ಈ ಗೋಸುಂಬೆತನ ಇದೆಯಲ್ಲ ಅದು ಹೇಸಿಗೆ. ಅದಕ್ಕೂ ಹೆಚ್ಚಿನ ಹೇಸಿಗೆ ಅಂದ್ರೆ ಮತಾಂತರವ ಬಗ್ಗೆ ಮೌನವಾಗಿರೋ ಮುಸ್ಲಿಮರು, ಹಾಗೇ ಕ್ರಮೇಣ ಕೊಲ್ಲುವ ಕ್ರಿಶ್ಚಿಯನ್ನರು.
ಮತಾಂತರದ ಪರಿಣಾಮ ಏನು ಗೊತ್ತೆ? ಶೂದ್ರ ಜನಾಂಗ ಬಹು ಸಂಖ್ಯಾತರಾದ್ರು ಶಕ್ತರಾಗ್ದೆ ಬರಿಗೈಯಾಗೇ ಇರ್ತಾರೆ. ಅಲ್ಪಸಂಖ್ಯಾತರಾಗಿರೋ ಮುಸ್ಲಿಮರು ಆಳೋ ಅವಕಾಶ ಬಂದ್ರೆ ಆಗ ಈ ದೇಶದ ಸಂಸ್ಕೃತಿಯ ನೇತಾರರು ಎಂದು ಬೊಗಳೆ ಹೊಡಿಯೊ ಈ ಹಾರುವರು ಅವ್ರನ್ನೆ ಆಲಂಗಿಸಿಕೊಂಡು ಬಸಿರಾಗ್ತಾರೆ. ಇತಿಹಾಸ ಸರಿಯಾಗಿ ಓದ್ಕೊಂಡೋರಿಗೆ ಗೊತ್ತಾಗುತ್ತೆ, ಶೂದ್ರಮುಂಡೇವು ಆಗಲೂ ಅವರ ಕಾಲಡಿಗೆ ಬಿದ್ದು ಮತ್ತೆ ತುಳಿಸ್ಕೋತಾರೆ.
ಈ ಪುರೋಹಿತಶಾಹಿ – ಅದು ಯಾವ ಮತದ್ದೇ ಆಗಿರಲಿ – ಹಾಗೂ ಬ್ರಾಹ್ಮಣ್ಯಕ್ಕೆ ಮೂಗುದಾರ ಹಾಕಬೇಕಾದರೆ ಮತಾಂತರ ಮಾಡಿದ್ರೆ ಆಗೊಲ್ಲ. ಮೆದುಳಿನಲ್ಡಿ ಬುದ್ಧಿ ಬೆಳೆಸ್ಕೋಬೇಕು; ಎದೆಗಟ್ಟಿ ಮಾಡ್ಕೋಬೇಕು. ರಟ್ಟೆಗಟ್ಟಿ ಜೊತೆ ಬುದ್ಧಿ ಬಲಗೊಂಡರೆ ಮಾತ್ರ ಇಲ್ಲಿ ಮನುಷ್ಯರು ಮನುಷ್ಯರಾಗಿ ಬದುಕೋ ಹಾಗೆ ಮಾಡೋಕೆ ಸಾಧ್ಯ ಆಗ್ತದೆ.
ಮನುಷ್ಯ ಮನುಷ್ಯರಲ್ಲಿ ಜೀವ ಜೀವದ ಭೇದ ಹುಟ್ಟಿ ಹಾಕೋ ಈ ಮತಾನ ಒಮ್ಮೆಲೇ ಓಡಿಸಬೇಕು. ನೋಡಿ ಈ ಜಗತ್ತಿಗೆ ಬಂದ ಜೀವ ತನಗೆ ತಾನೆ ಬೆಳೆದು ಗಟ್ಟಿಯಾಗ್ದೆ ಹೋದ್ರೆ ಅದನ್ನ ಮತ ಮೌಢ್ಯ ಮೆಟ್ಟಿನಿಲ್ತಾವೆ. ಶಕ್ತಿ ಇಲ್ದಿದ್ರೆ ಕಾನೂನು ಕಾಪಾಡೊಲ್ಲ. ಸಾಮಾಜಿಕವಾಗಿ ಮನುಷ್ಯ ಎದುರಿಸುತ್ತಿರುವ ಸಮಸ್ಯೆಗೆ ಮತಾಂತರ ಎಂದೂ ಮದ್ದಾಗಲ್ಲ. ಅದು ತತ್ಕಾಲದ ಬೆದರಿಕೆ ಆಗಬಹುದು. ಮತಾಂತರ ಅನ್ನೋದು, ಹೇಸಿಗೆ ಅಂತ ಒಂದರಿಂದ ಬಿಡಿಸಿಕೊಂಡು ಮತ್ತೊಂದು ಹೇಸಿಗೆಯನ್ನ ಆಲಂಗಿಸಿಕೊಳ್ಳುವುದಷ್ಟೆ. ಅಲ್ಲಿ ಬುದ್ಧಿ ಬೆಳವಣಿಗೆಯ, ವ್ಯಕ್ತಿಯ ಗಟ್ಟಿತನ ವ್ಯಕ್ತವಾಗಲ್ಲ. ಆದ್ದರಿಂದ ಇರುವ ಸ್ಥಿತಿಗೆ ಮೂಲ ಕಂಡುಕೊಂಡು ಅದನ್ನು ತೊಡೆದು ಹಾಕುವ ಮನಸ್ಸಿನ ಬೆಳವಣಿಗೆಯಲ್ಲಿ ನಿಜವಾದ ಪರಿಹಾರ ಕಾಣಬಹುದು. ಸ್ವಶಕ್ತಿ, ಸ್ವಸಾಮರ್ಥ್ಯ ಇರದ ಜನರನ್ನ ಎಲ್ಲಿ ಹೋದರೂ ಗುಲಾಮರನ್ನಾಗಿಯೆ ಉಳಿಸಿಕೊಳ್ಳುವುದು ದುಷ್ಟ ವ್ಯವಸ್ಥೆಯ ಅಂತರಂಗ. ಆದ್ದರಿಂದ ಮತಾಂತರ ಸಮಸ್ಯೆಯ ಪರಿಹಾರವಾಗುವುದಿಲ್ಲ.
*****