ಮನವೆಂಬ ಮನೆಯಲ್ಲಿ
ಶ್ರೀಮಂತ ನಾನು
ಗುಡಿ ಎಂಬ ನೆಲದಲ್ಲಿ
ನಡೆಯುವಾತ ನಾನು ||
ನಾನಲ್ಲ ಬಡವ
ನಾನೆಂಬಾತ ಬಡವನು
ನನಗಿಲ್ಲ ಯಾರ ಪರಿವೆಯೂ
ಬೇಕಿಲ್ಲ ಯಾರ ಕರುಣೆಯೂ ||
ನಡೆಸುವಾತನಿಹನು
ನಡೆಯುವಾತ ನಾನು
ಅವನಿಗಿವನು ಗೊಂಬೆಯು
ಇವನಿಗವನೇ ನೆರಳು ||
ಗುಡಿಸಲೆಂಬೊ ಗುಡಿಯಲ್ಲಿ
ನನ್ನಾಕೆ ಲಕ್ಷ್ಮಿಯು
ನನ್ನ ಮಕ್ಕಳೆ ದೀವಿಗೆ
ಕಿರಣಗಳೆ ಜೀವನಕೆ ||
ಬೆಳಕಾಗಿಹರು ಬಾಳಿಗೆ
ಹಸಿರಾಗಿಹರು ಜೀವಕೆ
ಹಿಟ್ಟು ಅಂಬಲಿಯ ಮೃಷ್ಟಾನ್ನ
ಕಷ್ಟ ಸುಖಗಳೇ ಚಿನ್ನಾಭರಣ
ನೆಮ್ಮದಿಯ ನೆರಳಲ್ಲಿ
ಹಸಿರು ಉಸಿರೆ ಪಾವನವು ||
*****